Saturday, May 18, 2013

Daily Crimes Reported as On 18/05/2013 at 17:00 Hrs

ಅಪಘಾತ ಪ್ರಕರಣಗಳು  
  • ಕಾರ್ಕಳ: ದಿನಾಂಕ 17/05/2013 ರಂದು ಸಂಜೆ 06:20 ಗಂಟೆಗೆ ಪಿರ್ಯಾಧಿದಾರರಾದ ಅರ್ಪಿತಾ (38) ತಂದೆ ದಿವಂಗತ ಖಾಪೀರ್ ಖಾನ್ ವಾಸ ಕಲ್ಯಾ ಕುಂಟಾಡಿ, ಕಲ್ಯಾ ಗ್ರಾಮ ಎಂಬವರು ಕಾರ್ಕಳದಿಂದ ಉಡುಪಿ ಮಂಚಕಲ್ ಕಡೆಗೆ ಹೋಗುವ ಸಂಗಮ್ ಬಸ್ಸು ನಂಬ್ರ ಕೆ 20 ಬಿ 7806 ನೇಯದರಲ್ಲಿ ಪ್ರಯಾಣಿಸುತ್ತಿದ್ದು, ಬಸ್ಸಿನಲ್ಲಿ ತುಂಬಾ ಪ್ರಯಾಣಿಕರಿದ್ದುದರಿಂದ ಪಿರ್ಯಾಧಿದಾರರು ಬಸ್ಸಿನ ಒಳಗೆ ಎದುರಿನ ಬಾಗಿಲಿನ ಬಳಿ ನಿಂತಿದ್ದು, ಆರೋಪಿ ಬಸ್ಸು ಚಾಲಕ ಮಹೇಶ್ ಎಂಬಾತನು ಬಸ್ಸನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕಸಬಾ ಗ್ರಾಮದ ಆನೆಕೆರೆ ಮಸೀದಿಯ ತಿರುವಿನ ಬಳಿ ತಲುಪುತ್ತಿದ್ದಂತೆ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಎದುರು ಬಾಗಿಲಿನ ಬಳಿ ನಿಂತಿದ್ದ ಪಿರ್ಯಾದಿದಾರರು ಬಸ್ಸಿನ ಒಳಗಿನಿಂದ ಕೆಳಗೆ ಡಾಮರು ರಸ್ತೆಗೆ ಬಿದ್ದು ಅವರ ಎಡಕಾಲಿನ ಪಾದದ ಬಳಿ ಹಾಗೂ ಹಣೆಯ ಎಡಭಾಗ ಕಣ್ಣಿನ ಬಳಿ ರಕ್ತಗಾಯವಾಗಿರುತ್ತದೆ ಚಿಕಿತ್ಸೆ ಬಗ್ಗೆ ಸ್ಪಂದನಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾಗಿದೆ ಎಂಬುದಾಗಿ ಅರ್ಪಿತಾರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 63/2013 ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಪಡುಬಿದ್ರಿ: ದಿನಾಂಕ 17/05/2013 ರಂದು ರಾತ್ರಿ 20:45 ಗಂಟೆಗೆ ಪಾದೆಬೆಟ್ಟು ಗ್ರಾಮದ ಬಿಕ್ರಿಬೆಟ್ಟು ಎಂಬಲ್ಲಿ ಕೆಎ 20ವಿ 4644 ನೇ ಮೋಟಾರ್ ಸೈಕಲ್ ಸವಾರರಾದ ಆರೋಪಿ ಶ್ರೀಕಾಂತ ಎಂಬವರು ಮೋಟಾರು ಸೈಕಲನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕೃಷ್ಣ ಶೆಟ್ಟಿಯವರಿಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕೃಷ್ಣ ಶೆಟ್ಟಿಯವರಿಗೆ ಬಲಕಾಲಿಗೆ ಗಾಯವಾಗಿ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬುದಾಗಿ ಕರುಣಾಕರ ಶೆಟ್ಟಿ (38) ತಂದೆ ದಿವಂಗತ ಸುಂದರ ಶೆಟ್ಟಿ ವಾಸ ಬಿಕ್ರ ಶೆಟ್ಟಿ ಕಂಪೌಂಡು, ಸುಬ್ರಮಣ್ಯ ದೇವಸ್ಥಾನದ ಬಳಿ, ಪಾದೆಬೆಟ್ಟು ಗ್ರಾಮ, ಉಡುಪಿ ತಾಲೂಕುರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 82/2013 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಜೀವ ಬೆದರಿಕೆ ನೀಡಿದ ಪ್ರಕರಣ
  • ಕುಂದಾಪುರ: ದಿನಾಂಕ 17/05/2013 ರಂದು ಸಂಜೆ 19:00 ಗಂಟೆಗೆ ಪಿರ್ಯಾದಿದಾರರಾದ ಪ್ರಕಾಶ ಪೂಜಾರಿ (40) ತಂದೆ ದೇವಪ್ಪ ಪುಜಾರಿ ವಾಸ ನಾನಾ ಸಾಹೇಬ ರಸ್ತೆ, ವಡೇರಹೋಬಳಿ ಗ್ರಾಮ, ಕುಂದಾಪುರ ತಾಲೂಕು ಎಂಬವರ ಕುಟುಂಬದ ಕುಂದಾಪುರ ವಡೇರಹೋಬಳಿಯ ನಾನಾಸಾಹೇಬ ರಸ್ತೆ ಹತ್ತಿರದಲ್ಲಿರುವ ಸರ್ವೆ ನಂಭ್ರ 99/09 ರಲ್ಲಿನ 0.22 ಸೆಂಟ್ಸ ಜಾಗದಲ್ಲಿ ಪಿರ್ಯಾದಿದಾರರ ತಂಗಿ ಶಾರದಾರವರು ಇರುವಾಗ ಆರೋಪಿಗಳಾದ 1) ಶ್ರೀಮತಿ ಗೌರಿ 2) ರಾಘವೇಂದ್ರ 3) ಜಯ ಮೋಗೇರ್ತಿ 4) ನಾಗರಾಜ 5) ಪಾರ್ವತಿ ಭಂಡಾರ್ತಿ 6) ಸತೀಶ ಗುಜ್ಜೆ ತೋಟ 7) ಚಂದ್ರ ಬಾಳೆಹಿತ್ಲು ಹಾಗೂ ಇತರ 8-10 ಜನರು ಗುಂಪು ಗೂಡಿಕೊಂಡು ಬಂದು ಸ್ಥಳಕ್ಕೆ ಅಕ್ರಮ ಪ್ರವೇಶ ಮಾಡಿ ಶಾರದಾರವರನ್ನು ಬೆದರಿಸಿ, ಬಲಾತ್ಕಾರವಾಗಿ ಸದ್ರಿ ಸ್ಥಳಕ್ಕೆ ಹಾಕಿರುವ ಕಲ್ಲು ಕಂಬದ ತಂತಿ ಮುಳ್ಳು ಸರಿಗೆ ಬೇಲಿಯನ್ನು ಕಲ್ಲು ಕಂಬ ಸಮೇತ ಕಿತ್ತು ಬಿಸಾಕಿ ಹಾನಿ ಉಂಟು ಮಾಡಿ ನಷ್ಟ ಉಂಟು ಮಾಡಿದ್ದಲ್ಲದೇ ಇದಕ್ಕೆ ಆಕ್ಷೇಪಿಸಿದ್ದಕ್ಕೆ ಕೊಲೆ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಪ್ರಕಾಶ ಪೂಜಾರಿರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 203/2013 ಕಲಂ 447, 427, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಳವು ಪ್ರಕರಣ
  • ಪಡುಬಿದ್ರಿ: ದಿನಾಂಕ 14/05/013 ರಂದು ಬೆಳಿಗ್ಗೆ 11:30 ಗಂಟೆಯಿಂದ ದಿನಾಂಕ 18/05/2013 ರಂದು 6:30 ಗಂಟೆಯ ನಡುವೆ ಯಾರೋ ಕಳ್ಳರು ತೆಂಕ ಎರ್ಮಾಳು ಗ್ರಾಮದ ಬ್ರಹ್ಮ ಬೈದರ್ಕಳ ಗರಡಿಯ ಗರ್ಭಗುಡಿಯ ಮುಂದಿನ ಬಾಗಿಲಿನ ಬೀಗ ಮುರಿದು ಒಳಗಡೆ ಇದ್ದ 2 ಕಾಣಿಕೆ ಡಬ್ಬಿಯ ಬೀಗವನ್ನು ಮುರಿದು ಕಾಣಿಕೆ ಡಬ್ಬಿಯಲ್ಲಿದ್ದ ಅಂದಾಜು ರೂಪಾಯಿ 10,000/= ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ವೈ. ಪಾಂಡುರಂಗ (65) ತಂದೆ ತೌಂಡಪ್ಪ ಪೂಜಾರಿ ವಾಸ ಹಾಡಿ ಮನೆ, ತೆಂಕ ಎರ್ಮಾಳು ಗ್ರಾಮ, ಉಡುಪಿ ತಾಲೂಕು ಎಂಬವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 81/2013 ಕಲಂ 454, 457, 380 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವಂಚನೆ ಪ್ರಕರಣ
  • ಉಡುಪಿ: ಪಿರ್ಯಾದಿದಾರರಾದ ಸಾಮ್ಸನ್‌ ಸ್ಯಾಮ್ವೆಲ್‌ ವಾಸ: ಸನ್‌ ಕಂಪ್ಯೂಟರ್ಸ್‌‌, ನಂ.640, 1ನೇ ಮಹಡಿ, ಶಂಕರ್‌ಗೌಡ ಕಾಲೇಜಿನ ಎದುರು,ಬನ್ನೂರು ರಸ್ತೆ, ಮಂಡ್ಯ ಎಂಬವರ ಸನ್‌ ಕಂಪ್ಯೂಟರ್ಸ್‌ ಸಂಸ್ಥೆಯೊಂದಿಗೆ ದಿನಾಂಕ 13-02-13ರಂದು ಆಪಾದಿತರಾದ 1 ಇಮ್ರಾನ್‌ ತಂದೆ ಅಬುಬಕರ್‌‌ ವಾಸ ಏರ್ಮಾಳ್‌ ಬೀಡು ಬಳಿ, ಶಾಂಭವಿ ಎಂಟರ್‌ ಪ್ರೈಸಸ್‌‌ನ ಎದುರು, ಮಣಿಪಾಲ 2. ರೇಣುಕಾ ಭಂಡಾರಿ, ಫ್ಲಾಟ್‌ ನಂ 305, ಶಾಂಭವಿ ಎಂಟರ್‌ ಪ್ರೈಸಸ್‌‌ನ ಎದುರು, ಮಣಿಪಾಲ ಎಂಬವರು ತಮ್ಮ DFRNS Grough ಸಂಸ್ಥೆಗೆ 26 ಲ್ಯಾಪ್‌ಟಾಪ್‌ಗಳನ್ನು 6,94,015/-ರೂಪಾಯಿಗೆ 15 ದಿನಗಳ ನಂತರ ಹಣ ಪಾವತಿಸುವುದಾಗಿ ಪಿರ್ಯಾದಿದಾರರ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡ ಮೇರೆಗೆ ಪಿರ್ಯಾದಿದಾರರು 26 ಲ್ಯಾಪ್‌ಟಾಪ್‌ಗಳನ್ನು ದಿನಾಂಕ 15-04-03 ಮತ್ತು ದಿನಾಂಕ 29-04-13 ರಂದು DFRNS Grough ಸಂಸ್ಥೆ ಡಯಾನ ಜಂಕ್ಷನ್‌, ಉಡುಪಿರವರಿಗೆ ಸಪ್ಲೈ ಮಾಡಿರುತ್ತಾರೆ. ಪಿರ್ಯಾದಿದಾರರು 15 ದಿನಗಳ ಬಳಿಕ ಆಪಾದಿತ ಇಮ್ರಾನ್‌ರವರನ್ನು ಹಣ ಪಾವತಿಸುವಂತೆ ತಿಳಿಸಿದಾಗ ಆಪಾದಿತ ಸಂಸ್ಥೆಯವರು 5,0000/-ರೂಪಾಯಿ ಮತ್ತು 1,00,000/-ರೂಪಾಯಿಗಳನ್ನು ಪಿರ್ಯಾದಿದಾರರ ಮಂಡ್ಯದಲ್ಲಿರುವ ಸೌತ್‌ ಇಂಡಿಯನ್‌ ಬ್ಯಾಂಕ್‌ ಖಾತೆಗೆ ವರ್ಗಾಯಿಸಿರುತ್ತಾರೆ. ಬಳಿಕ ಉಳಿದ ಹಣವನ್ನು ಪಾವತಿಸುವಂತೆ ಪಿರ್ಯಾದಿದಾರರು ಕೇಳಿಕೊಂಡಾಗ ಆಪಾದಿತರು ಪಿರ್ಯಾದಿದಾರರ ಕರೆಗಳನ್ನು ಸ್ವೀಕರಿಸದೇ ಉಳಿದ ಬಾಕಿ ಹಣ 5,81,000/-ರೂಪಾಯಿ ಬಗ್ಗೆ ಉಡುಪಿ ಐಸಿಐಸಿಐ ಬ್ಯಾಂಕಿನ ದಿನಾಂಕ 02-05-13 ಚೆಕ್‌ನ್ನು ನೀಡಿದ್ದು, ಪಿರ್ಯಾದಿದಾರರು ಸದ್ರಿ ಚೆಕ್‌ನ್ನು ನಗದಿಕರಿಸುವರೇ ಸದ್ರಿ ಬ್ಯಾಂಕಿಗೆ ಹಾಕಿದಾಗ ಆಪಾದಿತರು ತಿಳಿಸಿದ ಆಕೌಂಟ್‌ನಲ್ಲಿ ಹಣ ಇರದೇ ಇದ್ದುದರಿಂದ ಚೆಕ್‌ ಅಮಾನ್ಯಗೊಂಡಿರುತ್ತದೆ. ಪಿರ್ಯಾದಿದಾರರು ಬಗ್ಗೆ ದಿನಾಂಕ 18-05-13 ರಂದು ವಿಚಾರಿಸುವರೇ ಆಪಾದಿತರ ಸಂಸ್ಥೆಯಾದ ಉಡುಪಿಗೆ ಬಂದಾಗ ಆಪಾದಿತರುಗಳು ಪಿರ್ಯಾದಿದಾರರಿಗೆ ಬೆದರಿಕೆ ನೀಡಿರುತ್ತಾರೆ. ಆಪಾದಿತರುಗಳು ಪಿರ್ಯಾದಿದಾರರೊಂದಿಗೆ ಮಾಡಿಕೊಂಡ ಒಪ್ಪಂದಂತೆ ಹಣವನ್ನು ನೀಡದೇ ಪಿರ್ಯಾದಿದಾರರಿಗೆ ಮೋಸ ಮಾಡಿದ್ದಾಗಿರುತ್ತದೆ ಎಂಬುದಾಗಿ ಸಾಮ್ಸನ್‌ ಸ್ಯಾಮ್ವೆಲ್‌ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 245/2013 ಕಲಂ 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣಗಳು
  • ಕಾರ್ಕಳ: ದಿನಾಂಕ 17/05/2013 ರಂದು 9:00 ಗಂಟೆಯಿಂದ ದಿನಾಂಕ 18/05/2013 ಬೆಳಗಿನ ಜಾವ 4:30 ಗಂಟೆಯ ನಡುವಿನ ಅವದಿಯಲ್ಲಿ ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಬಗಜಾಲು ಮನೆ ಎಂಬಲ್ಲಿ ಪಿರ್ಯಾದಿದಾರರಾದ ಅಣ್ಣು ಆಚಾರಿ (50) ತಂದೆ ದಿವಂಗತ ಲಿಂಗಪ್ಪ ಆಚಾರಿ ವಾಸ ಭಗಜಾಲು ಮನೆ ನೆಲ್ಲಿಕಾರು ಅಂಚೆ ನಲ್ಲೂರು ಗ್ರಾಮ ಕಾರ್ಕಳ ತಾಲೂಕು ಎಂಬವರ ತಮ್ಮ ಆನಂದ (41) ಎಂಬವರು ವಿಪರೀತ ಶರಾಬು ಸೇವಿಸುವ ಚಟ ಹೊಂದಿದ್ದು, ಅದೇ ಕಾರಣದಿಂದ ಅಥವಾ ಇನ್ನಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಅಣ್ಣು ಆಚಾರಿರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 26/2013 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಉಡುಪಿ: ಪಿರ್ಯಾದಿದಾರರಾದ ಶೃತಿನ್ ಶೆಟ್ಟಿ (25) ತಂದೆ ವಿಶ್ವನಾಥ ಶೆಟ್ಟಿ ವಾಸ:ಅಂಗಡಿಮನೆ ಜರ್ನಾಧನ ದೇವಸ್ಥಾನದ ಬಳಿ ಮಲ್ಲಾರು ಕಾಪು ಉಡುಪಿ ತಾಲೂಕು ಎಂಬವರ ತಂದೆಯವರಾದ ವಿಶ್ವನಾಥ ಶೆಟ್ಟಿ (58) ಯವರು ಕೊಲಿ ಕೆಲಸ ಮಾಡಿಕೊಂಡಿದ್ದವರು ವಿಷರೀತ ಅಮಲು ಪದಾರ್ಥ ಸೇವಿಸಿ ಅಲ್ಲಿಯೇ ಕುಸಿದು ಬಿದ್ದವರನ್ನು ದಿನಾಂಕ 17/05/13 ರಂದು ಸಂಜೆ ಮೂಡುಬಿದಿರೆಯಿಂದ ಮಂಗಳೂರಿನ ವೆನ್ಲಾಕ್ ಆಸ್ವತ್ರೆಗೆ ಚಿಕಿತ್ಸೆಗೆ ದಾಖಲಿಸಿ ನಂತರ ಅವರ ಆರೈಕೆಯನ್ನು ನೋಡಿಕೊಳ್ಳುವರೇ, ಮಂಗಳೂರಿನ ವೆನ್ಲಾಕ್ ಆಸ್ವತ್ರೆಯಿಂದ ಉಡುಪಿ ಅಜ್ಜರಕಾಡು ಆಸ್ವತ್ರೆಗೆ ದಾಖಲಿಸಲು ಅಲ್ಲಿಂದ ಅಂಬುಲೈನ್ಸ್ ನಲ್ಲಿ ಕರೆದುಕೊಂಡು ಬಂದು ಉಡುಪಿ ಅಜ್ಜರಕಾಡು ಆಸ್ವತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು ಅವರು ದಿನಾಂಕ 17/05/13 ರಂದು ರಾತ್ರಿ 09:30 ಗಂಟೆಗೆ ಮೃತಪಟ್ಟಿರುವುದಾಗಿದೆ ಎಂಬುದಾಗಿ ಶೃತಿನ್ ಶೆಟ್ಟಿರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 20/2013 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕಾಪು: ದಿನಾಂಕ 17/05/2013 ರಂದು ಸಂಜೆ 4:00 ಗಂಟೆಯಿಂದ ರಾತ್ರಿ 7:30 ಗಂಟೆಯ ನಡುವಿನ ಸಮಯ ಉಡುಪಿ ತಾಲೂಕು ಏಣಗುಡ್ಡೆ ಗ್ರಾಮದ ಕಟಪಾಡಿ ಅಗ್ರಹಾರ ಎಂಬಲ್ಲಿ ಪಿರ್ಯಾದಿದಾರರಾದ ಶಂಕರ ಆಚಾರ್ಯ (43) ತಂದೆ: ಭುಗನ ಅಚಾರ್ಯ ಎಂಬವರ ಮನೆಯಲ್ಲಿ ಪಿರ್ಯಾದಿದಾರರ ಪತ್ನಿ ಶ್ರೀಮತಿ ಸುಧಾರವರು ಮೆನಯ ಅಟ್ಟದ ಮೇಲೆ ಚೂಡಿದಾರರ ಶಾಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಸದ್ರಿಯವರು ಸುಮಾರು 2 ತಿಂಗಳಿನಿಂದ ಅಸೌಖ್ಯದಿಂದ ಬಳಲುತಿದ್ದು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬುದಾಗಿ ಶಂಕರ ಆಚಾರ್ಯ ರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 14/2013 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: