Saturday, May 18, 2013

Daily Crimes Reported as On 18/05/2013 at 07:00 Hrs


ಅಪಘಾತ ಪ್ರಕರಣಗಳು
  • ಉಡುಪಿ ನಗರ:ದಿನಾಂಕ 16/05/2013 ರಂದು ಪಿರ್ಯಾದಿದಾರರಾದ ಹನುಮಂತ ತಂದೆ:ದುರ್ಗಪ್ಪ, ವಾಸ:ಕಳವಿನಾಯಕನ ಹಳ್ಳಿ,ಕಗರಿ ಬೊಮ್ಮನಹಳ್ಳಿ ತಾಲೂಕು, ಬಳ್ಳಾರಿ ಜಿಲ್ಲೆರವರು ಉಡುಪಿ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದಲ್ಲಿ ಬೆಳಿಗ್ಗೆ 8:30 ಗಂಟೆಗೆ ನಡೆದುಕೊಂಡು ಹೋಗುತ್ತಿರುವಾಗ್ಗೆ ಅವರ ಹಿಂದಿನಿಂದ ಕೆಎ 01 ಎಫ್‌ಎ 2109 ನೇದರ ಕೆಎಸ್‌ಆರ್‌ಟಿಸಿ ಬಸ್ಸಿನ ಚಾಲಕನು ತಾನು ಚಲಾಯಿಸಿಕೊಂಡು ಬರುತ್ತಿದ್ದ ಬಸ್ಸನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹನುಮಂತರವರಿಗೆ ಢಿಕ್ಕಿ ಹೊಡೆದನು, ಪರಿಣಾಮ ಹನುಮಂತ ಕೆಳಗೆ ಬಿದ್ದಾಗ ಬಸ್ಸಿನ ಎದುರಿನ ಬಂಪರ್‌ ಬಲಕಾಲಿನ ಮೇಲೆ ಹೋದದ್ದರಿಂದ ಅವರ ಬಲಕಾಲಿಗೆ ತೀವ್ರ ತರಹದ ಜಖಂ ಉಂಟಾಗಿದ್ದು, ಹನುಮಂತರವರನ್ನು ಅವರ ಸ್ನೇಹಿತ ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ವೈದ್ಯರು ಹೊರರೋಗಿಯಾಗಿ ಚಿಕಿತ್ಸೆ ನೀಡಿದ್ದಾಗಿರುತ್ತದೆ. ಈ ಬಗ್ಗೆ ಹನುಮಂತರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 242/13 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಉಡುಪಿ ನಗರ:ದಿನಾಂಕ 17/05/2013 ರಂದು ಪಿರ್ಯಾದಿದಾರರಾದ ಶ್ರೀಮತಿ ನೂರಾಹ್ಮದ್‌ ಖಾನ್‌, ವಾಸ:ಮನೋಲಿಗುಜ್ಜಿ, ದೊಡ್ಡಣಗುಡ್ಡೆ, ಉಡುಪಿರವರು ಪ್ಲೆಷರ್‌ ದ್ವಿಚಕ್ರ ವಾಹನ ನಂಬ್ರ ಕೆಎ 20 ಇಬಿ 1743 ನೇದರಲ್ಲಿ ತನ್ನ ಅಕ್ಕನ ಮಗ ನೇಜಾನ್‌ನನ್ನು ಹಿಂಬದಿ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಉಡುಪಿ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವಾಗ್ಗೆ ಮಧ್ಯಾಹ್ನ ಸುಮಾರು 3:30 ಗಂಟೆಗೆ ಕಲ್ಸಂಕ ಬಳಿ ತಲುಪುವಾಗ್ಗೆ ಎದುರಿನಿಂದ ಉಡುಪಿ ಸಿಟಿ ಬಸ್ಸು ನಿಲ್ದಾಣದ ಕಡೆಗೆ ಮಾರುತಿ 800 ಕಾರಿನ ಚಾಲಕನು ತಾನು ಚಲಾಯಿಸುತ್ತಿದ್ದ ಕಾರನ್ನು ಯಾವುದೇ ಸೂಚನೆಯನ್ನು ನೀಡದೆ ಸದ್ರಿ ಕಾರನ್ನು ಒಮ್ಮೆಲೆ ನಿಲ್ಲಿಸಿದಾಗ ಹಿಂದಿನಿಂದ ಹೋಗುತ್ತಿದ್ದ ನೂರಾಹ್ಮದ್‌ ಖಾನ್‌ರವರ ದ್ವಿಚಕ್ರ ವಾಹನವು ಮಾರುತಿ 800 ಕಾರಿಗೆ ಢಿಕ್ಕಿ ಹೊಡೆಯಿತು. ಪರಿಣಾಮ ನೂರಾಹ್ಮದ್‌ ಖಾನ್‌ರವರ ಕಡೆ ತುಟಿಗೆ ಹಾಗೂ ನೇಜಾನ್‌‌ಗೆ ತುಟಿಗೆ ಗಾಯವಾಯಿತು. ಸದ್ರಿ ಅಪಘಾತವೆಸಗಿದ ಕಾರು ಚಾಲಕನು ತನ್ನ ಕಾರನ್ನು ನಿಲ್ಲಿಸದೇ ಮುಂದಕ್ಕೆ ಚಲಾಯಿಸಿಕೊಂಡು ಹೋಗಿರುತ್ತಾನೆ. ನೂರಾಹ್ಮದ್‌ ಖಾನ್‌ರವರು ಅಪಘಾತದ ಸಮಯ ಸದ್ರಿ ಕಾರಿನ ನಂಬ್ರವನ್ನು ನೋಡಲಾಗಿ ಕೆಎ 20-10 ಮಾತ್ರ ನೆನಪಿನಲ್ಲಿದ್ದು, ಉಳಿದ ನಂಬ್ರವನ್ನು ಸರಿಯಾಗಿ ನೋಡಿರುವುದಿಲ್ಲವಾಗಿ ಪಿರ್ಯಾದಿ ನೀಡಿರುತ್ತಾರೆ. ನೂರಾಹ್ಮದ್‌ ಖಾನ್‌ರವರನ್ನು ಮತ್ತು ನೇಜಾನ್‌‌ನನ್ನು ಚಿಕಿತ್ಸೆಯ ಬಗ್ಗೆ ಅಲ್ಲಿ ಸೇರಿದವರು ಉಡುಪಿ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿರುತ್ತಾರೆ. ಈ ಅಪಘಾತದಿಂದ ನೂರಾಹ್ಮದ್‌ ಖಾನ್‌ರವರ ವಾಹನವು ಜಖಂ ಉಂಟಾಗಿದ್ದಾಗಿರುತ್ತದೆ. ಈ ಬಗ್ಗೆ ನೂರಾಹ್ಮದ್‌ ಖಾನ್‌ರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 243/13 ಕಲಂ 279, 337 ಐಪಿಸಿ & 134 (ಎ)(ಬಿ) ಐಎಮ್‌ವಿ ಕಾಯಿದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಉಡುಪಿ ನಗರ:ದಿನಾಂಕ 17/05/2013 ರಂದು ಪಿರ್ಯಾದಿದಾರರಾದ ರಮೇಶ ಕಾರಂತ ತಂದೆ:ನರಸಿಂಹ ಕಾರಂತ, ವಾಸ: ಕಾರಂತರಬೆಟ್ಟು, ಕರಾವಳಿ ರಸ್ತೆ, ಸಾಸ್ತಾನ, ಐರೋಡಿ,ಉಡುಪಿರವರ ಭಾವ ನಾಗಭೂಷಣ್‌ ಎಂಬವರು ಅವರ ಮನೆಯ ಎದುರಿನ ರಾ.ಹೆ 66 ರ ಪುತ್ತೂರು ಪೆಟ್ರೋಲ್‌ ಬಂಕ್‌ ಬಳಿ ರಾತ್ರಿ 8:15 ಗಂಟೆಗೆ ರಸ್ತೆಯ ಎಡಬದಿಯಲ್ಲಿ ವಾಕಿಂಗ್‌ ಮಾಡುತ್ತಿರುವಾಗ್ಗೆ ಉಡುಪಿ ಕಡೆಯಿಂದ ಕೆಎ 20 ಡಬ್ಲ್ಯೂ3727 ನೇದರ ಮೋಟಾರ್ ಸೈಕಲ್‌ ಸವಾರನು ತಾನು ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರ್ ಸೈಕಲನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ರಮೇಶ ಕಾರಂತರವರ ಭಾವ ನಾಗಭೂಷಣ್‌ರವರಿಗ ಢಿಕ್ಕಿ ಹೊಡೆದ ಪರಿಣಾಮ, ನಾಗಭೂಷಣ್‌ರವರು ರಸ್ತೆಗೆ ಬಿದ್ದಿದ್ದು, ಕೂಡಲೇ ಅವರನ್ನು ರಮೇಶ ಕಾರಂತ ಹಾಗೂ ಇತರರು ಉಪಚರಿಸಿ ಒಂದು ವಾಹನದಲ್ಲಿ ಉಡುಪಿ ಹೈ-ಟೆಕ್‌ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಪರಿಕ್ಷೀಸಿದ ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿದ್ದಾಗಿರುತ್ತದೆ. ಈ ಅಪಘಾತದಿಂದಾಗಿ ನಾಗಭೂಷಣ್‌‌ರವರಿಗೆ ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ಪ್ರಜ್ಞೆ ಇರುವುದಿಲ್ಲ. ಅಲ್ಲದೆ ಮುಖಕ್ಕೂ ಕೂಡ ಗಾಯವಾಗಿರುತ್ತದೆ. ಈ ಅಪಘಾತದಲ್ಲಿ ಬೈಕ್‌ ಸವಾರಿನಿಗೂ ಕೂಡ ಗಾಯವಾಗಿರುತ್ತದೆ. ಈ ಬಗ್ಗೆ ರಮೇಶ ಕಾರಂತರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 244/13 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: