Sunday, May 05, 2013

Daily Crimes Reported as On 05/05/2013 at 07:00 Hrs

ಅಪಘಾತ ಪ್ರಕರಣಗಳು
  • ಕುಂದಾಪುರ : ಪಿರ್ಯಾದಿದಾರ ಉದಯ ಜೋಗಿ (30), ತಂದೆ: ಮುತ್ತ ಜೋಗಿ, ವಾಸ: ಶಾಂತಿ ನಗರ, ಕೊಟೇಶ್ವರ ಅಂಚೆ, ಮೂಡುಗೋಪಾಡಿ ಗ್ರಾಮ, ಕುಂದಾಫುರ ಇವರು 1ಕೆಎ 20 ಸಿ 5208ನೇ 407 ಟೆಂಪೋದಲ್ಲಿ ಕ್ಲೀನರ್ ಹಾಗೂ ಲೋಡರ್ ಆಗಿ ಕೆಲಸ ಮಾಡುತ್ತಿದ್ದು, ದಿನಾಂಕ:0405/2013 ರಂದು ಎಂದಿನಂತೆ ಟೆಂಪೋದಲ್ಲಿ ಶಿಲೆಕಲ್ಲನ್ನು ಲೋಡ್ ಮಾಡಿ ಪ್ರಭಾಕರ ಶೆಟ್ಟಿ ಎಂಬವರ ಮನೆಯಿಂದ ಹೊರಟಿದ್ದು, ಟೆಂಪೋವನ್ನು ಮಾರ್ಟಿನ್ ಎಂಬವರು ಚಲಾಯಿಸಿಕೊಂಡಿರುತ್ತಾರೆ. ಟೆಂಪೋದಲ್ಲಿದ್ದ ಶೀಲೆಕಲ್ಲನ್ನು ಚಾರುಕೊಟ್ಟಿಗೆಯಲ್ಲಿರುವ ಪ್ರಭಾಕರ ಶೆಟ್ಟಿರವರ ಗೇರು ಬೀಜ ಕಾರ್ಖಾನೆಗೆ ಹಾಕಿ ವಾಪಾಸ್ಸು ವಕ್ವಾಡಿಯಿಂದಾಗಿ ಕುಂಭಾಶಿಗೆ ಬರುತ್ತಿರುವಾಗ ಸಮಯ ಸುಮಾರು 10:30 ಗಂಟೆಗೆ ವಕ್ವಾಡಿಯ ಕುಷ್ಟಣ್ಣ ಎಂಬವರ ಹೊಟೇಲಿನ ಎದುರು ಬರುತ್ತಿರುವಾಗ ಟೆಂಪೋ ಚಾಲಕ ಮಾರ್ಟಿನ್ ರವರು ಟೆಂಪೋವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದು ಟೆಂಪೋ ತಿರುವಿನಲ್ಲಿ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಅಲ್ಲಿಯೇ ರಸ್ತೆಯ ಬಲಭಾಗದಲ್ಲಿದ್ದ ಪ್ರಭಾಕರ ಶೆಟ್ಟಿರವರ ಬಾಬ್ತು ಗೇರು ಬೀಜ ಸುಲಿಯುವ ಕಟ್ಟಡಕ್ಕೆ ಢಿಕ್ಕಿ ಹೊಡೆದ ಪರಿಣಾಮ ಟೆಂಪೋ ಗ್ಲಾಸು ಒಡೆದು ಪಿರ್ಯಾದಿದಾರರಿಗೆ ತುಟಿಯ ಮೇಲ್ಭಾಗಕ್ಕೆ ರಕ್ತಗಾಯವಾಗಿ ಎಡಕಾಲಿನ ಕೋಲು ಕಾಲಿಗೆ ಒಳ ಜಖಂ ಆಗಿರುತ್ತದೆ, ಅಲ್ಲದೇ ಚಾಲಕನಿಗೆ ಕೂಡ ಮುಖಕ್ಕೆ ತರಚಿತ ರಕ್ತಗಾಯವಾಗಿರುತ್ತದೆ. ಗಾಯಗೊಂಡ ಅವರನ್ನು ಕುಂದಾಪುರ ಎನ್. ಆರ್. ಆಚಾರ್ಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾಗಿದೆ. ಈ ಬಗ್ಗೆ ವಿಜಯ ಕುಮಾರ್‌ರವರು ನೀಡಿದ ದೂರಿನಂತೆ ಕುಂದಾಫುರ  ಠಾಣಾ ಅಪರಾಧ ಕ್ರಮಾಂಕ 194/13 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಬ್ರಹ್ಮಾವರ : ದಿನಾಂಕ 03.05.2013 ರಂದು ಸಂಜೆ 7 ಗಂಟೆಯ ಸಮಯಕ್ಕೆ ಪಿರ್ಯಾದಿದಾರ ಗಣೇಶ (26) ತಂದೆ: ದಿ.ಬಾಡು ಪೂಜಾರಿ ವಾಸ: ಸಸಿಹಿತ್ಲು ಹೊಸಾಳ ಇವರು ಹೊಸಾಳ ಶಿವರಾಯನ ಕಟ್ಟೆ ಬಳಿ ಹೋಗುತ್ತಿರುವಾಗ ಸ್ಯಾಬರಕಟ್ಟೆಯಿಂದ ಬಾರಕೂರು ಕಡೆಗೆ ಕೆಎ 20 ಬಿ 8491 ನೇ ಗೂಡ್ಸ ರಿಕ್ಷಾ ನೇ ಚಾಲಕನಾದ ಮಂಜುನಾಥ ಪೂಜಾರಿಯವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ಎಡದ ಬದಿ ನೆಡದು ಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಮುಖಕ್ಕೆ, ಕಾಲಿಗೆ ರಕ್ತಗಾಯ ವಾಗಿದ್ದು ಬಲ ಬದಿಯ ಭುಜಕ್ಕೆ ತೀವ್ರ ಒಳ ಜಖಂ ಉಂಟಾಗಿದ್ದಾಗಿದೆ.  ಈ ಬಗ್ಗೆ ಗಣೇಶ ರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 174/13 ಕಲಂ 279, 338  ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಪಡುಬಿದ್ರಿ : ಪಿರ್ಯಾದುದಾರರಾದ ಶ್ರೀಮತಿ ಕ್ಷಮಾ ಸುಪ್ರಸಾದ್ ಶೆಟ್ಟಿ, ಗಂಡ: ಸುಪ್ರಸಾದ್ ಶೆಟ್ಟಿ, ವಾಸ: ಕ್ಷಮಾ, ದೊಡ್ಡಣಗುಡ್ಡೆ, ಕುಂಜಿಬೆಟ್ಟು ಇವರು ದಿನಾಂಕ 04.05.2013 ರಂದು ಕೆಎ 20 ಪಿ 9066 ನೇ ಫೋರ್ಡ್‌ಫಿಯೆಸ್ಟಾ ಕಾರ್‌ನ್ನು ಚಲಾಯಿಸಿಕೊಂಡು ಅವರ ತಂದೆಯೊಂದಿಗೆ ಉಡುಪಿಯಿಂದ ಮುಲ್ಕಿ ಕಡೆಗೆ ಬರುತ್ತಾ ಸಂಜೆ 6-45 ಗಂಟೆಗೆ ಉಡುಪಿ ತಾಲೂಕು ಬಡಾ ಗ್ರಾಮದ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಎದುರು ರಾಹೆ 66 ರಲ್ಲಿ ಬರುತ್ತಿರುವಾಗ ಪಡುಬಿದ್ರಿ ಕಡೆಯಿಂದ ಆರೋಪಿ ಮುಸ್ತಾಫಾರವರು ಕೆಎ 04 ಎಮ್‌ಡಿ 29 ನೇ ಮಾರುತಿ ಓಮ್ನಿ ಕಾರನ್ನು ಅತಿವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರು ಚಲಾಯಿಸುತ್ತಿದ್ದ ಕಾರಿನ ಬಲಬದಿ ಢಿಕ್ಕಿ ಹೊಡೆದು ನಂತರ ಹಿಂದಿನಿಂದ ಬರುತ್ತಿದ್ದ ಟಾಟಾ ಸುಮೋ ನಂಬ್ರ ಕೆಎ 21 ಎಮ್‌1873 ನೇಯದ್ದಕ್ಕೆ ಢಿಕ್ಕಿ ಹೊಡೆದಿದ್ದು ಈ ಅಪಘಾತದಿಂದ ಮೂರೂ ವಾಹನಗಳು ಜಖಂಗೊಂಡಿರುತ್ತದೆ ಹಾಗೂ ಆರೋಪಿತನ ಕಾರ್‌ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತದೆ. ಈ ಬಗ್ಗೆ ಶ್ರೀಮತಿ ಕ್ಷಮಾ ಸುಪ್ರಸಾದ್ ಶೆಟ್ಟಿ ರವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 74/13 ಕಲಂ 279  ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹಲ್ಲೆ ಪ್ರಕರಣ
  • ಬ್ರಹ್ಮಾವರ : ದಿನಾಂಕ 04/05/2013 ರಂದು ಬೆಳಿಗ್ಗೆ 10.15 ಗಂಟೆಯ ಸಮಯಕ್ಕೆ ಆಪಾದಿತ ಪ್ರವೀಣರವರು ಅನುಮತಿ ಇಲ್ಲದೇ ಪಿರ್ಯಾದಿದಾರ ರಾಜಶೇಖರ ಹೆಬ್ಬಾರ, ಪ್ರಾಂಶುಪಾಲರು, ಸರಕಾರಿ ಪ್ರಥಮ ದರ್ಜೆ ಕಾಲೇಜು  ಬಾರಕೂರು ಇವರ ಕಾಲೇಜಿನ ಕಛೇರಿಗೆ ಬಂದು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದದಿಂದ ಬ್ಯೆದು ಪಿರ್ಯಾದಿದಾರರಿಗೆ ಕ್ಯೆಯಿಂದ ಹೊಡೆದು ಅವರಿಗೆ ಜೀವ ಬೆದರಿಕೆ ಹಾಕಿ ಸರಕಾರಿ ಕರ್ತವ್ಯದಲ್ಲಿದ್ದ ಪಿರ್ಯಾದಿದಾರರರಿಗೆ ಅಡ್ಡಿ ಉಂಟು ಮಾಡಿರುವುದಾಗಿದೆ. ಈ ಬಗ್ಗೆ ವಿಜಯ ಕುಮಾರ್‌ರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 173/13 ಕಲಂ 504,506,323,506 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಉಡುಪಿ ನಗರ : ಪಿರ್ಯಾದಿದಾರ ವಿಜಯ ಕುಮಾರ್‌, ತಂದೆ:ದಿ.ಆನಂದ, ವಾಸ:ಕೆನರಾ ಬ್ಯಾಂಕ್‌ಬಳಿ,ಕುಂಜಿಬೆಟ್ಟು, ಶಿವಳ್ಳಿ ಗ್ರಾಮ, ಉಡುಪಿ ಇವರ ತಂಗಿ ಆಶಾ 38 ವರ್ಷರವರು ಕುಂಜಿಬೆಟ್ಟಿನಲ್ಲಿ ತಮ್ಮ ತಾಯಿಯವರರಾದ ಲಲಿತಾ ಸಿರಿಯಾನ್ ರೊಂದಿಗೆ ವಾಸವಾಗಿದ್ದು ಅವರಿಗೆ ಮದುವೆಯಾಗದೇ ಇದ್ದು ದಿನಾಂಕ 03/05/03 ರಂದು ಬೆಳಿಗ್ಗೆ 08:00 ಗಂಟೆಗೆ ಆಶಾರವರು ಮನೆಯ ಬಳಿ  ತರೆಗೆಲೆಗಳನ್ನು  ಒಟ್ಟು ಮಾಡಿ  ಬೆಂಕಿ  ಹಾಕಿದ್ದು  ಆ ಸಮಯ ಮನೆಯ ನಾಯಿ  ಅವರ ಮೈ ಮೇಲೆ ಹಾರಿದ ಪರಿಣಾಮ ಅವರು ಬೆಂಕಿಗೆ ಬಿದ್ದು ಅವರ ಬಟ್ಟೆ ಹಾಗೂ ಮೈ ಸುಟ್ಟು ಹೋಗಿರುತ್ತದೆ ಅವರನ್ನು ಚಿಕಿತ್ಸೆ ಬಗ್ಗೆ ಕೆ.ಎಮ್.ಸಿ ಆಸ್ವತ್ರೆಗೆ ದಾಖಲಿಸಲಾಗಿ ಚಿಕಿತ್ಸೆಯ ವೆಚ್ಚ ಬರಿಸಲು ಆಗದೇ ಇದ್ದುದ್ದರಿಂದ ಅವರನ್ನು ಚಿಕಿತ್ಸೆ ಬಗ್ಗೆ ವೆನ್ಲಾಕ್‌ ಆಸ್ವತ್ರೆಗೆ ಕರೆದುಕೊಂಡು  ಹೋಗಿದ್ದು  ದಿನಾಂಕ 03/05/13 ರಂದು 03:30 ಗಂಟೆಗೆ  ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ವಿಜಯ ಕುಮಾರ್‌ರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಯುಡಿಆರ್‌ನಂ.17/13 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: