Wednesday, June 26, 2013

Daily Crimes Reported as On 26/06/2013 at 07:00 Hrs

ಅಪಘಾತ ಪ್ರಕರಣ
  • ಕಾರ್ಕಳ ನಗರ:ದಿನಾಂಕ:25/06/2013 ರಂದು ಮದ್ಯಾಹ್ನ 12:00 ಗಂಟೆಗೆ ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಮೂಜೂರು ಬಳಿ ಅಶೋಕ ಎಂಬವರಿಗೆ ಸೇರಿದ ಕಾಂಪ್ಲೆಕ್ಸ್ ಬಳಿ ಹೆಬ್ರಿ ಕಾರ್ಕಳ ರಾಜ್ಯ ಹೆದ್ದಾರಿ 1ರಲ್ಲಿ ಪಿರ್ಯಾದಿದಾರರಾದ ಲಾರೆನ್ಸ್ ಅಲಿಯಾಸ್‌ ಗ್ಲಾಡ್ಸನ್ ಅಲ್ಮೇಡಾ (26) ತಂದೆ:ದಿವಂಗತ ಪೀಟರ್ ಅಲ್ಮೇಡಾ ವಾಸ:ಮೌಂಟ್ ಮೇರಿ ಹೌಸ್, ಗುಂಡ್ಯಡ್ಕ, ನಿಟ್ಟೆ ಗ್ರಾಮ, ಕಾರ್ಕಳ ತಾಲೂಕುರವರ ಮಹೀಂದ್ರ ಪಿಕ್‌ಅಪ್ ವಾಹನ ನಂಬ್ರ ಕೆಎ 20 ಬಿ 4461 ನೇಯದನ್ನು ಆಪಾದಿತ ಚಾಲಕ ಹಿಲರಿ ಲೋಬೋರವರು ಕಾರ್ಕಳ ಕಡೆಯಿಂದ ಅಜೆಕಾರು ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗುತ್ತಾ ಎದುರುಗಡೆಯಿಂದ ಬರುತ್ತಿದ್ದ ವಾಹನಕ್ಕೆ ಸೈಡ್ ಕೊಡುವ ವೇಳೆ ವಾಹನವನ್ನು ಏಕಾಏಕಿ ರಸ್ತೆಯ ಎಡಬದಿಗೆ ಚಲಾಯಿಸಿದ ಪರಿಣಾಮ ವಾಹನ ಮಗುಚಿ ಬಿದ್ದು ಜಖಂಗೊಂಡಿದ್ದು, ಯಾರಿಗೂ ರಕ್ತಗಾಯವಾಗಿರುವುದಿಲ್ಲ. ಈ ಬಗ್ಗೆ ಲಾರೆನ್ಸ್ ಅಲಿಯಾಸ್‌ ಗ್ಲಾಡ್ಸನ್ ಅಲ್ಮೇಡಾರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 76/2013 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹುಡುಗಿ ಕಾಣೆ ಪ್ರಕರಣ
  • ಕಾರ್ಕಳ ನಗರ:ಕಾರ್ಕಳ ತಾಲೂಕು ಕಣಜಾರು ಗ್ರಾಮದ ಸೇಮೆಗುರಿ 5 ಸೆಂಟ್ಸ್ ನಿವಾಸಿ ಕೃಷ್ಣಮೂಲ್ಯ ಎಂಬವರ ಮಗಳು ಕುಮಾರಿ ಸುಶ್ಮಿತಾ (17) ಈಕೆಯು ದಿನಾಂಕ:24/06/2013 ರಂದು 08:00 ಗಂಟೆಗೆ ತನ್ನ ತಾಯಿ ಜೊತೆಯಲ್ಲಿ ಕೌಡೂರು ಗ್ರಾಮದ ರಂಗನಪಲ್ಕೆ ಬಸ್ ನಿಲ್ದಾಣಕ್ಕೆ ಬಂದವಳು ಉಡುಪಿಯ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿಗೆಂದು ಬಸ್‌ನಲ್ಲಿ ತೆರಳಿದವಳು ಕಾಲೇಜಿಗೂ ಹೋಗದೇ ವಾಪಾಸು ಮನೆಗೂ ಬಾರದೇ, ಸಂಬಂಧಿಕರ, ಸ್ನೇಹಿತರ ಮನೆಗೂ ಹೋಗದೇ ಕಾಣೆಯಾಗಿರುವುದಾಗಿದೆ.ಕಾಣೆಯಾದವರ ಚಹರೆ:ಬಟ್ಟೆ-ತಿಳಿನೇರಳೆ ಬಣ್ಣದ ಟಾಪ್ ಮತ್ತು ಕಾಫಿ ಕಲರಿನ ಪ್ಯಾಂಟ್ ಮತ್ತು ಶಾಲು ಇರುವ ಚೂಡಿದಾರ್ (ಕಾಲೇಜ್ ಸಮವಸ್ತ್ರ), ಎತ್ತರ-5 ಅಡಿ, ಬಣ್ಣ-ಎಣ್ಣೆಗಪ್ಪು ಮೈಬಣ್ಣ, ಕನ್ನಡ, ತುಳು, ಹಿಂದಿ ಇಂಗ್ಲೀಷ್ ಮಾತನಾಡುತ್ತಾಳೆ.ಈ ಬಗ್ಗೆ ಶ್ರೀಮತಿ ಕುಶಲ (41) ಗಂಡ: ಕೃಷ್ಣ ಮೂಲ್ಯ ವಾಸ:ಸೇಮೆಗುರಿ 5 ಸೆಂಟ್ಸ್, ಕಣಂಜಾರು ಗ್ರಾಮ, ಕಾರ್ಕಳ ತಾಲೂಕುರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 77/2013 ಕಲಂ ಹುಡುಗಿ ಕಾಣೆ ಎಂಬುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: