Friday, May 17, 2013

Daily Crimes Reported as On 17/05/2013 at 19:30 Hrs


ಅಸ್ವಾಭಾವಿಕ ಮರಣ ಪ್ರಕರಣಗಳು
  • ಮಣಿಪಾಲ:ಪಿರ್ಯಾದಿದಾರರಾದ ಶರತ್‌ ಹೆಗ್ಡೆ (29) ತಂದೆ: ಶಂಕರ್‌ ಎಂ. ಹೆಗ್ಡೆ ವಾಸ: ಅರ್ಬಿ ಮನೆ, 80-ಬಡಗುಬೆಟ್ಟು ಗ್ರಾಮ, ಉಡುಪಿ ತಾಲೂಕುರವರ ತಂದೆ ಶಂಕರ್‌ ಎಂ ಹೆಗ್ಡೆ (67) ಇವರು ದಿನಾಂಕ 17/05/2013 ರಂದು ಬೆಳಿಗ್ಗೆ 09:00 ಗಂಟೆಯಿಂದ ಮಧ್ಯಾಹ್ನ 3:00 ಗಂಟೆ ನಡುವಿನ ಅವಧಿಯಲ್ಲಿ ಉಡುಪಿ ತಾಲೂಕು 80-ಬಡಗುಬೆಟ್ಟು ಗ್ರಾಮದ ಅರ್ಬಿ ಎಂಬಲ್ಲಿ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಅದೇ ಕಾರಣದಿಂದ ವಿಷ ಸೇವನೆ ಮಾಡಿದ್ದಾಗಿದೆ. ಈ ಬಗ್ಗೆ ಶರತ್‌ ಹೆಗ್ಡೆರವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 27/2013 ಕಲಂ:174 ಸಿಆರ್‌‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕೊಲ್ಲೂರು:ದಿನಾಂಕ 16/05/2013 ರಂದು ಮೃತ ಸದಾನಂದನ್ (47) ತಂದೆ:ದಿವಂಗತ ವೇಲಾಯುಧನ್ ಪಾಂಡಿಕಡವು ಚಿರಿಕುಳ ಗ್ರಾಮ ಪೋಸ್ಟ್ ತಳಿಪರಂ ಕಣ್ಣೂರು ಜಿಲ್ಲೆ ಕೇರಳರವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಬಂದಿದ್ದವರು, ಹಣದ ಅಡಚಣೆಯಿಂದ ಇದ್ದಿದ್ದು, ಅಲ್ಲದೆ ಮೃತರ ಎರಡನೇ ಮಗಳ ಮದುವೇ ನಿಂತು ಹೋದ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸಗೊಂಡು ನಿನ್ನೆ ದಿನಾಂಕ 16/05/2013 ರಂದು ರಾತ್ರಿ ಸಮಯಕ್ಕೆ ಕೊಲ್ಲೂರು ಸೌರ್ಪಣಿಕ ನದಿ ಬಳಿ ಒಂದು ಮರದ ಕೊಂಬೆಗೆ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ವಿನೋದ ಎಮ್ (33) ಕುಮಾರನ್ ಮ್ಲಲಿಕರ ಮೆನೆ ಪದವೂರು ಚರ್ವಾತ್ತೂರು ಕಾಸರಗೋಡು ಕೇರಳರವರು ನೀಡಿದ ದೂರಿನಂತೆ ಕೊಲ್ಲೂರು ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 03/2013 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: