Wednesday, May 15, 2013

Daily Crime Reports As on 15/05/2013 At 07:00 Hrs

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ; 14.05.2013 ರಂದು ಸತೀಶ ಪ್ರಾಯ 48 ವರ್ಷ ತಂದೆ: ಶ್ಯಾಮರಾಯ ಆಚಾರ್ಯ.  ವಾಸ: 2 ನೇ ಅಡ್ಡ ರಸ್ತೆ ಕಾರ್ಕಳ ಕಸಬಾ ಗ್ರಾಮ ಕಾರ್ಕಳ ತಾಲೂಕು ಇವರು  ತನ್ನ  ಸ್ನೇಹಿತ ಚಂದ್ರಶೇಖರ ಎಂಬುವವರ ಜೊತೆ ತನ್ನ ಬಾಬ್ತು ಕೆ.ಎ-20 ಝಡ್ 547 ನೇ ಮಾರುತಿ ಸ್ವಿಪ್ಟ್ ಕಾರಿನಲ್ಲಿ ಬೆಂಗಳೂರಿಗೆ ಹೋರಟು  ಹೋಗುತ್ತಾ ಮದ್ಯಾಹ್ನ 12:45 ಘಂಟೆಯ ಸಮಯ  ಕಾರ್ಕಳ ತಾಲೂಕು ಈದು ಗ್ರಾಮದ ಹೊಸ್ಮಾರು ಪೇಟೆಕ್ಕಿಂತ  ಸ್ವಲ್ಪ ಮುಂದೆ  ಹೋಗುವಾಗ ಎದುರಿನಿಂದ ಅಂದರೆ ಗುರುವಾಯನಕರೆ ಕಡೆಯಿಂದ ಕಾಕಳದ ಕಡೆಗೆ ಕೆ.ಎ-29 ಎಮ್ 7298 ನೇ ಚವರ್ಲೇಟ್ ಕಾರನ್ನು ಅದರ ಚಾಲಕ ಸೈಯದ್ ಆಹಮ್ಮದ್ ಅತೀ ವೇಗ ಹಾಗೂ ಆಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅವರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ  ಎರಡು ವಾಹನಗಳು ಜಖಂಗೊಂಡಿದ್ದು  ಯಾರಿಗೂ ಯಾವುದೇ ಗಾಯಗಳಾಗಿರುವುದಿಲ್ಲ . ಬಗ್ಗೆ ಸತೀಶ ಇವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ  ಠಾಣಾ ಅಪರಾಧ ಕ್ರಮಾಂಕ 58/2013 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಉಡುಪಿ: ರಿತೇಶ್ (28)ತಂದೆ ತಿಮ್ಮಪ್ಪ ಬೆಲ್ತಡ ವಾಸ:ಶ್ರೀ ಭಗವತಿ ಪ್ರಸಾದ್ ಪಕ್ಷೀಕೆರೆ,ಪಂಜ ಅಂಚೆ ಮಂಗಳೂರು ಇವರು ಅವರ  ಸ್ನೇಹಿತನ  ಮದುವೆಯ ವಾರ್ಷಿಕೋತ್ಸವ  ಸಮಾರಂಭಕ್ಕೆ ನೇಜಾರಿಗೆ ಬರುತ್ತಿರುವಾಗ ದಿನಾಂಕ 14/05/2013 ರಂದು ಸಾಯಂಕಾಲ ಸಮಯ ಸುಮಾರು 17:00 ಗಂಟೆಗೆ ಬಲೈಪಾದೆ ಬಳಿ ತನ್ನ ಬಾಬ್ತು KA 19 EE 2239ನೇ ಪಲ್ಸರ್  ಬೈಕಿನಲ್ಲಿ ಅವರ ಚಿಕ್ಕಮ್ಮನ ಮಗಳಾದ ಕಾವ್ಯಳನ್ನು ಬೈಕಿನಲ್ಲಿ ಕುಳ್ಳಿರಿಸಿಕೊಂಡು ಎನ್ ಹೆಚ್ 66 ರಲ್ಲಿ ಚಾಲಾಯಿಸಿಕೊಂಡು ಬರುತ್ತಿರುವಾಗ ಉಡುಪಿ ಕಡೆಯಿಂದ ಕಾಪು ಕಡೆಗೆ ಎಮ್ ಎಮ್ ಎಸ್ ಬಸ್ಸು KA 20 A 5088  ನೇ ಅದರ ಚಾಲಕ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬೈಕಿನ ಎದುರು ಕಡೆಯಿಂದ  ಚಲಾಯಿಸಿಕೊಂಡು  ಬಲಗಡೆಯಿಂದ ಬಂದು ಬೈಕಿಗೆ  ಡಿಕ್ಕಿ ಹೊಡೆದನು ಪರಿಣಾಮ ಅವರು ಹಾಗೂ ಕಾವ್ಯಳು ಬೈಕ್ ಸಮೇತ ರಸ್ತೆಯ ಎಡಬದಿಗೆ ಬಿದ್ದು ಗಾಯಗೊಂಡಿರುವುದಾಗಿದೆ. ಈ ಬಗ್ಗೆ ರಿತೇಶ್ ಇವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 238/2013 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕುಂದಾಪುರ: ದಿನಾಂಕ 14/05/2013 ರಂದು ಸಮಯ ಸುಮಾರು  ರಾತ್ರಿ 8:00 ಗಂಟೆಗೆ ಕುಂದಾಪುರ ತಾಲೂಕಿನ   ಬೀಜಾಡಿ   ಗ್ರಾಮದ  ಬೈತುಲ್ಲಾ ಇಸ್ಮಾಯಿಲ್ ರವರ ಮನೆಯ ಬಳಿ , ರಾ.ಹೆ 66 ರಲ್ಲಿ ಆಪಾದಿತ ಸುಧೀರ ಎಂಬವರು KA20-EB-8310  ನೇ  ಮೋಟಾರ್ ಸೈಕಲ್‌  ಅನ್ನು   ಕೊಟೇಶ್ವರ ಕಡೆಯಿಂದ  ಕುಂಭಾಶಿ  ಕಡೆಗೆ  ಅತೀವೇಗದಿಂದ  ಚಲಾಯಿಸಿಕೊಂಡು ಬಂದು,  ನಿರ್ಲಕ್ಷತನದಿಂದ ಶೇಖರ  ತಂದೆ: ಚಂದು ಕುರುವನ್ ಸಾಲಿನ್ಸ್‌  ಗ್ಯಾರೇಜ್  ಹಿಂದೆ, ಮೂಡುಗೋಪಾಡಿ ಗೋಪಾಡಿ ಗ್ರಾಮ, ಕುಂದಾಪುರ ತಾಲೂಕು ಇವರೊಂದಿಗೆ ನಡೆದುಕೊಂಡು ಹೋಗುತ್ತಿದ್ದ  ರಮಣಿ, ಚೈತ್ರ ಎಂಬವರಿಗೆ  ಡಿಕ್ಕಿ ಹೊಡೆದ ಪರಿಣಾಮ ರಮಣಿ, ಚೈತ್ರ ಹಾಗೂ ಡಿಕ್ಕಿ ಹೊಡೆದ ಮೋಟಾರ್ ಸೈಕಲ್  ಸವಾರ ಸುಧೀರ ಗಾಯಗೊಂಡು ಕೊಟೇಶ್ವರದ  ಎನ್. ಆರ್ ಆಚಾರ್ಯ  ಆಸ್ಪತ್ರೆಯಲ್ಲಿ  ಪ್ರಥಮ ಚಿಕಿತ್ಸೆ  ಪಡೆದು ಚಿಕಿತ್ಸೆ ಬಗ್ಗೆ  ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ಹೋಗಿರುತ್ತಾರೆ. ಈ ಬಗ್ಗೆ ಶೇಖರ ಇವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 36/2013 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಅಸ್ವಾಭಾವಿಕ ಮರಣ ಪ್ರಕರಣ  
  • ಬೈಂದೂರು: ಜನಾರ್ಧನ ಮೊಗವೀರ (20) ತಂದೆ: ವೆಂಕಟೇಶ ಮೊಗವೀರ ವಾಸ: ಆಶ್ರಯ ಕಾಲನಿ ಹೆರಂಜಾಲು ಗ್ರಾಮ ಕುಂದಾಪುರ ತಾಲೂಕು ಇವರ ತಂದೆ ಸುಮಾರು 55 ವರ್ಷ ಪ್ರಾಯದ ವೆಂಕಟೇಶ ಎಂಬವರು ಮೀನುಗಾರಿಕಾ ಕೆಲಸ ಮಾಡಿಕೊಂಡಿದ್ದು, ವಿಪರೀತ ಮದ್ಯಸೇವನೆ ಮಾಡುವ ಚಟದವರಾಗಿದ್ದು ಹಿಂದೊಮ್ಮೆ ವಿಪರೀತ ಮದ್ಯ ಸೇವನೆ ಮಾಡಿಕೊಂಡು ನೇಣು ಹಾಕಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು,  ದಿನಾಂಕ:14/05/13 ರಂದು ಮೀನುಗಾರಿಕೆಗೆ ರಜೆ ಇದ್ದು, ಈ ದಿನ ದಿನಾಂಕ:14/05/13 ರಂದು ವಿಪರೀತ ಮದ್ಯಸೇವನೆ ಮಾಡಿ ಮನೆಯಲ್ಲಿಯೇ ಇದ್ದು,  ಮಧ್ಯಾಹ್ನ 13:30 ಗಂಟೆಯಿಂದ 14:00 ಗಂಟೆಯ ಮಧ್ಯಾವಧಿಯಲ್ಲಿ  ಹೆರಂಜಾಲು ಗ್ರಾಮದ ಆಶ್ರಯ ಕಾಲನಿಯ ಮನೆಯ ಕಂಪೌಂಡಿನ ಒಳಗೆ ಇದ್ದ ಗೇರು ಮರಕ್ಕೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಜನಾರ್ಧನ ಮೊಗವೀರ ಇವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 13/13 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾರ್ಕಳ: ಶ್ರಿ ನಿತ್ಯಾನಂದ   (35)  ತಂದೆ; ಶೀನ ದೇವಾಡಿಗ  ವಾಸ:ಗುಂಡೋಣಿ ಮನೆ ಮಂಜಲ್ತಾರ್ ಅಂಚೆ ನಲ್ಲೂರು ಗ್ರಾಮ  ಕಾರ್ಕಳ ತಾಲೂಕು. ಇವರ ತಂದೆ ಶೀನ ದೇವಾಡಿಗ ಪ್ರಾಯ ಸುಮಾರು 80 ಎಂಬುವರು ವಿಪರೀತ ಶರಾಬು ಸೇವಿಸುವ ಚಟದವರಾಗಿದ್ದು ಅದೇ ಕಾರಣದಿಂದ ಜೀವನದಲ್ಲಿ ಜೀಗುಪ್ಸೆಗೊಂಡು ಈ ದಿನ ದಿನಾಂಕ: 14.05.2013 ರಂದು ಬೆಳಗ್ಗೆ 11:00 ಗಂಟೆಯಿಂದ 13:30 ಗಂಟೆಯ ನಡುವಿನ ಅವದಿಯಲ್ಲಿ  ಕಾರ್ಕಳ ತಾಲೂಕು ನಲ್ಲೂರು ಗ್ರಾಮ  ಗುಂಡೋಣಿ ಎಂಬಲ್ಲಿ ತನ್ನ ಮನೆಯ ಆವರಣವಿಲ್ಲದ  ಬಾವಿಯ  ಅಡ್ದೆಗೆ ಬಾವಿಯ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಶ್ರಿ ನಿತ್ಯಾನಂದ   ಇವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ  ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 23/13 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: