Friday, May 10, 2013

Daily Crimes Reported as On 10/05/2013 at 07:00 Hrs

ಅಪಘಾತ ಪ್ರಕರಣಗಳು
  • ಕೋಟ: ದಿನಾಂಕ 09/05/2013 ರಂದು ಪಿರ್ಯಾದಿದಾರರಾದ ಅರುಣ ಲೂಯಿಸ್‌ (42) ತಂದೆ ಮೌರೀಸ್ ಲೂಯಿಸ್‌ ವಾಸ ಲೂಯಿಸ್‌ ಪೌಲ್ಟ್ರಿ ಫಾರ್ಮ್‌, ಸಾಸ್ತಾನ, ಎನ್‌ಹೆಚ್‌-66, ಪಾಂಡೇಶ್ವರ ಗ್ರಾಮ, ಉಡುಪಿ ತಾಲೂಕುರವರು ತನ್ನ ಮೋಟಾರು ಸೈಕಲಿನಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಾಸ್ತಾನದಿಂದ ಮಾಬುಕಳ ಕಡೆಗೆ ಹೋಗುತ್ತಿರುವಾಗ ಮಧ್ಯಾಹ್ನ 2:50 ಗಂಟೆಗೆ ಆರೋಪಿ ಚಾಲಕ ಕೆಎ-19 ಡಿ-5898 ನೇ ಮಹೇಂದ್ರ ಪಿಕಪ್‌ ಗೂಡ್ಸ್ ವಾಹನವನ್ನು ಅರುಣ ಲೂಯಿಸ್‌ರವರ ಹಿಂದಿನಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ತೀರ ಬಲ ಭಾಗಕ್ಕೆ ಚಲಾಯಿಸಿಕೊಂಡು ಬಂದು ಅರುಣ ಲೂಯಿಸ್‌ರವರ ಮೋಟಾರು ಸೈಕಲನ್ನು ಓವರ್ ಟೇಕ್ ಮಾಡಿ ಉಡುಪಿ ತಾಲೂಕು ಪಾಂಡೇಶ್ವರ ಗ್ರಾಮದ ಸರ್ಕಾರಿ ಆಸ್ಪತ್ರೆಯ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬ್ರಹ್ಮಾವರ ಕಡೆಯಿಂದ ಸಾಸ್ತಾನ ಕಡೆಗೆ ಬರುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ಹಾಗೂ ಸಹ ಸವಾರ ಮೋಟಾರು ಸೈಕಲ್ ಸಮೇತ ಟಾರು ರಸ್ತೆಗೆ ಬಿದ್ದು ತೀವ್ರ ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ಕೊಂಡು ಹೋದಲ್ಲಿ ಪರೀಕ್ಷಿಸಿದ ವೈಧ್ಯಾಧಿಕಾರಿಗಳು ಮೋಟಾರು ಸೈಕಲ್ ಸವಾರ ಜೈಸನ್ ರೋನಾಲ್ಡ್ ಡಿಮೆಲ್ಲೋ ಮೃತಪಟ್ಟಿರುವುದಾಗಿ ತಿಳಿಸಿದ್ದು, ಸಹ ಸವಾರ ವಿಜಯ ಪೂಜಾರಿ ಎಂಬವರು ತೀವ್ರ ಗಾಯಗೊಂಡಿದ್ದು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ.ಆಸ್ಪತ್ರೆಗೆ ದಾಖಲಿಸಿದ್ದಾಗಿದೆ. ಈ ಬಗ್ಗೆ ಅರುಣ ಲೂಯಿಸ್‌ರವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 131/2013 ಕಲಂ 279, 338, 304(ಎ) ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಉಡುಪಿ: ದಿನಾಂಕ 08/05/2013 ರಂದು ಪಿರ್ಯಾದುದಾರರಾದ ಗಣಪಯ್ಯ ಶೇರಿಗಾರ್ ತಂದೆ ತೋಮರ ಶೇರಿಗಾರ್ ವಾಸ ಶ್ರೀ ಲಕ್ಷೀ ವೆಂಕಟೇಶ ದೇವಸ್ಥಾನ ಹಿಂಬಾಗ, ಪುತ್ತೂರು ಗ್ರಾಮ ಉಡುಪಿ ತಾಲೂಕು ಎಂಬವರು ಅವರ ಹೆಂಡತಿ ಸುಮತಿಯೊಂದಿಗೆ ಮೊಟಾರು ಸೈಕಲ್ ನಂಬ್ರ ಕೆಎ 20 ಎಕ್ಸ್ 0684ನೇದರಲ್ಲಿ ಉಡುಪಿಗೆ ಹೋಗುತ್ತಿರುವಾಗ ಹನುಮಂತ ನಗರ ಪೆಟ್ತೋಲ್ ಬಂಕ್ ಬಳಿ ಸಂಜೆ 06:30 ಗಂಟೆಗೆ ಉಡುಪಿ ಕಡೆಗೆ ದ್ವಿಚಕ್ರ ವಾಹನ ಸವಾರನು ಯಾವುದೇ ಸೂಚನೆ ನೀಡದೆ ಒಮ್ಮೆಲೇ ಬಲಕ್ಕೆ ಪೆಟ್ರೋಲ್ ಬಂಕ್ ಕಡೆಗೆ ತಿರುಗಿಸಲು ಪ್ರಯತ್ನಿಸಿ ನೇರವಾಗಿ ಹೋಗುತ್ತಿದ್ದ ಪಿರ್ಯಾದಿದಾರರ ಮೋಟಾರು ಸೈಕಲ್ ನ ಹ್ಯಾಂಡಲ್ಗೆ  ಡಿಕ್ಕಿ ಹೊಡೆದ ಪರಿಣಾಮ ಹಿಂದೆ ಕುಳಿತ್ತಿದ್ದ ಪಿರ್ಯಾದುದಾರರ ಹೆಂಡತಿ ಸುಮತಿ ರಸ್ತೆಗೆ ಬಿದ್ದು ಅವರ ತಲೆಗೆ ಗಂಭೀರ ಗಾಯವಾಗಿರುವುದಾಗಿದೆ ಡಿಕ್ಕಿ ಹೋಡೆದ ಮೋಟಾರು ಸೈಕಲ್ ಸವಾರನು ಮೋಟಾರು ಸೈಕಲ್ ನಿಲ್ಲಿಸದೇ ಪರಾರಿಯಾಗಿರುವುದಾಗಿದೆ ಎಂಬುದಾಗಿ ಗಣಪಯ್ಯ ಶೇರಿಗಾರ್ ರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 227/13 ಕಲಂ 279,338 ಐಪಿಸಿ 134 (ಎ)(ಬಿ) ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಉಡುಪಿ: ದಿನಾಂಕ 09/05/2013 ರಂದು ಪಿರ್ಯಾದುದಾರರಾದ ಹರೀಶ (49) ತಂದೆ ಶೀನ ಸಾಲ್ಯಾನ್ ವಾಸ ಬೆನಕ ನಿವಾಸ, ದೊಡ್ಡಣಗುಡ್ಡೆ, ಮಹೊಳಿಗುಜ್ಜಿ, ಶಿವಳ್ಳಿಗ್ರಾಮ ಉಡುಪಿ ತಾಲೂಕು ಎಂಬವರು ಕೆಎ 20 ಎಲ್ 1577 ನೇ ನಂಬ್ರಬೈಕ್ ನಲ್ಲಿ ಸವಾರಿ ಮಾಡಿಕೊಂಡು ಉಡುಪಿ  ಮಣಿಪಾಲ ರಸ್ತೆಯಲ್ಲಿ ಉಡುಪಿ ಸ್ವೀಟ್ಸ್ ಅಂಗಡಿ ಮುಂಬಾಗ ತಲುಪುವಾಗ ರಾತ್ರಿ 20:45 ಗಂಟೆಗೆ ಆರೋಪಿ ಕೆಎ 20 ಎ 1081 ನಂಬ್ರದ ಬಸ್ ಚಾಲಕನು ಉಡುಪಿ ಕಡೆಯಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಮೋಟಾರು ಸೈಕಲ್ಲಿನ ಹಿಂಬಾಗಕ್ಕೆ ಡಿಕ್ಕಿ ಹೋಡೆದ ಪರಿಣಾಮ ಪಿರ್ಯಾದುದಾರ ಬೈಕ್ ಸಮೇತ  ರಸ್ತೆಗೆ ಮಗುಚಿ ಬಿದ್ದು ಬಲಬದಿಯ ಭಜಕ್ಕೆ ಹಾಗೂ ಬಲಕೈಗೆ ಒಳ ಜಖಂ ಉಂಟಾಗಿದ್ದು ಅಲ್ಲದೆ ತಲೆಯ ಬಲಬಾಗಕ್ಕೆ ರಕ್ತಗಾಯವಾಗಿರುತ್ತದೆ, ಚಿಕಿತ್ಸೆಯ ಬಗ್ಗೆ ಉಡುಪಿ ಗಾಂಧಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಡಿಕ್ಕಿ ಹೋಡೆದ ಬಸ್ ಚಾಲಕನು ಬಸ್  ನಿಲ್ಲಿಸದೇ ಪರಾರಿಯಾಗಿರುವುದಾಗಿದೆ ಎಂಬುದಾಗಿ ಹರೀಶರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 228/13 ಕಲಂ 279,338 ಐಪಿಸಿ 134 (ಎ)(ಬಿ) ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: