Monday, June 24, 2013

Daily Crime Reported As On 24/06/2013 At 17:00 Hrs

ಅಪಘಾತ ಪ್ರಕರಣಗಳು
  • ಕಾಪು: ದಿನಾಂಕ 23/06/2013ರಂದು ಪಿರ್ಯಾದಿದಾರರಾದ ಶೇಖರ (41) ತಂದೆ ದಿ. ಚಂದು ಮೇಸ್ತ್ರಿ ಸ್ಟೆಡಿ ಸರ್ಕಲ್ ಬೆಳಪು ಗ್ರಾಮ ಇವರು ತನ್ನ ಬಾಬ್ತು ಕೆಎ 20ಎಲ್ 6173ನೇ ಟಿ.ವಿ.ಎಸ್. ಎಕ್ಸ್. ಎಲ್ ಮೋಟಾರ್ ಸೈಕಲ್‌ನಲ್ಲಿ ಕಾಪುವಿನಿಂದ ಉಡುಪಿಗೆ ಹೋಗುತ್ತಿರುವಾಗ ಮಧ್ಯಾಹ್ನ 2:00 ಗಂಟೆಗೆ ಮೂಡಬೆಟ್ಟು ಗ್ರಾಮದ ಕಲ್ಲಾಪು ನ್ಯೂ ಟಿಂಬರ್ ಎದುರು  ಏಕ ಮುಖ ರಸ್ತೆಯ ರಾ.ಹೆ 66 ರಲ್ಲಿ ತಲುಪುವಾಗ ಆಪಾದಿತ  ಸ್ವಾರ ಮೊಹಮ್ಮದ್ ಶಬ್ಬೀರ್ ಇವರು ಕೆಎ 20ಎಲ್ 3260ನೇ ಮೋಟಾರ್ ಸೈಕಲ್‌ನ್ನು ಕಟಪಾಡಿ ಕಡೆಯಿಂದ ಕಾಪು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಪಶ್ವಿಮ ಬದಿಗೆ ಬಂದು ಶೇಖರವರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಶೇಖರರವರು ಮೋಟಾರ್ ಸೈಕಲ್‌ ಸಮೇತ ರಸ್ತೆಗೆ ಬಿದ್ದು, ತೀವ್ರ ತರಹದ ರಕ್ತಗಾಯ ಉಂಟಾಗಿರುತ್ತದೆ ಎಂಬುದಾಗಿ ಶೇಖರ ಇವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 165/2013 ಕಲಂ 279,338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಕೆಯಲ್ಲಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ನಿತಿನ್ ಕಿರಣ್ (35), ತಂದೆ ಜೋರ್ಜ್‌ ಸಾಲಿನ್ಸ್, ವಾಸ ಜಲ್ಲಿಗುಡ್ಡೆ ಜಯನಗರ ಪಡೀಲ್ ಮಂಗಳೂರು ದ.ಕ ಜಿಲ್ಲೆ ಇವರು  ಕೆಎ 19ಡಿ 3659ನೇ ಪುಷ್ಪರಾಜ್ ಬಸ್ಸಿನ ನಿರ್ವಾಹಕರಾಗಿದ್ದು, ದಿನಾಂಕ 24/06/2013 ರಂದು ಸದ್ರಿ ಬಸ್ಸಿನಲ್ಲಿ ಮಣಿಪಾಲದಿಂದ ಪ್ರಯಾಣಿಕರನ್ನು ತುಂಬಿಸಿಕೊಂಡು 10:00 ಗಂಟೆಗೆ ಹೊರಟು ಉಡುಪಿಗೆ ಬಂದು ನಂತರ 10:15 ಗಂಟೆಗೆ ಉಡುಪಿಯಿಂದ ಹೊರಟು ಕಾಪು ಮಾರ್ಗವಾಗಿ ಮಂಗಳೂರು ಕಡೆಗೆ ರಾ.ಹೆ 66 ರಲ್ಲಿ ಬರುತ್ತಿರುವಾಗ ಬೆಳಿಗ್ಗೆ 10:40 ಗಂಟೆಗೆ ಕಾಪು ಹಳೆ ಮಾರಿಗುಡಿಯ ಸ್ವಲ್ಪ ಮುಂದೆ ತಲುಪುವಾಗ ಆಪಾದಿತ ಸಂತೋಷರವರು ಕೆಎ 19ಬಿ 7459ನೇ ಬಸ್ಸನ್ನು ಪಡುಬಿದ್ರೆ ಕಡೆಯಿಂದ ಉಡುಪಿ ಕಡೆಗೆ ಏಕಮುಖ ರಸ್ತೆಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಒಮ್ಮೇಲೆ ಬಲಬದಿಗೆ ಅಂದರೆ ಕಾಪು ಪೇಟೆ ಕಡೆಗೆ ಹೋಗುವಾಗ ಬಸ್ಸನ್ನು ತಿರುಗಿಸಿ ನಿತಿನ್ ಕಿರಣ್ ರವರ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ, ಬಸ್ಸಿನ ಕ್ಲಿನರ್‌ ಮತ್ತು ಬಸ್ಸಿನ ಚಾಲಕರಿಗೆ ರಕ್ತಗಾಯ ಉಂಟಾಗಿದ್ದಾಗಿದೆ ಅಲ್ಲದೇ ಡಿಕ್ಕಿ ಹೊಡೆದ  ಕೆಎ 19ಬಿ 7459ನೇ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಕೂಡಾ ಸಣ್ಣ-ಪುಟ್ಟ ಗಾಯಗಳಾಗಿರುತ್ತದೆ ಎಂಬುದಾಗಿ ನಿತಿನ್ ಕಿರಣ್ ಇವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 166/2013 ಕಲಂ: 279 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಕೆಯಲ್ಲಿರುತ್ತದೆ.
  • ಕಾಪು: ದಿನಾಂಕ 23/06/2013 ರಂದು ಸಂಜೆ 5:30 ಗಂಟೆಗೆ ಆಪಾದಿತ ಮೊಹಮ್ಮದ್ ಸಾವಿರ್ ಇವರು ಕೆಎ 20ಇಎ 6287ನೇ ಮೋಟಾರ್ ಸೈಕಲ್‌ನಲ್ಲಿ ಹಿಂಬದಿ ಸವಾರನಾಗಿ ಶಬಾಜ್ ಇವರನ್ನು ಕುಳ್ಳಿರಿಸಿಕೊಂಡು ಮೋಟಾರ್ ಸೈಕಲ್‌ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಮಲ್ಲಾರು ಗ್ರಾಮದ ಜನಾರ್ಧನ ದೇವಸ್ಥಾನದ ಬಳಿ ಇರುವ ಸೇತುವೆ ಬಳಿ ಇರುವ ಕೇಶವ ನಾಯ್ಕರ ಮನೆಯ ಬಳಿ ತಲುಪುವಾಗ  ಮೊಟಾರ್ ಸೈಕಲ್‌ ಸವಾರನ ನಿಯಂತ್ರಣ ತಪ್ಪಿ ಮೋಟಾರು ಸೈಕಲ್ ರಸ್ತೆಯ ಉತ್ತರ ದಿಕ್ಕಿನ ಚರಂಡಿಯಲ್ಲಿ ಅಡ್ಡ ಬಿದ್ದ ಪರಿಣಾಮ ಮೋಟಾರ್ ಸೈಕಲ್‌ನ ಸಹ ಸವಾರ ಶಬಾಜ್ ಇವರಿಗೆ ತೀವ್ರ ತರಹದ ರಕ್ತಗಾಯ ಉಂಟಾದವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದಾಗಿದೆ ಎಂಬುದಾಗಿ ಪಿರ್ಯಾದಿದಾರರಾದ ನಿಸಾರ್ ಅಹಮ್ಮದ್ (39) ತಂದೆ ದಿ. ಮನ್ಸೂರ್ ಅಹಮ್ಮದ್, ವಾಸ ದರ್ಗಾ ಬಳಿ ಕೋಟೆ ರೋಡ್, ಮಲ್ಲಾರು ಗ್ರಾಮ ಇವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 167/2013 ಕಲಂ 279, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಕೆಯಲ್ಲಿರುತ್ತದೆ.

No comments: