Thursday, May 23, 2013

Daily Crime Reported As On 23/05/2013 At 07:00 Hrs

ಅಪಘಾತ ಪ್ರಕರಣಗಳು
  • ಕುಂದಾಪುರ: ದಿನಾಂಕ 22/05/2013 ರಂದು ರಾತ್ರಿ  8:10 ಗಂಟೆಗೆ ಕುಂದಾಪುರ ತಾಲೂಕಿನ   ಹೆಮ್ಮಾಡಿ ಗ್ರಾಮದ ಮುವತ್ತು ಮುಡಿ ಬಳಿ ರಾ.ಹೆ 66 ರಲ್ಲಿ ಆಪಾದಿತ ಹೆಚ್‌  ದುರ್ಗಾ ಎಂಬವರು ತಮ್ಮ ಕೆಎ 20739ನೇ ಮಿನಿ ಬಸ್ ನ್ನು ತ್ರಾಸಿ  ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗದಿಂದ ಚಲಾಯಿಸಿಕೊಂಡು ಬಂದು ಕುಂದಾಪುರ ಕಡೆಯಿಂದ ತ್ರಾಸಿ ಕಡೆಗೆ ಸುಕುಮಾರ ಶೆಟ್ಟಿ  ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಕೆಎ 20 ಇಬಿ 5341ನೇ ಮೋಟಾರ್ ಸೈಕಲ್‌  ಗೆ ನಿರ್ಲಕ್ಷತನದಿಂದ ಎದುರುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ಸವಾರ ಸುಕುಮಾರ ಶೆಟ್ಟಿ ಹಾಗೂ ಹಿಂದೆ ಕುಳಿತ ಜಯಲಕ್ಷ್ಮಿ ಗಾಯಗೊಂಡು ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದವರು, ಸುಕುಮಾರ ಶೆಟ್ಟಿರವರು ಪ್ರಥಮ ಚಿಕಿತ್ಸೆ  ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ  ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ಹೋಗಿದ್ದು ಜಯಲಕ್ಷ್ಮಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ  ಒಳ ರೋಗಿಯಾಗಿ ದಾಖಲಾಗಿರುತ್ತಾರೆ  ಎಂಬುದಾಗಿ ಪಿರ್ಯಾದಿದಾರರಾದ ಆನಂದ (32), ತಂದೆ  ಗಣಪಪೂಜಾರಿ, ವಾಸ ಸೌಡ ರಸ್ತೆ, ಜಡ್ಡಿನಬೈಲು, ಹಾರ್ದಳ್ಳಿ ಮಂಡಳ್ಳಿ ಗ್ರಾಮ, ಕುಂದಾಪುರ ತಾಲೂಕು ಇವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 41/2013  ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಶಂಕರನಾರಾಯಣ: ದಿನಾಂಕ 22/05/2013 ರಂದು ಬೆಳಿಗ್ಗೆ 09:45 ಗಂಟೆಗೆ ಕುಂದಾಪುರ ತಾಲೂಕು ವಂಡ್ಸೆ ಹೋಬಳಿಯ ಅಂಪಾರು ಗ್ರಾಮದ ಅಂಪಾರು ಎಂಬಲ್ಲಿ ಕೆಎ 06ಬಿ 8179 ಮಿನಿ ಬಸ್‌ನ್ನು ಅದರ ಚಾಲಕ ಮಹದೇವ ಸ್ವಾಮಿ ಇವರು ಶಂಕರನಾರಾಯಣ ಕಡೆಯಿಂದ ಕೊಲ್ಲೂರು  ಕಡೆಗೆ ಹಾಗೂ ಕೆಎ 257769 ನೇ ನಂಬ್ರದ ಲಾರಿಯನ್ನು ಅದರ ಚಾಲಕ ಬಾಬುರವರು ಕುಂದಾಪುರ ಕಡೆಯಿಂದ ಸಿದ್ದಾಪುರ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆ ಹಾಗೂ ಮಾನವನ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಮುಂದೆ ಜಂಕ್ಷನ್‌ನ ಇದ್ದದನ್ನು ಲೆಕ್ಕಿಸದೇ 2 ವಾಹನದ ಚಾಲಕರು ಚಲಾಯಿಸಿಕೊಂಡು ಜಂಕ್ಷನ್‌ ಮದ್ಯದಲ್ಲಿ ಪರಸ್ಪರ ಡಿಕ್ಕಿ ಹೊಡೆದು ಅಪಘಾತ ಪಡಿಸಿ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಾದ 1.) ದೊರೆರಾಜ್‌ (45), 2) ಶಿವ (10), 3) ಕಣ್ಣಮ್ಮ (45), 4) ಹಳಗಮ್ಮ ( 35 ), 5) ಸಿ. ಸೆಲ್ಲನ್‌ (65) , 6) ಕಲ್ಯಾಣಿ (47), 7) ಬಸ್‌ ಕ್ಲಿನರ್‌ ಬಸವರಾಜ್‌ (28), 8)  ಚೆನ್‌ಬಗಂ (24) 9) ಮುನಿಯಮಾಲ್‌ (45), 10) ಎಸ್‌.ಗುಣ ( 37), 11) ಪೆರೂಮ (40), 12) ಗಿಣಿಯಮ್ಮ (61), 13.) ಪಳಿನಿಯಮ್ಮ (38), 14) ಸಿ. ಪೊನ್ನು ಸ್ವಾಮಿ (59), 15) ಕರನಿಯಮ್ಮ (60), 16) ಸುಂದರಿ (47) ,17)  ಬಿ. ಸೆಲ್ಲನ್‌ (60), 18) ಅಮುದಾ (42) 19) ಶ್ರೀ ರಾಮ್‌(15), 20) ಶ್ರೀದರ್‌ (17), 21) ಸಿಮಾನ್‌ (42), 22) ವೆಡಿಯಪ್ಪನ್‌ (37) 23) ಪಿ. ಲಕ್ಷ್ಮಿ (47 ) ಇವರುಗಳಿಗೆ ಸಾಧ ಹಾಗೂ ಕೆಲವರಿಗೆ ಬಾರಿ ಗಾಯವನ್ನು ಉಂಟು ಮಾಡಿ ಅಪರಾದವೆಸಗಿರುತ್ತಾರೆ. ಈ ಅಪಘಾತದಲ್ಲಿ ಲಾರಿ ಚಾಲಕ ಕೂಡಾ ಗಾಯಗೊಂಡಿದ್ದು ವಾಹನಗಳು ಜಖಂ ಗೊಂಡಿರುತ್ತದೆ ಎಂಬುದಾಗಿ ಶಂಕರನಾರಾಯಣ ಠಾಣಾ ಉಪನಿರೀಕ್ಷಕರಾದ ಸಾಯಿನಾಥ ರಾಣೆ ಇವರು ನೀಡಿದ ದೂರಿನಂತೆ ಠಾಣಾ ಅಪರಾಧ ಕ್ರಮಾಂಕ 67/13  ಕಲಂ  279, 337, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವರಧಕ್ಷಿಣೆ ಕಿರುಕುಳ ಹಾಗೂ ಜೀವ ಬೆದರಿಕೆ ಪ್ರಕರಣ
  • ಕಾಪು: ಪಿರ್ಯಾದಿದಾರರಾದ ಸುನಂದ (32), ವಾಸ: ಪಡುಯೆಣಗುಡ್ಡೆ ಗ್ರಾಮ ಉಡುಪಿ ತಾಲೂಕು ಇವರು ದಿನಾಂಕ 27/01/1999 ರಂದು ಆರೋಪಿ ಹರೀಶ್, ತಂದೆ ದಿ. ಶಂಕರ ಕುಂದರ್, ವಾಸ ಉಧ್ಯಾವರ ಸೇತುವೆ ಬಳಿ ಉಧ್ಯಾವರ ಗ್ರಾಮ ಇವರನ್ನು ಮಧುವೆಯಾಗಿದ್ದು ನಂತರದ ದಿನಗಳಲ್ಲಿ ಆರೋಪಿಯು ಸುನಂದರವರನ್ನು ತನ್ನ ಮನೆಗೆ ಕರೆದುಕೊಂಡು ಹೋಗದೇ ತವರು ಮನೆಯಲ್ಲಿಯೇ ಬಿಟ್ಟಿದ್ದು, ನೀನು ನನಗೆ ಸರಿಯಾದ ಹುಡುಗಿಯಲ್ಲ ನೀನು ನನ್ನನ್ನು ಬಿಟ್ಟು ಹೋಗು ಎಂದು ಯಾವಾಗಲೂ ಮಾನಸಿಕ ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಕೈಗಳಿಂದ ಹೊಡೆಯುತ್ತಿದ್ದುದಾಗಿದೆ. ಆರೋಪಿಯ ಈ ವರ್ತನೆಯಿಂದ ಬೇಸತ್ತ ಸುನಂದರವರು ಆತನಿಂದ ಜೀವನಾಂಶ ಮತ್ತು ವಿಚ್ಚೇದನ ಪಡೆಯಲು ಉಡುಪಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಎಮ್.ಸಿ. ನಂಬ್ರ 79/2012 ರಂತೆ ಪ್ರಕರಣ ದಾಖಲಿಸಿದ್ದು, ಅಲ್ಲದೇ ದಿನಾಂಕ 20/05/2013 ರಂದು ಆರೋಪಿ  ಹರೀಶ್ ರವರು ಸುನಂದರವರ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ನೀನು 3 ಲಕ್ಷ ರೂಪಾಯಿ ಕೊಡಬೇಕು ಇಲ್ಲವಾದಲ್ಲಿ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂಬುವುದಾಗಿ ಬೆದರಿಕೆ ಒಡ್ಡಿರುತ್ತಾರೆ ಎಂಬುದಾಗಿ ಸುನಂದ ಇವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 146/2013 ಕಲಂ 498(ಎ), 504, 323, 506, ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅನುಮಾನಾಸ್ಪದ ವ್ಯಕ್ತಿಗಳ ಬಂಧನ
  • ಕಾರ್ಕಳ: ಕಾರ್ಕಳ ನಗರ ಪೊಲೀಸ್‌ ಠಾಣಾ ಪೊಲೀಸ್‌ ಉಪ ನಿರೀಕ್ಷಕರು ಇಲಾಖಾ ವಾಹನದಲ್ಲಿ ತಮ್ಮ ಸಿಬ್ಬಂದಿಯವರೊಂದಿಗೆ ದಿನಾಂಕ 22/05/2013ರಂದು ರೌಂಡ್ಸ್‌ ಕರ್ತವ್ಯವನ್ನು ನಿರ್ವಹಿಸುತ್ತಾ, 19:30 ಗಂಟೆ ಸುಮಾರಿಗೆ ಕುಕ್ಕುಂದೂರು ಗ್ರಾಮದ ನಕ್ರೆ ಜಂಕ್ಷನ್‌ ಬಳಿ ತಲುಪಿದಾಗ, ನಕ್ರೆ ಜಂಕ್ಷನ್‌ ಬಳಿ ರಾಜ್ಯ ಹೆದ್ದಾರಿ ಬದಿಯಲ್ಲಿರುವ ಮಣ್ಣು ಕಚ್ಛಾ ರಸ್ತೆಯ ಮೇಲೆ ಮೋಟಾರು ಸೈಕಲ್ಲೊಂದು ನಿಲ್ಲಿಸಿದ ಸ್ಥಿತಿಯಲ್ಲಿದ್ದು, ಅದರ ಪಕ್ಕದಲ್ಲಿಯೇ ಯುವಕರಿಬ್ಬರು ನಿಂತುಕೊಂಡಿದ್ದ ಆಪಾದಿತರುಗಳಾದ 1). ಅಜೀಜ್‌ ಅಹಮ್ಮದ್‌ ಬಾವಾ, (28), ತಂದೆ ದಿವಂಗತ ಇಸ್ಮಾಯಿಲ್‌, ವಾಸ ಕಾಂತರಬೆಟ್ಟು ಹೌಸ್‌, ಉಲಾಯಿಬೆಟ್ಟು ಅಂಚೆ, ಗುರುಪುರ ಗ್ರಾಮ, ಮಂಗಳೂರು ತಾಲೂಕು. 2). ನೌಶಿದ್‌, (22), ತಂದೆ ಅಬ್ದುಲ್ ರಜಾಕ್‌, ಕಾಂತರಬೆಟ್ಟು ಹೌಸ್‌, ಉಲಾಯಿಬೆಟ್ಟು ಅಂಚೆ, ಗುರುಪುರ ಗ್ರಾಮ, ಮಂಗಳೂರು ತಾಲೂಕು ಇವರುಗಳು ರಾಜ್ಯ ಹೆದ್ದಾರಿಯಲ್ಲಿ ತೆರಳುತ್ತಿದ್ದ ನಮ್ಮ ಪೊಲೀಸ್‌ ವಾಹನವನ್ನು ಕಂಡು ತಮ್ಮ ಇರುವಿಕೆಯನ್ನು ಮರೆ ಮಾಚುವ ಉದ್ದೇಶದಿಂದ ಹಿಂದೆ ಸರಿದು ಮೂತ್ರ ಶಂಕೆ ಮಾಡುವವರಂತೆ ನಟಿಸಿದ್ದು, ಇದನ್ನು ಕಂಡು ಅವರ ಬಳಿಗೆ ತೆರಳಿ ವಿಚಾರಣೆ ನಡೆಸಿದಲ್ಲಿ ಅವರಿಬ್ಬರೂ ಸದರಿ ಸ್ಥಳದಲ್ಲಿ ತಮ್ಮ ಉಪಸ್ಥಿತಿಯ ಬಗ್ಗೆ ಹಾಗೂ ತಮ್ಮ ಜೊತೆಯಲ್ಲಿರುವ ಮೋಟಾರು ಸೈಕಲ್ಲಿನ ಬಗ್ಗೆ ಯಾವುದೇ ಸಮರ್ಪಕವಾದ ಉತ್ತರವನ್ನು ನೀಡದೇ ಇದ್ದ ಕಾರಣ ಸದರಿಯವರಿಬ್ಬರೂ ಯಾವುದೋ ಬೇವಾರಂಟು ತಕ್ಷೀರನ್ನು ನಡೆಸುವ ಇರಾದೆಯಿಂದ ಸದರಿ ಸ್ಥಳದಲ್ಲಿ ಇರುವುದಾಗಿ ಸಂಶಯಗೊಂಡು, ಅವರಿಬ್ಬರನ್ನು ಹಾಗೂ ಜೊತೆಯಲ್ಲಿದ್ದ ಮೋಟಾರು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಪ್ರಕರಣ ದಾಖಲಿಸಿದ್ದಾಗಿದೆ ಈ ಬಗ್ಗೆ ಠಾಣಾ ಅಪರಾಧ ಕ್ರಮಾಂಕ 66/2013 ಕಲಂ 96 (ಬಿ) ಕರ್ನಾಟಕ ಪೊಲೀಸ್‌ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: