Sunday, May 05, 2013

Daily Crimes Reported as On 05/05/2013 at 17:00 Hrs

ಅಸ್ವಾಭಾವಿಕ ಮರಣ ಪ್ರಕರಣ
  • ಮಲ್ಪೆ : ಪಿರ್ಯಾದಿದಾರರಾದ ಸುಜನ್‌ (23) ತಂದೆ ಜಗದೀಶ ಶೆಟ್ಟಿ, ವಾಸ. ಸುಜಿ ನಿಲಯ ಮಂಗಳೂರು ಹಾಗೂ ಅವರ ಕಾಲೇಜಿನ ಸಹಪಾಠಿಗಳು ಪ್ರವಾಸದ ಬಗ್ಗೆ ಮಲ್ಪೆ ಸೈಂಟ್‌ಮೇರಿಸ್ ಐಲ್ಯಾಂಡಿಗೆ ಹೋಗಿದ್ದರು. ಆ ಪೈಕಿ ತಿಲಕ ರಾಜ್ ಮತ್ತು ಸುಯಾಶ್‌ ಸುವರ್ಣ ಎಂಬವರು ಸಮುದ್ರ ಬದಿಯ ಬಂಡೆಯ ಮೇಲೆ ನಿಂತಿದ್ದು ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರದ ನೀರಿಗೆ ಬಿದ್ದು ಆ ಪೈಕಿ ಸುಯಶ್ ಸುವರ್ಣನನ್ನು ಅಲ್ಲಿದ್ದ ಪ್ರವಾಸಿಗರು ರಕ್ಷಿಸಿದ್ದು ನೀರಿನಲ್ಲಿ ಮುಳುಗಿ ಹೋದ ತಿಲಕ ರಾಜ್ ಇವರ ಮೃತ ಶರೀರ ದಿ. 04.05.13 ರಂದು ಮಲ್ಪೆ ಸೈಂಟ್ ಮೆರೀಸ್ ದ್ವೀಪದ ಹತ್ತಿರ ಸಮುದ್ರದಲ್ಲಿ ಪತ್ತೆಯಾಗಿದ್ದು ಮೃತ ಶರೀರವನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಸ್ರತ್ರೆಯ ಶವಗಾರದಲ್ಲಿ ತಂದಿರಿಸಿರುವುದಾಗಿದೆ. ಈ ಬಗ್ಗೆ ಸುಜನ್‌ರವರು ನೀಡಿದ ದೂರಿನಂತೆ ಮಲ್ಪೆ ಠಾಣಾ ಯುಡಿಆರ್‌ ಕ್ರಮಾಂಕ 28/13 ಕಲಂ. 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹಲ್ಲೆ ಪ್ರಕರಣಗಳು
  • ಉಡುಪಿ ನಗರ : ಪಿರ್ಯಾದಿದಾರರಾದ ಜನಾರ್ಧನ ಪೂಜಾರಿ, ತಂದೆ: ದಿ. ರಾಜು ಪೂಜಾರಿ, ವಾಸ: ನಯಂಪಳ್ಳಿ, ಸಂತೆಕಟ್ಟೆ ಅಂಚೆ, ಉಡುಪಿರವರು ದಿನಾಂಕ 03-05-13ರಂದು ಮನೆಯ ಹೊರಗೆ ಅಂಗಳದಲ್ಲಿ ನಿಂತುಕೊಂಡಿರುವಾಗ್ಗೆ ಮಧ್ಯಾಹ್ನ 3:30ಗಂಟೆಗೆ ಅವರ ನೆರೆಮನೆಯ ನಿವಾಸಿ ರಾಮಚಂದ್ರ ಎಂಬವರು ಪಿರ್ಯಾದಿದಾರರ ಅಂಗಳಕ್ಕೆ ಬಂದು ಒಂದು ಮರದ ರೀಪಿನ ತುಂಡಿನಿಂದ ಏಕಾಏಕಿ ಪಿರ್ಯಾದಿದಾರರ ಎಡಕಾಲಿಗೆ ಹಾಗೂ ಬೆನ್ನಿಗೆ ಹೊಡೆದಿರುತ್ತಾನೆ. ಅಲ್ಲದೆ ಪಿರ್ಯಾದಿದಾರರ ಬೊಬ್ಬೆ ಕೇಳಿ ಓಡಿ ಬಂದ ಪಿರ್ಯಾದಿದಾರರ ಹೆಂಡತಿ ಶಾರದಾರವರಿಗೂ ಆಪಾದಿತ ರಾಮಚಂದ್ರ ರೀಪಿನಿಂದ ಬಲಕಾಲಿಗೆ ಹೊಡೆದಿರುತ್ತಾನೆ. ನಂತರ ಆಪಾದಿತನು ಪಿರ್ಯಾದಿದಾರರಿಗೆ ಹಲ್ಲೆ ಮಾಡಿದ ರೀಪಿನ ತುಂಡನ್ನು ಅಲ್ಲಿಯೇ ಬಿಸಾಡಿ ಹೋಗಿರುತ್ತಾನೆ. ಆಪಾದಿತನು ಪಿರ್ಯಾದಿದಾರರಿಗೆ ಹಲ್ಲೆ ಮಾಡಿದ ಪರಿಣಾಮ ಎಡಕಾಲಿಗೆ ಹಾಗೂ ಬೆನ್ನಿಗೆ ರಕ್ತಗಾಯವಾಗಿರುತ್ತದೆ. ಪಿರ್ಯಾದಿದಾರರು ತನಗಾದ ನೋವಿನ ಬಗ್ಗೆ ಉಡುಪಿ ಸರಕಾರಿ ಆಸ್ಪತ್ರೆಗೆ ಬಂದು ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಪಿರ್ಯಾದಿದಾರರಿಗೂ ಆಪಾದಿತ ರಾಮಚಂದ್ರನಿಗೂ ಈ ಹಿಂದೆ ಕ್ಷುಲಕ ಕಾರಣಕ್ಕಾಗಿ ಮಾತುಕತೆಯಾಗಿದ್ದು, ಈ ಬಗ್ಗೆ ಪಿರ್ಯಾದಿದಾರರು ಈ ಹಿಂದೆ ದೂರು ನೀಡಿದಂತೆ ಪ್ರಕರಣ ದಾಖಲಾಗಿ ನ್ಯಾಯಾಲಯದ ವಿಚಾರಣೆಯಲ್ಲಿದ್ದು, ಇದೇ ವೈಷ್ಯಮ್ಯದಿಂದ ಆಪಾದಿತನು ಪಿರ್ಯಾದಿದಾರರಿಗೆ ಹಲ್ಲೆ ಮಾಡಿದ್ದಾಗಿರುತ್ತದೆ. ಈ ಬಗ್ಗೆ ಜನಾರ್ಧನ ಪೂಜಾರಿರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾದ ಕ್ರಮಾಂಕ 221/13 ಕಲಂ. 324 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕುಂದಾಪುರ : ದಿನಾಂಕ 05/05/2013 ರಂದು ಬೆಳಿಗ್ಗೆ ಸುಮಾರ 09:00 ಗಂಟೆಗೆ ಪಿರ್ಯಾದಿದಾರರಾದ ಸುನೀತಾ ಹೆಗ್ಡೆ ಗಂಡ ಸತೀಶ ಹೆಗ್ಡೆ ವಾಸ: ಬಿ ಟಿ ಆರ್ ರಸ್ತೆ ವಡೇರಹೋಬಳಿ ಗ್ರಾಮ ಕುಂದಾಪುರ ಇವರ ಗಂಡ ಸತೀಶರವರೊಂದಿಗೆ ಆನಗಳ್ಳಿ ಗ್ರಾಮದಲ್ಲಿರುವ ಪಿರ್ಯಾದಿದಾರರ ತೋಟಕ್ಕೆ ಹೊಗಿದ್ದು ಆ ಸಮಯ ಪಿರ್ಯಾದಿದಾರರ ತೋಟದ ಪಕ್ಕದಲ್ಲಿ ಸಂಪತ್‌ ಮತ್ತು ಅವರ ಹೆಂಡತಿ ರಮೀತ ಹಾಗೂ ನಾಗರಾಜ ನಿಂತು ಕೊಡಿದ್ದು ಪಿರ್ಯಾದಿದಾರರ ಸ್ದಳದಲ್ಲಿ ಕೆಲಸದವರಿಂದ ಕಂಪೌಡ್‌ ಗೋಡೆ ಮುಂದುವರಿಸಿ ಕಟ್ಟುತ್ತಿರುವುದನ್ನು ಕಂಡು ಪಿರ್ಯಾದಿದಾರರು ಆರೋಪಿಸಿದಾಗ  ಸಂಪತ ಕುಮಾರ ಪಿರ್ಯಾದಿದಾರ ಬಳಿಗೆ ಬಂದು ಪಿರ್ಯಾದಿದಾರ ಬಲ ಕೈಯನ್ನು ತಿಪ್ಪಿ ಎಳೆದು ಪಿರ್ಯಾದಿದಾರ ಮುಖ ಮತ್ತು ಕೈಗಳಿಗೆ ಹೊಡೆದು ದೂಡಿದ್ದು ನಂತರ ನಾಗರಾಜ, ಸಂಪತ ಕುಮಾರ, ರಮೀತ ಎಸ್ ಶೆಟ್ಟಿ  ಎಂಬವರು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಸುನೀತಾ ಹೆಗ್ಡೆರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾದ ಕ್ರಮಾಂಕ 195/13 ಕಲಂ. 354(ಬಿ), 504, 506 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಪಘಾತ ಪ್ರಕರಣಗಳು 
  • ಉಡುಪಿ : ದಿನಾಂಕ 03-05-13ರಂದು ಲಾರಿ ಚಾಲಕ ಚೇತನ್‌ ಕುಮಾರ್‌ ಎಂಬವರು ಪಿರ್ಯಾದಿದಾರರಾದ ಈರಯ್ಯ ಮುದೇನಗುಡಿ, ತಂದೆ:ಜನಬಸಯ್ಯ, ವಾಸ: ವಿವೇಕಾನಂದ ರೋಡ್‌‌, 2ನೇ ಕ್ರಾಸ್‌‌, ಗದಗರವರ ವಿಆರ್‌‌ಎಲ್‌‌ ಸಂಸ್ಥೆಗೆ ಸೇರಿದ ಕೆಎಲ್‌‌07ಎಡಬ್ಲ್ಯೂ4565ನೇ ಲಾರಿಯಲ್ಲಿ ಪಾರ್ಸೆಲ್‌ಗಳನ್ನು ಹಾಕಿಕೊಂಡು ಹುಬ್ಬಳ್ಳಿಯಿಂದ ಉಡುಪಿ ಕಡೆಗೆ ಚಲಾಯಿಸಿಕೊಂಡು ಬರುತ್ತಾ ದಿ.04-05-13ರಂದು 01:30ಗಂಟೆಗೆ ಉಡುಪಿ ಅಂಬಾಗಿಲು ರಸ್ತೆಯಾಗಿ ಗುಂಡಿಬೈಲು ರಸ್ತೆಗೆ ಚಲಾಯಿಸಿಕೊಂಡು ಬಂದಿದ್ದು, ರಸ್ತೆ ತುಂಬಾ ಕೀರಿದ್ದಾಗಿದ್ದುದರಿಂದ ಲಾರಿಯನ್ನು ಮುಂದಕ್ಕೆ ಚಲಾಯಿಸಲಾಗದೆ ನಿರ್ಲಕ್ಷ್ಯತನದಿಂದ ಹಿಂದಕ್ಕೆ ಚಲಾಯಿಸಿ ರಸ್ತೆಯ ಎಡಬದಿಯ ಗದ್ದೆಗೆ ಲಾರಿಯನ್ನು ಬೀಳಿಸಿದ್ದ ಪರಿಣಾಮ ಪಿರ್ಯಾದಿದಾರರ ಸಂಸ್ಥೆಗೆ ಸೇರಿದ ಲಾರಿಯು ಜಖಂ ಉಂಟಾಗಿದ್ದಾಗಿರುತ್ತದೆ. ಈ ಬಗ್ಗೆ ಈರಯ್ಯರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾದ ಕ್ರಮಾಂಕ 222/13 ಕಲಂ. 279 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: