Thursday, May 02, 2013

Daily Crimes Reported as On 02/05/2013 at 07:00 Hrs

ಅಪಘಾತ ಪ್ರಕರಣಗಳು
  • ಕಾಪು:ದಿನಾಂಕ 01/05/2013 ರಂದು ಪಿರ್ಯಾದಿದಾರರಾದ ಸೋಮನಾಥ (32) ತಂದೆ:ಸಂಜೀವ ಶೆಟ್ಟಿಗಾರ್ ವಾಸ:ಕೋಟೆ ಮನೆ, ಮಲ್ಲಾರು ಗ್ರಾಮ ಉಡುಪಿ ತಾಲೂಕುರವರು ಅವರ ಸಂಬಂಧಿಕರಾದ ಜಗನ್ನಾಥ ಮತ್ತು ಹರೀಶ್ ಎಂಬವರೊಂದಿಗೆ ಎರ್ಮಾಳಿನಿಂದ ಕೆಎ 20 ಸಿ 3765 ನೇ ಆಟೋ ರಿಕ್ಷಾದಲ್ಲಿ ಬರುತ್ತಿರುವಾಗ್ಗೆ ಸದ್ರಿ ಆಟೋ ರಿಕ್ಷಾ ಚಾಲಕ ಆರೋಪಿ ಅವಿನಾಶ್ ತನ್ನ ರಿಕ್ಷಾವನ್ನುರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೂಳೂರು ಕಮ್ಯೂನಿಟಿ ಹಾಲ್ ಎದುರು ಪ್ರಯಾಣಿಕರನ್ನು ಹತ್ತಿಸುವರೆ ನಿಲ್ಲಿಸಿದ್ದ ಕೆಎ 20 ಎಬಿ 7199 ನೇ ಬಸ್ಸಿನ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ ಸೋಮನಾಥರವರಿಗೆ ಹಣೆಗೆ ರಕ್ತಗಾಯ, ಎಡಕಾಲಿನ ಮೊಣಗಂಟಿಗೆ ತರಚಿದ ಗಾಯ, ಅಲ್ಲದೇ ರಿಕ್ಷಾದಲ್ಲಿದ್ದ ಜಗನ್ನಾಥ ಶೆಟ್ಟಿಗಾರರವರಿಗೆ ಎಡಕಾಲಿನ ತೊಡೆಗೆ ಮತ್ತು ಎದೆಗೆ ಗುದ್ದಿದ ಒಳನೋವು ಉಂಟಾಗಿದ್ದು, ಹರೀಶ್‌ರವರಿಗೆ ಎಡಭಾಗದ ಕಿವಿಗೆ ರಕ್ತಬರುವ ಗಾಯಗಳಾಗಿದ್ದು,ಆರೋಪಿ ರಿಕ್ಷಾ ಚಾಲಕ ಅವಿನಾಶ್ ಇವರಿಗೆ ರಕ್ತಗಾಯ ಉಂಟಾಗಿರುತ್ತದೆ. ಈ ಬಗ್ಗೆ ಸೋಮನಾಥರವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 131/2013 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕಾಪು:ದಿನಾಂಕ 01/05/2013 ರಂದು ಪಿರ್ಯಾದಿದಾರರಾದ ಪ್ರಶಾಂತ (17) ತಂದೆ:ಬೋಜರಾಯ ವಾಸ:ಶ್ರೀ ಕೃಷ್ಣ ನಿಲಯ ದುರ್ಗಾ ನಗರ ಕುಂಜೂರು ಎಲ್ಲೂರು ಗ್ರಾಮರವರು ತನ್ನ ಸ್ನೇಹಿತ ಮಹಂತೇಶ್ ಮತ್ತು ಪ್ರಜ್ವಲ್‌ರವರೊಂದಿಗೆ ಮೂಳೂರು ಗುರುನಾರಾಯಣ ಮಂದಿರದಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದುಕೊಂಡು ಬರುತ್ತಿರುವಾಗ್ಗೆ ಆರೋಪಿ ಕೆಎ-20 ಇಸಿ 8075 ನೇ ಮೋಟಾರ್ ಸೈಕಲನ್ನು ಅದರ ಸವಾರ ಮಹೇಶ್ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಾತ್ರಿ 07:45 ಗಂಟೆಗೆ ಮೂಳೂರು ಸೊಸೈಟಿ ಬಳಿ ಪ್ರಜ್ವಲ್‌ನ ಸೈಕಲಿಗೆ ಢಿಕ್ಕಿ ಹೊಡೆದು, ನಂತರ ಮಹಂತೇಶನಿಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರಿಗೂ ರಕ್ತಗಾಯ ಉಂಟಾಗಿದ್ದಾಗಿದೆ ಅಲ್ಲದೇ ಆರೋಪಿ ಮಹೇಶ್‌ನಿಗೂ ಗಾಯ ಉಂಟಾಗಿರುತ್ತದೆ.ಈ ಬಗ್ಗೆ ಪ್ರಶಾಂತರವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 132/2013 ಕಲಂ:279,337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇತರ ಪ್ರಕರಣ
  • ಕೊಲ್ಲೂರು:ದಿನಾಂಕ 01/05/2013 ರಂದು ಸಂಜೆ ಸುಮಾರು 17:30 ಗಂಟೆಗೆ ಕೊಲ್ಲೂರು ಗ್ರಾಮದ ಮಂದಾರ ಗೆಸ್ಟ್ ಹೌಸ್ ಎಂಬಲ್ಲಿ ಪಿರ್ಯಾದಿದಾರರಾದ ಮಂಜಮ್ಮ (30) ಗಂಡ:ಈರಪ್ಪ ಗುಂಡಪಲ್ಲಿ,ಗಿಣಿವಾಲ ಗ್ರಾಮ, ಪೋಸ್ಟ್:ಬಾರಂಗಿ,ಸೊರಬ ತಾಲೂಕು, ಶಿವಮೊಗ್ಗ ಜಿಲ್ಲೆರವರ ಗಂಡ ಈರಪ್ಪ ಗುಂಡಪಲ್ಲಿ (35) ಗಿಣಿವಾಲ ಗ್ರಾಮ, ಪೋಸ್ಟ್:ಬಾರಂಗಿ,ಸೊರಬ ತಾಲೂಕು, ಶಿವಮೊಗ್ಗ ಜಿಲ್ಲೆರವರು ಮಂದಾರ ಗೆಸ್ಟ್‌ಹೌಸ್ ನಲ್ಲಿ ಗಾರೆ ಕೆಲಸಕ್ಕೆ ಲೇಬರ್ ಆಗಿ ಹೋಗಿದ್ದು, ಕೆಲಸ ಮಾಡುವ ಸಮಯ ಗೆಸ್ಟ್ ಹೌಸ್ ಮೇಲಿನಿಂದ ಕೆಳಗೆ ಬಿದ್ದಿದ್ದು, ತಕ್ಷಣ ಅವರನ್ನು ಚಿಕಿತ್ಸೆ ಬಗ್ಗೆ ಗೆಸ್ಟ್ ಹೌಸ್ ಮೇಲ್ವಿಚಾರಕರಾದ ಜನಾರ್ಧನ ಆಚಾರ್ಯ ಎಂಬವರ ಕಾರಿನಲ್ಲಿ ಅವರೊಂದಿಗೆ ಕಾರ್ತಿಕ ಹಾಗೂ ಮಾರುತಿ ಎಂಬವರು ಸೇರಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ದಾರಿ ಮಧ್ಯೆ ಮೃತಪಟ್ಟಿರುವುದಾಗಿದೆ. ಈ ಘಟನೆಗೆ ಗೆಸ್ಟ್ ಹೌಸ್ ಮೇಲ್ವಿಚಾರಕನು ಕೂಲಿ ಕಾರ್ಮಿಕನಿಗೆ ಯಾವುದೇ ಮುಂಜಾಗ್ರತೆ ವಹಿಸದೆ ಜೀವರಕ್ಷಕ ಉಪಕರಣ ನೀಡದೆ ಅಜಾಗರೂಕತೆಯಿಂದ ಕೆಲಸ ಮಾಡಿಸಿರುವುದೆ ಕಾರಣವಾಗಿರುತ್ತದೆ.ಈ ಬಗ್ಗೆ ಮಂಜಮ್ಮರವರು ನೀಡಿದ ದೂರಿನಂತೆ ಕೊಲ್ಲೂರು ಠಾಣಾ ಅಪರಾಧ ಕ್ರಮಾಂಕ 45/2013 ಕಲಂ 304(ಎ) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

No comments: