Saturday, April 27, 2013

Daily Crimes Reported as On 27/04/2013 at 07:00 Hrs

ಅನಧೀಕೃತ ಹಣ ವಶ
  • ಪಡುಬಿದ್ರಿ:ಪಿರ್ಯಾದಿದಾರರಾದ ತ್ರಿನೇಶ್ವರ ಸಿ.ಪಿ, ಸಹಾಯಕ ಅಭಿಯಂತರರು, ಯೋಜನೆ ವಿಭಾಗ, ಪು.ರಾ.ಇಂ. ಇಲಾಖೆ ಉಡುಪಿರವರು 2013 ನೇ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಎಸ್‌.ಎಸ್‌.ಟೀಮ್ (ಸ್ಟಾಟಿಕ್ ಸರ್ವೆಯಲನ್ಸ್‌ ಟೀಮ್) ಗೆ ನೇಮಕವಾಗಿದ್ದು ಅದರಂತೆ ದಿನಾಂಕ 26/04/2013 ರಂದು ಹೆಜಮಾಡಿ ಗ್ರಾಮದ ಹೆಜಮಾಡಿ ಚೆಕ್‌ಪೋಸ್ಟ್‌ನಲ್ಲಿ ಇತರ ಇಲಾಖೆಯ ಅಧಿಕಾರಿಗಳೊಂದಿಗೆ ವಾಹನ ತಪಾಸಣೆ ಮಾಡುತ್ತಿರುವ ವೇಳೆ 15:20 ಗಂಟೆಗೆ ಮಂಗಳೂರು ಕಡೆಯಿಂದ ಉಡುಪಿಯ ಕಡೆಗೆ ಬರುತ್ತಿದ್ದ ಒಂದು ಕಾರನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಸದರಿ ಕಾರಿನ ಚಾಲಕ ಸುರೇಶ ಪೂಜಾರಿ (35) ತಂದೆ:ಶೀನ ಪೂಜಾರಿ ವಾಸ:ಮಿನರ್ವ ರೆಸಿಡೆನ್ಸಿ ಕೋರ್ಟ್‌ ರಸ್ತೆ, ಉಡುಪಿ ತಾಲೂಕು ಮತ್ತು ಜಿಲ್ಲೆರವರ ಕಾರಿನ ಎಡಬದಿಯ ಡ್ಯಾಶ್‌ ಬೋರ್ಡ್‌ನಲ್ಲಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಸಾವಿರ ರೂಪಾಯಿ ನೋಟ್‌ಗಳ 5 ಬಂಡಲ್‌ಗಳು ಕಂಡುಬಂದು ಈ ಹಣದ ಬಗ್ಗೆ ಚಾಲಕನಲ್ಲಿ ವಿಚಾರಿಸಿದಲ್ಲಿ ಯಾವುದೇ ಅಧಿಕೃತ ದಾಖಲೆಗಳನ್ನು ಹಾಜರುಪಡಿಸಿರುವುದಿಲ್ಲ. ಸದರಿ ಬಂಡಲ್‌ಗಳನ್ನು ಪಂಚರ  ಸಮಕ್ಷಮ ಪರಿಶೀಲಿಸಿದಲ್ಲಿ ಅದರಲ್ಲಿ 5 ಲಕ್ಷ ರೂಪಾಯಿಗಳು ಕಂಡು ಬಂದಿದ್ದು, ವಾಹನ ಸಂಖ್ಯೆಕೆಎ 20 ಝಡ್‌ 1640 ಆಗಿದ್ದು ನಗದು ಹಾಗೂ ಕಾರನ್ನು ಮುಂದಿನ ಕ್ರಮದ ಬಗ್ಗೆ ಹಸ್ತಾಂತರಿಸಿದ್ದಾಗಿರುತ್ತದೆ.ಈ ಬಗ್ಗೆ ತ್ರಿನೇಶ್ವರ ಸಿ.ಪಿ.ರವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 71/2013 ಕಲಂ 41 (ಎ), 102 ಸಿ.ಆರ್.ಪಿ.ಸಿ. ಮತ್ತು 123 ಆರ್.ಪಿ ಆಕ್ಟ್‌ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಕ್ರಮ ಮದ್ಯ ವಶ
  • ಬೈಂದೂರು:ಪಿರ್ಯಾದಿದಾರರಾದ ಬೈಂದೂರು ಪೊಲೀಸ್‌ ವೃತ್ತ ನಿರೀಕ್ಷಕರಾದ ಅರುಣ ಬಿ ನಾಯಕ್‌ರವರು  ದಿನಾಂಕ 26/04/2013 ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ್ಗೆ 21:00 ಗಂಟೆಗೆ ಕುಂದಾಫುರ ತಾಲೂಕು ಬೈಂದೂರು ಪೊಲೀಸ್‌ ಠಾಣಾ ಸರಹದ್ದಿನ ಯಡ್ತರೆ ಗ್ರಾಮದ ಹೊಸೂರು ಜಂಕ್ಷನ್‌ ಸಮೀಪ ಬಚ್ಚ ಮರಾಠಿ (59) ತಂದೆ:ದಿವಂಗತ ಬಮ್ದು ಮರಾಠಿ ವಾಸ: ಹೊಸೂರು ಕೇರಿ, ಯಡ್ತರೆ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಎಂಬಾತನು ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡ ಮೇರೆಗೆ ಪೊಲೀಸ್‌ ವೃತ್ತ ನಿರೀಕ್ಷಕರು ಇಲಾಖಾ ಜೀಪಿನಲ್ಲಿ ಠಾಣಾ ಸಿಬ್ಬಂದಿಯವರೊಂದಿಗೆ ಸದ್ರಿ ವ್ಯಕ್ತಿಯನ್ನು ದಸ್ತಗಿರಿ ಮಾಡಿ ಅವರ ಬಳಿಯಿದ್ದ  ಬಿಳಿ ಬಣ್ಣದ ಕ್ಯಾನ್‌ ಒಳಗಡೆ ತುಂಬಿಸಿದ್ದ 8 ಲೀಟರ್‌ನ ಮದ್ಯವನ್ನು (ಒಟ್ಟು ಅಂದಾಜು ಮೌಲ್ಯ 1200/-) ಸ್ವಾಧೀನಪಡಿಸಿಕೊಂಡದ್ದಾಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 137/13 ಕಲಂ:32,34 ಕೆ.ಇ ಆಕ್ಟ್‌ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.       
ಅಪಘಾತ ಪ್ರಕರಣ
  • ಬ್ರಹ್ಮಾವರ:ಮಾನ್ಯ ನ್ಯಾಯಾಲಯದ ಖಾಸಗಿ ಪಿರ್ಯಾದಿ ನಂಬ್ರ:172/13 ಸಾರಾಂಶವೇನೆಂದರೆ ದಿನಾಂಕ:22/01/2013 ರಂದು 18:00 ಗಂಟೆಗೆ ಉಡುಪಿ ತಾಲೂಕು ಯಡ್ತಾಡಿ ಗ್ರಾಮದ ಕಾವಡಿ ಕ್ರಾಸ್ ಬಳಿ ಆರೋಪಿ ಎಂ. ರಮೇಶ್, ತಂದೆ: ಮಂಜು ಭಂಡಾರಿ, ಕೆಎನ್ ಕೆ ಬಿಲ್ಡಿಂಗ್, ರಥಬೀದಿ, ಬಾರ್ಕೂರುರವರು ತನ್ನ ಮೋಟಾರು ಸೈಕಲ್ ನಂಬ್ರ ಕೆಎ-20-ಇಎ-5300 ನ್ನು ಸಾಯೆಬ್ರಕಟ್ಟೆ ಕಡೆಯಿಂದ ಬಾರ್ಕೂರು ಕಡೆಗೆ ವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್ ಹತೋಟಿ ತಪ್ಪಿ ಬಿದ್ದು ಸದ್ರಿ ಮೋಟಾರು ಸೈಕಲ್ ನಲ್ಲಿ ಸಹ ಸವಾರರಾಗಿದ್ದ ಪಿರ್ಯಾದಿದಾರರಾದ ಹರ್ಷ ಜೆ ರಾವ್ (21) ತಂದೆ:ಜಿತೇಂದ್ರ ರಾವ್, ವಾಸ:ಸುಬ್ಬಲಕ್ಷ್ಮಿ ನಿಲಯ,ಮುಖ್ಯ ರಸ್ತೆ, ಬಾರ್ಕೂರು ಹಾಗೂ ಆರೋಪಿಗೆ ತೀವ್ರ ಗಾಯವಾಗಿ ಬ್ರಹ್ಮಾವರ ಮಹೇಶ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ.ಈ ಬಗ್ಗೆ ಹರ್ಷ ಜೆ ರಾವ್‌ರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 168/2013 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.     

No comments: