Wednesday, May 15, 2013

Daily Crime Reported As On 15/05/2013 At 17:00 Hrs



ಅಪಘಾತ ಪ್ರಕರಣ
  • ಶಿರ್ವಾ: ದಿನಾಂಕ 14/05/2013 ರಂದು 16:00 ಗಂಟೆಗೆ ಉಡುಪಿ ತಾಲೂಕು ಪಿಲಾರು ಗ್ರಾಮದ ಪಿಲಾರುಖಾನ ಎಂಬಲ್ಲಿ ಕಾರು ನಂಬ್ರ ಕೆಎ 19 ಎಂಎ 8281 ನ್ನು ಅದರ ಚಾಲಕ ಅಶ್ಪಕ್ ಅಹಮದ್ ಎಂಬಾತನು ಬೆಳ್ಮಣ್ ಕಡೆಯಿಂದ ಕಟಪಾಡಿ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ರಸ್ತೆ ಬದಿಯ ಮೋರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡು ಕಾರಿನಲ್ಲಿದ್ದ ಶ್ರೀಮತಿ ಶಾಜಿದಾ, ಗಂಡ ಸಯ್ಯದ್ ಜವಾದ್ ವಾಸ ಆಶ್ರಯ ಕಾಲನಿ, ವಾಮಂಜೂರು ಮಂಗಳೂರುರವರಿಗೆ ಅವರ ತಾಯಿ ಬೀಬಿಜಾನ್ ಮತ್ತು ಅತ್ತಿಗೆ ಶಾಜಿಯಾ ಎಂಬವರು ಸಾಮನ್ಯ ಸ್ವರೂಪದ ಗಾಯಗೊಂಡಿರುತ್ತಾರೆ. ಎಂಬುದಾಗಿ ಶ್ರೀಮತಿ ಶಾಜಿದಾರವರು ನೀಡಿದ ದೂರಿನಂತೆ ಶಿರ್ವಾ ಠಾಣೆಯಲ್ಲಿ ಅಪರಾಧ ಕ್ರಮಾಂಕ 47/13 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: