Friday, May 10, 2013

Daily Crime Reported As On 10/05/2013 At 19:30 Hrs

ಗಂಡಸು ಕಾಣೆ ಪ್ರಕರಣ
  • ಉಡುಪಿ: ಪಿರ್ಯಾದಿದಾರರಾದ ಶ್ರೀಮತಿ ಪೂರ್ಣಿಮಾ, ವಾಸ ಹನುಮಂತನಗರ, ಸಂತೆಕಟ್ಟೆ ಅಂಚೆ, ಪುತ್ತೂರು ಗ್ರಾಮ, ಉಡುಪಿ ಇವರ ಗಂಡ ಜಯ ಎಂಬವರು ದಿನಾಂಕ 02/05/13 ರಂದು ಬೆಳಿಗ್ಗೆ 08:30 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವರು ಈತನಕ ಮನೆಗೂ ಬಾರದೇ, ಸ್ನೇಹಿತರ ಮನಗೂ ಹೋಗದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದಾಗಿರುತ್ತದೆ ಎಂಬುದಾಗಿ  ಶ್ರೀಮತಿ ಪೂರ್ಣಿಮಾ ಇವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 229/13 ಕಲಂ ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣಗಳು  
  • ಕಾರ್ಕಳ: ದಿನಾಂಕ 07/05/2013 ರಂದು ರಾತ್ರಿ 08:45 ಗಂಟೆಗೆ ಕಾರ್ಕಳ ತಾಲೂಕು ಮಾಳ ಗ್ರಾಮದ ಮಾಳ ಗೇಟ್ ಬಳಿ ಪಿರ್ಯಾದಿದಾರರಾದ ಶ್ರೀಮತಿ ಎಮಿಲ್ ರಾಯ್  (27) ಗಂಡ ರಾಯ್ ಅಂಟೋನಿ, ವಾಸ ಪೀಣ್ಯ 3 ಕ್ರಾಸ್ ಎಂ.ಇ.ಸಿ ಬಡಾವಣೆ ಬೆಂಗಳೂರು ಇವರ ತಂದೆ ಜೋಸ್ (50) ಎಂಬುವವರು ಕೆಎ 19ಡಿ 8565ನೇ ನಿಶ್ಮಿತಾ ಬಸ್ಸಿನಿಂದ ಇಳಿಯುತಿದ್ದಾಗ ಅದರ ಚಾಲಕ ಬಸ್ಸನು ಅಜಾಗರೂಕತೆಯಿಂದ ಒಮ್ಮೆಲೆ ಮುಂದಕ್ಕೆ ಚಲಾಯಿಸಿದ ಪರಿಣಾಮ ಜೋಸ್ ಎಂಬುವವರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ವತ್ರೆಗೆ ದಾಖಲಿಸಿರುತ್ತಾರೆ ಎಂಬುದಾಗಿ ಶ್ರೀಮತಿ ಎಮಿಲ್ ರಾಯ್  ಇವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 56/2013 ಕಲಂ 279, 337 ಐ.ಪಿ.ಸಿ ಮತ್ತು ಕಲಂ 134(ಬಿ) ಮೊ.ವಾ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಕುಂದಾಪುರ: ದಿನಾಂಕ 10/05/2013 ರಂದು ಬೆಳಿಗ್ಗೆ ಎಂದಿನಂತೆ ಮನೆಯಿಂದ ಹಾಲನ್ನು ಕೋಣಿ ಹಾಲು ಡೈರಿಗೆ ಅವರ ಬಾಬ್ತು ಸೈಕಲ್ ನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಸುಮಾರು 7:15 ಗಂಟೆ ಸಮಯಕ್ಕೆ ಕೋಣಿ ಹಾಲು ಡೈರಿ  ಎದುರು ಫಿರ್ಯಾದಿದಾರರಾದ ಕೃಷ್ಣಯ್ಯ ಶೇರಿಗಾರ (84), ತಂದೆ ದಿ. ವಾಸುದೇವ ಶೇರಿಗಾರ, ವಾಸ ಹೊಸಮನೆ, ರಂಬಳ್ಳಿ, ಹಂಗ್ಲೂರು ಗ್ರಾಮ, ಕುಂದಾಪುರ ತಾಲೂಕು ಇವರು ಹೋಗುತ್ತಿದ್ದಾಗ ಆಟೋ ರಿಕ್ಷಾ ನಂಬ್ರ ಕೆಎ 20ಸಿ 3035 ನೇದರ ಚಾಲಕ ಆಟೋ ರಿಕ್ಷಾವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಭಾಗಕ್ಕೆ ಹೋಗಿ ಕೃಷ್ಣಯ್ಯ ಶೇರಿಗಾರರವರು ಸವಾರಿ ಮಾಡಿಕೊಂಡಿದ್ದ ಸೈಕಲಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಕೃಷ್ಣಯ್ಯ ಶೇರಿಗಾರ ಇವರು ಸೈಕಲ್ ಸಮೇತ ರಸ್ತೆಗೆ ಬಿದ್ದು ಅವರಿಗೆ ಬಲಬದಿಯ ಸೊಂಟಕ್ಕೆ, ಬಲಕೈಗೆ, ತಲೆಯ ಬಲಬದಿಗೆ, ಬಲಕಾಲಿಗೆ ತರಚಿದ ರಕ್ತಗಾಯವಾಗಿರುತ್ತದೆ. ನಂತರ ಗಾಯಗೊಂಡ ಕೃಷ್ಣಯ್ಯ ಶೇರಿಗಾರವರನ್ನು ಚಿಕಿತ್ಸೆಯ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಿದ್ದಾಗಿದೆ ಎಂಬುದಾಗಿ ಕೃಷ್ಣಯ್ಯ ಶೇರಿಗಾರ ಇವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಂಕ 207/13 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 ಕಳವು ಪ್ರಕರಣ
  • ಗಂಗೊಳ್ಳಿ: ದಿನಾಂಕ 18/04/2013 ರಂದು ರಾತ್ರಿ ಮಲಗುವಾಗ ಉಪ್ಪರಿಗೆಯಲ್ಲಿನ ಪಿರ್ಯಾದಿದಾರರಾದ ವಸಂತಿ  (26) ತಂದೆ ಮಹಾಬಲ ದೇವಾಡಿಗ, ವಾಸ ಚೈತ್ರ ನಿಲಯ ಪ್ರವಾಸಿ ಮಂದಿರದ ಬಳಿ ತ್ರಾಸಿ ಗ್ರಾಮ ಕುಂದಾಪುರ ತಾಲೂಕು ಇವರು ರೂಮಿನ ಕಪಾಟಿನಲ್ಲಿ ಚಿಕ್ಕ ಭರಣಿಯಲ್ಲಿ 2.30 ಪವನ್ ಲಕ್ಷ್ಮೀ ತಾಳಿ ಇರುವ ಚಿನ್ನದ ಸರವನ್ನು ತೆಗೆದಿರುಸಿದ್ದು ಅದರ ಅಂದಾಜು ಮೌಲ್ಯ 45,000 ರೂಪಾಯಿ ಆಗಬಹುದು ದಿನಾಂಕ 21/04/2013 ರಂದು ಮೇಲೆ ಹೋಗಿ ನೋಡಿದಾಗ ಇಟ್ಟ ಜಾಗದಲ್ಲಿ ಸರ ಇಲ್ಲದಿರುವುದು ಕಂಡು ಎಷ್ಟು ಹುಡುಕಾಡಿದರು ಸಿಕ್ಕಿರುವುದಿಲ್ಲ ದಿನಾಂಕ 19/04/2013 ರಿಂದ 20/04/2013ರವರೆಗೆ ತ್ರಾಸಿಯ ಕೇಶವನು ಉಪ್ಪರಿಗೆಯಲ್ಲಿ ಪೈಂಟಿಂಗ್‌ ಕೆಲಸ ಮಾಡಲು ಹೋಗಿದ್ದಾನೆ ಅದುದರಿಂದ ಬಂಗಾರದ ಸರವನ್ನು ಕೇಶವನೇ ಕದ್ದಿರಬಹುದೆಂದು ಅನುಮಾನವಾಗಿರುತ್ತದೆ ವಸಂತಿರವರು ಅಣ್ಣನ ಮದುವೆ ಇದ್ದಿರುವುದರಿಂದ ಆತನು ತಂದು ಕೊಡಬಹುದು ಎಂಬ ನಿರೀಕ್ಷೆಯಿಂದ ಕಪ್ಲೇಂಟ್‌ ಕೊಡಲು ತಡ ಮಾಡಬೇಕಾಯಿತು ಎಂಬುದಾಗಿ ವಸಂತಿ ಇವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 67/2013  ಕಲಂ 380 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: