Tuesday, June 25, 2013

Daily Crime Reported As On 25/06/2013 At 07:00 Hrs

ಕಳವು ಪ್ರಕರಣ
  • ಬ್ರಹ್ಮಾವರ: ದಿನಾಂಕ 29/04/2013 ರಂದು 13:00 ಗಂಟೆಯಿಂದ 13:30 ಗಂಟೆಯ ಮದ್ಯದ ಅವಧಿಯಲ್ಲಿ ಉಡುಪಿ ತಾಲೂಕು ವಾರಂಬಳ್ಳಿ ಗ್ರಾಮದ ಸಂತೆ ಮಾರ್ಕೆಟಿನ ಎದುರುಗಡೆ ನಿಲ್ಲಿಸಿದ್ದ ಪಿರ್ಯಾದಿದಾರರಾದ ಉರ್ಬನ್ ಡಿ’ ಅಲ್ಮೇಡ (63), ತಂದೆ ಮಾರ್ಕು ಡಿ’ ಅಲ್ಮೇಡ, ವಾಸ ಕೆಳಾರ್ಕಳ ಬೆಟ್ಟು ಅಂಚೆ ತೆಂಕನಿಡಿಯೂರು ಗ್ರಾಮ ಉಡುಪಿ ತಾಲೂಕು ಇವರ 1 ಲಕ್ಷ ರೂಪಾಯಿ ಮೌಲ್ಯದ ಟಾಟಾ ಎಸ್ ನಂಬ್ರ ಕೆಎ 19ಬಿ 7696ನೇಯದನ್ನು ಅದರ ಚಾಲಕನಾದ ಆರೋಪಿ ರಾಘು ತೀರ್ಥಹಳ್ಳಿ ಎಂಬವರು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಎಂಬುದಾಗಿ ಉರ್ಬನ್ ಡಿ’ ಅಲ್ಮೇಡ ಇವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 199/13 ಕಲಂ 379 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಕೆಯಲ್ಲಿರುತ್ತದೆ.
ಅಪಘಾತ ಪ್ರಕರಣ
  • ಬ್ರಹ್ಮಾವರ: ದಿನಾಂಕ 24/06/13 ರಂದು 17:00 ಗಂಟೆಗೆ ಉಡುಪಿ ತಾಲೂಕು ಹೆಗ್ಗುಂಜೆ ಗ್ರಾಮದ ಬಾರಾಳಿ ಚಂದ್ರ ಶೆಟ್ಟಿಯವರ ಮನೆಯ ಬಳಿ ಆಪಾದಿತ ಮಲ್ಲಪ್ಪರವರು ಕೆ.ಎಸ್.ಆರ್‌.ಟಿ.ಸಿ ಬಸ್ಸು ನಂ ಕೆಎ 19ಎಫ್ 2796ನ್ನು ಮಂದರ್ತಿ ಕಡೆಯಿಂದ ಬನ್ನೇರಳಕಟ್ಟೆ ಕಡೆಗೆ ವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿ ಬನ್ನೇರಳಕಟ್ಟೆ ಕಡೆಯಿಂದ ಮಂದರ್ತಿ ಕಡೆಗೆ ವಿಶ್ವನಾಥ್ ಎಂಬವರು ಸವಾರಿ ಮಾಡಿಕೊಂಡು ಬರುತ್ತಿದ್ದ ಕೆಎ 20ಕೆ 5497ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ವಿಶ್ವನಾಥರವರು ತೀವ್ರ ಗಾಯಗೊಂಡು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಪಿರ್ಯಾದಿದಾರರಾದ ಪ್ರಭಾಕರ ಪುತ್ರನ್ (35), ತಂದೆ ಕೃಷ್ಣಯ್ಯ ಕುಂದರ್, ವಾಸ ಜಾರ್ಕಲ್ ಮಂದರ್ತಿ ಅಂಚೆ ಹೆಗ್ಗುಂಜೆ ಗ್ರಾಮ ಉಡುಪಿ ತಾಲೂಕು ಇವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 200/13 ಕಲಂ 279,338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಕೆಯಲ್ಲಿರುತ್ತದೆ.
ಆತ್ಮಹತ್ಯೆ ಪ್ರಕರಣ
  • ಉಡುಪಿ: ಪಿರ್ಯಾದಿದಾರರಾದ ಭಾಸ್ಕರ ಶೆಟ್ಟಿ, ತಂದೆ ಪದ್ಮಯ್ಯ ಶೆಟ್ಟಿ, ವಾಸ ಬಳ್ಕಾಡು ಮನೆ, ಸೀತಾನದಿ, ನಾಡ್ಲಾಲು ಗ್ರಾಮ, ಕಾರ್ಕಳ, ಉಡುಪಿ ಇವರ ಮಗನಾದ ಮೃತ ಯೊಗೀಶ್‌ ಶೆಟ್ಟಿ (20) ಎಂಬವರು ಇಂದಿರಾನಗರ ಕುಕ್ಕಿಕಟ್ಟೆಯಲ್ಲಿ ಬಿಸಿಎಮ್‌ ಹಾಸ್ಟೆಲ್‌ನಲ್ಲಿ ಇದ್ದು, ಬಿಕಾಂ ಫೈನಲ್‌ ಇಯಿರ್‌ನ್ನು ಪಿಪಿಸಿ ಇವಿನಿಂಗ್‌ ಕಾಲೇಜಿನಲ್ಲಿ ಕಲಿಯುತ್ತಿದ್ದು, ಆತನು ಸಂಜೆ ಕಾಲೇಜಿಗೆ ಹೋಗುತ್ತಿರುವುದರಿಂದ ಹಾಸ್ಟೆಲ್‌ನಲ್ಲಿ ಉಳಿದುಕೊಳ್ಳಲು ಅವಕಾಶ ಇಲ್ಲದೆ ಇದ್ದುದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದು, ಈ ಬಗ್ಗೆ ಭಾಸ್ಕರ ಶೆಟ್ಟಿರವರು ಯಾರ ಮುಖಾಂತರ ಆದರೂ ಪರ್ಯಾಯ ವ್ಯವಸ್ಥೆ ಮಾಡುವ ಎಂದು ತಿಳಿಸಿದರೂ ಆತನು ಚಿಂತಿತನಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 24/06/13ರಂದು 19:00 ರಿಂದ 19:30ರ ಮಧ್ಯಾವಧಿಯಲ್ಲಿ ಇಂದಿರಾನಗರ ಕುಕ್ಕಿಕಟ್ಟೆ ಬಳಿ ಇರುವ ರೈಲ್ವೆ ಹಳಿಗೆ ತಲೆ ಕೊಟ್ಟು ಆತಹತ್ಮೆ ಮಾಡಿಕೊಂಡಿದ್ದಾಗಿರುತ್ತದೆ ಎಂಬುದಾಗಿ ಭಾಸ್ಕರ ಶೆಟ್ಟಿ ಇವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 32/13 ಕಲಂ 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಕೆಯಲ್ಲಿರುತ್ತದೆ.
ಹಲ್ಲೆ ಪ್ರಕರಣ
  • ಕೊಲ್ಲೂರು: ದಿನಾಂಕ 21/06/2013 ರಂದು ರಾತ್ರಿ 20:15 ಗಂಟೆಯ ಸಮಯ ಇಡೂರು ಕುಂಜ್ಞಾಡಿ ಗ್ರಾಮದ ಇಡೂರು ಪೇಟೆಯ ರಾಜೀವ ಶೆಟ್ಟಿ ಎಂಬವರ ಅಂಗಡಿ ಬಳಿ ಆರೋಪಿತರುಗಳಾದ 1). ಶೇಖರ ನಾಯ್ಕ, 2). ಸಂತೋಷ ಶೆಟ್ಟಿ 3). ಆನಂದ ಪೂಜಾರಿ ಇವರುಗಳು ಸಮಾನ ಉದ್ದೇಶದಿಂದ ಪಿರ್ಯಾದಿದಾರರಾದ ಕೆ.ಚೆನ್ನಯ್ಯ ನಾಯ್ಕ (48), ತಂದೆ ದಿ.ಗೋವಿಂದ ನಾಯ್ಕ, ವಾಸ ಸುಶೀಲ ನಿವಾಸ ಇಡೂರು ಕುಂಜ್ಞಾಡಿ ಗ್ರಾಮ ಕುಂದಾಪುರ ತಾಲೂಕು ಇವರ ಮನೆಯ ಕಂಪೌಂಡು ಗೋಡೆಯನ್ನು ಹಾಳು ಮಾಡುವುದನ್ನು ಕೆ.ಚೆನ್ನಯ್ಯ ನಾಯ್ಕ ರವರು ನೋಡಿ ಆಕ್ಷೇಪ ಮಾಡಿದ್ದನ್ನು ಆರೋಪಿಗಳು ಕೋಪಗೊಂಡು ಕೈಯಿಂದ ಹೊಡೆದು, ಕಾಲನ್ನು ಎಳೆದಾಗ ಕೆ.ಚೆನ್ನಯ್ಯ ನಾಯ್ಕರವರು ಅಂಗಡಿಯ ಮೆಟ್ಟಿಲಿನ ಮೇಲಿನಿಂದ ಕೆಳಗೆ ಬಿದ್ದು, ಬಲ ಕೈ ಮೆಟ್ಟಿಲಿಗೆ ತಾಗಿ ಬಲ ಕೈಗೆ ಪೆಟ್ಟಾಗಿರುವುದಾಗಿ ಎಂಬುದಾಗಿ ಕೆ.ಚೆನ್ನಯ್ಯ ನಾಯ್ಕ ಇವರು ನೀಡಿದ ದೂರಿನಂತೆ ಕೊಲ್ಲೂರು ಠಾಣಾ ಅಪರಾಧ ಕ್ರಮಾಂಕ 53/2013 ಕಲಂ 323, R/W 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಕೆಯಲ್ಲಿರುತ್ತದೆ.

No comments: