Thursday, June 27, 2013

Daily Crime Reports As on 27/06/2013 At 07:00 Hrs

ಅಪಘಾತ ಪ್ರಕರಣ
  • ಬೈಂದೂರು: ಗಣೇಶ ಖಾರ್ವಿ (26) ತಂದೆ:ಕೊರ್ಗ ಖಾರ್ವಿ ವಾಸ:ನೈಲುಮನೆ, ಫಿಶರೀಸ್ ಕಾಲನಿ ಉಪ್ಪುಂದ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ: 26/06/2013 ರಂದು ಸ್ನೇಹಿತ ನಾಗರಾಜ ಖಾರ್ವಿ ರವರೊಂದಿಗೆ ಮರವಂತೆಯಿಂದ ಉಪ್ಪುಂದ ಕಡೆಗೆ ಕೆ ಎ20.ವೈ2468ನೇ ನಂಬ್ರದ ಮೋಟಾರು ಸೈಕಲಿನಲ್ಲಿ ಹಿಂಬದಿ ಸವಾರರಾಗಿ ಕುಳಿತುಕೊಂಡು ನಾಗರಾಜ ಖಾರ್ವಿ ರವರು ಸವಾರಿ ಮಾಡಿಕೊಂಡು ರಾ ಹೆ 66ನೇದರಲ್ಲಿ ಬರುತ್ತಿರುವಾಗ್ಗೆ, ಮಧ್ಯಾಹ್ನ ಸಮಯ ಸುಮಾರು 15:00ಗಂಟೆಗೆ ಕುಂದಾಪುರ ತಾಲೂಕು ನಾವುಂದ ಗ್ರಾಮದ ನಾವುಂದ ಮದ್ರಸ ಎದುರುಗಡೆ ಅವರ ಬೈಕಿನ ಹಿಂಬದಿಯಿಂದ ಕೆ ಎ 20ಸಿ1996 ನೇ ನಂಬ್ರದ 407 ಟೆಂಪೋ ಚಾಲಕನು ತನ್ನ ಬಾಬ್ತು ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮುಂದೆ ಹೊಗುವ ಭರದಲ್ಲಿ ಅವರ ಬೈಕಿನ ಹ್ಯಾಂಡ್ಲ್ ಬಾರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸಹಸವಾರರಾಗಿದ್ದ ಗಣೇಶ ಖಾರ್ವಿ ಹಾಗೂ ಬೈಕ್ ಸವಾರ ರಸ್ತೆಗೆ ಬಿದ್ದು, ಗಾಯ ಉಂಟಾಗಿರುತ್ತದೆ. ಈ ಬಗ್ಗೆ ಗಣೇಶ ಖಾರ್ವಿ ಇವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 191/13 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಕುಂದಾಪುರ: ಭಾಸ್ಕರ ಕಿಣಿ ವಾಸ:ವಿನಾಯಕ ದೇವಸ್ದಾನ ರೋಡ್ ಕುಂಭಾಶಿ, ಕುಂದಾಪುರ ತಾಲೂಕು ಇವರ ಅತ್ತಿಗೆ ಪ್ರೇಮ ಕಿಣಿ ರವರು ಅವರ ಗಂಡ ತೀರಿ ಹೋದ ನಂತರ ಎದೆ ನೋವು ಮತ್ತು ಉಬ್ಬಸ ಖಾಯಿಲೆ ಇದ್ದು ಈ ಬಗ್ಗೆ ಡಾ:ರಾಮಮೋಹನರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆದರೂ ಗುಣಮುಖವಾಗದೆ ಇದ್ದು ಈ ಬಗ್ಗೆ ಜೀವನದಲ್ಲಿ ಜಿಗುಪ್ಸೆಗೊಂಡು ಈ ದಿನ ದಿನಾಂಕ; 26/06/2013 ರಂದು ಬೆಳಿಗ್ಗೆ ಸಮಯ ಸುಮಾರು 08:00 ಗಂಟೆಯಿಂದ 09:00 ಗಂಟೆಯ ಮದ್ಯಾವಧಿಯಲ್ಲಿ ಮನೆಯ ಹಿಂಭಾಗದಲ್ಲಿರುವ ದನದ ಕೊಟ್ಟಿಗೆಯ ಪಕಾಶಿಗೆ ಸೀರೆಯಿಂದ ನೇಣಿ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿದೆ.ಈ ಬಗ್ಗೆ ಭಾಸ್ಕರ ಕಿಣಿ ಇವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 36/13 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು : ದಿನಾಂಕ 24.06.2013 ರಂದು ಮದ್ಯಾಹ್ನ 02.00 ಗಂಟೆಯ ಸಮಯ ಚಿತ್ತೂರು ಗ್ರಾಮದ ಮಾರಣಕಟ್ಟೆ ದೇವಸ್ಥಾನದ ಬಳಿ ಇರುವ ಹೊಳೆಯನ್ನು ಬೆಳಿಯ ಪೂಜಾರಿ (34)ತಂದೆ:ಬಚ್ಚ ಪೂಜಾರಿ ವಾಸ:ಮಾರಣಕಟ್ಟೆ ದೇವಸ್ಥಾನ ಬಳಿಗ್ರಾಮ ಚಿತ್ತೂರು ಗ್ರಾಮ ಕುಂದಾಪುರ ಇವರ ಅಣ್ಣ ರಮೇಶ ಯಾನೆ ಚಿಕ್ಕ ಪೂಜಾರಿ (38) ಎಂಬವರು ಮಾರಣಕಟ್ಟೆ ದೇವಸ್ಥಾನದ ಬಳಿ ಇರುವ ಹೊಳೆಯನ್ನು ದಾಟುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ತುಂಬಿ ಹರಿಯುತ್ತಿರುವ ಹೊಳೆಯ ನೀರಿನ ಸೆಳೆತಕ್ಕೆ ಸಿಕ್ಕಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಹುಡುಕಾಡುತ್ತಿರುವಾಗ ದಿನಾಂಕ 26.06.2013ರಂದು ಸಂಜೆ 07.00ಗಂಟೆಯ ಸಮಯ ಮಾರಣಕಟ್ಟೆಯಿಂದ ಸುಮಾರು ಒಂದು ಕಿ.ಮಿ.ದೂರದಲ್ಲಿ ಅವರ ಮೃತ ದೇಹ ಸಿಕ್ಕಿರುವುದಾಗಿದೆ.ಈ ಬಗ್ಗೆ ಬೆಳಿಯ ಪೂಜಾರಿ ಇವರು ನೀಡಿದ ದೂರಿನಂತೆ ಕೊಲ್ಲೂರು ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 06/13 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: