ಅಪಘಾತ
ಪ್ರಕರಣ
ವರದಕ್ಷಿಣೆ ಕಿರುಕುಳ ನೀಡಿದ ಪ್ರಕರಣ
- ಹಿರಿಯಡ್ಕ: ದಿನಾಂಕ 27/6/2013 ರಂದು ಬೆಳಗ್ಗೆ 6:30 ಗಂಟೆಗೆ ಭರತ್ ತಂದೆ: ಬಾಲಕೃಷ್ಣ ಪೂಜಾರಿ, ವಾಸ: ದೇವಿಕಾ ನಿಲಯ, ನಿಟ್ಟೂರು, ಪುತ್ತೂರು ಗ್ರಾಮ, ಉಡುಪಿರವರು ಉಡುಪಿ ತಾಲೂಕಿನ ಪೆರ್ಡೂರು ಗ್ರಾಮದ ಗೋರೆಲ್ ಎಂಬಲ್ಲಿ ಬುಕ್ಕಿಗುಡ್ಡೆ-ಪೆರ್ಡೂರು ರಾಜ್ಯ ರಸ್ತೆಯಲ್ಲಿ ಬಸ್ಸು ನಂಬ್ರ ಕೆಎ.20.ಎ.9145 ನೇದನ್ನು ಬುಕ್ಕಿಗುಡ್ಡೆ ಕಡೆಯಿಂದ ಪೆರ್ಡೂರು ಕಡೆಗೆ ಚಲಾಯಿಸಿಕೊಂಡು ಬರುವಾಗ ಟ್ರ್ಯಾಕ್ಸ್ ತೂಫಾನ್ ನಂಬ್ರ ಕೆಎ.20.ಎ 137 ನೇದರ ಚಾಲಕ ಪೆರ್ಡೂರು ಕಡೆಯಿಂದ ಬುಕ್ಕಿಗುಡ್ಡೆ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ತನ್ನ ವಾಹನವನ್ನು ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಬಸ್ಸು ನಂಬ್ರ ಕೆಎ.20.ಎ.9145 ನೇದರ ಎದುರು ಬದಿಯ ಬಲಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದು,ಟ್ರ್ಯಾಕ್ಸ್ ತೂಫಾನ್ ಚಾಲಕನಿಗೆ ತರಚಿದ ಗಾಯವಾಗಿರುತ್ತದೆ ಎಂಬುದಾಗಿ ಭರತ್ ರವರು ನೀಡಿದ ದೂರಿನಂತೆ 80/2013 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಗಂಡಸು
ಕಾಣೆ ಪ್ರಕರಣ
- ಕಾರ್ಕಳ: ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಸಾಯಿ ದುರ್ಗಾ ನಿವಾಸ ಎಂಬಲ್ಲಿನ ನಿವಾಸಿ ಸಂತೋಷ ರಾಜು ಶೆಟ್ಟಿ ರವರ ತಮ್ಮ ಸದಾನಂದ ಶೆಟ್ಟಿ (39) ರವರು ದಿನಾಂಕ 23/06/2013 ರಂದು 13:00 ಗಂಟೆಗೆ ಮನೆಯಿಂದ ಹೋದವನು ವಾಪಾಸು ಮನೆಗೂ ಬಾರದೇ, ಸಂಬಂಧಿಕರ, ಸ್ನೇಹಿತರ ಮನೆಗೂ ಹೋಗದೇ ಕಾಣೆಯಾಗಿರುವುದಾಗಿದೆ. ಎಂಬುದಾಗಿ ಶ್ರೀ. ಸಂತೋಷ ರಾಜು ಶೆಟ್ಟಿ (42) ತಂದೆ: ದಿ. ರಾಜು ಶೆಟ್ಟಿ ವಾಸ: ಸಾಯಿ ದುರ್ಗಾ ನಿವಾಸ, ಕುಕ್ಕುಂದೂರು ಗ್ರಾಮ, ಕಾರ್ಕಳರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 80/13 ಕಲಂ ಗಂಡಸು ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಚಹರೆ:-
ಎತ್ತರ:- 5.8.ಗೋಧಿ ಮೈಬಣ್ಣ,
ಕನ್ನಡ, ತುಳು, ಹಿಂದಿ,
ಮರಾಠಿ ಭಾಷೆ ಮಾತನಾಡುತ್ತಾನೆ,
ಧರಿಸಿದ
ಬಟ್ಟೆ:- ತಿಳಿ ನೀಲಿಬಣ್ಣದ ಜೀನ್ಸ್ ಪ್ಯಾಂಟ್ ಹಳದಿ ಕಪ್ಪು ಬಿಳಿ ಚೆಕ್ಸ್ ಶರ್ಟ್,
ಎಡಕಿವಿಯಲ್ಲಿ ಬಂಗಾರದ ರಿಂಗ್ ಇದೆ.
ವರದಕ್ಷಿಣೆ ಕಿರುಕುಳ ನೀಡಿದ ಪ್ರಕರಣ
- ಮಲ್ಪೆ: ಶ್ರೀಮತಿ ಲಕ್ಷ್ಮೀ ನಾಯ್ಕ್, 33 ಗಂಡ: ರವಿಚಂದ್ರ ನಾಯ್ಕ್, ವಾಸ: ಮಾತೃಛಾಯ, ಎಲ್.ವಿ.ಟಿ. ಹತ್ತಿರ ಅಂಬಾಗಿಲು, ಪುತ್ತೂರು ಗ್ರಾಮ, ಉಡುಪಿರವರು ದಿನಾಂಕ 03/09/2010ರಂದು ಹಿಂದೂ ಸಂಪ್ರದಾಯದಂತೆ 1ನೇ ಆರೋಪಿತ ರವಿಚಂದ್ರ ನಾಯ್ಕ್ ರವರನ್ನು ಮದುವೆಯಾಗಿದ್ದು, ಮದುವೆಯ ನಂತರ ಶ್ರೀಮತಿ ಲಕ್ಷ್ಮೀ ನಾಯ್ಕ್ ರವರು ತನ್ನ ಗಂಡನ ಮನೆಯಾದ ನಿಡಂಬಳ್ಳಿ ಮೂಡಬೆಟ್ಟು ಕಲ್ಯಾಣಪುರದಲ್ಲಿ ವಾಸವಿದ್ದು, 1) ರವಿಚಂದ್ರ ನಾಯ್ಕ್, 2) ಕು.ಲೀಲಾ, 3) ಶ್ರೀಮತಿ ಲಲಿತಾ 4) ಮಧುಕರ್ ನಾಯ್ಕ್ ವಾಸ: 3ನೇ ಮುಖ್ಯ ರಸ್ತೆ, ನಿಡಂಬಳ್ಳಿ, ಮೂಡುತೋನ್ಸೆ ರವರುಗಳು ಸೇರಿ ಶ್ರೀಮತಿ ಲಕ್ಷ್ಮೀ ನಾಯ್ಕ್ ರವರಿಗೆ ಕೈಗಳಿಂದ ಹೊಡೆದು ಕಾಲಿನಿಂದ ತುಳಿದು ಕೊಂದು ಬಿಡುವುದಾಗಿ ಕೊಲೆ ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ಶ್ರೀಮತಿ ಲಕ್ಷ್ಮೀ ನಾಯ್ಕ್ ರವರು ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 88/2013 ಕಲಂ 498(ಎ), 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments:
Post a Comment