Thursday, May 16, 2013

Daily Crimes Reported as On 16/05/2013 At 17:00 Hrs

ಅಸ್ವಾಭಾವಿಕ ಮರಣ ಪ್ರಕರಣಗಳು
  • ಶಿರ್ವಾ: ದಿನಾಂಕ 12/05/2013 ರಂದು 14:00 ಗಂಟೆ ಸಮಯಕ್ಕೆ ಉಡುಪಿ ತಾಲೂಕು ಕುರ್ಕಾಲು ಗ್ರಾಮದ  ಸುಭಾಷ್‌ನಗರ ತಂಬಡ ಗುಂಡಿ ಎಂಬಲ್ಲಿ ಪಿರ್ಯಾದಿದಾರರಾದ ಆಲ್ವಿನ್‌ (51), ತಂದೆ ಜೋಸೆಫ್‌ ಕರ್ಕಡ, ವಾಸ   ಕರ್ಕಡ ಕಂಪೌಂಡು, ಭಾಷ್‌ನಗರ  ಕುರ್ಕಾಲು ಗ್ರಾಮ ಉಡುಪಿ ತಾಲೂಕು ಇವರ ಬಾವನಾದ ಗೋಡ್ವಿನ್‌ ಕರ್ಕಡ (44) ಎಂಬವರು ಯಾವುದೋ ಕೀಟ ನಾಶಕ ವಿಷ ಪದಾರ್ಥವನ್ನು ಸೇವಿಸಿದ್ದು ನೆರೆಕರೆಯ ನಿವಾಸಿಗಳು ಇವರನ್ನು ಅದೇ ದಿನ ಉಡುಪಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಬಗ್ಗೆ ದಾಖಲಿಸಿದ್ದು ಚಿಕಿತ್ಸೆಯಲ್ಲಿ ಇರುತ್ತಾ ಇವರು ದಿನಾಂಕ 15/05/2013 ರಂದು 18:30 ಗಂಟೆಗೆ ಮೃತರಾಗಿದ್ದು ಅಮಲು ಸೇವನೆಯ ಚಟದಿಂದಲೂ ಆರ್ಥಿಕ  ಅಡಚಣೆಯಿಂದಲೂ ಇವರು ಜೀವನದಲ್ಲಿ ಜಿಗುಪ್ಸೆಗೊಂಡು ವಿಷ  ಪದಾರ್ಥವನ್ನು ಸೇವಿಸಿರುತ್ತಾರೆ ಎಂಬುದಾಗಿ ಆಲ್ವಿನ್‌ ಇವರು ನೀಡಿದ ದೂರಿನಂತೆ ಶಿರ್ವಾ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 16/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕಾರ್ಕಳ: ದಿನಾಂಕ 15/05/2013 ರಂದು ಸಂಜೆ 4:00 ಗಂಟೆಗೆ ಪಿರ್ಯಾದಿದಾರರಾದ ಎಸ್. ಸುವರ್ಣ ನಾಯ್ಕ್ (55) ತಂದೆ ಬಿ. ರಾಮಕೃಷ್ಣ. ನಾಯ್ಕ್ ವಾಸ ಭಂಡಶಾಳೆ ಮನೆ, ನಕ್ರೆ, ಕುಕ್ಕುಂದೂರು ಗ್ರಾಮ, ಕಾರ್ಕಳ ಇವರ  ದೊಡ್ಡಮ್ಮನ ಮಗ ಶ್ರೀಖರ ಹೆಗ್ಡೆ (26) ಎಂಬವರು ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ರೆಂಜಗುತ್ತು ಎಂಬಲ್ಲಿರುವ ಶಾಂಭವಿ ಹೊಳೆಯಲ್ಲಿ ಸ್ನಾನ ಮಾಡುತ್ತಿರುವಾಗ ಆಕಸ್ಮಿಕವಾಗಿ ಹೊಳೆಯ ನೀರಿನ ಆಳದಲ್ಲಿ ಮುಳುಗಿ ಉಸಿರುಕಟ್ಟಿ ಮೃತಪಟ್ಟಿರುವುದಾಗಿದೆ ಎಂಬುದಾಗಿ ಎಸ್. ಸುವರ್ಣ ನಾಯ್ಕ್ ಕಾರ್ಕಳ ಗ್ರಾಮಾಂತರ ಠಾಣಾ  ಅಸ್ವಾಭಾವಿಕ ಮರಣ ಸಂಖ್ಯೆ 24/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಮಣಿಪಾಲ: ದಿನಾಂಕ 16/05/2013 ರಂದು ಬೆಳಿಗ್ಗೆ 10:45 ಗಂಟೆಗೆ ಉಡುಪಿ ತಾಲೂಕು ಉಡುಪಿ-ಬಾರ್ಕೂರು ರೈಲ್ವೇ ಟ್ರಾಕ್‌ನ ಮೈಲು ಕಲ್ಲು ನಂ ಕೆಎಂ 688/7-8 ರ ಹಳಿಯ ಬಳಿ ಸುಮಾರು 30 ವರ್ಷ ಪ್ರಾಯದ ಓರ್ವ ಗಂಡಸಿನ ಮೃತ ಶರೀರ ಬಿದ್ದುಕೊಂಡಿರುತ್ತದೆ ಎಂಬುದಾಗಿ ಪಿರ್ಯಾದಿದಾರರಾದ ಸತೀಶ್‌ ಜೆ. ಹಬ್ಬು ಸ್ಟೇಶನ್‌ ಮಾಸ್ಟರ್‌ ಕೊಂಕಣ ರೈಲ್ವೆ ಸ್ಟೇಶನ್‌, ಇಂದ್ರಾಳಿ, ಉಡುಪಿ ಇವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 25/2013  ಕಲಂ 174 ಸಿ.ಆರ್‌.‌ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಜೀವ ಬೆದರಿಕೆ ಪ್ರಕರಣ
  • ಕೊಲ್ಲುರು: ದಿನಾಂಕ 15/05/2013 ರಂದು ಮುದೂರು ಗ್ರಾಮದ ಗೊವಿಂದ ಪ್ಲಾಂಟೇಶನಲ್ಲಿ ಪಿರ್ಯಾದಿದಾರರಾದ ಕಮಲೇಶ ಎಂ .ಭಟ್, ತಂದೆ ಕೃಷ್ಣ ಭಟ್, ಮುದೂರು ಗ್ರಾಮ ಕುಂದಾಪುರ ಇವರ ಜೊರ್ಜಾ ಕನ್ನಂಚರ ತಕರಾರು ಸ್ಥಳಕ್ಕೆ ಅರೋಪಿತರುಗಳಾದ ಜೊರ್ಜಾ ಕನ್ನಂಚರ ಬೆಂಬಲಿಗರಾದ ಜಿಮ್ಮಿ ಮತ್ತು ಇತರ 3 ಜನರು  ಸೇರಿ  ಅಕ್ರಮ ಪ್ರವೇಶ ಮಾಡಿ ಕಮಲೇಶ ಎಂ .ಭಟ್ ರವರ ಕೆಲಸ ಗಾರರಿಗೆ  ಮಾರಕ ಆಯುಧಗಗಳಾದ ಕತ್ತಿ, ದೊಣ್ಣೆ, ಮತ್ತು ಚೈನುಗಳನ್ನು ತೋರಿಸಿ ಹೆದರಿಸಿ ಇನ್ನು ಮುಂದಕ್ಕೆ ಕಮಲೇಶ ಎಂ .ಭಟ್ ರವರ ಸ್ಥಳಕ್ಕೆ ಕೆಲಸಕ್ಕೆ ಬಂದರೆ ಕೊಂದು ಮುಗಿಸುವುದಾಗಿಯೂ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಕಮಲೇಶ ಎಂ .ಭಟ್ ಇವರು ನೀಡಿದ ದೂರಿನಂತೆ ಕೊಲ್ಲೂರು ಠಾಣಾ ಅಪರಾಧ ಕ್ರಮಾಂಕ 47/2013  ಕಲಂ 143, 147, 447, 506 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.  
ಅಪಘಾತ ಪ್ರಕರಣಗಳು
  • ಉಡುಪಿ: ಪಿರ್ಯಾದಿದಾರರಾದ ಸಾಧಿಕ್‌ (24) ತಂದೆ ಸಾಬುಜ್‌ ಶೇಖ್‌, ವಾಸ 7ನೇ ಮುಖ್ಯ ಬಿ.ಎಮ್‌ ನಗರ, ದೊಡ್ಡಣಗುಡ್ಡೆ, ಉಡುಪಿ ಇವರು ಉಡುಪಿ ಮಹೀಂದ್ರ ಕಂಪೆನಿಯ ಕರ್ನಾಟಕ ಏಜೆನ್ಸಿಯಲ್ಲಿ ಫೀಲ್ಡ್‌ ಸೇಲ್‌ ಕನ್ಸಲ್ಟೆಂಟ್‌ ಆಗಿ ಕೆಲಸ ಮಾಡಿಕೊಂಡಿದ್ದು. ದಿನಾಂಕ 16/05/13ರಂದು ತನ್ನ ಕಂಪೆನಿಯಿಂದ ಕೆಎ 18ಎನ್‌ ‌9460ನೇ ಕಾರನ್ನು ಟೆಸ್ಟ್‌ ಡ್ರೈವ್‌ ಬಗ್ಗೆ ತೆಗೆದುಕೊಂಡು ಸಂತೆಕಟ್ಟೆ ಬಳಿ 11:15ಗಂಟೆಗೆ ತಲುಪಿದಾಗ ಹಿಂದಿನಿಂದ ಕೆಎ 19ಸಿ 1599ನೇದರ ಬಸ್ಸು ಚಾಲಕನು ತಾನು ಚಲಾಯಿಸಿಕೊಂಡು ಬರುತ್ತಿದ್ದ ಬಸ್ಸನ್ನು ಅತೀ ವೇಗ ಮತ್ತು ಅಜಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸಾಧಿಕ್‌ರವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರಿನ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಸಾಧಿಕ್‌ರವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರಿನ ಹಿಂಬದಿಯ, ಬಲಭಾಗದ ಡೈಲ್‌ ಲಾಮವು ಹೂಡಿಯಾಗಿದ್ದು, ಬಂಪರ್‌ ಡೆಂಟ್‌ ಆಗಿದ್ದು, ಸುಮಾರು 7500/-  ರೂಪಾಯಿ ನಷ್ಟ ಉಂಟಾಗಿದ್ದಾಗಿರುತ್ತದೆ ಎಂಬುದಾಗಿ ಸಾಧಿಕ್‌ ಇವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 240/13 ಕಲಂ 279 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕುಂದಾಪುರ: ದಿನಾಂಕ 16/05/2013 ರಂದು ಮಧ್ಯಾಹ್ನ 1:30 ಗಂಟೆಗೆ ಕುಂದಾಪುರ ತಾಲೂಕಿನ ಕೊಟೇಶ್ವರ   ಗ್ರಾಮದ  ಅಂಕದಕಟ್ಟೆಯ ಸರ್ಜನ್ ಆಸ್ಪತ್ರೆಯ ಬಳಿ  ರಾ.ಹೆ  66 ರಲ್ಲಿ ಆಪಾದಿತ ಪ್ರೆಡ್ಡಿಕ್ ಮಸ್ಕೇರನಸ್ ಎಂಬವರು ಕೆಎ 20ಬಿ 3009ನೇ ಗೂಡ್ಸ್ ವಾಹನವನ್ನು ಕುಂದಾಪುರ ಕಡೆಯಿಂದ ಕೊಟೇಶ್ವರ ಕಡೆಗೆ ಅತೀವೇಗದಿಂದ  ಚಲಾಯಿಸಿಕೊಂಡು ಬಂದು ನಿರ್ಲಕ್ಷತನದಿಂದ ರಸ್ತೆಯ ಎಡಬದಿಗೆ ಚಲಾಯಿಸಿ ರಸ್ತೆ ದಾಟಲು ನಿಂತಿದ್ದ ಸಂತೋಷ ಮೊಗವೀರ ಎಂಬವರಿಗೆ  ಡಿಕ್ಕಿ ಹೊಡೆದ ಪರಿಣಾಮ ಅವರು  ಗಾಯಗೊಂಡು ಅಂಕದಕಟ್ಟೆಯ  ಸರ್ಜನ್  ಆಸ್ಪತ್ರೆಯಲ್ಲಿ  ಪ್ರಥಮ ಚಿಕಿತ್ಸೆ  ಪಡೆದು ಚಿಕಿತ್ಸೆ ಬಗ್ಗೆ  ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ಹೋಗಿರುತ್ತಾರೆ ಎಂಬುದಾಗಿ ಪಿರ್ಯಾದಿದಾರರಾದ ಸಂತೋಷ  (32) ತಂದೆ ದಿ. ಗೋವಿಂದ, ವಾಸ ಜಿ.ಎಸ್ ಹೌಸ್ ಗಾಣಿಗ್ರ ಬೆಟ್ಟು ಆನಗಳ್ಳಿ ಕುಂದಾಪುರ ಇವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 37/2013  ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: