Thursday, May 23, 2013

Daily Crime Reports As on 23/05/2013 At 17:00 Hrs


ಅಪಘಾತ ಪ್ರಕರಣ
  • ಬೈಂದೂರು: ದಿನಾಂಕ 22/05/2013 ರಂದು ಪಿರ್ಯಾದಿದಾರರಾದ ವಾಸುದೇವ ಖಾರ್ವಿ (29) ತಂದೆ:ಸಣ್ಣಯ್ಯ ಖಾರ್ವಿ ವಾಸ:ಸಣ್ಣುಮನೆ, ಮಡಿಕಲ್, ಉಪ್ಪುಂದ ಗ್ರಾಮ ಕುಂದಾಪುರ ತಾಲೂಕು ಇವರು  ತಮ್ಮ ಬಾಬ್ತು ಮೋಟಾರ್ ಸೈಕಲ್‌ನಲ್ಲಿ ಉಪ್ಪುಂದದಿಂದ ನಾವುಂದ ಕಡೆಗೆ ಹೋಗುತ್ತಿರುವಾಗ್ಗೆ ಫಿರ್ಯಾದುದಾರರ ಅಣ್ಣ ಗಣೇಶ ಖಾರ್ವಿ ಹಾಗೂ ಅತ್ತಿಗೆ ಶಾರದಾ ಖಾರ್ವಿ ರವರು ತಮ್ಮ ಮೋಟಾರ್ ಸೈಕಲ್‌ ನಂಬ್ರ KA20EC3703 ನೇದರಲ್ಲಿ ನಾವುಂದ ಕಡೆಗೆ ರಾ.ಹೆ 66 ನೇದರಲ್ಲಿ ಹೋಗುತ್ತಿದ್ದು ಅವರುಗಳು ನಾವುಂದ ಗ್ರಾಮದ ಅರೆಹೊಳೆ ಜಂಕ್ಷನ್‌ ಬಳಿ ಮೋರಿಯ ಬಳಿ ತಲುಪುವಾಗ್ಗೆ 15-10 ಗಂಟೆಗೆ ಫಿರ್ಯಾದುದಾರರ ಹಿಂದಿನಿಂದ ಸ್ಯಾಂಟ್ರೋ ಕಾರು ನಂಬ್ರ KA51MC1694 ನೇದರ ಚಾಲಕನು ತನ್ನ ಬಾಬ್ತು ಕಾರನ್ನು ಫಿರ್ಯಾದುದಾರರ ಹಿಂದಿನಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರನ್ನು ಓವರ್‌ಟೇಕ್‌ ಮಾಡಿ ಮುಂದೆ ಹೋಗಿ ಫಿರ್ಯಾದುದಾರರ ಎದುರಿನಲ್ಲಿ ಹೋಗುತ್ತಿದ್ದ ಫಿರ್ಯಾದುದಾರರ ಅಣ್ಣ ಹಾಗೂ ಅತ್ತಿಗೆ ಸವಾರಿ ಮಾಡಿಕೊಂಡಿದ್ದ ಮೋಟಾರು ಸೈಕಲ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರ ಅಣ್ಣ ಅತ್ತಿಗೆ ಮೋಟಾರ್ ಸೈಕಲ್‌ ಸಮೇತ ರಾ.ಹೆ 66 ನೇದರ ಪಶ್ಚಿಮ ಬದಿಯ ಮಣ್ಣು ರಸ್ತೆಗೆ ಅಡ್ಡ ಬಿದ್ದಿದ್ದು ಪರಿಣಾಮ ಗಣೇಶ ಖಾರ್ವಿ ರವರಿಗೆ ಎಡಕಾಲಿಗೆ, ಎರಡೂ ಕೈಗಳಿಗೆ, ಮೈಗೆ ರಕ್ತ ಗಾಯ ಆಗಿದ್ದು  ಶಾರದ ಖಾರ್ವಿ ರವರಿಗೆ ತಲೆಗೆ ಮುಖಕ್ಕೆ ರಕ್ತಗಾಯ ಎರಡೂ ಕೈಗಳಿಗೆ ತರಚಿದ ಗಾಯ ಆಗಿದ್ದು ಅಪಘಾತ ಪಡಿಸಿದ ಸ್ಯಾಂಟ್ರೋ ಕಾರು ನಂಬ್ರ KA51MC1694  ನೇದರ ಚಾಲಕನು ಕಾರನ್ನು ನಿಲ್ಲಿಸದೇ ಪರಾರಿ ಆಗಿರುವುದಾಗಿದೆ. ಬಗ್ಗೆ ವಾಸುದೇವ ಖಾರ್ವಿ ಇವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 159/2013 ಕಲಂ: 279, 337  ಐಪಿಸಿ ಮತ್ತು 134(ಎ)ಬಿ) ಐ ಎಂ ವಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ. 
ವಂಚನೆ ಪ್ರಕರಣ
  • ಉಡುಪಿ : ಪ್ರಕರಣದ ಪಿರ್ಯಾದಿ ರಘುಪತಿ ಆಚಾರ್ಯ, ತಂದೆ: ನಾರಾಯಣ ಆಚಾರ್ಯ, ವಾಸ:ನಂ.5, ಶ್ರೀಕೃಷ್ಣ ಸೇವಾಶ್ರಮ ಆಸ್ಪತ್ರೆ, ನಂ.523,10ನೇ ಮುಖ್ಯ, 45ನೇ ಕ್ರಾಸ್‌, ವಿ ಬ್ಲಾಕ್‌, ಜಯನಗರ, ಬೆಂಗಳೂರು ಇವರು ನಿವೃತ್ತ ವಿಜಯ ಬ್ಯಾಂಕ್‌ ಉದ್ಯೋಗಿ ಹಾಗೂ ಪುರೋಹಿತರಾಗಿರುತ್ತಾರೆ. ಸದ್ರಿ ಪ್ರಕರಣದಲ್ಲಿ 1.ಹರಿದಾಸ್‌ ಉಪಾಧ್ಯಾಯ, ತಂದೆ: ಆನಂತರಾಮ ಉಪಾಧ್ಯಾಯ, ವಾಸ:ಭಾರ್ಗವಿ ಫ್ಯಾಶನ್‌, ಎಸ್‌ಎಮ್‌ಎಸ್‌ಪಿ ಕಾಂಪ್ಲೆಕ್ಸ್‌, ಉಡುಪಿ 2. ನಾಗರಾಜ ಉಪಾಧ್ಯಾ, ತಂದೆ: ಹರಿದಾಸ ಉಪಾಧ್ಯಾಯ, ವಾಸ:ಭಾರ್ಗವಿ ಫ್ಯಾಶನ್‌, ಎಸ್‌ಎಮ್‌ಎಸ್‌ಪಿ ಕಾಂಪ್ಲೆಕ್ಸ್‌, ಉಡುಪಿ 3. ಶ್ರಿಕಾಂತ ಉಪಾಧ್ಯಾಯ, ತಂದೆ: ಹರಿದಾಸ ಉಪಾಧ್ಯಾಯ, ವಾಸ:ಭಾರ್ಗವಿ ಫ್ಯಾಶನ್‌, ಎಸ್‌ಎಮ್‌ಎಸ್‌ಪಿ ಕಾಂಪ್ಲೆಕ್ಸ್‌, ಉಡುಪಿ ಇವರುಗಳು ಆಪಾದಿತರಾಗಿರುತ್ತಾರೆ. 1 ನೇ ಆರೋಪಿ ಸಂಸ್ಕ್ರತ ವಿದ್ವಾಂಸರಾಗಿದ್ದು ಪಿರ್ಯಾದುದಾರರ ಪರಿಚಯದವರಾಗಿರುತ್ತಾರೆ. ಅಲ್ಲದೇ ಭಾರ್ಗವಿ ಫ್ಯಾಶನ್ಸ್ ಸಂಸ್ಥೆಯ ಮಾಲಕರಾಗಿರುತ್ತಾರೆ. 2 ಮತ್ತು 3 ನೇ ಆರೋಪಿತರು 1 ನೇ ಆರೋಪಿಯ ಮಕ್ಕಳಾಗಿರುತ್ತಾರೆ. ಪಿರ್ಯಾದುದಾರರು ಆರೋಪಿ 1 ನೇ ರವರಲ್ಲಿ ಅವರು ಸಂಪಾದನೆ ಮಾಡಿದ ಹಣವನ್ನು ಹೂಡಿಕೆ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದು, 1 ನೇ ಆರೋಪಿತರು ಪಿರ್ಯಾದುದಾರರಲ್ಲಿ ಅವರ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವಂತೆಯೂ, ಉತ್ತಮ ಬಡ್ಡಿಯೊಂದಿಗೆ  ಹಿಂತಿರುಗಿಸುವುದಾಗಿ ಹೇಳಿದ್ದು ಅದರಂತೆ ಪಿರ್ಯಾದುದಾರರು ದಿನಾಂಕ:12/10/99ರಂದು 20,000/- ಹಾಗೂ ದಿ.18-12-01ರಂದು 2,00,000/- ರೂಪಾಯಿ ಹಣವನ್ನು ಹೂಡಿಕೆ ಮಾಡಿರುತ್ತಾರೆ. ಈ  ಬಗ್ಗೆ 1 ನೇ ಆರೋಪಿಯು ಪ್ರೊಮಿಸರಿ ನೋಟ್ ಕೊಟ್ಟಿದ್ದು, 2 ಮತ್ತು 3 ನೇ ಆರೋಪಿತರು ಪ್ರೊಮಿಸರಿ ನೋಟನಲ್ಲಿ ಸಾಕ್ಷಿದಾರರಾಗಿ ಸಹಿಯನ್ನು ಮಾಡಿರುತ್ತಾರೆ. ನಂತರ ಪಿರ್ಯಾದುದಾರರು ಆರೋಪಿತರಲ್ಲಿ ಹಣವನ್ನು ಹಿಂತಿರುಗಿಸುವಂತೆ ಕೇಳಿದಾಗ ಆರೋಪಿತರು ವ್ಯವಹಾರದಲ್ಲಿ ನಷ್ಟ ಉಂಟಾಗಿರುತ್ತದೆ ಹಾಗೂ  ಅವರ ಜಾಗವು ಸಿವಿಲ್ ನ್ಯಾಯಾಲಯದಲ್ಲಿ ಎಟ್ಯಾಚ್ ಆಗಿರುತ್ತದೆ. ಎಂಬುದಾಗಿ ತಿಳಿಸಿರುತ್ತಾರೆ.  ಆರೋಪಿಗಳೆಲ್ಲರೂ ಸೇರಿಕೊಂಡು ಪಿರ್ಯಾದುದಾರರಿಗೆ ಮೋಸ ಮಾಡಿರುತ್ತಾರೆ ಎಂಬಿತ್ಯಾದಿ.  ಬಗ್ಗೆ ರಘುಪತಿ ಆಚಾರ್ಯ ಇವರು ನೀಡಿದ ಖಾಸಗಿ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 250/13 ಕಲಂ 403,406,417,420 422 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಬೆದರಿಕೆ ಪ್ರಕರಣ 
  • ಕೋಟ: ದಿನಾಂಕ 22/05/2013 ರಂದು ರಾತ್ರಿ 10:00 ಗಂಟೆ ಸುಮಾರಿಗೆ ಆರೋಪಿತರಾದ ಸೂರಜ್ ಕುಮಾರ್ ಹಾಗೂ ಇನ್ನೋರ್ವ ವ್ಯಕ್ತಿ ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದ ಹಾಡಿ ಮನೆ ಎಂಬಲ್ಲಿರುವ ಎಂ.ಸದಾರಾಮ ಶೆಟ್ಟಿ ತಂದೆ: ಮಹಾಬಲ ಶೆಟ್ಟಿ ವಾಸ: ಹಾಡಿ ಮನೆ ಮಲ್ಯಾಡಿ ತೆಕ್ಕಟ್ಟೆ ಗ್ರಾಮ ಕುಂದಾಪುರ ತಾಲೂಕು ಇವರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದದಿಂದ ಬೈದು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಬಗ್ಗೆ ಎಂ.ಸದಾರಾಮ ಶೆಟ್ಟಿ ಇವರು ನೀಡಿದ ದೂರಿನಂತೆ ಕೋಟ  ಠಾಣಾ ಅಪರಾಧ ಕ್ರಮಾಂಕ 140/2013 ಕಲಂ 447 504 506 ಜೊತಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: