Wednesday, May 01, 2013

Daily Crime Reported on 01/05/2013 at 07:00 Hrs

ಮಟ್ಕಾ ದಾಳಿ – ಓರ್ವನ ಬಂಧನ
  • ಕುಂದಾಪುರ: ದಿನಾಂಕ 30/04/2013  ರಂದು ಕುಂದಾಪುರ ಪೊಲೀಸ್ ಠಾಣೆಯ   ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ಜಯರಾಮ ಡಿ ಗೌಡರವರು ಠಾಣಾ ಸಿಬ್ಬಂದಿಗಳೊಂದಿಗೆ ವಡೇರಹೋಬಳಿ ಗ್ರಾಮದ ಕೆಇಬಿ ಕಚೇರಿಯ ಎದುರುಗಡೆ ಇರುವ ಗೂಡಂಗಡಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಸ್ವೀಕರಿಸಿಕೊಂಡು ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದಲ್ಲಿಗೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಶಂಕರ ನಾಯ್ಕ್ (44) ತಂದೆ ನಾರಾಯಣ ನಾಯ್ಕ್ ವಾಸ ಖಾರ್ವಿಕೇರಿ, ಕಸಬ ಕುಂದಾಪುರ ತಾಲೂಕು ಎಂಬಾತನನ್ನು ದಸ್ತಗಿರಿ ಮಾಡಿ ಆರೋಪಿತನಿಂದ ಆಟಕ್ಕೆ ಬಳಸಿದ  ರೂಪಾಯಿ  1025/- ನಗದು ಮಟ್ಕಾ ಆಟಕ್ಕೆ ಬಳಸಿದ ಇತರ ಪರಿಕರಗಳನ್ನು ಸ್ವಾದೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 186/2013 ಕಲಂ 78(1)(3) ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ
  • ಕುಂದಾಪುರ: ದಿನಾಂಕ 30/04/2013 ರಂದು ಮದ್ಯಾಹ್ನ 04:00 ಗಂಟೆಗೆ  ಪಿರ್ಯಾದಿದಾರರಾದ ಸತೀಶ (35) ತಂದೆ ದಿವಂಗತ ಶೀನ ಬಳೆಗಾರ ವಾಸ ಕಟ್ಕೇರಿ ಕೊಡ್ಲು, ದುರ್ಗಾ ನಿಲಯ, ಸೌರ್ಕೂರು, ಗುಲ್ವಾಡಿ ಗ್ರಾಮ, ಕುಂದಾಪುರ  ತಾಲೂಕು ಎಂಬವರು ಕೆಎ 20 ಯು 4473 ನೇ ಟಿವಿಎಸ್ ಸ್ಟಾರ ಸಿಟಿ ಮೋಟಾರ್ ಸೈಕಲಿನಲ್ಲಿ ಅವರ ಅಣ್ಣ ವಸಂತ  ಮತ್ತು ಅಣ್ಣನ ಮಗಳು 06 ವರ್ಷ ಪ್ರಾಯದ ಸುಕನ್ಯಳನ್ನು ಕರೆದುಕೊಂಡು ಕುಂದಾಪುರ ಕಡೆಗೆ ಹೋಗುತ್ತಿರುವಾಗ ಬಸ್ರೂರು ಪೇಟೆ ಬಳಿ ಮಾರ್ಗೋಳಿ ಕಡೆಯಿಂದ ಅಪರಿಚಿತ ಟಿಪ್ಪರ ಚಾಲಕನು ಟಿಪ್ಪರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರ ಬೈಕಗೆ ಡಿಕ್ಕಿ ಹೋಡೆದ ಪರಿಣಾಮ ಪಿರ್ಯಾದಿದಾರರಿಗೆ ಹಾಗೂ ಸಹ ಸವಾರರಾದ ವಸಂತ ಮತ್ತು ಸುಕನ್ಯಾಳಿಗೆ ರಕ್ತಗಾಯವಾಗಿರುತ್ತದೆ ಎಂಬುದಾಗಿ ಸತೀಶರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 188/2013 ಕಲಂ 279, 337 ಐ.ಪಿ.ಸಿ ಮತ್ತು 134 (ಎ)(ಬಿ) ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ನಡೆಸಿ ಜೀವ ಬೆದರಿಕೆ ನೀಡಿದ ಪ್ರಕರಣ
  • ಕುಂದಾಪುರ: ದಿನಾಂಕ 30/04/2013 ರಂದು ಬೆಳಿಗ್ಗೆ ಶ್ರೀಮತಿ ಅರುಣಾ (37) ಗಂಡ; ಸುರೇಶ ಬಿರಿ ವಾಸ; ಮಂಜುನಾಥ ನಿಲಯ, ಪಡಿಕೇರಿ, ಒಂಭತ್ತುದಂಡಿಗೆ, ಕಸಬಾ ಗ್ರಾಮ, ಕುಂದಾಪುರ ತಾಲೂಕು ಎಂಬವರು ಮನೆಯಲ್ಲಿ ಕೆಲಸಮಾಡಿಕೊಂಡಿರುವಾಗ ಅವರ ಗಂಡ ಸುರೇಶ ಬಿರಿ ಮತ್ತು ಅವರ ತಂಗಿ ನಿರ್ಮಲ ಎಂಬವರು ಮನೆ ಒಳಗೆ ಬಂದು ಅದರಲ್ಲಿ ನಿರ್ಮಲರವರು ಅವಾಚ್ಯ ಶಬ್ದಗಳಿಂದ ಬೈದು, ಇದು ನನ್ನ ಮನೆ ನೀನು ಮನೆ ಬಿಟ್ಟು ಹೋಗು ಎಂದು ತಾಮ್ರದ ಕೋಡಪಾನದಿಂದ ಪಿರ್ಯಾದಿದಾರರ ಮುಖಕ್ಕೆ ಹೊಡೆದಿದ್ದು ಇದರ ಪರಿಣಾಮ ಪಿರ್ಯಾದಿದಾರರ ಎಡ ತುಟಿಗೆ ರಕ್ತ ಗಾಯವಾಗಿರುತ್ತದೆ ಹಾಗೂ ಪಿರ್ಯಾದಿದಾರರ ಗಂಡ ತಲೆ ಕೂದಲು ಹಿಡಿದು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಪಿರ್ಯಾದಿದಾರರ ಕೆನ್ನೆಗೆ ಭಜಕ್ಕೆ ಹೋಡೆದಿದ್ದಲ್ಲದೇ ಮನೆ ಬಿಟ್ಟು ಹೋಗದಿದ್ದರೆ ನಿನ್ನನು ಕೊಲ್ಲದೇ ಬಿಡುವುದಿಲ್ಲವೇಂದು ಜೀವ ಬೆದರಿಕೆ ಹಾಕಿರುತ್ತಾರೆ, ಪಿರ್ಯಾದಿದಾರರು ತನ್ನ ಗಂಡ ಹಾಗೂ ಗಂಡನ ತಂಗಿಯ ಮೇಲೆ ಈ ಹಿಂದೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ ಬಗ್ಗೆ ಪಿರ್ಯಾದಿ ನೀಡಿದ್ದೇ ಈ ಘಟನೆಗೆ ಕಾರಣವಾಗಿರುತ್ತದೆ ಎಂಬುದಾಗಿ ಶ್ರೀಮತಿ ಅರುಣಾರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 187/2013 ಕಲಂ 324, 504, 506 ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹುಡುಗ ಕಾಣೆ ಪ್ರಕರಣ
  • ಹಿರಿಯಡ್ಕ: ದಿನಾಂಕ 28/4/2013 ರಂದು ಸಂಜೆ 18:30 ಗಂಟೆಗೆ ರಾಘವೇಂದ್ರ ಶೆಟ್ಟಿ ಪ್ರಾಯ 25 ವರ್ಷ ತಾಯಿ ಪ್ರೇಮ ಶೆಡ್ತಿ ವಾಸ ಮುಳ್ಳುಗುಜ್ಜಿ ಮನೆ, ಮದಗ, ಅತ್ರಾಡಿ ಅಂಚೆ ಮತ್ತು ಗ್ರಾಮ, ಉಡುಪಿ ತಾಲೂಕು ಎಂಬಾತನು ಅತ್ರಾಡಿ ಗ್ರಾಮದ ಮದಗ, ಮುಳ್ಳುಗುಜ್ಜಿ ಎಂಬಲ್ಲಿಂದ ಹಿರಿಯಡಕ ಶ್ರೀ ವೀರಭದ್ರ ದೇವಸ್ಥಾನದಲ್ಲಿ ನಡೆಯುವ ರಥೋತ್ಸವವನ್ನು ನೋಡಿ ಬರುವುದಾಗಿ ಮೋಟಾರು ಸೈಕಲ್ ನಂಬ್ರ ಕೆಎ 20ಇಸಿ 3247 ನೇದರಲ್ಲಿ ಹೋದವನು ಸ್ನೇಹಿತರ ಮನೆಗೂ ಹೋಗದೇ ವಾಪಾಸು ಮನೆಗೂ ಬಾರದೇ  ಕಾಣೆಯಾಗಿರುತ್ತಾನೆ ಎಂಬುದಾಗಿ ಜನಾರ್ಧನ ಕಾಮತ್ (50) ತಂದೆ: ವಿಠಲ ಕಾಮತ್, ವಾಸ: ಮುಳ್ಳುಗುಜ್ಜಿ ಮನೆ, ಮದಗ, ಅತ್ರಾಡಿ ಅಂಚೆ ಮತ್ತು ಗ್ರಾಮ, ಉಡುಪಿ ತಾಲೂಕು ಎಂಬವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 71/2013 ಕಲಂ ಹುಡುಗ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: