Thursday, May 16, 2013

Daily Crime Reported As On 16/05/2013 At 07:00 Hrs


ಗಂಡಸು ಕಾಣೆ ಪ್ರಕರಣ
  • ಕಾರ್ಕಳ: ಶ್ರೀಮತಿ  ಸುಶೀಲ ಶೆಡ್ತಿ ಗಂಡ ರಾಜು ಶೆಟ್ಟಿ ವಾಸ: ದುರ್ಗಾನುಗೃಹ, ನಮನಾಪುರ, ನಕ್ರೆ, ಕುಕ್ಕುಂದೂರು ಗ್ರಾಮ ಕಾರ್ಕಳ ತಾಲೂಕುರವರ ಮಗ ಸಂದೀಪ ಶೆಟ್ಟಿ ರವರು ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದವನು ದಿನಾಂಕ: 21/04/2013 ರಂದು ಸಂಜೆ 7 ಗಂಟೆಗೆ ಆತನ ಮೋಟಾರು ಸೈಕಲ್ ನಂಬ್ರ ಕೆಎ-20 ಇಸಿ- 3473 ನೇದರಲ್ಲಿ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ನಕ್ರೆ ನಮನಾಪುರ  ದುರ್ಗಾನುಗೃಹ ಎಂಬ ಮನೆಯಿಂದ ಹೋದವನು ಕೆಲಸಕ್ಕೆ ಹೋಗದೇ, ಸಂಬಂದಿಕರ ಮನೆಗೂ ಹೋಗದೆ, ವಾಪಾಸು ಮನೆಗೆ ಬಾರದೆ ಕಾಣೆಯಾಗಿರುವುದಾಗಿದೆ. ಸಂದೀಪ್ ಶೆಟ್ಟಿಯೂ ಈ ಹಿಂದೆಯೂ ಕೆಲಸಕ್ಕೆ ಹೋದವನು 2-3 ದಿವಸ ಮನೆಗೆ ಬಾರದೇ ಇದ್ದು ನಂತರ ಮನೆಗೆ ಬಂದಿರುತ್ತಾನೆ. ಆದರೆ ದಿನಾಂಕ 21/04/2013 ರಂದು ಕೆಲಸಕ್ಕೆ ಹೋದವನು ಮನೆಗೆ ಬಾರದೆ ಕಾಣೆಯಾಗಿರುವುದಾಗಿದೆ ಎಂಬುದಾಗಿ ಶ್ರೀಮತಿ  ಸುಶೀಲ ಶೆಡ್ತಿರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 61/2013 ಕಲಂ. ಗಂಡಸು ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
ಕಾಣೆಯಾದವರ ಚಹರೆ:- 1) ಸಂದೀಪ್ ಶೆಟ್ಟಿ (29ವರ್ಷ)  ಮೈಬಣ್ಣ, ಎಣ್ಣೆಗಪ್ಪು ಮೈ ಬಣ್ಣ, ಎತ್ತರ: 5 . 4 , ಧರಿಸಿದ ಬಟ್ಟೆ ಹಳದಿ ಬಣ್ಣದ ಟೀ ಶರ್ಟ್‌, ಕಪ್ಪು ಬಣ್ಣದ ಪ್ಯಾಂಟ್, , ಮುಖದಲ್ಲಿ , ಮೂಗಿನ ಮೇಲ್ಬಾಗದಲ್ಲಿ ಹಳೆಯ ಗಾಯದ ಗುರುತು , ಕನ್ನಡ, ತುಳು,  ಬಾಷೆ ಮಾತನಾಡುತ್ತಾನೆ.

ಅಪಘಾತ ಪ್ರಕರಣಗಳು
  • ಉಡುಪಿ: ಪ್ರಭಾಕರ ಎಸ್ ಶೆಟ್ಟಿ ತಂದೆ:ಸುಂದರ ಶೆಟ್ಟಿ ವಾಸ ಸುಂದರ ಶೆಟ್ಟ ಕಾಂಪೌಂಡ್,ಜತ್ತರ್ ಬೆಟ್ಟು ಮನೆ ಅಂಬಲಪಾಡಿ ಉಡುಪಿರವರು ದಿನಾಂಕ 15/05/2013 ರಂದು ಸಮಯ 18:15 ಗಂಟೆಗೆ  ತಮ್ಮ ಮನೆಯಿಂದ ಮಣಿಪಾಲ ಹೊಟೇಲ್ ಗೆ ಹೋಗುವರೇ  ತನ್ನ KA 20 R 3000ನೇ ಬೈಕ್ ನಲ್ಲಿ ತಮ್ಮ ಹೋಟೇಲ್ ಕೆಲಸದವರಾದ ನೀಲಪ್ಪರವರನ್ನು ಹಿಂದೆ ಕುಳ್ಳಿರಿಸಿಕೊಂಡು ಕರಾವಳಿ ಬೈಪಾಸ್ ಕಡೆಯಿಂದ ಮಣಿಪಾಲ ಕಡೆಗೆ ಹೋಗುತ್ತಿರುವಾಗ ಬನ್ನಂಜೆಯ ಪುತ್ರನ್ ಗ್ಯಾಸ್ ಎದುರು ಅವರು ತನ್ನ ಬೈಕನ್ನು ಚಲಾಯಿಸಿಕೊಂಡು ಬರುತ್ತಿರುವಾಗ ಅವರ  ಹಿಂಬದಿಯಿಂದ ಓರ್ವ ಕಾರು ನಂಬ್ರ  KA 20 Z 1804 ನೇದರ ಚಾಲಕನು ಬೈಕ್ ಗೆ  ಡಿಕ್ಕಿ ಹೊಡೆದ ಪರಿಣಾಮ ಪ್ರಭಾಕರ ಎಸ್ ಶೆಟ್ಟಿರವರು ಹಾಗೂ ಹಿಂದೆ ಕುಳಿತ ನೀಲಪ್ಪರವರು ಬೈಕ್ ಸಮೇತ ರಸ್ತೆಯ ಎಡಕ್ಕೆ ಬಿದ್ದ ಪರಿಣಾಮ ಪ್ರಭಾಕರ ಎಸ್ ಶೆಟ್ಟಿರವರ ಬಲಗಾಲಿನ ಮೊಣಗಂಟಿಗೆ ತರಚಿದ ಗಾಯವಾಗಿದ್ದು ಹಿಂದೆ ಕುಳಿತ ನೀಲಪ್ಪನಿಗೆ ಎಡ ಕೆನ್ನೆ ,ಎಡ ಕೈಗೆ ಮತ್ತು ಎಡ ಕಾಲಿನ ಮೊಣಗಂಟಿಗೆ  ತರಚಿದ ರಕ್ತಗಾವಗಿರುತ್ತದೆ,ಚಿಕಿತ್ಸೆಯ ಬಗ್ಗೆ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಹಾಗೂ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಜಖಂಗೊಂಡಿದೆ ಎಂಬುದಾಗಿ ಪ್ರಭಾಕರ ಎಸ್ ಶೆಟ್ಟಿರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 239/13 ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಶಂಕರನಾರಾಯಣ: ದಿನಾಂಕ 14/05/2013 ರಂದು 19:30 ಗಂಟೆಯ ಸಮಯಕ್ಕೆ ಆರೋಪಿ ಚಂದ್ರ ಆಚಾರಿರವರು ತನ್ನ KA 20 U 6062 ನೇ ಹಿರೋ ಹೊಂಡಾ ಸ್ಪ್ಲೆಂಡರ್‌ ಮೋಟಾರ್‌ಸೈಕಲ್‌ನ್ನು ಕುಂದಾಪುರ ತಾಲೂಕು ಶಂಕರನಾರಾಯಣ ಗ್ರಾಮದ ಪಾರೆಸ್ಟ್ ಆಪೀಸ್‌ ಎದುರು ಶಂಕರನಾರಾಯಣ - ಹಾಲಾಡಿ ಮುಖ್ಯರಸ್ತೆಯಲ್ಲಿ ಹಾಲಾಡಿ ಕಡೆಗೆ ತನ್ನ ಮೋಟಾರ್‌ಸೈಕಲ್‌ನಲ್ಲಿ ಸಹಸವಾರನನ್ನಾಗಿ ಮಂಜುನಾಥ ಆಚಾರಿರವರನ್ನು ಕುಳ್ಳಿರಿಸಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಎಡಭಾಗಕ್ಕೆ ಬಂದು ಡಾಂಬಾರು ರಸ್ತೆಯ ಅಂಚಿಗೆ ತಾಗಿ ನಿಯಂತ್ರಣ ತಪ್ಪಿ ಬೈಕ್‌ಸಮೇತ ಸವಾರ ಹಾಗೂ ಸಹಸವಾರರಿಬ್ಬರು ರಸ್ತೆಗೆ ಬಿದ್ದಿದ್ದು ಪರಿಣಾಮ ಸಹಸವಾರ ಮಂಜುನಾಥ ಆಚಾರಿ ಎಂಬವರ ತಲೆಯು ಡಾಂಬಾರು ರಸ್ತೆಗೆ ತಾಗಿ ರಕ್ತಗಾಯವಾಗಿರುತ್ತದೆ ಎಂಬುದಾಗಿ ಶ್ರೀ ಸದಾಶಿವ ಶೆಟ್ಟಿ, ತಂದೆ:ರಘುರಾಮ ಶೆಟ್ಟಿ, ವಾಸ: ಕಲ್ಲನಕೆರೆ, ಶಂಕರನಾರಾಯಣ ಗ್ರಾಮ, ಕುಂದಾಪುರ ತಾಲೂಕುರವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣೆಯಲ್ಲಿ ಅಪರಾಧ ಕ್ರಮಾಂಕ 64/13 ಕಲಂ 279,338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪರಿಚಿತ ಶವ ಪತ್ತೆ
  • ಮಣಿಪಾಲ:  ದಿನಾಂಕ 14/05/2013 ರಂದು 20:00 ಗಂಟೆಗೆ ವಿ ಪ್ರತಾಪ ಶೆಟ್ಟಿ ತಂದೆ: ವಿ ರಾಮಣ್ಣ ಶೆಟ್ಟಿ, ವಾಸ: ಕೊಂಬೆ ಹೌಸ್‌‌, ಪರ್ಕಳ, ಹೆರ್ಗಾ ಗ್ರಾಮ, ಉಡುಪಿ ತಾಲೂಕುರವರು ಎಂದಿನಂತೆ ಮನೆಗೆ ಬರುವಾಗ ಕೆಟ್ಟ ವಾಸನೆ ಬಂದ ಮೇರೆಗೆ ಈ ವಾಸನೆ ಏನು ಅಂತ ಹುಡುಕಾಡಿದಾಗ ಅವರ ತಮ್ಮ ಪ್ರಸಾದ ಶೆಟ್ಟಿಯವರ ಜಾಗದಲ್ಲಿ ಒಂದು ಕೌವಚಿ ಮಲಗಿದ ಅಪರಿಚಿತ ಗಂಡಸಿನ ಕೊಳೆತ ಮೃತ ದೇಹವನ್ನು ಕಂಡು ಬಂದಿರುತ್ತದೆ. ಎಂಬುದಾಗಿ ವಿ ಪ್ರತಾಪ ಶೆಟ್ಟಿರವರು ನೀಡಿದ ದೂರಿನಂತೆ ಮಣಿಪಾಲ ಅಸ್ವಾಭಾವಿಕ ಮರಣ ಸಂಖ್ಯೆ 24/2013 ಕಲಂ 174 ಸಿ.ಆರ್‌.‌ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಳವು ಪ್ರಕರಣ
  • ಮಣಿಪಾಲ:  ದಿನಾಂಕ 08/05/2013 ರಂದು 21:00 ಗಂಟೆಯಿಂದ 09/05/2013 ರಂದು 07:00 ಗಂಟೆಯ ನಡುವಿನ ಸಮಯ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಅನಂತನಗರದಲ್ಲಿರುವ ಅಶೋಕ ಪೈ ಮನೆಯ ಎದುರುಗಡೆ ನಿಲ್ಲಿಸಿದ್ದ ಚಂದ್ರಶೇಖರ ತಂದೆ: ಸುಂದರ ಪೂಜಾರಿ, ವಾಸ: ಅನಂತನಗರ, ನಂಬ್ರ 14, ಅಶೋಕ ಪೈ ಮನೆ, ಶಿವಳ್ಳಿ ಗ್ರಾಮ, ಉಡುಪಿ ತಾಲೂಕುರವರ ಮೋಟಾರು ಸೈಕಲ್ ನಂಬ್ರ ಕೆಎ 02 ಇಇ 8887 ನೇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರು ಸೈಕಲಿನ ಮೌಲ್ಯ ರೂಪಾಯಿ 18,000/- ಆಗಿರುತ್ತದೆ. ಎಂಬುದಾಗಿ ಚಂದ್ರಶೇಖರರವರು ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 101/2013 ಕಲಂ. 379 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಪ್ರಕರಣ
  • ಬೈಂದೂರು: ದಿನಾಂಕ 14/05/2013 ರಂದು ಸುಬ್ರಹ್ಮಣ್ಯ ಶೇರೆಗಾರ ತಂದೆ: ಶೇಷಯ್ಯ ಶೇರಿಗಾರ ವಾಸ ಉಗ್ರಾಣಿಮನೆ, ಬಿಜೂರು ಗ್ರಾಮರವರು ಬೈಂದೂರು ಸೇನೇಶ್ವರ ದೇವಸ್ಥಾನದ ಜಾತ್ರೆ ಮುಗಿಸಿ ತನ್ನ ಕೆಬಿ100 ನೇ  ನಂಬ್ರದ ಬೈಕ್ ನಲ್ಲಿ ತನ್ನ ಮನೆಯಾದ ಬಿಜೂರು ಕಡೆಗೆ ಹೋಗುತ್ತಿದ್ದು, ರಾತ್ರಿ ಸಮಯ 22:45 ಗಂಟೆಗೆ ಅವರ ಬೈಕಿನ ಹಿಂದಿನಿಂದ ಕೆ.ಎ 05 ಎಮ್ ಎಫ್ 3535 ನೇ ನಂಬ್ರದ ಐಕಾನ್ ಕಾರನ್ನು ಅದರ ಚಾಲಕ,  ಬೈಕಿನಿಂದ ಮುಂದಕ್ಕೆ ಚಲಾಯಿಸಿಕೊಂಡು ಹೋಗಿ ಬಿಜೂರು ಆನಂದ ಶೇರಿಗಾರರ ಮನೆ/ಅಂಗಡಿಯ ಸಮೀಪ ಬೈಕಿಗೆ ಅಡ್ಡಗಟ್ಟಿ ನಿಲ್ಲಿಸಿದ್ದು,  ಅವರ ಪರಿಚಯದ ಶ್ರೀನಿವಾಸ ದೇವಾಡಿಗ ಬಿಜೂರು ಗ್ರಾಮರವರು ಕಾರಿನಿಂದ ಕೆಳಗಿಳಿದು ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಜೀವಸಹಿತ ಬಿಡುವುದಿಲ್ಲ  ಕೊಂದು ಹಾಕುತ್ತೇನೆ ಎಂಬುದಾಗಿ ಎಡಕೈಯಿಂದ ಕುತ್ತಿಗೆಯನ್ನು ಬಲವಾಗಿ ಒತ್ತಿ ಹಿಡಿದು, ಬಲಕೈಯಲ್ಲಿದ್ದ ಬಿಯರ್ ಬಾಟ್ಲಿಯನ್ನು ಅಲ್ಲಿಯೇ ಇದ್ದ ಕಲ್ಲಿಗೆ ಹೊಡೆದು ಒಡೆದ ಬಾಟ್ಲಿಯಿಂದ ಅವರನ್ನು ಕೊಲ್ಲುವ ಉದ್ದೇಶದಿಂದ ಸುಬ್ರಹ್ಮಣ್ಯ ಶೇರೆಗಾರರವರ ಹೊಟ್ಟೆಗೆ ಇರಿಯಲು ಪ್ರಯತ್ನಿಸಿದ್ದು, ಅದನ್ನು ತಪ್ಪಿಸಿಕೊಳ್ಳುವ ಭರದಲ್ಲಿ ಒಡೆದ ಬಾಟ್ಲಿ ಸುಬ್ರಹ್ಮಣ್ಯ ಶೇರೆಗಾರರವರ ಎಡ ಕಿವಿಗೆ ತಾಗಿ ರಕ್ತಗಾಯವಾಗಿದ್ದು, ಅವರು ಜೋರಾಗಿ ಬೊಬ್ಬೆ ಹಾಕಿದಾಗ,  ಆರೋಪಿ ಶ್ರೀನಿವಾಸ ದೇವಾಡಿಗರವರು ತನ್ನ ಕಾಲಿನಿಂದ ಸುಬ್ರಹ್ಮಣ್ಯ ಶೇರೆಗಾರ ರವರ ಎದೆ ಹಾಗೂ ಹೊಟ್ಟೆಗೆ ಬಲವಾಗಿ ತುಳಿದು ಬಂದ ಕಾರಿನಲ್ಲಿ ವಾಪಾಸು ಹೋಗಿರುವುದಾಗಿದೆ. ಕಾರಿನಲ್ಲಿದ್ದ  ಇತರ ಮೂವರು ಹಲ್ಲೆ ನಡೆಸಿರುವುದಿಲ್ಲ ಎಂಬುದಾಗಿ ಶ್ರೀಮತಿ ಸುಬ್ರಹ್ಮಣ್ಯ ಶೇರೆಗಾರ ರವರು ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 149/2013 ಕಲಂ:341,504,506,323,324,307 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ

No comments: