Wednesday, May 15, 2013

Daily Crime Reported As On 15/05/2013 At 19:30 Hrs


ಅಪಘಾತ ಪ್ರಕರಣ
  • ಕೋಟಾ: ದಿನಾಂಕ 14/05/2013 ರಂದು ಐರೊಡಿ ರಾಜಶೇಖರ ಹೆಬ್ಬಾರ್ ತಂದೆ ದಿವಂಗತ ಸದಾನಂದ ಹೆಬ್ಬಾರ್ ವಾಸ ದಂಡೇಬೆಟ್ಟು ಐರೋಡಿ ಗ್ರಾಮ ಉಡುಪಿ ತಾಲೂಕುರವರು ತನ್ನ ಕೆ.ಎ.20 ಪಿ-5980 ನೇ ಸ್ಯಾಂಟ್ರೋ ಕಾರಿನಲ್ಲಿ ಸಾಲಿಗ್ರಾಮದಿಂದ ಐರೋಡಿ ಗ್ರಾಮದ ತನ್ನ ಮನೆ ಕಡೆಗೆ ಹೋಗುವರೇ ರಾಷ್ರೀಯ ಹೆದ್ದಾರಿ 66 ರಲ್ಲಿ ಬರುತ್ತಾ ರಾತ್ರಿ 10:15 ಗಂಟೆಗೆ ಐರೋಡಿ ಗ್ರಾಮದ ಮಾಬುಕಳ ಚೇತನ ಪ್ರೌಡ ಶಾಲೆ ಎದುರು ಐರೋಡಿ ಕಡೆ ತಿರುಗುವರೇ ಕಾರಿನ ಬಲ ಬದಿಯ ಇಂಡಿಕೇಟರ್ ಹಾಕಿ ಕಾರನ್ನು ರಾಷ್ರೀಯ ಹೆದ್ದಾರಿ 66 ರ ರಸ್ತೆಯಿಂದ ಬಲಕ್ಕೆ ತಿರುಗಿಸುವಾಗ ಆರೋಪಿ ಕೆ.ಎ.20ಸಿ-5319ನೇ ಬಸ್ಸನ್ನು ಕುಂದಾಪುರ ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅವರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡಿದ್ದು, ಯಾರಿಗೂ ಪೆಟ್ಟಾಗಿರುವುದಿಲ್ಲವಾಗಿದೆ ಎಂಬುದಾಗಿ ಐರೊಡಿ ರಾಜಶೇಖರ ಹೆಬ್ಬಾರ್ ರವರು ನೀಡಿದ ದೂರಿನಂತೆ ಕೋಟಾ ಠಾಣೆಯಲ್ಲಿ ಅಪರಾಧ ಕ್ರಮಾಂಕ 134/2013 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹುಡುಗಿ ಕಾಣೆ ಪ್ರಕರಣ
  • ಗಂಗೊಳ್ಳಿ: ಶ್ರೀಮತಿ ರಮೀಜ್‌ ಗಂಡ ಅಬ್ದುಲ್‌ ರೆಹಮಾನ್‌ ವಾಸ: ಬಡಾಕೆರೆ ಕ್ರಾಸ್‌, ರಿಯಾನ್‌ ಮಂಜಿಲ್‌ ನಾವುಂದ  ಹಾಲಿ ಅನಿಷ ಮಂಜಿಲ್‌ ನಿರೋಣಿ ಮರವಂತೆ ಕುಂದಬಾರಂದಾಡಿ ಗ್ರಾಮ ಕುಂದಾಪುರ ತಾಲೂಕುರವರ ಮಗಳು ದಿನಾಂಕ 12/05/2013 ರಂದು ಮಧ್ಯಾಹ್ನ 01:15 ಗಂಟೆಗೆ ಟೈಲರಿಂಗ್‌ ಕ್ಲಾಸಿಗೆ ನಾವುಂದಕ್ಕೆ ಹೋಗಿದ್ದು ಸಂಜೆಯಾದರೂ ವಾಪಸು ಬಾರದೇ ಇರುವುದರಿಂದ ಶ್ರೀಮತಿ ರಮೀಜ್‌ ರವರು ಎಲ್ಲಾ ಕಡೆ ವಿಚಾರಿಸಿದಾಗ ಅವಳು ಪತ್ತೆಯಾಗಿರುವುದಿಲ್ಲ  ಎಂಬುದಾಗಿ ಶ್ರೀಮತಿ ರಮೀಜ್‌ ರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 69/2013 ಕಲಂ  ಹುಡುಗಿ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: