Wednesday, May 01, 2013

Daily Crime Reported on 01/05/2013 at 17:00 Hrs

ಅಸ್ವಾಭಾವಿಕ ಮರಣ ಪ್ರಕರಣಗಳು
  • ಬ್ರಹ್ಮಾವರ: ನಾಗಮ್ಮ (24) ತಂದೆ ನಾರಾಯಣ ವಾಸ ಬಳ್ಕಿ ಅಂಚೆ ಮತ್ತು ಗ್ರಾಮ, ಭಟ್ಕಳ ತಾಲೂಕು ಎಂಬವರು ಉಡುಪಿ ತಾಲೂಕು ಬ್ರಹ್ಮಾವರ ಠಾಣಾ ವ್ಯಾಪ್ತಿಯ ಹಲುವಳ್ಳಿ ಗ್ರಾಮದ ರತ್ನಾವತಿ ಶೆಟ್ಟಿರವರ ಮನೆಯಲ್ಲಿ 4 ವರ್ಷದಿಂದ ಮನೆ ಕೆಲಸ ಮಾಡಿಕೊಂಡಿದ್ದವರಿಗೆ 3 ದಿನದಿಂದ ಜ್ವರ ಬಂದಿದ್ದು ದಿನಾಂಕ 21/04/2013 ರಂದು 7:00 ಗಂಟೆಗೆ ತಲೆಸುತ್ತಿ ಬಿದ್ದು ಆಸ್ಪತ್ರೆಗೆ ದಾಖಲಿಸಿದ್ದು, ನಾಗಮ್ಮ ಅರಿಶಿನ ಮುಂಡಿಗೆ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 01/05/2013 ರಂದು 05:00 ಗಂಟೆಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಮೃತ ಪಟ್ಟಿರುವುದಾಗಿದೆ ಎಂಬುದಾಗಿ ನಾರಾಯಣ (35) ತಂದೆ ನಾಗಪ್ಪ ವಾಸ ಅಂಗಡಿ ಮನೆ ಬಳ್ಕಿ ಅಂಚೆ ಮತ್ತು ಗ್ರಾಮ ಭಟ್ಕಳ ತಾಲೂಕು ಉತ್ತರಕನ್ನಡ ಜಿಲ್ಲೆ ಎಂಬವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 25/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಶಿರ್ವಾ: ಉಡುಪಿ ತಾಲೂಕು ಕುರ್ಕಾಲು ಗ್ರಾಮದ ಕುರ್ಕಾಲು ಪುಲೇದು ಮೇಲ್ಮನೆ ಎಂಬಲ್ಲಿ ವಾಸವಾಗಿರುವ ಪ್ರಾಯ ಸುಮಾರು 70 ವರ್ಷದ ನೇತ್ರಾವತಿ ಶೆಟ್ಟಿಯವರು ಹಲವಾರು ವರ್ಷಗಳಿಂದ ಕಾಲು ನೋವಿನ ಅಸೌಖ್ಯದಿಂದ ಬಳಲುತಿದ್ದು ಈ ಬಗ್ಗೆ ಚಿಕಿತ್ಸೆ ಪಡೆಯುತಿದ್ದವರು ಗುಣವಾಗದ ಕಾಲು ನೋವಿನ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 30/04/2013 ರ ರಾತ್ರಿ ಸಮಯ ಮನೆಯ ಮಾಡಿನ ಜಂತಿಗೆ ಸೀರೆಯಿಂದ ಕುತ್ತಿಗೆ ನೇಣು ಹಾಕಿ ಮೃತಪಟ್ಟಿರುವುದಾಗಿದೆ ಎಂಬುದಾಗಿ ಶಿವರಾಮ ಶೆಟ್ಟಿ (65) ತಂದೆ ವಾಸು ಶೆಟ್ಟಿ ವಾಸ ಕುರ್ಕಾಲು ಪುಲೇದು ಮೇಲ್ಮನೆ ಕುರ್ಕಾಲು ಗ್ರಾಮ  ಉಡುಪಿ ತಾಲೂಕು ಎಂಬವರು ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 11/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: