Monday, June 24, 2013

Daily Crime Reported As On 24/06/2013 At 19:30 Hrs

ಜೀವ ಬೆದರಿಕೆ ಪ್ರಕರಣ
  • ಬ್ರಹ್ಮಾವರ: ದಿನಾಂಕ 24/06/2013 ರಂದು ಬೆಳಿಗ್ಗೆ 08:00 ಗಂಟೆಗೆ ಉಡುಪಿ ತಾಲೂಕು, ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಎಸ್‌.ಎಮ್‌.ಎಸ್‌ ಆಂಗ್ಲ ಮಾಧ್ಯಮ ಶಾಲೆಯ ವಠಾರಕ್ಕೆ ಆರೋಪಿ ಮಂಜುನಾಥ, ತಂದೆ ಲಕ್ಷ್ಮಣ ಖಾರ್ವಿ ಬ್ರಹ್ಮಾವರ ಇವರು ಬಂದು ಬಸ್ಸ್‌ ಶೆಡ್‌‌ನಲ್ಲಿ ನಿಲ್ಲಿಸಿದ ಬಸ್ಸು ರೂಟ್‌ ನಂ 15 ರಲ್ಲಿ ಕುಳಿತು ಬಸ್ಸಿನ ಕೀ ತೆಗೆದುಕೊಂಡಿದ್ದು ಪಿರ್ಯಾದಿದಾರರಾದ ಆಲ್ಬರ್ಟ್ ಡಿಸಿಲ್ವ (51), ತಂದೆ ಪೆಲಿಕ್ಸ್ ಡಿಸಿಲ್ವ ಕಛೇರಿ ಅಧೀಕ್ಷಕ ಎಸ್.ಎಮ್.ಎಸ್. ಆಂಗ್ಲ ಮಾಧ್ಯಮ ಶಾಲೆ, ಬ್ರಹ್ಮಾವರ ವಾರಂಬಳ್ಳಿ ಗ್ರಾಮ ಉಡುಪಿ ತಾಲೂಕು. ಇವರು ವಾಪಸ್ಸು ಕೇಳಿದಕ್ಕೆ ನಿಮ್ಮನ್ನು ನೋಡಿ ಕೊಳ್ಳತ್ತೇನೆ ಎಂದು ಜೀವ ಬೆದರಿಕೆ ಓಡ್ಡಿ ನಂತರ ಕೀ ತೆಗೆದುಕೊಂಡು ವಿಠಲ ಎಂಬ ಚಾಲಕ ಬಸ್ಸನ್ನು ಮಕ್ಕಳನ್ನು ಕರೆತರಲು ಚಲಾಯಿಸಿಕೊಂಡು ಹೋಗದಂತೆ ತಡೆದು ನಿಲ್ಲಸಿ ಅವಾಚ್ಯ ಶಬ್ದಗಳಿಂದ ಬೈದುದಾಗಿರುತ್ತದೆ ಎಂಬುದಾಗಿ ಆಲ್ಬರ್ಟ್ ಡಿಸಿಲ್ವ ಇವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 197/13 ಕಲಂ 341,504,506 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಕೆಯಲ್ಲಿರುತ್ತದೆ.
ಇತರೇ ಪ್ರಕರಣ
  • ಬ್ರಹ್ಮಾವರ: ದಿನಾಂಕ 30/04/1999 ರಿಂದ ದಿನಾಂಕ 30/07/2002ರ ನಡುವಿನ ಅವಧಿಯಲ್ಲಿ ಉಡುಪಿ ತಾಲೂಕು ನಡೂರು ಗ್ರಾಮದ ನಡೂರು ಗ್ರಾಮ ಲೆಕ್ಕಿಗರ ಕಛೇರಿಯಲ್ಲಿ ಆರೋಪಿತರುಗಳಾದ 1). ಲಕ್ಷ್ಮೀನಾರಾಯಣ ಹಂದೆ ನಿವೃತ್ತ ಗ್ರಾಮಲೆಕ್ಕಿಗ ನಡೂರು ಗ್ರಾಮ, 2). ಉಷಾ ಬಿ. ಶೆಟ್ಟಿ ಗಂಡ ಬಾಲಕೃಷ್ಣ ಶೆಟ್ಟಿ ನಡೂರು ಪಟೇಲರ ಮನೆ ನಡೂರು ಗ್ರಾಮ, 3). ರುದ್ರಯ್ಯ ಆಚಾರ್ (ಮೃತ) ನಿವೃತ್ತ ಹೋಬಳಿ ಭೂ ಮಾಪಕರು ಕೋಟ ಹೋಬಳಿ ಇವರುಗಳು ನಡೂರು ಗ್ರಾಮದ ಸರ್ವೆ ನಂಬ್ರ 83 ರಲ್ಲಿ 3.65 ಎಕ್ರೆ ಸರಕಾರಿ ಜಮೀನು ಮಂಜೂರಾತಿ ಕೋರಿ ನಮೂನೆ 53 ರಲ್ಲಿ ಸಲ್ಲಿಸಿದ ಅರ್ಜಿಯನ್ನು ಶ್ರೀಮತಿ ಉಷಾ (2ನೇ ಆರೋಪಿ)ರವರ ಹೆಸರಿಗೆ ತಿದ್ದುಪಡಿ ಮಾಡಿ ಜಮೀನನ್ನು ತಾತ್ಕಾಲಿಕವಾಗಿ ಮಂಜೂರು ಮಾಡಿಕೊಂಡಿರುತ್ತಾರೆ. ಆರೋಪಿ 2 ನೇ ಯವರಿಗೆ ಆರೋಪಿ 1 ಮತ್ತು 3 ನೇ ಯವರು ಅನುಕೂಲ ಮಾಡುವ ಉದ್ದೇಶದಿಂದ ಮೂಲ ಸರಕಾರಿ ದಾಖಲೆಯನ್ನು ತಿದ್ದುಪಡಿ ಮಾಡಿದ್ದಾಗಿದೆ ಎಂಬುದಾಗಿ ಪಿರ್ಯಾದಿದಾರರಾದ ಜಿ.ಎಂ. ಬೋರ್ಕರ್ ವಿಶೇಷ ತಹಶೀಲ್ದಾರರು ಬ್ರಹ್ಮಾವರ ಇವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 198/13 ಕಲಂ 465, 466, 468, 471 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಕೆಯಲ್ಲಿರುತ್ತದೆ.

No comments: