Thursday, May 02, 2013

Daily Crimes Reported as On 02/05/2013 at 17:00 Hrs

ಹಲ್ಲೆ ಪ್ರಕರಣಗಳು
  • ಬೈಂದೂರು : ದಿನಾಂಕ 01/05/2013 ರಂದು ಮದ್ಯಾಹ್ನ 2-00 ಗಂಟೆಗೆ ಫಿರ್ಯಾದುದಾರ ಮಂಜುನಾಥ ಪೂಜಾರಿ (26) ದುರ್ಗಾ ಪೂಜಾರಿ ವಾಸ; 11 ನೇ ಉಳ್ಳೂರು ಗ್ರಾಮ  ಇವರು ತಮ್ಮ ಮನೆಯಲ್ಲಿರುವಾಗ ಆರೋಪಿತರಾದ 1) ರಾಜು ಪೂಜಾರಿ, 2) ದಿನೇಶ ಪೂಜಾರಿ, 3) ರವಿ ಪೂಜಾರಿ ಮತ್ತು 4) ಮಹಾಬಲ ಪೂಜಾರಿ ಎಲ್ಲರೂ 11 ನೇ ಉಳ್ಳೂರು ಗ್ರಾಮ ಇವರುಗಳು ಮಂಜುನಾಥ ಪೂಜಾರಿಯವರ ಅಕ್ಕನಾದ ಪದ್ಮಾವತಿ, ತಾಯಿ ಶ್ರೀಮತಿ ಸೀತಾ ಎಂಬವರಿಗೆ ನಮ್ಮ ಅಪ್ಪನ ಪಾಲಿನ ಆಸ್ತಿ ನಮಗೆ ಬೇಕು ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು ಆರೋಪಿಗಳು ಫಿರ್ಯಾದುದಾರರ ಬಾಬ್ತು ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಫಿರ್ಯಾದುದಾರರ ತಾಯಿ ಸೀತಾ, ತಂದೆ ದುರ್ಗಾ ಹಾಗೂ ಅಕ್ಕ ಪದ್ಮಾವತಿ ರವರಿಗೆ ಹೊಡೆಯಲು ಬಂದು ಸೋಡಾ ಬಾಟ್ಲಿಯನ್ನು ಕಂಪೌಂಡಿನ ಗೋಡೆಗೆ ಹೊಡೆದು ಫಿರ್ಯಾದುದಾರರಿಗೆ ಚುಚ್ಚಲು ಬಂದಾಗ ಫಿರ್ಯಾದುದಾರರು ಬಲಕೈಯಿಂದ ತಡೆದಿದ್ದು ಫಿರ್ಯಾದುದಾರರ ಬಲ ಕೈ ಮೊಣ ಗಂಟಿನ ಬಳಿ ಸೋಡಾ  ಬಾಟ್ಲಿ ತಾಗಿ ರಕ್ತ ಗಾಯ ಆಗಿದ್ದು ತಡೆಯಲು ಬಂದ ಫಿರ್ಯಾದುದಾರರ ಮಾವ ಹೆರಿಯ ಎಂಬವರಿಗೆ ಆರೋಪಿತರು ಕೈಯಿಂದ ಹೊಡೆದು, ಎದೆಯ ಎಡಭಾಗಕ್ಕೆ ತುಳಿದು ಹಲ್ಲೆ ನಡೆಸಿದ್ದು ಅಲ್ಲದೇ ಫಿರ್ಯಾದುದಾರರ ಕುತ್ತಿಗೆಯಲ್ಲಿದ್ದ 14 ಗ್ರಾಂ ತೂಕದ ಚಿನ್ನದ ಸರ ಹಾಗೂ ಹೆರಿಯರವರ ಕುತ್ತಿಗೆಯಲ್ಲಿದ್ದ 20 ಗ್ರಾಂ ತೂಕದ ಚಿನ್ನದ ಸರ ಬಿದ್ದು ಹೋಗಿದ್ದು ಈ ಕೃತ್ಯಕ್ಕೆ ಫಿರ್ಯಾದುದಾರರ ಮನೆಯವರಿಗೂ ಹಾಗೂ ಆರೋಪಿತರಿಗೂ ಇರುವ ಜಾಗದ ತಕರಾರು ಕಾರಣವಾಗಿರುತ್ತದೆ. ಈ ಬಗ್ಗೆ ಮಂಜುನಾಥ ಪೂಜಾರಿರವರು ನೀಡಿದ ದೂರಿನಂತೆ  ಬೈಂದೂರು ಠಾಣಾ ಅಪರಾಧ ಕ್ರಮಾಂಕ 141/13  ಕಲಂ. 447, 504, 324, 323, 427 ಜೊತೆಗೆ 34 ಐ ಪಿ ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣಗಳು
  • ಹೆಬ್ರಿ : ಪಿರ್ಯಾದಿದಾರ ರಮೇಶ್‌ನಾಯ್(20), ವಾಸ: ತಿಮ್‌ಕೋಡ್‌, ಬೇಳಂಜೆ ಗ್ರಾಮ, ಕಾರ್ಕಳ ತಾಲೂಕು ಎಂಬವರ ಅಣ್ಣ ರಾಮಕೃಷ್ಣ (25), ದಿನಾಂಕ: 01-05-2013 ರಂದು ಸಂಜೆ 6-30 ಗಂಟೆ ಸಮಯಕ್ಕೆ ಕಾರ್ಕಳ ತಾಲೂಕು ಬೇಳಂಜೆ ಗ್ರಾಮದ ತಿಮ್‌ಕೋಡ್‌ ಎಂಬಲ್ಲಿ ತನ್ನ ಮನೆಯ ಹಿಂದುಗಡೆ ಇರುವ ಹಲಸಿನ ಮರದಿಂದ ಹಲಸಿನ ಹಣ್ಣನ್ನು ಕೊಯ್ದು ತರಲು ಹೋಗಿದ್ದು, ಹಲಸಿನ ಹಣ್ಣನ್ನು ತೆಗೆಯಲು ಮರ ಹತ್ತಿದಾಗ ಆಕಸ್ಮಿಕವಾಗಿ ಜಾರಿದ ಪರಿಣಾಮ ಕೆಳಗೆ ಬಿದ್ದು ಕುತ್ತಿಗೆಯ ಹಿಂಭಾಗಕ್ಕೆ ತೀವ್ರ ಸ್ವರೂಪದ ಗಾಯಗೊಂಡು ನರಳುತ್ತಿದ್ದವರನ್ನು ಚಿಕಿತ್ಸೆ ಬಗ್ಗೆ ಕುಂದಾಪುರದ ಸರಕಾರಿ ಆಸ್ಪತ್ರೆಗೆ ರಾತ್ರಿ 8-30 ಗಂಟೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ರಮೇಶ್‌ನಾಯ್ಕರವರು ನೀಡಿದ ದೂರಿನಂತೆ  ಹೆಬ್ರಿ ಠಾಣಾ ಯುಡಿಆರ್‌ಕ್ರಮಾಂಕ 06/13, ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಬ್ರಹ್ಮಾವರ : ದಿನಾಂಕ: 28/04/2013 ರ ಬೆಳಗ್ಗೆ 06:00 ಗಂಟೆಯಿಂದ ದಿ; 02/05/2013 ರ 09:00 ಗಂಟೆಯ ಮಧ್ಯಾವಧಿಯಲ್ಲಿ ಉಡುಪಿ ತಾಲೂಕು ಯಡ್ತಾಡಿ ಗ್ರಾಮದ ಜನತಾ ಮನೆ ಸ್ಯಾಬ್ರಕಟ್ಟೆಯಿಂದ ಗೇರು ಪ್ಲಾಟ್ ಕಲ್ಲುಕೋರೆ ಹೊಂಡ ಎಂಬಲ್ಲಿ ಪಿರ್ಯಾದಿದಾರ ಜಯರಾಮ, ತಂದೆ:ದೊರೆ ಸ್ವಾಮಿ, ವಾಸ: ಜತನಾ ಮನೆ, ಸ್ಯಾಬ್ರಕಟ್ಟೆ, ಯಡ್ತಾಡಿ ಗ್ರಾಮ ಇವರ ನೆರೆಯ ಮನೆಯ ಶಂಕರ ಎಂಬವರ ಹೆಂಡತಿ ಸಂಗೀತಾರವರು ಸ್ನಾನ ಮಾಡಲು ಹೋದವಳು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಗಿದೆ. ಈ ಬಗ್ಗೆ ಜಯರಾಮ ರವರು ನೀಡಿದ ದೂರಿನಂತೆ  ಬ್ರಹ್ಮಾವರ ಠಾಣಾ ಯುಡಿಆರ್‌ಕ್ರಮಾಂಕ 26/13, ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಉಡುಪಿ ನಗರ : ಮೃತ ಮೋಹನ ಪೂಜಾರಿ ಇವರು ಒಂದು ವರ್ಷಗಳಿಂದ ಅಲಂಕಾರ್ ಚಿತ್ರ ಮಂದರದ ಬಳಿ ಇರುವ ನಿತ್ಯಾನಂದ ಆಶ್ರಮದಲ್ಲಿ ವಾಸವಾಗಿದ್ದು, ಮೃತರಿಗೆ ಮದುಮೇಹ ಮತ್ತು  ರಕ್ತದೊತ್ತಡ ಕಾಹೀಲೆ ಬಳಲುತ್ತಿದ್ದು  ಮೃತರು ದಿನಾಂಕ 30/04/2013 ರಂದು ಬೆಳಗ್ಗೆ 06:30 ಗಂಟೆಗೆ ಮೂತ್ರ ಮಾಡಲು ಹೊರಗಡೆ ಹೋಗಿರುವ ಸಮಯ ಆಕಸ್ಮಿಕವಾಗಿ ಬಿದ್ದು ತಲೆಗೆ ಪೆಟ್ಟಾಗಿ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು 108 ವಾಹನದವರು ಆಸ್ಪತ್ರೆಗೆ ಸೇರಿಸಿದ್ದು, ದಿನಾಂಕ 01/05/2013 ರಂದು ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಗಂಗಾಧರ, ಕಿನ್ನಿಗೋಳಿರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಯುಡಿಆರ್‌ಕ್ರಮಾಂಕ 16/13, ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಮಣಿಪಾಲ : ಪಿರ್ಯಾದಿ ಜನಾರ್ಧನ ಕಾಮತ್‌(50), ತಂದೆ: ಯು. ವಿಠಲ್‌ಕಾಮತ್‌‌ವಾಸ: ಮುಳುಗುಜ್ಜಿ, ಮದಗ ಹೌಸ್‌, ಮದಗ, ಆತ್ರಾಡಿ ಅಂಚೆ, ಉಡುಪಿ ತಾಲೂಕು ಇವರ ಹೆಂಡತಿಯ ತಮ್ಮ ರಾಘವೇಂದ್ರ ಶೆಟ್ಟಿರವರು ದಿನಾಂಕ 28.04.2013 ರಂದು ಮನೆಯಿಂದ ಹೋದವರು ಕಾಣೆಯಾಗಿದ್ದು, ನಂತರ ಈ ದಿನ ದಿನಾಂಕ 02.05.2013 ರಂದು ಬೆಳಿಗ್ಗೆ 09:30 ಗಂಟೆ ನಡುವಿನ ಅವಧಿಯಲ್ಲಿ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಇಂದ್ರಾಳಿ ರೈಲ್ವೆ ಸೇತುವೆಯ ಅಡಿಯಲ್ಲಿ ರೈಲ್ವೆ ಹಳಿಗಳ ಬಳಿ ತಲೆ ಮತ್ತು ಕಾಲುಗಳು ಬೇರ್ಪಟ್ಟ ಸ್ಥಿತಿಯಲ್ಲಿ ದೊರೆತಿದ್ದು, ಈ ಬಗ್ಗೆ ಜನಾರ್ಧನ ಕಾಮತ್‌ರವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಯುಡಿಆರ್‌ಕ್ರಮಾಂಕ 22/13, ಕಲಂ: 174 (3) [IV] ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: