Thursday, June 27, 2013

Daily Crime Reports As on 27/06/2013 At 19:30 Hrs

ಹುಡುಗಿ ಕಾಣೆ ಪ್ರಕರಣ

  • ಉಡುಪಿ: ಶಂಕರ ಪೂಜಾರಿ, ತಂದೆ: ಮುದ್ದು ಪೂಜಾರಿ, ವಾಸ: ದೇವಿಕೃಪಾ ಹೌಸ್‌, ಕಕ್ಕುಂಜೆ , ಸಂತೆಕಟ್ಟೆ ಅಂಚೆ, ಉಡುಪಿರವರ ಮಗಳು ಪ್ರಿಯಾ ಎಂಬವಳು ದಿನಾಂಕ 25/06/13ರಂದು ಬೆಳಿಗ್ಗೆ 8:30ಗಂಟೆಗೆ ಮನೆಯಿಂದ ಹೋದವಳು ಈತನಕ ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೆ ತನ್ನ ಸ್ನೇಹಿತರ ಮನೆಗೂ ಹೋಗದ ಕಾಣೆಯಾಗಿರುತ್ತಾರೆ ಎಂಬುದಾಗಿ ಶಂಕರ ಪೂಜಾರಿರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 300/13 ಕಲಂ ಹುಡುಗಿ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಾಣೆಯಾದವರ ಚಹರೆಗಳು
ಪಿಂಕ್‌ ಬಣ್ಣದ ಟಾಪ್‌‌ ಹಾಗೂ ಗ್ರೇ ಕಲರ್‌ ಪ್ಯಾಂಟ್‌ ಧರಿಸಿರುತ್ತಾಳೆ.
ಬಿಳಿ ಮೈಬಣ್ಣ ಹೊಂದಿದ್ದು,
4.5 ಅಡಿ ಎತ್ತರವಿದ್ದು,
ಕನ್ನಡ, ತುಳು ಮತ್ತು ಹಿಂದಿ ಭಾಷೆ ಬಲ್ಲವಳಾಗಿರುತ್ತಾಳೆ.
ಅಸ್ವಾಭಾವಿಕ ಮರಣ ಪ್ರಕರಣಗಳು
  • ಬೈಂದೂರು: ಸಂತೋಷ ಬಿಲ್ಲವ ತಂದೆ:ಶೀನ ಬಿಲ್ಲವ ವಾಸ: ತೋಟದಹಿತ್ಲು, ಮಸ್ಕಿ ನಾವುಂದ ಗ್ರಾಮ ಕುಂದಾಪುರ ತಾಲೂಕುರವರ ಅಣ್ಣ ಚೆನ್ನ ಬಿಲ್ಲವ (40) ಎಂಬವರು ದಿನಾಂಕ 26/06/2013 ರಂದು ಬೆಳಿಗ್ಗೆ 08:30 ಗಂಟೆಗೆ ಗದ್ದೆ ಕೆಲಸಕ್ಕೆಂದು ಮನೆಯಿಂದ 11 ನೇಉಳ್ಳೂರು ಕಡೆಗೆ ಹೋಗಿದ್ದು, ದಿನಾಂಕ:27/06/2013 ರಂದು ಬೆಳಿಗ್ಗೆ 09:00 ಗಂಟೆಗೆ 11 ನೇ ಉಳ್ಳೂರಿನ ಗೂಡಾಡಿ ಎಂಬಲ್ಲಿರುವ ಶುಕ್ರ ಎಂಬವರ ಕಲ್ಲುಕೋರೆ ಹೊಂಡದಲ್ಲಿ ಮೃತದೇಹ ದೊರೆತಿದ್ದು, ಚೆನ್ನ ಬಿಲ್ಲವ ರವರು ದಿನಾಂಕ26/06/2013 ರ ಬೆಳಿಗ್ಗೆ 08:30 ಗಂಟೆಯಿಂದ ದಿನಾಂಕ 27/06/2013 ರ ಬೆಳಿಗ್ಗೆ 09:00 ಗಂಟೆಯ ಮಧ್ಯಾವದಿಯಲ್ಲಿ ಗದ್ದೆ ಕೆಲಸಕ್ಕೆಂದು 11 ನೇ ಉಳ್ಳೂರಿಗೆ ಹೋದವರು ಗೂಡಾಡಿ ಎಂಬಲ್ಲಿ ನೀರಿರುವ ಕಲ್ಲುಕೋರೆ ಹೊಂಡದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ ಎಂಬುದಾಗಿ ಸಂತೋಷ ಬಿಲ್ಲವರವರು ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 19/2013 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕಾರ್ಕಳ: ಸಂತೋಷ ಶೆಟ್ಟಿ  ತಂದೆ; ರಾಜು ಶೆಟ್ಟಿ ಸಾಯಿದುರ್ಗ ನಿವಾಸ, ಕುಕ್ಕುಂದೂರು ಗ್ಗ್ರಾಮರವರ ತಮ್ಮನಾದ ಸದಾನಂದ ಶೆಟ್ಟಿ (39) ರವರು ದಿನಾಂಕ 23/06/13 ರಂದು ಕುಕ್ಕುಂದೂರಿನ ತನ್ನ ಮನೆಯಿಂದ ಹೋದವರು ಬಳಿಕ ಮನೆಗೆ  ವಾಪಾಸು ಬಾರದೆ ಕಾಣೆಯಾಗಿದ್ದು ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ದಿನಾಂಕ 27/06/2013 ರಂದು ದೂರು ನೀಡಿ, ತದನಂತರ ಹುಡುಕುತ್ತಿದ್ದಾಗ ಮರ್ಣೆ ಗ್ರಾಮದ ಎಣ್ಣೆಹೊಳೆ ನೀರಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಗಂಡಸಿನ ಶವ ಪತ್ತೆಯಾದುದರಿಂದ, ನೋಡಿದಲ್ಲಿ ಕಾಣೆಯಾದ ಸದಾನಂದ ಶೆಟ್ಟಿ ರವರದ್ದೇ ಎಂದು ಗುರುತು ಹಚ್ಚಿದ್ದು, ಮೃತರು ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದಾಗಿ ಸಂತೋಷ ಶೆಟ್ಟಿ  ರವರು ನೀಡಿದ ಕಾರ್ಕಳ ನಗರ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 09/2013 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: