Thursday, May 09, 2013

Daily Crimes Reported as On 09/05/2013 at 19:30 Hrs

ಮನುಷ್ಯ ಕಾಣೆ ಪ್ರಕರಣ
  • ಶಂಕರನಾರಾಯಣ:ಪಿರ್ಯಾದಿದಾರರಾದ ಶ್ರೀಧರ್‌ ಶೆಟ್ಟಿ (29) ತಂದೆ:ಸಂಜೀವ ಶೆಟ್ಟಿ ವಾಸ:ನಡತುಂಡು ಎಡಮೊಗ್ಗೆ ಗ್ರಾಮ  ಕುಂದಾಪುರ ತಾಲೂಕುರವರ ತಮ್ಮಸಂದೀಪ ಶೆಟ್ಟಿ(21) ಎಂಬುವವನು ದಿನಾಂಕ:06/05/2013 ರಂದು ತಾನು ಹೋಟೆಲ್‌ಗೆ ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೇಳಿ ಶ್ರೀಧರ್‌ ಶೆಟ್ಟಿ ರವರ ಮನೆಯಾದ ಕುಂದಾಪುರ ತಾಲೂಕು ಎಡಮೊಗ್ಗೆ ಗ್ರಾಮದ ನಡತುಂಡು ಎಂಬಲ್ಲಿಂದ ಬೆಳಿಗ್ಗೆ 07:30 ಗಂಟೆಗೆ ಹೋದವನು ಹೋಟೆಲ್‌ಗೆ ಕೆಲಸಕ್ಕೆ ಹೋಗದೇ  ಈವರೆಗೂ ಮನೆಗೂ ಬಾರದೇ ಕಾಣೆಯಾಗಿರುತ್ತಾನೆ. ಈ ಬಗ್ಗೆ ಶ್ರೀಧರ್‌ ಶೆಟ್ಟಿರವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣಾ ಅಪರಾಧ ಕ್ರಮಾಂಕ 63/13 ಕಲಂ ಮನುಷ್ಯ ಕಾಣೆ ಎಂಬುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.    
ಇತರ ಪ್ರಕರಣ
  • ಕುಂದಾಪುರ:ದಿನಾಂಕ:09/05/2013 ರಂದು 13:30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ರಾಧದಾಸ್ (55) ಗಂಡ: ನಿರಂಜನ್ ದಾಸ್, ವಾಸ:ಅರ್ಜುನ್ ನಿಲಯ, ಕುಂಭಾಶಿ ಗ್ರಾಮ,ಕುಂದಾಪುರ ತಾಲೂಕುರವರ ಪಟ್ಟಾ ಸ್ಥಳಕ್ಕೆ ಪಕ್ಕದ ಮನೆಯವರಾದ ಆಪಾದಿತರುಗಳಾದ 1)ಕೃಷ್ಣಯ್ಯ ಆಚಾರಿ 2)ಪೂರ್ಣಿಮ ಆಚಾರಿ 3) ವಿನೇಂದ್ರ ಆಚಾರಿ 4) ಮಾರುತಿ ಆಚಾರಿ 5)ವಿಶ್ವೇಶ ಆಚಾರಿ ಇವರುಗಳು ಅಕ್ರಮ ಕೂಟ ಸೇರಿ ಕೈಯಲ್ಲಿ ಕತ್ತಿ, ಕಬ್ಬಿಣದ ರಾಡ್ ಹಿಡಿದುಕೊಂಡು ಅಕ್ರಮ ಪ್ರವೇಶ ಮಾಡಿ ರಾಧದಾಸ್‌ರವರಿಗೆ ಹಲ್ಲೆ ಮಾಡಲು ಪ್ರಯತ್ನಿಸಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ಬೈದು ರಾಡ್‌ನಿಂದ ಹೊಡೆದು ಸಾಯಿಸುತ್ತೇವೆ ಎಂದು ಜೀವ ಬೆದರಿಕೆ ಹಾಕಿ ರಾಧದಾಸ್‌ರವರನ್ನು ಜಾಗದಿಂದ ಓಡಿಸಿ, ಜಾಗದಲ್ಲಿರುವ ಮುಳ್ಳಿನ ಗಿಡಗಳನ್ನು (ಪಾಪಸು ಕಳ್ಳಿ) ಕಿತ್ತು ಹಾಕಿ ಬಲತ್ಕಾರವಾಗಿ ಜಾಗದಲ್ಲಿ ದಾರಿ ಮಾಡಿರುತ್ತಾರೆ.ಈ ಬಗ್ಗೆ ರಾಧದಾಸ್‌ರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 205/2013 ಕಲಂ 143, 147, 148, 447, 504, 506 ಜೊತೆಗೆ 149ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: