Monday, June 24, 2013

Daily Crimes Reported as On 24/06/2013 at 07:00 Hrs



ಹೆಂಗಸು ಕಾಣೆ ಪ್ರಕರಣ


  • ಉಡುಪಿ: ಶೇಖ್ ಅಹ್ಮದ್ ತಂದೆ ದಿವಂಗತ ಯೂಸುಫ್ ಸಾಹೇಬ್ ,ವಾಸ: ಬಂಗೇರ ಮೂಲಸ್ಥಾನ ರಸ್ತೆ ಕಸ್ತೂರ್ಭ ನಗರ ಕುಕ್ಕಿಕಟ್ಟೆ,76 ಬಡಗಬೆಟ್ಟು ,ಉಡುಪಿ ರವರ ಮಗಳು ಆಫ್ರೀನ್ ಅಂಜುಮ್ ರವರು ಬಂಟ್ವಾಳದ ನವಾಜ್ ಎಂಬುವರನ್ನು 3ವರ್ಷ ಹಿಂದೆ ಮದುವೆಯಾಗಿದ್ದು ಆಕೆಯು  ಮಾನಸಿಕವಾಗಿ ವರ್ತಿಸುವುದರಿಂದ ಆಕೆಗೆ ಗಂಡನ ಮನೆಯಲ್ಲಿ ಸರಿಯಾಗದೆ ತನ್ನ ಮಗನೊಂದಿಗೆ ಸುಮಾರು 1 ವರ್ಷ 8 ತಿಂಗಳ ಹಿಂದೆ ಶೇಖ್ ಅಹ್ಮದ್ ರವರ ಮನೆಯಲ್ಲಿ ವಾಸವಾಗಿದ್ದರು. ಆಕೆಯ ಮಾನಸಿಕ ಖಿನ್ನತೆಗೆ ಉಡುಪಿಯ ಬಾಳಿಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ದಿನಾಂಕ 23/06/2013 ರಂದು ಸುಮಾರು 14:15 ಗಂಟೆಗೆ ಶೇಖ್ ಅಹ್ಮದ್ ರವರು ಹಾಗೂ ಹೆಂಡತಿ ಮನೆಯಲ್ಲಿರುವಾಗ ಆಫ್ರೀನ ಅಂಜುಮ್ ಮನೆಯ ಎದುರು ಹಾಗೂ ಹಿಂಬಾಗದ ಬಾಗಿಲಿಗೆ ಚಿಲಕ ಹಾಕಿ ಮನೆ ಬಿಟ್ಟು ಹೋಗಿರುವುದಾಗಿದೆ ಎಂಬುದಾಗಿ ಶೇಖ್ ಅಹ್ಮದ್ ರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 295/13 ಕಲಂ ಹೆಂಗಸು ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಪಘಾತ ಪ್ರಕರಣ

  • ಬೈಂದೂರು: ದಿನಾಂಕ 23/06/2013 ರಂದು 10:30 ಗಂಟೆಗೆ ಚಂದಯ್ಯ ಶೆಟ್ಟಿ ತಂದೆ:ಹೆರಿಯಣ್ಣ ಶೆಟ್ಟಿ ವಾಸ: ಬವಳಾಡಿ ಬಿಜೂರು ಗ್ರಾಮ ಕುಂದಾಪುರ ತಾಲೂಕುರವರು ತಮ್ಮ ಮೋಟಾರು ಸೈಕಲ್ ನಲ್ಲಿ ಬವಳಾಡಿಯಿಂದ ಬೈಂದೂರು ಕಡೆಗೆ ಹೊರಟು ಉಪ್ಪುಂದ ತಲುಪುವಾಗ ಚಂದಯ್ಯ ಶೆಟ್ಟಿರವರ ಎದುರಿನಿಂದ ಅವರ ಚಿಕ್ಕಪ್ಪನ ಮಗನಾದ ಮಂಜುನಾಥ ಶೆಟ್ಟಿ ಎಂಬವರು ತನ್ನ ಮೋಟಾರು ಸೈಕಲ್ ನಂಬ್ರ KA02EP6230 ನೇದರಲ್ಲಿ ಬೈಂದೂರು ಕಡೆಗೆ ತೀರಾ ಎಡಬದಿಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಒಂದು ಕಾರನ್ನು ಅದರ ಚಾಲಕನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಂಜುನಾಥ ಶೆಟ್ಟಿರವರು ಚಲಾಯಿಸಿಕೊಂಡಿದ್ದ ಮೋಟಾರು ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ ಮಂಜುನಾಥ ಶೆಟ್ಟಿರವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಅಡ್ಡ ಬಿದ್ದು ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಆರೋಪಿ ತನ್ನ ಕಾರನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ. ನಂತರ ಮಂಜುನಾಥ ಶೆಟ್ಟಿರವರನ್ನು ಉಪಚರಿಸಿ ಚಿಕಿತ್ಸೆಯ ಬ್ಗಗೆ ಕುಂದಾಪುರದ ಬಸ್ರೂರಿನ ವಿವೇಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಗಾಯಾಳುವಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬುದಾಗಿ ಚಂದಯ್ಯ ಶೆಟ್ಟಿ ರವರು ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 188/2013 ಕಲಂ 279, 338 ಐಪಿಸಿ ಮತ್ತು 134(ಎ&ಬಿ) ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ

No comments: