Thursday, May 23, 2013

Daily Crime Reports As on 23/05/2013 At 19:30 Hrs



ಅಪಘಾತ ಪ್ರಕರಣ
  • ಕೋಟ: ದಿನಾಂಕ 23/05/2013 ರಂದು ಪಿರ್ಯಾದಿ  ಕೃಷ್ಣ ಪಾಟೀಲ್ 28 ವರ್ಷ ತಂದೆ: ಮಹದೇವ ಮಾರುತಿ ಪಾಟೀಲ್ ವಾಸ: ಜವೆಲೇ ಗ್ರಾಮ ಕಂಡಾರ ತಾಲೂಕು ಸತಾರ್ ಜಿಲ್ಲೆ ಮಹಾರಾಷ್ಟ ರಾಜ್ಯ ಇವರು  ಎಂ.ಹೆಚ್-11 ಎ.ಎಲ್.-3739 ನೇ ಮಿನಿ ಲಾರಿಯನ್ನು ಪೂನದಿಂದ ಕೇರಳ ಕಡೆಗೆ ರಾ.ಹೆ. 66 ರಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಉಡುಪಿ ತಾಲೂಕು ಗುಂಡ್ಮಿ ಗ್ರಾಮದ ಚೇಂಪಿ ದೇವಸ್ಥಾನದ ಎದುರು ತಲುಪುವಾಗ್ಯೆ ಸಮಯ ಸುಮಾರು 11:30 ಗಂಟೆಗೆ ಆರೋಪಿಯು ಕೆ.ಎ.47-1552 ನೇ ಟಿಪ್ಪರನ್ನು ಉಡುಪಿ ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರು ಚಲಾಯಿಸುತ್ತಿದ್ದ ಮಿನಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ತೀವ್ರ ಸ್ವರೂಪದ ಪೆಟ್ಟಾಗಿದ್ದು ಮಿನಿ ಲಾರಿಯಲ್ಲಿದ್ದ ಕ್ಲಿನರ್ ಮನೋಹರ್ ಗುರಾವ್, ಪಿರ್ಯಾದಿದಾರರ ಪತ್ನಿ ಶುಭಾಂಗಿ ಹಾಗೂ ಮಗಳು ಗೌರಿ ಎಂಬವರಿಗೆ ಸಾದಾ ಸ್ವರೂಪದ ಪೆಟ್ಟಾಗಿದ್ದಾಗಿದೆ. ಬಗ್ಗೆ ಕೃಷ್ಣ ಪಾಟೀಲ್ ಇವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 141/2013 ಕಲಂ 279, 337, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕುಂದಾಪುರ: ದಿನಾಂಕ 23/05/2013 ರಂದು ಸಮಯ ಸುಮಾರು  ಮಧ್ಯಾಹ್ನ 1:20   ಗಂಟೆಗೆ ಕುಂದಾಪುರ ತಾಲೂಕಿನ   ಹಂಗಳೂರು   ಗ್ರಾಮದ  ಮಸೀದಿಯ ಬಳಿ  ರಾ.ಹೆ 66 ರಲ್ಲಿ    ಆಪಾದಿತ ಸಂತೋಷ ಆಚಾರ್ಯ ಎಂಬವರು KA 20 N 7597  ನೇ ಕಾರನ್ನು   ಕೋಟೇಶ್ವರ ಕಡೆಯಿಂದ ಕುಂದಾಪುರ ಕಡೆಗೆ   ವೇಗದಿಂದ ಹಾಗೂ ದುಡುಕಿನಿಂದ  ಚಲಾಯಿಸಿಕೊಂಡು ಬಂದು,  ಪಿರ್ಯಾದಿ ಎಮ್ ಸುಬ್ಬರಾಯ ಪೈ  ತಂದೆ: ದಿ ಗೋಪಾಲ ರೈ  ವಾಸ: ರುಕ್ಮಿಣಿ ನಿಲಯ , ಕೋಡಿ ರಸ್ತೆ ಹಂಗಳೂರು  ಗ್ರಾಮ,  ಕುಂದಾಪುರ ತಾಲೂಕು ಎಂಬವರು KA20-K-3987 ನೇ ದ್ವಿ ಚಕ್ರ ವಾಹನದಲ್ಲಿ, ಸರ್ವಿಸ್ ರಸ್ತೆ  ಡಿವೈಡರ್ ಬದಿಯಿಂದ ಸೂಚನೆ ನೀಡಿ ರಾ.ಹೆ  ರಸ್ತೆಗೆ ಪ್ರವೇಶಿಸಿ ರಾ.ಹೆಯಿಂದಾಗಿ ಕುಂದಾಪುರ ಕಡೆಗೆ ಸವಾರಿಮಾಡಿಕೊಂಡು ಹೋಗುತ್ತಿದ್ದ ವಾಹನದ ಎಡಬದಿಗೆ ಡಿಕ್ಕಿ ಹೊಡೆದ  ಪರಿಣಾಮ,  ಪಿರ್ಯಾದಿ ಹಾಗೂ ಹಿಂದೆ ಕುಳಿತ್ತಿದ್ದ  ಅವರ ಹೆಂಡತಿ ಶಾಲಿನಿ ಗಾಯಗೊಂಡು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ  ಒಳ ರೋಗಿಯಾಗಿದಾಖಲಾಗಿರುತ್ತಾರೆ. ಈ ಬಗ್ಗೆ ಎಮ್ ಸುಬ್ಬರಾಯ ಪೈ  ವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 42/2013 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಅಸ್ವಾಭಾವಿಕ ಮರಣ ಪ್ರಕರಣ  
  • ಪ್ರಶಾಂತ್ ಶೆಟ್ಟಿ ತಂದೆ:ಗುಂಡು ಶೆಟ್ಟಿ ವಾಸ: ಉಳ್ತೂರು ಗ್ರಾಮ ಕುಂದಾಪುರ ತಾಲೂಕು ಇವರ ಚಿಕ್ಕಮ್ಮನ ಮಗ ಸುರೇಂದ್ರ(41) ಎಂಬವರು ಕೆಲಸವಿಲ್ಲದೆ ಮನೆಯಲ್ಲಿಯೇ ಇದ್ದಿದ್ದು ಹಾಗೂ ವಿಪರೀತ ಮದ್ಯವಸನಿಯಾಗಿದ್ದು, ಮಧ್ಯ ಸೇವಿಸಲು ಹಣವಿಲ್ಲದೆ ಕೊರಗುತ್ತಿದ್ದು ಇದೇ ವೇದನೆಯಿಂದ ದಿನಾಂಕ 19/05/2013 ರಂದು ರಾತ್ರಿ 8:00 ಗಂಟೆಗೆ ಮನೆಯ ಕೋಣೆಯಲ್ಲಿ ಯಾವುದೇ ವಿಷ ಪದಾರ್ಥ ಸೇವಿಸಿದ್ದವರನ್ನು ಚಿಕಿತ್ಸೆಯ ಬಗ್ಗೆ ಕೆಎಮ್‌ಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 23/05/2013 ರಂದು ರಾತ್ರಿ 02:30 ಗಂಟೆಗೆ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಪ್ರಶಾಂತ್ ಶೆಟ್ಟಿ ಇವರು ನೀಡಿದ ದೂರಿನಂತೆ ಕೋಟ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 19/13 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ವರದಕ್ಷಣೆ ಕಿರುಕುಳ ಪ್ರಕರಣ 
  • ಬೈಂದೂರು: ಪಿರ್ಯಾದಿ ಶ್ರೀಮತಿ ರಾಧ(33)  ಗಂಡ:ಗಣೇಶ ದೇವಾಡಿಗ ವಾಸ:ಹೆಬ್ಬಾಗಿಲುಮನೆ, ನಾಯ್ಕನಕಟ್ಟೆ, ಕೆರ್ಗಾಲ್ ಗ್ರಾಮ  ಇವರು ದಿನಾಂಕ: 02/05/1996 ರಂದು ಆರೋಪಿತರಾದ ಗಣೇಶ ದೇವಾಡಿಗ (38) ತಂದೆ:ನಾರಾಯಣ ದೇವಾಡಿಗ ವಾಸ: ಚಾರ್ ಕೊಡ್ಲುಹಿತ್ಲು, ಬಿಜೂರು ಗ್ರಾಮ ಕುಂದಾಪುರ ತಾಲೂಕು ಇವರೊಂದಿಗೆ ಉಪ್ಪುಂದ ಗ್ರಾಮದ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದು, ಆರೋಪಿಯು ಮದುವೆಯ ಪೂರ್ವದಲ್ಲಿ 20,000/- ವರದಕ್ಷಿಣೆ ರೂಪದಲ್ಲಿ ಒತ್ತಾಯಪೂರ್ವಕದಲ್ಲಿ ಹಣ ಪಡೆದಿದ್ದು, ಮದುವೆಯ ನಂತರ ಆರೋಪಿಯು ಪಿರ್ಯಾದಿದಾರರ ತಾಯಿಯ ಮನೆಯಲ್ಲಿಯೇ ಇದ್ದು, ಟೈಲರ್ ಕೆಲಸ ಮಾಡಿಕೊಂಡಿದ್ದು, ಇವರಿಬ್ಬರ ವೈವಾಹಿಕ ಜೀವನದಲ್ಲಿ ಇಬ್ಬರು ಹೆಣ್ಣುಮಕ್ಕಳು ಜನಿಸಿದ್ದು,  ಆರೋಪಿಯ  1 ವರ್ಷ ಪಿರ್ಯಾದಿದಾರರನ್ನು ತಕ್ಕಮಟ್ಟಿಗೆ ನೋಡಿಕೊಂಡಿದ್ದು, ಆ ನಂತರದ ದಿನಗಳಲ್ಲಿ ಮದ್ಯಪಾನ ಮಾಡಿ ಬಂದು ಕೈಗಳಿಂದ ಹೊಡೆದು, ಸದಾಕಾಲ ಬೈದು ಮಾನಸಿಕ ಹಿಂಸೆ ನೀಡುತ್ತಿದ್ದು, ಪಿರ್ಯಾದಿದಾರರು ಹಾಗೂ ಅವರ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳದೇ ಇದ್ದು, ಮನೆ ಖರ್ಚಿಗೆ ಏನನ್ನೂ ಸಹ ನೀಡದೇ ಇದ್ದು, ಪಿರ್ಯಾದಿದಾರರ ತಂದೆ-ತಾಯಿಯವರಿಗೆ ಕೂಡಾ ಬೈದು ಹೊಡೆದಿರುತ್ತಾರೆ. ಈವರೆಗೆ ಪಿರ್ಯಾದಿದಾರರು ತನ್ನ ಗಂಡ ಹಾಗೂ ಮಕ್ಕಳ ಜೊತೆ ತನ್ನ ತಾಯಿ ಮನೆಯಾದ ಕೆರ್ಗಾಲ್ ಗ್ರಾಮದ ನಾಯ್ಕನಕಟ್ಟೆ, ಹೆಬ್ಬಾಗಿಲುಮನೆ ಎಂಬಲ್ಲಿ ವಾಸವಾಗಿದ್ದು, ಇತ್ತೀಚೆಗೆ ಆರೋಪಿಯು ನೀಡುತ್ತಿರುವ ಹಿಂಸೆ ಜಾಸ್ತಿಯಾಗುತ್ತಿದ್ದು, ಪಿರ್ಯಾದಿದಾರರನ್ನು ಹಾಗೂ ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿರುತ್ತಾನೆ ಎಂಬಿತ್ಯಾದಿ. ಬಗ್ಗೆ ಶ್ರೀಮತಿ ರಾಧ ಇವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 160/2013 ಕಲಂ: 498(ಎ), 323, 504,506 ಐಪಿಸಿ ಮತ್ತು 3, 4 ವರದಕ್ಷಿಣೆ ನಿಷೇಧ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: