Wednesday, May 01, 2013

Daily Crimes Reported as On 01/05/2013 at 19:30 Hrs

ಅಪಘಾತ ಪ್ರಕರಣಗಳು
  • ಮಣಿಪಾಲ:ಪಿರ್ಯಾದಿದಾರರಾದ ರತ್ನಾಕರ ಆಚಾರ್ಯ (35) ತಂದೆ:ನಾರಾಯಣ ಆಚಾರ್ಯ ವಾಸ: ಸಾಂತೂರು ಭರಣಿ ಹೌಸ್‌, ಸಾಂತೂರು, ಕೊಪ್ಲ ಅಂಚೆ, ಉಡುಪಿ ತಾಲೂಕುರವರು ಲಾರೆನ್ಸ್‌ರವರು ಸವಾರಿ ಮಾಡುತ್ತಿದ್ದ ಮೋಟಾರ್‌ ಸೈಕಲ್‌ ನಂಬ್ರ ಕೆಎ 20 ಇಎ 3529 ನೇದರ ಸಹ ಸವಾರನಾಗಿದ್ದು, ದಿನಾಂಕ 01/05/2013 ರಂದು ಸುಮಾರು 13:30 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಲಕ್ಷ್ಮೀಂದ್ರ ನಗರದ ಏಕಮುಖ ಮುಖ್ಯರಸ್ತೆಯಲ್ಲಿ ವಿರುದ್ದ ದಿಕ್ಕಿನಿಂದ ಮೋಟಾರ್‌ ಸೈಕಲ್ ನಂಬ್ರ ಕೆಎ 20 ಎಸ್‌ 8404 ನೇದರ ಸವಾರ ಹರಿಪ್ರಸಾದ್‌ ಎಂಬವನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಲಾರೆನ್ಸರವರ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ರತ್ನಾಕರ ಆಚಾರ್ಯ ಹಾಗೂ ಲಾರೆನ್ಸ್‌ರವರು ರಸ್ತೆಗೆ ಬಿದ್ದು, ಲಾರೆನ್ಸ್‌ರವರ ಎಡಕಾಲಿನ ಮೊಣಗಂಟಿಗೆ ರಕ್ತಗಾಯವಾಗಿರುತ್ತದೆ.ಈ ಬಗ್ಗೆ ರತ್ನಾಕರ ಆಚಾರ್ಯರವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 91/2013 ಕಲಂ:279,337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಉಡುಪಿ ನಗರ:ಪಿರ್ಯಾದಿದಾರರಾದ ರಘು ಕೆ ಪೂಜಾರಿ (50) ತಂದೆ:ದಿವಂಗತ ಕೃಷ್ಣಪ್ಪ ಪೂಜಾರಿ ವಾಸ:ಸುಕೃತಾ, ನಿಡಂಬಳ್ಳಿ,ಮೂಡಕುದ್ರು ಗ್ರಾಮ,ಕಲ್ಯಾಣಪುರ ಪೋಸ್ಟ್ ಉಡುಪಿ ಜಿಲ್ಲೆರವರ ಹೆಂಡತಿಯ ತಂದೆ ದೇಜು ಪೂಜಾರಿ (75) ಇವರು ದಿನಾಂಕ:30/04/2013 ರಂದು ಉಡುಪಿ ಪತಂಜಲಿ ಅಪಾರ್ಟ್ಮೆಂಟ್‌ನಿಂದ ವಾಚ್‌ಮೆನ್ ಕೆಲಸ ಮುಗಿಸಿ  ವಾಪಾಸ್ಸು ಮನೆಗೆ  ಬರುವರೇ ಸಮಯ ಸುಮಾರು ರಾತ್ರಿ 21:45 ಗಂಟೆಗೆ ಉಡುಪಿ ತಾಲೂಕು 76 ಬಡಗುಬೆಟ್ಟು ಗ್ರಾಮದ ಬಿ.ಆರ್‌.ಶೆಟ್ಟಿ ಮನೆಯ ಎದುರು ರಸ್ತೆ ದಾಟಿ,ಗೋವಿಂದ ಕಲ್ಯಾಣ ಮಂಟಪ ಕಡೆ ನಡೆದುಕೊಂಡು ಬರುತ್ತಿರುವಾಗ  ಕೆಎ 20 ಬಿ 5808 ರಿಕ್ಷಾ ಚಾಲಕನು ತನ್ನ ರಿಕ್ಷಾವನ್ನು ಕಿನ್ನಿಮೂಲ್ಕಿ ಕಡೆಯಿಂದ ಉಡುಪಿ ಕಡೆಗೆ  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಘು ಕೆ ಪೂಜಾರಿರವರ ಮಾವ ದೇಜು ಪೂಜಾರಿ(75) ಯವರಿಗೆ  ಢಿಕ್ಕಿ ಹೊಡೆದ ಪರಿಣಾಮ ದೇಜು ಪೂಜಾರಿಯವರು ರಸ್ತೆಗೆ ಬಿದ್ದು ತಲೆಯ ಹಿಂಭಾಗಕ್ಕೆ ತೀವೃ ತರಹದ ರಕ್ತಗಾಯವಾಗಿದ್ದು, ನಂತರ ಅವರನ್ನು ಆಟೋ ರಿಕ್ಷಾ ಚಾಲಕನು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದು,ದೇಜು ಪೂಜಾರಿಯವರು ಅರೆ ಪ್ರಜ್ಞಾವಸ್ಥೆಯಲ್ಲಿರುವುದರಿಂದ ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು ಅವರ ಆರೈಕೆಯನ್ನು ನೋಡಿಕೊಳ್ಳುತ್ತಿದ್ದ ರಘು ಕೆ ಪೂಜಾರಿರವರು ಈ ದಿನ ಠಾಣೆಗೆ ಬಂದು ಪಿರ್ಯಾದು ನೀಡಿದುದಾಗಿದೆ. ಈ ಬಗ್ಗೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 218/13 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಉಡುಪಿ ನಗರ:ಪಿರ್ಯಾದಿದಾರರಾದ ಹಮೀದ್ ಸಾಬ್ (61) ತಂದೆ:ದಿವಂಗತ ಮೋಯಿದೀನ್ ಸಾಹೇಬ್ ವಾಸ:ಕೆ ಎಂ ಹೆಚ್ ರೆಸಿಡೆನ್ಸಿ ಪೊಲ್ಯ ಉಚ್ಚಿಲ, ಉಡುಪಿ ತಾಲೂಕು ಮತ್ತು ಜಿಲ್ಲೆರವರು ಈ ದಿನ ದಿನಾಂಕ:01/05/2013 ರಂದು  ತನ್ನ ಮಗಳ ಗಂಡ ಅಶ್ರಪ್‌ರೊಂದಿಗೆ ಜೋಗಕ್ಕೆ ಕೆಲಸದ ನಿಮಿತ್ತ ತನ್ನ ಕಾರು ನಂಬ್ರ ಕೆಎ 20 ಎಂ ಎ 7070 ನೇ 800 ಕಾರಿನಲ್ಲಿ ಚಾಲಕನಾಗಿ ಅಳಿಯ ಅಶ್ರಫ್ ಚಲಾಯಿಸುತ್ತಾ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸುಮಾರು 12:15 ಗಂಟೆಗೆ  ಉಡುಪಿಯ ಆಶೀರ್ವಾದ್ ಬಳಿ ತಲುಪುವಾಗ್ಗೆ ಬ್ರಹ್ಮಾವರ ಕಡೆಯಿಂದ ಕೆಎ 25 ಬಿ 9641 ನೇ ಲಾರಿ ಚಾಲಕನು ತನ್ನ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹಮೀದ್ ಸಾಬ್‌ರವರು ಪ್ರಯಾಣಿಸುತ್ತಿದ್ದ 800 ಕಾರಿಗೆ ಎದುರಿನಿಂದ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಹಮೀದ್ ಸಾಬ್‌ರವರ ಎರಡೂ ಕಾಲುಗಳಿಗೆ ತೀವೃ ಸ್ವರೂಪದ ಗಾಯವಾಗಿದ್ದು, ತಲೆಗೆ ಹಾಗೂ ಗಲ್ಲಕ್ಕೆ ರಕ್ತಗಾಯವಾಗಿರುತ್ತದೆ.ಅಲ್ಲದೇ ಕಾರು ಜಖಂಗೊಂಡಿರುತ್ತದೆ.ಅಶ್ರಪ್‌ನು ಹಮೀದ್ ಸಾಬ್‌ರವರನ್ನು ರಿಕ್ಷಾದಲ್ಲಿ ಉಡುಪಿಯ ಹೈಟೆಕ್ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಹಮೀದ್ ಸಾಬ್‌ರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 219/13 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕಾರ್ಕಳ ನಗರ:ಪಿರ್ಯಾದಿದಾರರಾದ ಶ್ರೀ ರಮೇಶ ಕುಮಾರ್ (42) ತಂದೆ:ದಿವಂಗತ ಅಣ್ಣಿ ದೇವಾಡಿಗ ವಾಸ:ಹಿರಿಯಂಗಡಿ ಶ್ರೀ. ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ, ಕಾರ್ಕಳ ಕಸಬ ಗ್ರಾಮ, ಕಾರ್ಕಳರವರು ಮೆಸ್ಕಾಂ ಇಲಾಖೆಯ ಲೈನ್‌ಮೆನ್ ಆಗಿ ಅಜೆಕಾರು ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ದಿನಾಂಕ:01/05/2013 ರಂದು ತಮ್ಮ ಶಾಖೆಯ ಜೆ.ಇ.ಇ ವಿನೋದ್ ಕುಮಾರ್‌ರವರು ರಜೆಯಲ್ಲಿದ್ದುದರಿಂದ ಪ್ರಭಾರವನ್ನು ಹೆಬ್ರಿ ಸ್ಟೇಷನ್‌ನ ಜೆ.ಇ.ಇ ಶ್ರೀ ದಯಾನಂದ ಆಚಾರಿಯವರು ವಹಿಸಿಕೊಂಡಿದ್ದು ನೆಲ್ಲಿಕಟ್ಟೆಯಲ್ಲಿ ವಿದ್ಯುತ್ ಕಂಬವೊಂದು ಜಖಂಗೊಂಡಿರುವುದರ ಬಗ್ಗೆ ಪರಿಶೀಲನೆಗಾಗಿ ರಮೇಶ ಕುಮಾರ್ ರವರೊಂದಿಗೆ ನೆಲ್ಲಿಕಟ್ಟೆಗೆ ತೆರಳಿ ನಂತರ ಈ ಬಗ್ಗೆ ಕಾರ್ಕಳ ನಗರ ಠಾಣೆಗೆ ದೂರು ಸಲ್ಲಿಸುವರೇ ದಯಾನಂದ ಆಚಾರ್ಯರವರು ತನ್ನ ಮೋಟಾರು ಸೈಕಲ್‌ ನಂಬ್ರ.KA-20-U-365 ನೇಯದನ್ನು ನೆಲ್ಲಿಕಟ್ಟೆ ಕಡೆಯಿಂದ ಕಾರ್ಕಳದ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು 11:30 ಘಂಟೆಯ ಸಮಯಕ್ಕೆ ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಮಂಗಿಲಾರು ತಿರುವಿನಲ್ಲಿ ತಲುಪುತ್ತಿದ್ದಂತೆ ಮೋಟಾರು ಸೈಕಲ್ ಸ್ಕಿಡ್ ಆಗಿ ಡಾಮಾರು ರಸ್ತೆಗೆ ಮೋಟಾರು ಸೈಕಲ್ ಸಮೇತ ಬಿದ್ದ ಪರಿಣಾಮ ಗಂಭೀರ ಗಾಯಗೊಂಡ ದಯಾನಂದ ಆಚಾರ್ಯರವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ 108 ಆಂಬುಲೆನ್ಸ್‌ ನಲ್ಲಿ ಕರೆದುಕೊಂಡು ಬಂದಿದ್ದು ಅಲ್ಲಿ ವೈದ್ಯಾಧಿಕಾರಿಯವರು ಪರೀಕ್ಷಿಸಿ ದಯಾನಂದ ಆಚಾರ್ಯರವರು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ರಮೇಶ ಕುಮಾರ್‌ರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 56/2013 U/s 279, 304 (A) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: