Friday, May 10, 2013

Daily Crimes Reported as On 10/05/2013 At 17:00 Hrs

ಕಳವು ಪ್ರಕರಣ
  • ಮಲ್ಪೆ: ದಿನಾಂಕ 09/05/2013ರಂದು ಪಿರ್ಯಾದಿದಾರರಾದ ಸುರೇಶ್ ನಾಯಕ್ (42), ತಂದೆ ದೇವೇಂದ್ರ ನಾಯಕ್, ವಾಸ ಮಟ್ಟಾರು-ನೇಜಾರು, ಶಿರ್ವ ಗ್ರಾಮ ಉಡುಪಿ ಇವರು ತನ್ನ ಬಾಬ್ತು ಕೆಎ 20 5649ನೇ ಮಾರುತಿ ಕಾರಿನಲ್ಲಿ ಮನೆಯವರೊಂದಿಗೆ ಮಲ್ಪೆ ಬೀಚ್‌ಗೆ  ಸಂಜೆ 5:00 ಗಂಟೆ ಸಮಯಕ್ಕೆ ಬಂದು ಬೀಚ್‌ನ ವಾಹನ ನಿಲುಗಡೆ ಸ್ಥಳದಲ್ಲಿ ಅಂದರೆ ಸಮುದ್ರ ಬಾರ್‌ನ ಎದರುಗಡೆ ಕಾರನ್ನು ನಿಲ್ಲಿಸಿ ಕಾರಿನ ಮಧ್ಯ ಕಾಲೇಜು ಬ್ಯಾಗ್‌ ನಲ್ಲಿ ಇಟ್ಟಿದ್ದ ಮೊಬೈಲ್‌ - 4 ಅಂದಾಜು 8,700 ರೂಪಾಯಿ ಕನ್ನಡಕ-2 ಅಂದಾಜು 2,000 ರೂಪಾಯಿ, ಮಗುವಿನ ಕಾಲು ಚೈನ್ ಅಂದಾಜು 800 ಮತ್ತು ನಗದು 13,500 ರೂಪಾಯಿ, ಎ.ಟಿ.ಎಂ ಕಾರ್ಡ್‌ ಮತ್ತು ಡಿ.ಎಲ್‌ನ್ನು ಇಟ್ಟು  ಬೀಚ್‌ಗೆ ಹೋಗಿದ್ದು ಸಂಜೆ 6:00 ಗಂಟೆ ಸಮಯಕ್ಕೆ ಬಂದು ನೋಡಿದಾಗ ಸುರೇಶ್ ನಾಯಕ್ ರವರ  ಕಾರಿನಲ್ಲಿ ಇಟ್ಟಿದ್ದ ಬ್ಯಾಗ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಾರಿನ ಮಧ್ಯಬ್ಯಾಗಿನಲ್ಲಿ ಇಟ್ಟಿರುವ ಸೊತ್ತಿನ ಅಂದಾಜು ಮೌಲ್ಯ ರೂಪಾಯಿ 25,000 ಆಗಬಹುದು ಎಂಬುದಾಗಿ ಸುರೇಶ್ ನಾಯಕ್ ಇವರು ನೀಡಿದ ದೂರಿನಂತೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 79/2013 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಅಪಘಾತ ಪ್ರಕರಣ
  • ಕುಂದಾಪುರ: ದಿನಾಂಕ 10/05/2013ರಂದು ರಾತ್ರಿ 1:30  ಗಂಟೆಗೆ ಕುಂದಾಪುರ ತಾಲೂಕಿನ  ತಲ್ಲೂರು ಗ್ರಾಮದ ವೈಭವ ಬಾರ್ ಹತ್ತಿರ ರಾ.ಹೆ ರಲ್ಲಿ ಆಪಾದಿತ ವಿ.ಎಮ್ ಓಂಕಾರಯ್ಯ ಎಂಬವರು ಕೆಎ 193752ನೇ  ಲಾರಿಯನ್ನು ಬೈಂದೂರು  ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗದಿಂದ ಚಲಾಯಿಸಿಕೊಂಡು ಬಂದು ಮಂಗಳೂರು ಕಡೆಯಿಂದ ಮುಂಡರಗಿ ಕಡೆಗೆ ಹೋಗುತ್ತಿದ್ದ  ಪಿರ್ಯಾದಿದಾರರಾದ ರಿಯಾಜ್ ವಾಲೇಕರ್ (27) ತಂದೆ ಅಬ್ದುಲ್ ಸಾಬ್,  ಕಾಮದೇನು, ವಾಸ ಕಲಘಟಕಿ, ಧಾರವಾಡ ಜಿಲ್ಲೆ ಇವರು ಚಲಾಯಿಸಿಕೊಂಡು ಹೋಗುತ್ತಿದ್ದ ಕೆಎ 25ಬಿ 9615ನೇ ಲಾರಿಗೆ ಎದುರುಗಡೆಯಿಂದ ನಿರ್ಲಕ್ಷತನದಿಂದ ಡಿಕ್ಕಿ ಹೊಡೆದ ಪರಿಣಾಮ ಕೆಎ 193752ನೇ ಲಾರಿಯ ಚಾಲಕ ವಿ.ಎಮ್ ಓಂಕಾರಯ್ಯ  ಗಾಯಗೊಂಡಿರುವುದಾಗಿದೆ ಎಂಬುದಾಗಿ ರಿಯಾಜ್ ವಾಲೇಕರ್ ಇವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 35/2013  ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಹಲ್ಲೆ ಪ್ರಕರಣ
  • ಕಾರ್ಕಳ: ದಿನಾಂಕ 10/05/2013 ರಂದು ಬೆಳಿಗ್ಗೆ 6:15 ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಕಲ್ಲಂಬಾಡಿ ಪದವು  ಎಂಬಲ್ಲಿ ಪಿರ್ಯಾದಿದಾರರಾದ ಸದಾಶಿವ ಹೆಗ್ದೆ  (70) ತಂದೆ ದಿ. ಚಂದಯ್ಯ ಹೆಗ್ದೆ,  ವಾಸ ಕಲಂಬಾಡಿ ಪದವು ಶಾಲೆಯ ಬಳಿ  ನಿಟ್ಟೆ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಇವರ ನೆರೆ ಮನೆಯ ಕೊರಗಪ್ಪ ಎಂಬುವವರಲ್ಲಿ ಮನೆಯ ಎದುರಿನ ದಾರಿ ದೀಪ ಯಾರೋ ತೆಗೆಯುತ್ತಾರೆ. ದಾರಿ ದೀಪ ಇದ್ದರೆ ವಠಾರದಲ್ಲಿ ಎನ್ನಾದರೂ ನಡೆದರೆ ತಿಳಿಯುತ್ತದೆ ಎಂದು ಮಾತನಾಡುತಿದ್ದಾಗ ಮನೆಯ ಬದಿಯ ವಾಸಿ ಆರೊಪಿ ಭೋಜ ಹೆಗ್ದೆ ಎಂಬುವವರು ಮರದಗೆಲ್ಲನ್ನು ಹಿಡಿದುಕೊಂಡು ಪಿರ್ಯಾದಿ ಸದಾಶಿವ ಹೆಗ್ದೆ  ಇವರ ಬಳಿ ಬಂದು ದಾರಿ ದೀಪದ ವಿಚಾರ ಊರಿನವರಲ್ಲಿ ಯಾಕೆ ಹೇಳುತ್ತಿ ಎಂದು ಮರದ  ಗೆಲ್ಲಿನಿಂದ ಬೆನ್ನಿಗೆ ಬಲವಾಗಿ ಹೊಡೆದು  ಕೈಯಿಂದ ದೂಡಿದ ಪರಿಣಾಮ  ಪಿರ್ಯಾದಿ ಸದಾಶಿವ ಹೆಗ್ದೆ  ಅಲ್ಲೇ ಇದ್ದ ಕಲ್ಲಿನ ಮೇಲೆ ಬಿದ್ದು  ಬೆನ್ನಿಗೆ ಗುದ್ದಿದ ಗಾಯ ಹಾಗೂ ಬಲ ಕಾಲಿನ ತೊಡೆಗೆ ತೀವ್ರ ತರಹದ ಮೂಳೆ ಮುರಿತದ ಗಾಯವಾಗಿ  ಚಿಕಿತ್ಸೆಯ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬುದಾಗಿ ಸದಾಶಿವ ಹೆಗ್ದೆ  ಇವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 55/2013 ಕಲಂ 326 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಹಲ್ಲೆ ನಡೆಸಿ ಜೀವ ಬೆದರಿಕೆ ಪ್ರಕರಣ
  • ಮಣಿಪಾಲ: ದಿನಾಂಕ 10/05/2013 ರಂದು ಬೆಳಿಗ್ಗೆ 05:30 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲ ಎಂಡ್‌ ಪಾಯಿಂಟ್‌ ರಸ್ತೆಯಲ್ಲಿರುವ ಮಾಂಡವಿ ಪರ್ಲ್‌ ಸಿಟಿ ಅಪಾರ್ಟ್‌ಮೆಂಟ್‌ನ ಪಿರ್ಯಾದಿದಾರರಾದ ಸಾಮ್ರ ಖಾಲಿದ್‌ (26) ತಂದೆ ಮೊಹಮ್ಮದ್‌ ಇದ್ರಿಸ್‌ ಖಾಲಿದ್‌, ವಾಸ PO Box-30626, Nairobi-00100, Kenya. ಪ್ರಸ್ತುತ: ರೂಂ ನಂ. ಸಿ-201, ಮಾಂಡವಿ ಪರ್ಲ್‌ ಸಿಟಿ ಅಪಾರ್ಟ್‌ಮೆಂಟ್‌, ಎಂಡ್‌ ಪಾಯಿಂಟ್‌ ರಸ್ತೆ, ಮಣಿಪಾಲ, ಉಡುಪಿ ತಾಲೂಕು ಇವರು ಬಾಬ್ತು ಮನೆ ಸಿ-201 ರ ಒಳಗೆ ಆಪಾದಿತ ರಾಹುಲ್‌ ಕಪಿಲ್‌ ಇವರು ಮನೆಯ ಬಾಗಿಲನ್ನು ಮುರಿದು ನಷ್ಟಗೊಳಿಸಿ, ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ, ಸಾಮ್ರ ಖಾಲಿದ್‌ ಇವರಿಗೆ ಕೈಯಿಂದ ಹಲ್ಲೆ ಮಾಡಿ, ಸಾಮ್ರ ಖಾಲಿದ್‌ ಇವರ ಮೈಗೆ ಕೈ ಹಾಕಿ ಎಳೆದು ಅವರ ಮಾನಕ್ಕೆ ಕುಂದಾಗುವಂತೆ ವರ್ತಿಸಿ, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ಸಾಮ್ರ ಖಾಲಿದ್‌ ಇವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 96/2013 ಕಲಂ 448, 427, 323, 354, 504, 506 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
  • ಕಾಪು: ದಿನಾಂಕ 09/05/2013 ರಂದು ಪಿರ್ಯಾದಿದಾರರಾದ ವಿಶಾಲ್ ಎಸ್ ಪೂಜಾರಿ (27) ತಂದೆ ಕೆ ಸಂಜೀವ ವಾಸ 10 ನೇ ಕ್ರಾಸ್ ಸರಕಾರಿಗುಡ್ಡೆ ಮೂಡಬೆಟ್ಟು ಗ್ರಾಮ ಉಡುಪಿ ತಾಲೂಕು ಇವರು ಸುಬಾಶ್‌ನಗರದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಇರುವ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿರುವಾಗ ರಾತ್ರಿ 09:00 ಗಂಟೆಯ ಸಮಯಕ್ಕೆ ಆರೋಪಿ ಅಭಿ ಎಂಬವರು ವಿಶಾಲ್ ಎಸ್ ಪೂಜಾರಿರವರ ಅಂಗಡಿಯ ಒಳಗೆ ಬಂದು ನಿನ್ನೆ ದಿನ ನೀನು ನನ್ನ ತಂದೆಯವರಿಗೆ ಹೊಡೆದಿದ್ದಿ ನೀನು ಅಷ್ಟು ದೊಡ್ಡ ಜನವಾ ಎಂದು ಅವಾಚ್ಯೆ ಶಬ್ದಗಳಿಂದ ಬೈದು ವಿಶಾಲ್ ಎಸ್ ಪೂಜಾರಿರವರ ಶರ್ಟ್‌ನ ಕಾಲರನ್ನು ಹಿಡಿದು ಅಂಗಡಿಯ ಹೊರಗೆ ಎಳೆದುಕೊಂಡು ಬಂದು ಕೈಯಿಂದ ವಿಶಾಲ್ ಎಸ್ ಪೂಜಾರಿರವರ ಕೆನ್ನೆಗೆ ಹೊಡೆದು, ಅಷ್ಟರಲ್ಲಿ ಅಲ್ಲಿಗೆ ಬಂದು 2 ನೇ ಆರೋಪಿ ದೇವು ಕೂಡಾ ವಿಶಾಲ್ ಎಸ್. ಪೂಜಾರಿ ಇವರ ವಿಚಾರವನ್ನು ಹೇಳಿ ಕೈಯಿಂದ ಕೆನ್ನೆಗೆ ಹೊಡೆದ ಪರಿಣಾಮ ವಿಶಾಲ್ ಎಸ್. ಪೂಜಾರಿ ಇವರು ಕೆಳಗೆ ಬಿದ್ದಿದ್ದು, ಎರಡೂ ಆರೋಪಿಗಳು ಸೇರಿ ವಿಶಾಲ್ ಎಸ್ ಪೂಜಾರಿರವರಿಗೆ ಕಾಲಿನಿಂದ ತುಳಿದು ನೆಲದಲ್ಲಿ ಎಳೆದುಕೊಂಡು ಹೋದ ಪರಿಣಾಮ ವಿಶಾಲ್ ಎಸ್ ಪೂಜಾರಿರವರ ಎಡಕಾಲು ಮತ್ತು ಬಲಕಾಲಿನ ಮೊಣಗಂಟಿನ ಬಳಿ ತರಚಿದ ಗಾಯ ಹಾಗೂ ಬಲಕೈಯ ಮೊಣಗಂಟಿನ ಬಳಿ ತರಚಿದ ಗಾಯ ಮತ್ತು ಮಣಿಗಂಟಿಗೆ ಗುದ್ದಿದ ಒಳ ನೋವು ಉಂಟಾಗಿರುತ್ತದೆ. ದಿನಾಂಕ 08/05/2013 ರಂದು ಅಭಿಯ ತಂದೆಯವರು ವಿಶಾಲ್ ಎಸ್. ಪೂಜಾರಿರವರ ತಂದೆಯವರಿಗೆ ಬೈದಿದ್ದು, ಈ ಬಗ್ಗೆ ವಿಶಾಲ್ ಎಸ್. ಪೂಜಾರಿರವರ ಅಭಿಯ ತಂದೆಯವರಲ್ಲಿ ಪ್ರಶ್ನಿಸಿದ್ದಕ್ಕೆ ಆರೋಪಿಗಳು ಈ ಕೃತ್ಯ ಮಾಡಿದ್ದಾಗಿದೆ ಎಂಬುದಾಗಿ ವಿಶಾಲ್ ಎಸ್. ಪೂಜಾರಿ ಇವರು ನೀಡಿದ ದೂರಿನಂತೆ ಕಪು ಠಾಣಾ ಅಪರಾಧ ಕ್ರಮಾಂಕ 140/2013 ಕಲಂ: 504 323 448 506 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

No comments: