ಹಲ್ಲೆ ಪ್ರಕರಣ
- ಕೋಟ: ದಿನಾಂಕ 24/06/2013 ರಂದು ರಾತ್ರಿ 8:15 ಗಂಟೆಗೆ ಪಿರ್ಯಾದಿ ಸುಮಂತ್ ತಂದೆ: ದಿವಂಗತ ನಾರಾಯಣ ವಾಸ: ಓಣಿಮನೆ ಕುಂಭಾಶಿ ಗ್ರಾಮ,ಕುಂದಾಪುರ ತಾಲೂಕು ಇವರು ತನ್ನ ಸ್ನೇಹಿತ ನಾಗರಾಜ ದೇವಾಡಿಗನೊಂದಿಗೆ ತನ್ನ ಬಾಬ್ತು ಕಾರಿನ ಬ್ಯಾಟರಿಯನ್ನು ಸರಿಪಡಿಸುವರೇ ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನ ಎದುರು ಉಡುಪಿ ಕುಂದಾಪುರ ರಾ.ಹೆ.66ರ ಎಡ ಬದಿಯಲ್ಲಿರುವ ಬ್ಯಾಟರಿ ಅಂಗಡಿ ಬಳಿ ನಿಂತಿರುವಾಗ ಆರೋಪಿ ಸುರೇಶನು ಇನ್ನೊಬ್ಬ ವ್ಯಕ್ತಿಯೊಂದಿಗೆ ಬಂದು ಪಿರ್ಯಾದಿದಾರರನ್ನುದ್ದೇಶಿಸಿ ಉಲ್ಲಾಸನು ನಿನಗೆ ಕೊಟ್ಟ ಟಿ.ವಿ.ವಾಪಾಸ್ಸು ಕೊಡು ಎಂದು ಹೇಳಿದ್ದಕ್ಕೆ ಪಿರ್ಯಾದಿದಾರರು ಟಿ.ವಿ.ಯನ್ನು ಉಲ್ಲಾಸನು ಕೊಟ್ಟಿದ್ದು ಅವನು ಬಂದು ಕೇಳಲಿ ನಾನು ಕೊಡುತ್ತೇನೆ ಎಂದು ಹೇಳಿದ್ದಕ್ಕೆ ಸುರೇಶನು ಪಿರ್ಯಾದಿದಾರರನ್ನುದ್ದೇಶಿಸಿ ಜಾತಿ ನಿಂದನೆ ಮಾಡಿ ಬೈದಿದ್ದು ಆ ಸಮಯ ಆರೋಪಿ ಉಲ್ಲಾಸನು ಕೂಡಾ ಬಂದು ಪಿರ್ಯಾದಿದಾರರನ್ನುದ್ದೇಶಿಸಿ ಅವ್ಯಾಚ್ಯ ಶಬ್ದಗಳಿಂದ ಬೈದು ಮೂರೂ ಜನ ಆರೋಪಿಗಳು ಸೇರಿ ಪಿರ್ಯಾದಿದಾರರಿಗೆ ಕೆನ್ನೆಗೆ,ಮೈಕೈಗೆ ಮುಖಕ್ಕೆ ಹೊಡೆದು,ಅಂಗಡಿ ಬದಿಯಲ್ಲಿದ್ದ ಒಂದು ಸೋಡಾ ಬಾಟಲಿಯಿಂದ ತಲೆಗೆ ಹೊಡೆದಿದ್ದು,ಗಲಾಟೆ ಬಿಡಿಸಲು ಬಂದ ಪಿರ್ಯಾದಿದಾರರ ಜೊತೆಗಿದ್ದ ನಾಗರಾಜನನ್ನು ಮೂವರು ಸೇರಿ ದೂಡಿರುವುದಾಗಿದೆ.ಈ ಬಗ್ಗೆ ಸುಮಂತ್ ಇವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 163/2013 ಕಲಂ 3 (I) & (X) SC & ST Act 1989 ಮತ್ತು ಕಲಂ 323 324 504 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ
- ಕುಂದಾಪುರ: ಸುಭಾಸ್ (32) ತಂದೆ: ಶಂಕರ ಶೆರಿಗಾರ ವಾಸ: ಶ್ರೀಮಾತಾ ನಿಲಯ ಬಳ್ಕೂರು ಗ್ರಾಮ ಕುಂದಾಪುರ ಇವರ ತಾಯಿ ಮುಕ್ತಾರವರು ಗರ್ಭ ಕೋಶದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಕೆ ಎಂ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಸಿದರೂ ಫಲಕಾರಿಯಾಗದೇ ಇದ್ದು ಈ ಬಗ್ಗೆ ತುಂಬಾ ಚಿಂತೆ ಮಾಡುತ್ತಿದ್ದು ಜೀವನದಲ್ಲಿ ಜಿಗುಪ್ಸೆ ಗೊಂಡು ದಿನಾಂಕ 24/06/2013 ರಂದು ರಾತ್ರಿ 11.00 ಗಂಟೆಯ ನಂತರ ಮನೆಯ ಬಳಿಯಿರುವ ಕರಕ್ಕಿ ಹೊಳೆಗೆ ಹಾರಿ ನೀರಿನಲ್ಲಿ ಮುಳುಗಿ ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಸುಭಾಸ್ ಇವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 35/13 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
- ಉಡುಪಿ: ಭಾಸ್ಕರ ಶೆಟ್ಟಿ, ತಂದೆ:ಪದ್ಮಯ್ಯ ಶೆಟ್ಟಿ, ವಾಸ:ಬಳ್ಕಾಡು ಮನೆ, ಸೀತಾನದಿ, ನಾಡ್ಪಾಲು ಗ್ರಾಮ, ಕಾರ್ಕಳ, ಉಡುಪಿ ಇವರ ಮಗನಾದ ಯೋಗೀಶ್ ಶೆಟ್ಟಿ ಎಂಬವರು ಇಂದಿರಾನಗರ ಕುಕ್ಕಿಕಟ್ಟೆಯಲ್ಲಿ ಬಿಸಿಎಮ್ ಹಾಸ್ಟೆಲ್‌ನಲ್ಲಿ ಇದ್ದು, ಬಿಕಾಂ ಫೈನಲ್ ಇಯಿರ್ ಅನ್ನು ಪಿಪಿಸಿ ಇವಿನಿಂಗ್ ಕಾಲೇಜಿನಲ್ಲಿ ಕಲಿಯುತ್ತಿದ್ದು, ಆತನು ಸಂಜೆ ಕಾಲೇಜಿಗೆ ಹೋಗುತ್ತಿರುವುದರಿಂದ ಹಾಸ್ಟೆಲ್‌ನಲ್ಲಿ ಉಳಕೊಳ್ಳುವರೇ ಅವಕಾಶ ಇಲ್ಲದೆ ಇದ್ದುದರಿಂದ ಆತನು ಮಾನಸಿಕವಾಗಿ ಕುಗ್ಗಿ ಹೋಗಿದ್ದು,ಈ ಬಗ್ಗೆ ಯಾರ ಮುಖಾಂತರ ಆದರೂ ಪರ್ಯಾಯ ವ್ಯವಸ್ಥೆ ಮಾಡುವ ಎಂದು ತಿಳಿಸಿದರೂ ಆತನು ಚಿಂತಿತನಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 24/06/13ರಂದು 19:00 ರಿಂದ 19:30ರ ಮಧ್ಯಾವಧಿಯಲ್ಲಿ ಇಂದಿರಾನಗರ ಕುಕ್ಕಿಕಟ್ಟೆ ಬಳಿ ಇರುವ ರೈಲ್ವೆ ಹಳಿಗೆ ತಲೆ ಕೊಟ್ಟು ಆತಹತ್ಮೆ ಮಾಡಿಕೊಂಡಿದ್ದಾಗಿರುತ್ತದೆ.ಈ ಬಗ್ಗೆ ಭಾಸ್ಕರ ಶೆಟ್ಟಿ ಇವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 32/13 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment