Saturday, April 27, 2013

Daily Crimes Reported as On 27/04/2013 at 17:00 Hrs


ಹಲ್ಲೆ ಪ್ರಕರಣ
  • ಕಾರ್ಕಳ: ವಿಲಿಯಂ ಡಿಸೋಜ ತಂದೆ ಜಾಕೋಬ್‌ ಡಿಸೋಜ ವಾಸ: ದರ್ಬುಜೆ ಹೌಸ್, ಅತ್ತೂರು ಅಂಚೆ, ನಿಟ್ಟೆ ಗ್ರಾಮ, ಕಾರ್ಕಳ ತಾಲೂಕುರವರು ದಿನಾಂಕ 26/04/2013 ರಂದು ರಾತ್ರಿ 10:15 ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ದೂಪದಕಟ್ಟೆಯಲ್ಲಿರುವಾಗ ಅವರ ಪರಿಚಯದ ಹರೀಶ್‌ ಪೂಜಾರಿ ಬಾರ್‌ನ ಒಳಗೆ ಇದ್ದು, ಆತನ ತಂದೆ ಹುಷಾರಿಲ್ಲದೆ ಇದ್ದುದರಿಂದ, ವಿಲಿಯಂ ಡಿಸೋಜರವರು ಹರೀಶ್‌ ಪೂಜಾರಿಯಲ್ಲಿ ನಿನ್ನ ತಂದೆ ಹೇಗಿದ್ದಾರೆ ಎಂದು ಕೇಳಿದಾಗ, ಆರೋಪಿ ಹರೀಶ್ ಪೂಜಾರಿ ಕೋಪಗೊಂಡು ಅವರಿಗೆ ನಿನ್ನ ಅಪ್ಪ ಹೇಗಿದ್ದಾರೆ ಎಂದು ಹೇಳಿ ಕಾಲರ್‌ ಹಿಡಿದು, ಅಲ್ಲೇ ಟೇಬಲ್‌ನಲ್ಲಿ ಇದ್ದ ಬಾಟ್ಲಿಯಲ್ಲಿ ಎಡಕೈಗೆ ಹೊಡೆದು, ಚೂರಿಯಿಂದ ಎಡಕೈಗೆ ತಿವಿದು ತೀವೃ ತರಹದ ರಕ್ತಗಾಯವುಂಟುಮಾಡಿರುವುದಾಗಿದೆ ಎಂಬುದಾಗಿ ವಿಲಿಯಂ ಡಿಸೋಜರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 50/2013 ಕಲಂ:   326 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: