Monday, May 13, 2013

Daily Crimes Reported as On 13/05/2013 at 19:30 Hrsಅಪಘಾತ ಪ್ರಕರಣ 
  • ಹೆಬ್ರಿ: ಸಂತೋಷ್‌. ಎನ್‌ (24), ತಂದೆ: ನಾಗರಾಜ ಪೂಜಾರಿ, ವಾಸ: ನಿಡ್ಡೇರಿ, ವಾಂಟ್ಯಾಳ, ಪೆರ್ಡೂರು ಗ್ರಾಮ, ಉಡುಪಿ ತಾಲೂಕು ಎಂಬವರ ಸಂಬಂಧಿಕರಾದ ಶೇಖರ್‌ ಪೂಜಾರಿಯವರು ದಿನಾಂಕ: 12.05.13 ರಂದು ಸಂಜೆ 6.30 ಗಂಟೆಗೆ  ಉಡುಪಿ ತಾಲೂಕು ಕಳ್ತೂರು ಗ್ರಾಮದ ಸಂತೆಕಟ್ಟೆಯ ರಾಮಮಂದಿರದ ಬಳಿ ತನ್ನ ಸೈಕಲ್‌ನಲ್ಲಿ ತನ್ನ ಮನೆಯಾದ ಪಡುಬೆಟ್ಟು ಕಡೆಗೆ  ಹೋಗುತ್ತಿರುವಾಗ ಹಿಂದಿನಿಂದ ಅಂದರೆ ಸಂತೆಕಟ್ಟೆ ಕಡೆಯಿಂದ ಹೆಬ್ರಿ ಕಡೆಗೆ ಕೆಎ.20.ಎನ್‌.7187 ನೇ ಮಾರುತಿ ಓಮಿನಿ ಕಾರಿನ ಚಾಲಕ ಗುಣಕರ ಶೆಟ್ಟಿ ಎಂಬವರು ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಬದಿಗೆ ಬಂದು ಶೇಖರ್ ಪೂಜಾರಿಯವರ ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಶೇಖರ್‌ ಪೂಜಾರಿಯವರು ಸೈಕಲ್‌ ಸಮೇತ ರಸ್ತೆಗೆ ಬಿದ್ದಿದ್ದು ತಲೆಗೆ ತೀವ್ರ ಸ್ವರೂಪದ ಗಾಯವಾಗಿರುತ್ತದೆ.ಈ ಸಂತೋಷ್‌. ಎನ್‌ರವರು ಹೆಬ್ರಿ ಠಾಣೆಯಲ್ಲಿ ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 35/13 ಕಲಂ: 279,338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಗಂಡಸು ಕಾಣೆ ಪ್ರಕರಣ 
  • ಬೈಂದೂರು: ಶ್ರೀಮತಿ ಸುಕ್ರು ದೇವಾಡಿಗ (65) ಗಂಡ: ದಿ.ಮಹದೇವ ವಾಸ:ಗುರುಕೃಪಾ ನಿಲಯ ತಿಲಕ್ ರೋಡ್, ಕೆರ್ಗಾಲ್ ಗ್ರಾಮ ಎಂಬವರ ಮಗ ಸಂತೋಷ್ ದೇವಾಡಿಗ(20ವರ್ಷ) ಎಂಬವನು ಕಂಬದಕೋಣೆಯ ಶಶಿ ಸೌಂಡ್ಸ್ ಎಂಬಲ್ಲಿ ಕೆಲಸ ಮಾಡುತ್ತಿದ್ದು, ಕೆಲಸ ಬಿಡುವುದಾಗಿಯೂ ಬೇರೆ ಎಲ್ಲಿಯಾದರೂ ಕೆಲಸ ಹುಡುಕಬೇಕು ಎಂಬುದಾಗಿ ಹೇಳುತ್ತಿದ್ದು, ದಿನಾಂಕ: 20/01/2013 ರಂದು ಬೆಳಿಗ್ಗೆ 09:00 ಗಂಟೆಗೆ ತಾಯಿಮನೆಯಾದ ಅಂದರೆ ತನ್ನ ಅಜ್ಜಿಮನೆಯಾದ ಬಿಜೂರು ಗ್ರಾಮದ ಸಾಲಿಮಕ್ಕಿ ಎಂಬಲ್ಲಿಗೆ ಬಂದಿದ್ದು, ಅಲ್ಲಿಯೇ ಉಳಕೊಂಡಿದ್ದು, ನಂತರ ದಿನಾಂಕ:21/01/2013 ರಂದು ಸಂಜೆ ಸಮಯ ಸುಮಾರು 5:00 ಗಂಟೆಗೆ ಮನೆಗೆ ಬಂದಾಗ ಸಂತೋಷನು ಕಾಣೆಯಾಗಿರುತ್ತಾನೆ. ಈ ಬಗ್ಗೆ ಶ್ರೀಮತಿ ಸುಕ್ರು ದೇವಾಡಿಗರವರು ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 148/13 ಕಲಂ: ಹುಡುಗ ಕಾಣೆ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಆತ್ಮಹತ್ಯೆ ಪ್ರಕರಣ 
  • ಉಡುಪಿ: ದಿನಾಂಕ 13-05-13ರಂದು ಮಧ್ಯಾಹ್ನ 12:30ಗಂಟೆಯಿಂದ 12:45ಗಂಟೆಯ ಮಧ್ಯಾವಧಿಯಲ್ಲಿ ಶ್ರೀನಿವಾಸ ಆಚಾರ್ಯ, ತಂದೆ: ಮುಖ್ಯಪ್ರಾಣ ಆಚಾರ್ಯ, ವಾಸ: ತಾರಾ ಬಾಯಿ ಕಂಪೌಂಡ್‌, ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಬಳಿ, ಉಡುಪಿ ಎಂಬವರ ಮಗ ಅಕ್ಷಯ(18)ಮನೆಯಲ್ಲಿ ಯಾರೂ ಇಲ್ಲದ ಸಮಯ ಮನೆಯ ಹಾಲ್‌‌ನ ಪಕ್ಕಾಸಿಗೆ ಬೈರಾಸ್‌ನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುತ್ತಿದ್ದುದನ್ನು ಮನೆಗೆ ಬಂದ ಶ್ರೀನಿವಾಸ ಆಚಾರ್ಯರು ಕಂಡು ಕೂಡಲೇ ನೇಣಿನ ಗಂಟನ್ನು ಬಿಡಿಸಿ ಕೆಳಗೆ ಇಳಿಸಿ ಚಿಕಿತ್ಸೆಯ ಬಗ್ಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಪರಿಕ್ಷೀಸಿದ ವೈದ್ಯರು ಅಕ್ಷಯನು ಮೃತಪಟ್ಟಿರುವುದಾಗಿ ಧೃಡಪಡಿಸಿರುತ್ತಾರೆ. ಮೃತ ಅಕ್ಷಯನ ಎದೆ ಮತ್ತು ಕುತ್ತಿಗೆಯಲ್ಲಿ ಯಾವುದೋ ಬಿಳಿ ಬಣ್ಣದ ಕಲೆಗಳು ಉಂಟಾಗಿದ್ದು, ಈ ಬಗ್ಗೆ ವೈದ್ಯರಿಂದ ಚಿಕಿತ್ಸೆ ಮಾಡಿಸಿದರೂ ಗುಣ ಆಗದೇ ಇದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿರುತ್ತದೆ. ಈ ಬಗ್ಗೆ ಶ್ರೀನಿವಾಸ ಆಚಾರ್ಯರವರು ನೀಡಿದ ದೂರಿನಂತೆ ನಗರ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಕ್ರಮಾಂಕ 19/13 ಕಲಂ 174  ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಪಾದರಕ್ಷೆ ಅಂಗಡಿಗೆ ಬೆಂಕಿ ಪ್ರಕರಣ 
  • ಕುಂದಾಪುರ: ದಿನಾಂಕ 13/05/2013 ರಂದು ಬೆಳಿಗ್ಗೆ 08:30 ಗಂಟೆಗೆ ಕುಂದಾಪುರ ವೈಶಾಲಿ ಕಾಂಪ್ಲೆಕ್ಸ್ ನಲ್ಲಿರುವ ಮಹಮ್ಮದ ಗೌಸ್ ತಂದೆ ದೀ ಆಲಿ ಸಾಹೇಬ್ ವಾಸ; ಅಮ್ಮಾ ಬೀ ಹೌಸ್ ನಾನಾ ಸಾಹೇಬ ರಸ್ತೆ,ವಡೇರಹೋಬಳಿ ಗ್ರಾಮ,ಕುಂದಾಪುರ ರವರ ಪಾದುಕಾಲಯ ಎಂಬ ಪಾದರಕ್ಷೆ  ಅಂಗಡಿಗೆ ಬಂದಾಗ ಅದೇ ಕಟ್ಟಡದ ಎರಡನೇ ಮಹಡಿಯಲ್ಲಿರುವ ಸೇರಿದ ಪಾದರಕ್ಷೆಗಳನ್ನು ಇಡುವ  ಗೋದಾಮಿನಲ್ಲಿ  ಹೊಗೆ ಬರುತ್ತಿರುವುದನ್ನು ಕಂಡುಅಗ್ನಿ ಶಾಮಕ ದಳದವರಿಗೆ ತಿಳಿಸಿದ್ದು, ಅಗ್ನಿ ಶಾಮಕ ದಳದವರು ಬಂದು ಬೆಂಕಿ ನಂದಿಸಿರುತ್ತಾರೆ ಗೋದಾಮಿಗೆ ಬೆಂಕಿ ತಗುಲಿದ ಪರಿಣಾಮ  ಸುಮಾರು 15,00,000 ಮೌಲ್ಯದ ಪಾದರಕ್ಷೆಗಳು ಮತ್ತು ಅದನ್ನು ಇಡಲು ಉಪಯೋಗಿಸುತ್ತಿದ್ದ ಫರ್ನಿಚರಗಳು ನಾಶವಾಗಿದ್ದು  ಒಟ್ಟು  ಸುಮಾರು 25,00,000  ನಷ್ಟವಾಗಿರುತ್ತದೆ. ಈ ಬಗ್ಗೆ  ಮಹಮ್ಮದ ಗೌಸ್ ರವರು ನೀಡಿದ ದೂರಿನಂತೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 208/13 ಕಲಂ:436 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಕೋಳಿ ಅಂಕಕ್ಕೆ ಧಾಳಿ ಪ್ರಕರಣ 
  • ಅಮಾಸೆಬೈಲು: ನಾಸೀರ್ ಹುಸೇನ್ ಪಿ. ಪಿ.ಎಸ್.ಐ ಅಮಾಸೆಬೈಲು ಠಾಣೆ ರವರಿಗೆ ದೊರೆತ ಮಾಹಿತಿಯಂತೆ ಕುಂದಾಪುರ ತಾಲೂಕಿನ ಮಡಾಮಕ್ಕಿ ಗ್ರಾಮದ ಕೊಡಸನಬೈಲು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕವನ್ನು ನಡೆಸುತ್ತಿದ್ದ ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿಗಳು ಜೂಜಾಟಕ್ಕೆ ಬಳಸಿದ ಕೋಳಿಗಳನ್ನು ಹಾಗೂ ನಗದು 860/, ನ್ನು ಸ್ವಾಧಿನಪಡಿಸಿಕೊಂಡು ಠಾಣಾ ಅಪರಾಧ ಕ್ರಮಾಂಕ 18/13 ಕಲಂ 93, 87 ಕರ್ನಾಟಕ ಪೊಲೀಸ್ ಕಾಯಿದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಂದಿತರನ್ನು  1)ಬಾಬಣ್ಣ ಪೂಜಾರಿ (38) ತಂದೆ: ಆನಂತ ಪೂಜಾರಿ ವಾಸ: ಕೊಡಸನಬೈಲು ಮಡಾಮಕ್ಕಿ ಗ್ರಾಮ  2) ಸುರೇಶ್ (29) ತಂದೆ: ಆನಂತ ಪೂಜಾರಿ ವಾಸ: ಕೊಡಸನಬೈಲು ಮಡಾಮಕ್ಕಿ 3) ಶಿವರಾಮ ಶೆಟ್ಟಿ (67) ತಂದೆ: ದಿ ನಾರಾಯಣ ಶೆಟ್ಟಿ ವಾಸ: ನಡುಬೆಟ್ಟು ಮಡಾಮಕ್ಕಿ ಗ್ರಾಮ 4) ಪ್ರಕಾಶ್ (28) ತಂದೆ: ಮುದ್ದು ನಾಯ್ಕ ವಾಸ: ಕಾಸನಮಕ್ಕಿ ಮಡಾಮಕ್ಕಿ ಗ್ರಾಮ ಕುಂದಾಫುರ ತಾಲೂಕು 5) ರತ್ನಾಕರ ಹೆಗ್ಡೆ (38) ತಂದೆ: ಗುಂಡು ಹೆಗ್ಡೆ ವಾಸ: ಕಾಸನಮಕ್ಕಿ ಮಡಾಮಕ್ಕಿ ಗ್ರಾಮ ಕುಂದಾಫುರ ತಾಲೂಕು ಎಂದು ಗುರುತಿಸಲಾಗಿದೆ.

No comments: