Saturday, May 18, 2013

Daily Crimes Reported as On 18/05/2013 at 19:30 Hrs

ಹಲ್ಲೆ ಪ್ರಕರಣಗಳು
  • ಬೈಂದೂರು: ಪಿರ್ಯಾದುದಾರರಾದ ತೌಫೀಕ್ (29) ತಂದೆ ಹಾಜಿ ಸಾಹೇಬ್ ವಾಸ ಮ್ಯಾಂಗನೀಸ್ ರೋಡ್, ಗಂಗೊಳ್ಳಿ ಗ್ರಾಮ ಎಂಬವರು ತನ್ನ ಹೊಸ ನೊಂದಣಿಯಾಗದ ಕಾರಿನಲ್ಲಿ ತನ್ನ ಹೆಂಡತಿಯಾದ ತಬಸುಮ್, ಮಾವನ ಮಗ ಮದನಿ ಹಾಗೂ ಅಕ್ಕನ ಮಗ ಹಾರೀದ್ ಎಂಬವರೊಂದಿಗೆ ಜೋಗಕ್ಕೆ ಹೋಗಿ ವಾಪಾಸ್ಸು ಮನೆಗೆ ಬರುತ್ತಿರುವಾಗ ದಿನಾಂಕ 17/05/2013 ರಂದು 21:15 ಗಂಟೆಗೆ ಕುಂದಾಪುರ ತಾಲೂಕು ಶಿರೂರು ಗ್ರಾಮದ ಶಿರೂರು ಸರ್ವೀಸ್ ಸ್ಟೇಶನ್ ಬಳಿ ರಾಷ್ಟ್ರೀಯ ಹೆದ್ದಾರಿ 66 ನೇ ಡಾಮರು ರಸ್ತೆಯಲ್ಲಿ ಮೋಟಾರು ಸೈಕಲ್ ನಂಬ್ರ ಕೆಎ 20 ಇಡಿ 2566 ನೇದರಲ್ಲಿ ಯಾರೋ ಇಬ್ಬರು ವ್ಯಕ್ತಿಗಳು ಪಿರ್ಯಾದುದಾರರರ ಕಾರನ್ನು ಓವರ್ ಟೇಕ್ ಮಾಡಿ ಅಡ್ಡಗಟ್ಟಿ ಪಿರ್ಯಾದಿದಾರರಿರಗೆ ರಸ್ತೆಯಲ್ಲಿದ್ದ ಕಲ್ಲಿನಿಂದ ಹಲ್ಲೆ ನಡೆಸಿ, ಇತರರಿಗೆ ಕೈಗಳಿಂದ ಹಲ್ಲೆ ನಡೆಸಿರುವುದಾಗಿದೆ. ಚಿಕಿತ್ಸೆಯ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ತೌಫೀಕ್ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 150/2013 ಕಲಂ 341, 324, 323 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಬೈಂದೂರು: ಪಿರ್ಯಾದುದಾರರಾದ ರಾಜೇಶ್ (28) ತಂದೆ ಮಾಚ ಪೂಜಾರಿ ವಾಸ ತೊಂಡೆಮಕ್ಕಿ, ಬೈಂದೂರು ಗ್ರಾಮ ಎಂಬವರು ತನ್ನ ಮೋಟಾರು ಸೈಕಲ್ ನಂಬ್ರ ಕೆಎ 20 ಇಡಿ 2566 ನೇದರಲ್ಲಿ  ತನ್ನ ಸ್ನೇಹಿತನಾದ ಮಧುಕರ ಎಂಬವರೊಂದಿಗೆ ಭಟ್ಕಳಕ್ಕೆ ಹೋಗಿ ವಾಪಾಸ್ಸು ಬೈಂದೂರಿಗೆ ಬರುತ್ತಿರುವಾಗ ದಿನಾಂಕ 17/05/2013 ರಂದು 21:15 ಗಂಟೆಗೆ ಕುಂದಾಪುರ ತಾಲೂಕು ಶಿರೂರು ಗ್ರಾಮದ ಶಿರೂರು ಸರ್ವೀಸ್ ಸ್ಟೇಶನ್ ಬಳಿ ರಾಷ್ಟ್ರೀಯ ಹೆದ್ದಾರಿ 66 ನೇ ಡಾಮರು ರಸ್ತೆಯಲ್ಲಿ ನೊಂದಣಿ ಸಂಖ್ಯೆ ಇಲ್ಲದ ಹೊಸ ಕಾರಿನಲ್ಲಿ ಯಾರೋ ಮೂವರು ವ್ಯಕ್ತಿಗಳು ಪಿರ್ಯಾದುದಾರರರ ಮೋಟಾರು ಸೈಕಲ್ನ್ನು ಓವರ್ ಟೇಕ್ ಮಾಡಿ ಅಡ್ಡಗಟ್ಟಿ ಕಾರಿನ ಚಾಲಕನು ಪಿರ್ಯಾದುದಾರರಿಗೆ ಹಾಗೂ ಸಹಸವಾರನಾದ ಮಧುಕರ ಎಂಬವರಿಗೆ ಅವಾಚ್ಯ ಶಬ್ದಗಳಿಂದ ಬೈದು, ರಸ್ತೆಯಲ್ಲಿದ್ದ ಕಲ್ಲಿನಿಂದ ಹಾಗೂ ಕೈಗಳಿಂದ ಹಲ್ಲೆ ನಡೆಸಿರುವುದಾಗಿದೆ. ಚಿಕಿತ್ಸೆಯ ಬಗ್ಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ರಾಜೇಶ್ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 151/2013 ಕಲಂ 341, 504, 324, 323 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣಗಳು 
  • ಉಡುಪಿ: ದಿನಾಂಕ 18/05/13 ರಂದು ಬೆಳಿಗ್ಗೆ 10:10 ಗಂಟೆಗೆ ಉಡುಪಿ ತಾಲೂಕು ಕುಂಜಿಬೆಟ್ಟುನಿಂದ ಕಲ್ಸಂಕ ಕಡೆಗೆ ಕೆಎ 20 ಯು 4399ನೇ ಮೋಟಾರ್ಸೈಕಲ್ಸವಾರ ಪ್ರಕಾಶ್ಮೂಲ್ಯ ಎಂಬವರು ಪಿರ್ಯಾದಿದಾರರಾದ ಯು. ಶೇಖ್ ಅಬ್ದುಲ್ ಸಮಾದ್ (40) ತಂದೆ ದಿವಂಗತ ಯು ಶೇಖ್ ಇಸ್ಮಾಯಿಲ್ ಸಾಹೇಬ್ ವಾಸ ಮನೆ ನಂಬ್ರ 8-1-99 ಪಣಿಯಾಡಿ ಅಂಚೆ ಕುಂಜಿಬೆಟ್ಟು, ಶಿವಳ್ಳಿ ಗ್ರಾಮ ಎಂಬವರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಸಚ್ಚಿದಾನಂದ ರೆಸಿಡೆನ್ಸಿ ಎದುರುಗಡೆ ಬರುತ್ತಿರುವಾಗ ಒಮ್ಮೆಲೆ ನಾಯಿ ಅಡ್ಡ ಬಂದಿರುವುದರಿಂದ ಬೈಕ್ಒಮ್ಮೆಲೆ ಸ್ಕಿಡ್ಆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಎಸೆಯಲ್ಟಟ್ಟು ರಸ್ತೆಗೆ ಬಿದ್ದು, ಬಲಕಾಲಿಗೆ ಮೂಳೆ ಮುರಿತದ ರಕ್ತಗಾಯವಾಗಿ ಉಡುಪಿ ಹೈ-ಟೆಕ್ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ಯು. ಶೇಖ್ ಅಬ್ದುಲ್ ಸಮಾದ್ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 246/2013 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕಾರ್ಕಳ: ದಿನಾಂಕ 17/05/2013 ರಂದು ಸಂಜೆ 5:30 ಗಂಟೆಗೆ ಪಿರ್ಯಾಧಿದಾರರಾದ ಜಿ ಶ್ರೀನಿವಾಸ ನಾಯ್ಕ್(59) ತಂದೆ ದಿವಂಗತ ಪದ್ಮನಾಭ ನಾಯ್ಕ್ ವಾಸ ನೆಲ್ಲಿಕಟ್ಟೆ ಕಡಂಬಳ ದುರ್ಗಾ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಎಂಬವರು ಬೈಸಿಕಲ್ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಕಾರ್ಕಳ ತಾಲೂಕು ಕಸಬ ಗ್ರಾಮದ ಹಿರಿಯಂಗಡಿ ವೈಷ್ಣವಿ ಹೋಟೇಲ್ ಬಳಿ ಆರೋಪಿ ಮಾರುತಿ ಓಮ್ನಿ ಕಾರು ಕೆ ಎ 47 ಎಂ 2234 ನೇಯದರ ಚಾಲಕರಾದ ದಿನೇಶ್ ಬೀರಪ್ಪ ನಾಯ್ಕ್  ಎಂಬವರು ಪುಲ್ಕೇರಿ ಕಡೆಯಿಂದ ಬಂಗ್ಲೆಗುಡ್ಡೆ ಕಡೆಗೆ  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಎಡಬದಿಯಲ್ಲಿ ಹೋಗುತ್ತಿದ್ದ ಪಿರ್ಯಾದಿದಾರರ ಬೈಸಿಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾಧಿದಾರರು ಬೈಸಿಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು  ರಕ್ತಗಾಯಗೊಂಡಿದ್ದು ಚಿಕಿತ್ಸೆ ಬಗ್ಗೆ  ಕಾರ್ಕಳ ಸಿಟಿ ನರ್ಸಿಂಗ್ ಹೋಮ್ ನಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾಗಿದೆ ಎಂಬುದಾಗಿ ಜಿ ಶ್ರೀನಿವಾಸ ನಾಯ್ಕ್ ರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 64/2013 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕೋಟ: ಪಿರ್ಯಾದಿದಾರರಾದ ಕೆ.ಕೆ.ನಾರಾಯಣನ್ (40) ತಂದೆ ಕೆ.ಕಣ್ಣನ್ ವಾಸ ಪೆರ್ಲಾಕುಡುಕಂ ಹೌಸ್, ಕಾಸರಗೋಡು ಕೇರಳ ರಾಜ್ಯ ಎಂಬವರು ತನ್ನ ಕುಟುಂಬ ಸಮೇತ ಕೊಲ್ಲೂರಿಗೆ ಹೋಗಿ ವಾಪಾಸ್ಸು ಕಾಸರಗೋಡು ಕಡೆಗೆ ಹೋಗಲು ಕೆ.ಎಲ್-14 ಎಲ್-1136 ನೇ ಕಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬರುತ್ತಿರುವಾಗ ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದ ತೆಕ್ಕಟ್ಟೆ ಪೆಟ್ರೋಲ್ ಬಂಕ್ ಹತ್ತಿರ ಆರೋಪಿ ಸತೀಶನ್ ಎಂಬವರು ಸದ್ರಿ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಚಾಲಕನ ನಿಯಂತ್ರಣ ತಪ್ಪಿ ಕಾರು ಸ್ಕಿಡ್ ಆಗಿ ರಸ್ತೆಯ ಬದಿಗೆ ಬಿದ್ದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶ್ರೀಮತಿ ನಾರಾಯಣಿ, ರಾಘವೇಂದ್ರ ನಾಯರ್ ಹಾಗೂ ಕಾರು ಚಾಲಕ ಸತೀಶನ್ ಎಂಬವರಿಗೆ ಸಾದಾ ಸ್ವರೂಪದ ರಕ್ತಗಾಯವಾಗಿದ್ದಾಗಿದೆ ಎಂಬುದಾಗಿ ಕೆ.ಕೆ.ನಾರಾಯಣನ್ ರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 136/2013 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: