ಹಲ್ಲೆ
ಪ್ರಕರಣ
- ಬ್ರಹ್ಮಾವರ:ದಿನಾಂಕ:24/06/13 ರಂದು ಬೆಳಿಗ್ಗೆ 8.15 ಗಂಟೆಗೆ ಉಡುಪಿ ತಾಲೂಕು ವಾರಂಬಳ್ಳಿ ಗ್ರಾಮದ ಎಸ್.ಎಮ್.ಎಸ್. ಇಂಗ್ಲೀಷ್ ಮೀಡಿಯಂ ಶಾಲಾ ಆವರಣದಲ್ಲಿ ಆರೋಪಿಗಳಾದ 1)ರೋಬರ್ಟ್ ರೋಡ್ರಿಗಸ್ 2)ಜೋಸೆಫ್ ಸುವಾರಿಸ್ 3)ಅಲ್ಬರ್ಟ್ ಡಿಸಿಲ್ವ ಅಲಿಯಾಸ್ ರೋನಿ 4)ಗಿಲ್ಬರ್ಟ್ ರೋಡ್ರಿಗಸ್ 5)ಜೋನ್ ಕ್ರಾಸ್ತ 6)ಇಲಿಯಾಸ್ 7)ಥೋಮಸ್ ಕೆರಾಫ್ ಎಸ್.ಎಮ್.ಎಸ್. ಇಂಗ್ಲೀಷ್ ಮೀಡಿಯಂ ಸ್ಕೂಲ್ ಬ್ರಹ್ಮಾವರ 8)ಅಮ್ಜ ಉಪ್ಪಿನಕೋಟೆ ಇವರುಗಳು ಅಕ್ರಮಕೂಟ ಸೇರಿ ಪಿರ್ಯಾದಿದಾರರಾದ ಮಂಜುನಾಥ ಮೊಗವೀರ (33) ತಂದೆ:ದಿವಂಗತ ಲಕ್ಷ್ಮಣ ಚಾಂತಾರು ಅಂಚೆ, ಚಾಂತಾರು ಗ್ರಾಮ ಉಡುಪಿ ತಾಲೂಕುರವರನ್ನು ಬಸ್ಸಿನಿಂದ ಎಳೆದು ಕೆಳಗೆ ಹಾಕಿ ಕಾಲಿನಿಂದ ತುಳಿದು, ಅವಾಚ್ಯ ಶಬ್ದಗಳಿಂದ ಬೈದು, ದೊಣ್ಣೆಯಿಂದ ಕೈಕಾಲಿಗೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದು, ಮಂಜುನಾಥ ಮೊಗವೀರ ಈ ಹಿಂದೆ ಎಸ್.ಎಮ್.ಎಸ್ ಆಡಳಿತ ಮಂಡಳಿಯ ಮೇಲೆ ದೂರು ನೀಡಿರುವ ದ್ವೇಷದಿಂದಲೇ ತಕ್ಷೀರು ಮಾಡಿದ್ದಾಗಿರುತ್ತದೆ. ಈ ಬಗ್ಗೆ ಮಂಜುನಾಥ ಮೊಗವೀರರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 201/13 ಕಲಂ:143,147,504,323,324,506,ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಉಡುಪಿ ನಗರ:ಪಿರ್ಯಾದಿದಾರರಾದ ಸಂತೋಷ್ ಪಿ ಕುಮಾರ್, ಪ್ರೊ.ಶೈನಿ ಸಿರಾಮಿಕ್ಸ್, ಥಾನಾ ಬಲ್ಡಿಂಗ್, ಕಾರ್ಕಳ ರಸ್ತೆ, ಹೆಬ್ರಿ, ಉಡುಪಿರವರು ಸಿರಾಮಿಕ್ಸ್ ಟೈಲ್ಸ್‌ನ ಡೀಲರ್‌ಶಿಪ್ ಮಾಡಿಕೊಂಡಿದ್ದು, ತನ್ನ ವ್ಯವಹಾರವನ್ನು ಪ್ರಮೋಷನ್ ಮಾಡುವ ಬಗ್ಗೆ ಆಪಾದಿತ ಇಮ್ರಾನ್ ಖಾನ್, ತಂದೆ:ಅಬುಬಕರ್, ವಾಸ:ಆಹಮ್ಮದ್ ಸಾಹೇಬ್ ಹೌಸ್, ಎರ್ಮಾಳ್, ಕಾಪು ಹೋಬಳಿ, ಉಡುಪಿರವರ ಸಂಸ್ಥೆಯೊಂದಿಗೆ ಸಾಫ್ಟ್‌ವೇರ್ ಸರ್ವಿಸ್‌ನ್ನು ನೀಡುವಂತೆ ಕೇಳಿದಾಗ ಅಪಾದಿತನು ಒಪ್ಪಿ 2,50,000/-ರೂಪಾಯಿ ಡಿಮಾಂಡ್ ಮಾಡಿದ್ದು, ಸಂತೋಷ್ ಪಿ ಕುಮಾರ್ ಇದಕ್ಕೆ ಒಪ್ಪಿ ಆಪಾದಿತನಿಗೆ 2,50,000/-ರೂಪಾಯಿ ನೀಡಿರುತ್ತಾರೆ. ಆದರೆ ಈತನಕ ಆಪಾದಿತನು ಸಂತೋಷ್ ಪಿ ಕುಮಾರ್‌ರವರೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಸಾಫ್ಟ್‌ವೇರನ್ನು ಒದಗಿಸದೇ, ಸಂತೋಷ್ ಪಿ ಕುಮಾರ್ ರವರಿಂದ ತೆಗೆದುಕೊಂಡ ಹಣವನ್ನು ವಾಪಸ್ಸು ನೀಡದೇ ಮೋಸ ಮಾಡಿರುತ್ತಾನೆ. ಅಲ್ಲದೆ ದಿನಾಂಕ 15/05/13 ರಂದು ಆಪಾದಿತನಲ್ಲಿ ಈ ಬಗ್ಗೆ ವಿಚಾರಿಸಲು ಹೋದಾಗ ಸಂತೋಷ್ ಪಿ ಕುಮಾರ್‌ರವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ.ಅಲ್ಲದೆ ದಿನಾಂಕ 27/05/13 ರಂದು ದೂರವಾಣಿ ಕರೆ ಮಾಡಿದಾಗಲೂ ಆಪಾದಿತನು ಅವಾಚ್ಯ ಶಬ್ದಗಳಿಂದ ಬೈದಿದ್ದಾಗಿರುತ್ತದೆ. ಈ ಬಗ್ಗೆ ಸಂತೋಷ್ ಪಿ ಕುಮಾರ್‌ರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 297/13 ಕಲಂ 406,415,417,420,506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment