Tuesday, May 14, 2013

Daily Crimes Reported as On 14/05/2013 at 07:00 Hrs

ಅಪಘಾತ ಪ್ರಕರಣ
  • ಕಾಪು: ದಿನಾಂಕ 13-05-2013 ರಂದು ಮದ್ಯಾಹ್ನ  3-30 ಗಂಟೆಗೆ  ಕಲಿಮುಲ್ಲಾ (55) ತಂದೆ: ಮೊಹಮ್ಮದ್ ದಸ್ತಗಿರಿ ವಾಸ: ಹರಿಹರ ತಾಲೂಕು ಎಂಬವರು ತನ್ನ ಲಾರಿ ನಂಬ್ರ ಕೆಎ-55-1790 ನ್ನು ಮಂಗಳೂರು  ಕಡೆಯಿಂದ  ಹರಿಹರ  ಕಡೆಗೆ  ಚಲಾಯಿಸಿಕೊಂಡು ಹೋಗುತ್ತ  ಕಾಪು ಪೆಟ್ರೋಲ್  ಬಂಕ್  ಬಳಿ  ತಲುಪಿದಾಗ  ಉಡುಪಿ ಕಡೆಯಿಂದ ಮಂಗಳೂರು  ಕಡೆಗೆ ಒಂದು  ಕಾರು ಚಾಲಕನ್ನು  ತನ್ನ ಕಾರು ನಂಬ್ರ  ಎಮ್ .ಹೆಚ್ 04-ಎಪ್ ಎಪ್ -8466 ನೇ ಟೋಯಟೋ  ಕಾರನ್ನು ಆತೀ ವೇಗ ಹಾಗೂ  ಅಜಾಗರೂಕತೆಯಿಂದ ರಸ್ತೆಯ  ತೀರ  ಪಶ್ಚಿಮ ಬದಿಗೆ  ಚಲಾಯಿಸಿಕೊಂಡು  ಬರುತ್ತಿದ್ದನ್ನು ಕಂಡು  ತಮ್ಮ  ಲಾರಿಯನ್ನು ಪಶ್ಚಿಮ ಬದಿಗೆ ಚಲಾಯಿಸಿದಾಗ ಕಾರು ಚಾಲಕನು  ಕಾರನ್ನು  ಲಾರಿಯ  ಹಿಂಭಾಗದ  ಬಲ ಬದಿಯ ಟಯರ್ ಗೆ  ಡಿಕ್ಕಿ ಹೊಡೆದ ಪರಿಣಾಮ  ಲಾರಿ ಯು ರಸ್ತೆಯ ಪಶ್ಚಮ  ಅಡ್ಡ ಬಿದ್ದು ಪರಿಣಾಮ  ಲಾರಿಯ ಕ್ಯಾಬಿನಲ್ಲಿದ್ದ  ನಿರ್ವಾಹಕ  ವಾಮಣ್ಣ  ರವರ ತಲೆಯ  ಬಲ ಬದಿಗೆ   ರಕ್ತ ಗಾಯವಾಗಿದ್ದು ಕಾರಿನಲ್ಲಿದ್ದ  ಪ್ರಯಾಣಿಕರಿಗೆ  ಸಣ್ಣ ಪುಟ್ಟ  ಪೆಟ್ಟಾಗಿರುವುದಾಗಿದೆ. ಈ ಬಗ್ಗೆ ಕಲಿಮುಲ್ಲಾರವರು ಠಾಣೆಯಲ್ಲಿ ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 143/13 ಕಲಂ: 279,338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣಗಳು 
  • ಕುಂದಾಪುರ: ಮೃತ ಸುರೇಶ್ ಪೂಜಾರಿ ಆತನ ಹೆಂಡತಿ ಮನೆಗೆ ದಿನಾಂಕ:12/05/2013 ರಂದು ದೇವತಾ ಕಾರ್ಯಕ್ರಮಕ್ಕೆ ಬಂದಿದ್ದು ಮದ್ಯಾಹ್ನ 2:00 ಗಂಟೆಗೆ ಅಲ್ಲಿ ಊಟ ಮುಗಿಸಿ ತನ್ನ ಮನೆಯಾದ ಹೆಮ್ಮಾಡಿಗೆ ಬಂದಿರುತ್ತಾರೆ. ಈ ದಿನ ದಿನಾಂಕ:13/05/2013 ರಂದು ಆತನ ಹೆಂಡತಿ ಜ್ಯೋತಿಯು ಗಂಡನ ಮನೆ ಹೆಮ್ಮಾಡಿಗೆ ಬಂದಾಗ ಸುರೇಶ್ ಪೂಜಾರಿಯು ಮನೆಯ ಮಾಡಿಗೆ ಲುಂಗಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ನಂದಿ ಪೂಜಾರಿ (56)ತಂದೆ: ಪುಟ್ಟ ಪೂಜಾರಿ, ವಾಸ: ಬಡ್ಕಿ ಮನೆ, ಕೆಳಕೇರಿ, ಕೋಣಿ ಕುಂದಾಫುರ ರವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಕ್ರಮಾಂಕ 27/13 ಕಲಂ 174  ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಬ್ರಹ್ಮಾವರ: ಮೃತ ಪ್ರಭಾಕರ ಆಚಾರಿ (47)ರವರು ಚಿನ್ನದ ವ್ಯಾಪಾರ ಮಾಡಿಕೊಂಡಿದ್ದು ವ್ಯವಹಾರದಲ್ಲಿ ನಷ್ಟವಾಗಿ ಹಣದ ಅಡಚಣೆಯಿಂದ ಜೀವನದಲ್ಲಿ ಜಿಗುಪ್ಸೆ ಗೊಂಡು52 ನೇ ಹೇರೂರು ಗ್ರಾಮದ ಕುಕ್ಕೆಹಳ್ಲಿ ದೇವರಕಟ್ಟೆ, ಸರ್ಕಾರಿ ಹಾಡಿಯಲ್ಲಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕೃಷ್ಣ ಆಚಾರಿ (18) ತಂಧೆ: ಪ್ರಭಾಕರ ಆಚಾರಿ , ಬ್ರಿಡ್ಜ್ ಬಳಿ ಹೇರೂರುರವರು  ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಕ್ರಮಾಂಕ 29/13 ಕಲಂ 174  ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: