Thursday, May 16, 2013

Daily Crimes Reported as On 16/05/2013 At 19:30 Hrs

ಅಪಘಾತ ಪ್ರಕರಣಗಳು
  • ಉಡುಪಿ: ದಿನಾಂಕ 16/05/13ರಂದು ಪಿರ್ಯಾದಿದಾರರಾದ ಕೃಷ್ಣಕಾಂತ, ತಂದೆ ರಾಘುರಾಮ ಜೋಗಿ, ವಾಸ ಕೃಷ್ಣ ಲೀಲಾ, ಮಾರ್ಕೆಟ್‌ ಹತ್ತಿರ, ಕಾಪು, ಮುಖ್ಯರಸ್ತೆ ಉಡುಪಿ ಇವರು ತನ್ನ ಬಾಬ್ತು ಮೋಟಾರ್‌ ಸೈಕಲ್‌ ಕೆಎ 20ಯು 4654ನೇದನ್ನು ಸವಾರಿ ಮಾಡಿಕೊಂಡು ತನ್ನ ಮನೆಯಿಂದ ಉಡುಪಿ ಕಡೆಗೆ ಬಲಾಯಿಪಾದೆ ಒಳ ರಸ್ತೆಯಿಂದಾಗಿ ಬರುತ್ತಿರುವಾಗ ಸಮಯ 9:50ಗಂಟೆಗೆ ಕಿನ್ನಿಮೂಲ್ಕಿ ಬಳಿ ಬಣ್ಣದ ಪೈಂಟ್‌ ಹಾಕಿರುವ ದೊಡ್ಡಮನೆಯ ಎದುರು ತಲುಪುವಾಗ ಸದ್ರಿ ಮನೆಯ ಪಶ್ಚಿಮ ಬದಿಯಲ್ಲಿರುವ ಸಣ್ಣ ಒಣಿಯಿಂದ ಕೆಎ 20ಎಕ್ಸ್‌ ‌‌5302ನೇದರ ಮೋಟಾರ್‌ ಸೈಕಲ್‌ ಸವಾರ ರಾಘವೇಂದ್ರನು ತಾನು ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರ್‌ ಸೈಕಲ್‌ನ್ನು ಅತೀ ವೇಗ ಮತ್ತು ಅಜಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಕೃಷ್ಣಕಾಂತರವರ ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಕೃಷ್ಣಕಾಂತರವರು ಬೈಕ್‌ ಸಮೇತ ರಸ್ತೆಗೆ ಬಿದ್ದು, ಅವರ ಎಡಕೈಗೆ ಗುದ್ದಿನ ನೋವು ಉಂಟಾಗಿ, ಎಡಕಾಲಿಗೆ ತರಚಿದ ಮತ್ತು ಗುದ್ದಿದ ನೋವು ಉಂಟಾಗಿರುತ್ತದೆ. ಸದ್ರಿ ಅಪಘಾತವೆಸಗಿದ ಮೋಟಾರ್‌ ಸೈಕಲ್‌ ಸವಾರನು ಕೃಷ್ಣಕಾಂತರವರನ್ನು ಚಿಕಿತ್ಸೆಯ ಬಗ್ಗೆ ಒಂದು ಆಟೋರಿಕ್ಷಾದಲ್ಲಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಪರಿಕ್ಷೀಸಿದ ವೈದ್ಯರು ಚಿಕಿತ್ಸೆ ನೀಡಿ ಒಳರೋಗಿಯಾಗಿ ದಾಖಲಿಸಿಕೊಂಡಿದ್ದಾಗಿರುತ್ತದೆ ಎಂಬುದಾಗಿ ಕೃಷ್ಣಕಾಂತ ಇವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 241/13 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
  • ಉಡುಪಿ: ದಿನಾಂಕ 16/05/13ರಂದು ಪಿರ್ಯಾದಿದಾರರಾದ ಹನುಮಂತ, ತಂದೆ ದುರ್ಗಪ್ಪ, ವಾಸ ಕಳವಿನಾಯಕನ ಹಳ್ಳಿಕ ಅಗರಿ ಬೊಮ್ಮನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆ ಇವರು ಕೆ.ಎಸ್‌.ಆರ್‌.ಟಿ.ಸಿ ಬಸ್ಸು ನಿಲ್ದಾಣದಲ್ಲಿ ಬೆಳಿಗ್ಗೆ 8:30ಗಂಟೆಗೆ ನಡೆದುಕೊಂಡು ಹೋಗುತ್ತಿರುವಾಗ ಅವರ ಹಿಂದಿನಿಂದ ಕೆಎ 01ಎಫ್‌ ಎ2109ನೇದರ ಕೆ.ಎಸ್‌.ಆರ್‌.ಟಿ.ಸಿ ಬಸ್ಸಿನ ಚಾಲಕನು ತಾನು ಚಲಾಯಿಸಿಕೊಂಡು ಬರುತ್ತಿದ್ದ ಬಸ್ಸನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹನುಮಂತರವರಿಗೆ ಢಿಕ್ಕಿ ಹೊಡೆದ ಪರಿಣಾಮ ಹನುಮಂತರವರು ಕೆಳಗೆ ಬಿದ್ದಾಗ ಬಸ್ಸಿನ ಎದುರಿನ ಬಂಪರ್‌ ಹನುಮಂತರವರ ಬಲಕಾಲಿನ ಮೇಲೆ ಹೋಗಿದ್ದರಿಂದ ಅವರ ಬಲಕಾಲಿಗೆ ತೀವ್ರ ತರಹದ ಜಖಂ ಉಂಟಾಗಿದ್ದು, ಹನುಮಂತರವರನ್ನು ಅವರ ಸ್ನೇಹಿತ ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ವೈದ್ಯರು ಹೊರರೋಗಿಯಾಗಿ ಚಿಕಿತ್ಸೆ ನೀಡಿದ್ದಾಗಿರುತ್ತದೆ ಎಂಬುದಾಗಿ ಹನುಮಂತರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 242/13 ಕಲಂ 279, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಪಡುಬಿದ್ರಿ: ದಿನಾಂಕ 16/05/2013ರಂದು ಪಿರ್ಯಾದುದಾರರಾದ ನಿಜಾಮುದ್ದೀನ್ (26), ತಂದೆ ಹೆಚ್‌.ಎಂ ಫಿಜರ್, ವಾಸ ದಿಲ್‌ಶಾದ್‌ ಮಂಜಿಲ್, ಪಡುಬಿದ್ರಿ, ನಡ್ಸಾಲು ಗ್ರಾಮ, ಉಡುಪಿ ತಾಲೂಕು ಇವರು  ಕೆಎ 20ಪಿ 6736ನೇ ಮಾರುತಿ ರಿಡ್ಜ್‌ ಕಾರನ್ನು ಚಲಾಯಿಸಿಕೊಂಡು ಸ್ನೇಹಿತ ಚಂದ್ರಮಣಿ ಗಡಾಯ ಇವರೊಂದಿಗೆ ಪಡುಬಿದ್ರಿಯಿಂದ ಉಡುಪಿ ಕಡೆಗೆ ಹೋಗುತ್ತಿರುವಾಗ ಬೆಳಿಗ್ಗೆ 08:15 ಗಂಟೆಗೆ ತೆಂಕ ಎರ್ಮಾಳು ಗ್ರಾಮದ ನಾರಳ್ತಾಯ ದೇವಸ್ಥಾನದ ಬಳಿ ರಾ.ಹೆ 66ರಲ್ಲಿ ಹೋಗುತ್ತಿರುವಾಗ ಉಡುಪಿ ಕಡೆಯಿಂದ ಕೆಎ 17ಬಿ 7211 ನೇ ಲಾರಿಯನ್ನು ಅದರ ಚಾಲಕ ಅಸ್ಗರ್ ಅಲಿ ಎಂಬಾತನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಿಜಾಮುದ್ದೀನ್‌ರವರು ಚಲಾಯಿಸುತ್ತಿದ್ದ ಕಾರಿಗೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಅದೇ ವೇಳೆ ಕೆಎ 17ಬಿ 7211 ನೇ ಲಾರಿಯ ಹಿಂದಿನಿಂದ ಪಡುಬಿದ್ರಿ ಕಡೆಗೆ ಬರುತ್ತಿದ್ದ ಕೆಎ 20ಸಿ 5800 ನೇ ಬಸ್‌ ನ್ನು ಅದರ ಚಾಲಕ ರಾಘವೇಂದ್ರ ಎಂಬಾತನು ಕೂಡ ಅತಿವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಅಪಘಾತಕ್ಕೀಡಾದ ಲಾರಿಯ ಹಿಂಭಾಗಕ್ಕೆ ಢಿಕ್ಕಿ ಹೊಡೆದನು. ಈ ಅಪಘಾತದಿಂದ ನಿಜಾಮುದ್ದೀನ್ರವರ ಬಲಭುಜಕ್ಕೆ ಹಾಗೂ, ಚಂದ್ರಮಣಿ ಗಡಾಯ ರವರ ಮುಖಕ್ಕೆ ಹಾಗೂ ಕೆಎ 20ಸಿ 5800 ನೇ ಬಸ್‌ನಲ್ಲಿದ್ದ ಪ್ರಯಾಣಿಕರಿಗೂ ಗಾಯಗಳಾಗಿದ್ದು ಚಿಕಿತ್ಸ ಬಗ್ಗೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬುದಾಗಿ ನಿಜಾಮುದ್ದೀನ್ ಇವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 80/2013  ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ವರದಕ್ಷಿಣೆ ಕಿರುಕುಳ
  • ಶಿರ್ವಾ: ಪಿರ್ಯಾದಿದಾರಾದ ಶ್ರೀಮತಿ ರೆಹಮತ್‌ (31), ವಾಸ ಮಲ್ಲಂಗೋಳಿ ದರ್ಗಾ ರಸ್ತೆ ಬೆಳಪು ಗ್ರಾಮ ಇವರು ಇಸ್ಲಾಂ ಜಾತಿ ಪದ್ದತಿಯಂತೆ ಆರೋಪಿ ಅಬ್ದುಲ್‌ ರಜಾಕ್‌ (34) ರವರನ್ನು ದಿನಾಂಕ 22/07/2007ರಂದು  ಮದುವೆಯಾಗಿದ್ದು ಮದುವೆಯ ನಂತರ ಶ್ರೀಮತಿ ರೆಹಮತ್‌ರವರು ಗಂಡನ ಮನೆಯಾದ ಉಡುಪಿ ತಾಲೂಕು ಬೆಳಪು ಗ್ರಾಮದಲ್ಲಿ ವಾಸ್ತವ್ಯ ಇರುವ ಸಮಯದಲ್ಲಿ ಆರೋಪಿತರುಗಳಾದ 1) ಅಬ್ದುಲ್‌ ರಜಾಕ್‌ (34),  2) ಶ್ರೀಮತಿ ಮರಿಯಮ್ಮ (60) 3) ಶ್ರೀಮತಿ ಮುಮ್ತಾಜ್‌ (37), 4) ಮಹಮ್ಮದ್‌@ ಹಾಜಬ್ಬ (42), 5) ಹಮೀದ್‌ (42) ವಾಸ ಮಲ್ಲಂಗೋಳಿ ದರ್ಗಾ ರಸ್ತೆ ಬೆಳಪು ಗ್ರಾಮ ಇವರುಗಳು ಸಮಾನ ಉದ್ದೇಶದಿಂದ ಶ್ರೀಮತಿ ರೆಹಮತ್‌ರವರಿಗೆ ಹಣ ಹಾಗೂ ಹೆಚ್ಚುವರಿ ಚಿನ್ನವನ್ನು ತರುವಂತೆ  ಪೀಡಿಸುತ್ತಿದ್ದುದಲ್ಲದೆ ಕೈಗಳಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕ ಹಿಂಸೆಯನ್ನು ನೀಡಿದ್ದು  ದಿನಾಂಕ 08/04/2013 ರಂದು ರಾತ್ರಿ 9:00 ಗಂಟೆ ಸಮಯಕ್ಕೆ ಆರೋಪಿತರುಗಳು ಸಮಾನ ಉದ್ದೇಶದಿಂದ ಶ್ರೀಮತಿ ರೆಹಮತ್‌ರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ದೈಹಿಕ ಹಿಂಸೆಯನ್ನು ನೀಡಿದ್ದು ಪೊಲೀಸರಿಗೆ ತಿಳಿಸಿದ್ದಲ್ಲಿ ಶ್ರೀಮತಿ ರೆಹಮತ್‌ ಹಾಗೂ ಅವರ ಮಗುವನ್ನು ಕೊಂದು ಹಾಕುವುದಾಗಿ ಜೀವ ಬೆದರಿಕೆ ಹಾಕಿ ಶ್ರೀಮತಿ ರೆಹಮತ್‌ರವರನ್ನು ಮನೆಯಿಂದ ಹೊರಗೆ ಹಾಕಿರುತ್ತಾರೆ ಎಂಬುದಾಗಿ ಶ್ರೀಮತಿ ರೆಹಮತ್‌ ಇವರು ನೀಡಿದ ದೂರಿನಂತೆ ಶಿರ್ವಾ ಠಾಣಾ ಅಪರಾಧ ಕ್ರಮಾಂಕ 48/2013 ಕಲಂ 498(ಎ), 323, 504, 506 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ
  • ಕೋಟ: ದಿನಾಂಕ 14/05/2013 ರಂದು ರಾತ್ರಿ 10:50 ಗಂಟೆಗೆ ಕುಂದಾಪುರ ತಾಲೂಕು ಮೊಳಹಳ್ಳಿ ಗ್ರಾಮದ ಮಾವಿನಗದ್ದೆ ಎಂಬಲ್ಲಿರುವ ಪಿರ್ಯಾದಿದಾರರಾದ ಆನಂದ (35) ತಂದೆ ಸಂಕ ಕೊಠಾರಿ, ವಾಸ ಮಾವಿನಗದ್ದೆ ಮೊಳಹಳ್ಳಿ ಗ್ರಾಮ ಕುಂದಾಪುರ ತಾಲೂಕು ಇವರ ಮನೆಗೆ ಆರೋಪಿಗಳಾದ ಸುರೇಂದ್ರ, ಕೃಷ್ಣಮೂರ್ತಿ, ಮಹಾಬಲ ಕೊಠಾರಿ, ಸಂತೋಷ ಹಾಗೂ ಇನ್ನೋರ್ವ ಇವರುಗಳು ಅಕ್ರಮ ಪ್ರವೇಶ ಮಾಡಿ ಎಲ್ಲರೂ ಸೇರಿ ಪಿರ್ಯಾದಿ ಆನಂದರವರಿಗೆ ಕೈಯಿಂದ ಹಾಗೂ ಬೆಲ್ಟಿನಿಂದ ತಲೆಗೆ ಎದೆಗೆ ಬೆನ್ನಿಗೆ ಹೊಡೆದು ಆನಂದರವರನ್ನು ಎಳೆದುಕೊಂಡು ಆರೋಪಿಗಳು ತಾವು ಬಂದಿದ್ದ ಕಾರಿನಲ್ಲಿ ಕುಳ್ಳಿರಿಸಿ ಉಳ್ತೂರು ಅವರ ಮನೆಗೆ ಕರೆದುಕೊಂಡು ಹೋಗಿ ಆನಂದರವರಿಗೆ ಕೈಕಾಲುಗಳನ್ನು ಕಟ್ಟಿಹಾಕಿ ಅವ್ಯಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಎಡ ಕಾಲಿನ ಗಂಟನ್ನು ತಿರುಚಿ ರೂಮಿನಲ್ಲಿ ಕೂಡಿಹಾಕಿದ್ದು, ಬೆಳಿಗ್ಗೆ ಮನೆಯ ಹೆಂಗಸರು ಬಾಗಿಲು ತೆರೆಯುವ ಸಮಯ ಯಾರಿಗೂ ತಿಳಿಯಾದ ಹಾಗೆ ಅಲ್ಲಿಂದ ತಪ್ಪಿಸಿಕೊಂಡು ತನ್ನ ಮನೆಯಾದ ಮೊಳಹಳ್ಳಿಗೆ ಬಂದು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಅಸ್ಪತ್ರೆಗೆ ದಾಖಲಾಗಿರುವುದಾಗಿದೆ ಆನಂದರವರು ಮದುವೆಯಾದ ಬಳಿಕ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಈ ಹಲ್ಲೆ ಮಾಡಿರುವುದಾಗಿದೆ ಎಂಬುದಾಗಿ ಅವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 135/2013 ಕಲಂ 143, 147, 148, 448, 323, 324, 504, 342, 506 ಜೊತೆಗೆ 149 .ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣಗಳು
  • ಕೋಟ: ದಿನಾಂಕ 15/05/2013 ರಂದು ಸಂಜೆ 6:20 ಗಂಟೆ ಸುಮಾರಿಗೆ ಕಾರ್ಕಡ ಗ್ರಾಮದ ನೆಲ್ಲಿಬೆಟ್ಟು ಎಂಬಲ್ಲಿ ಬೇಲಿಯ ಬಳಿ ಆಟ ಆಡುತ್ತಿದ್ದ 9 ವರ್ಷ ಪ್ರಾಯದ ಕವನ ಎಂಬ ಹುಡುಗಿಯ ಕಾಲಿಗೆ ಹಾವು ಕಚ್ಚಿ ಬಾಯಲ್ಲಿ ನೊರೆ ಬರುತ್ತಿದ್ದವರನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈಧ್ಯರು ಮೃತಪಟ್ಟಿರುವುದಾಗಿದೆ ತಿಳಿಸಿರುವುದಾಗಿದೆ ಎಂಬುದಾಗಿ ಪಿರ್ಯಾದಿದಾರರಾದ ರಾಮ ದೇವಾಡಿಗ, ತಂದೆ ವೆಂಕಟ ದೇವಾಡಿಗ, ವಾಸ ದಿಂಪದ ಮನೆ ನೆಲ್ಲಿಬೆಟ್ಟು ಕಾರ್ಕಡ ಇವರು ನೀಡಿದ ದೂರಿನಂತೆ ಕೋಟ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 16/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕಾರ್ಕಳ: ಕಾರ್ಕಳ ತಾಲೂಕು ಮಾಳ ಗ್ರಾಮದ ಪರಬೆಟ್ಟು ಎಂಬಲ್ಲಿ ಪಿರ್ಯಾದಿದಾರರಾದ ಸುಂದರ ಕೋಟ್ಯಾನ್, ವಾಸ ಪರಬೆಟ್ಟು ಮನೆ, ಮಾಳ ಗ್ರಾಮ  ಕಾರ್ಕಳ ತಾಲೂಕು ಇವರ ಮಗ ಶಶಿಕುಮಾರ್ (24) ಎಂಬುವರ ತಮ್ಮ ಅಜಿತ್ ಇವರು ಸುಮಾರು 2 ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ  ವಿಚಾರದಲ್ಲಿ ಅಥವಾ ಇನ್ನಾವದೋ ಕಾರಣದಿಂದ ಶಶಿಕುಮಾರ್ ಇವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 15/05/2013 ರಂದು 17:00 ಗಂಟೆಯಿಂದ ಈ ದಿನಾಂಕ 16/05/2013 ರಂದು ಬೆಳಗ್ಗೆ 07:00 ಗಂಟೆಯ ನಡುವಿನ ಅವಧಿಯಲ್ಲಿ ಕುತ್ತಿಗೆಗೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಸುಂದರ ಕೋಟ್ಯಾನ್ ಇವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 25/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: