Saturday, April 27, 2013

Daily Crimes Reported as On 27/04/2013 at 19:30 Hrs


ಅಸ್ವಾಭಾವಿಕ  ಪ್ರಕರಣಗಳು
  • ಕೋಟಾ: ಹರೀಶ್ ತಂದೆ: ರಾಮ ಮರಕಾಲ ವಾಸ: ಮಣುರು ಪಡುಕೆರೆ ಉಡುಪಿ ತಾಲೂಕುರವರ ದೊಡ್ಡಮ್ಮನ ನಾಗೆಶ (38) ಎಂಬವರು ವಿಪರೀತ ಕುಡಿಯುವ ಚಟವಿದ್ದುದಲ್ಲದೆ, ಹಣದ ಸಮಸ್ಯೆ ಇದ್ದು ಇದೇ ವೇದನೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 26/04/2013 ರಂದು ರಾತ್ರಿ 10;00 ಗಂಟೆಯಿಂದ 27/04/2013 ರಂದು ಬೆಳಿಗ್ಗೆ 07:00 ಗಂಟೆಯ ಮಧ್ಯಾವದಿಯಲ್ಲಿ ಮಣೂರು ಪಡುಕೆರೆಯ ತಿಮ್ಮ ಮೊಗವೀರ ಎಂಬವರ ಜಾಗದ ಸಮೀಪ ಹುಣಸೆಮರದ ಕೊಂಬೆಗೆ ಸೀರೆ ಬಿಗಿದು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಹರೀಶ್ ರವರು ನೀಡಿದ ದೂರಿನಂತೆ ಕೋಟಾ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 13/2013 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಮಣಿಪಾಲ: ಪಿ.ಟಿ ಷಣ್ಮುಖ ತಂದೆ: ಪಿ. ತಂಗವೇಲು ವಾಸ: 5 ಸೆಂಟ್ಸ್‌, ಸಣ್ಣಕ್ಕಿಬೆಟ್ಟು ಹೌಸ್‌, ಪರ್ಕಳ ಅಂಚೆ, ಹೆರ್ಗಾ ಗ್ರಾಮ, ಉಡುಪಿ ತಾಲೂಕುರವರ  ಅಣ್ಣ ಟಿ. ಸುಂದರ್‌ (37 ವರ್ಷ) ಎಂಬವರು ತಮ್ಮ ವಾಸದ ಮನೆಯಾದ ಉಡುಪಿ ತಾಲೂಕು ಹೆರ್ಗಾ ಗ್ರಾಮದ ಸಣ್ಣಕ್ಕಿಬೆಟ್ಟು ಹೌಸ್‌ ಎಂಬಲ್ಲಿ ಮಲಗಿದ್ದವರನ್ನು ಮನೆಕೆಲಸದವರಾದ ಸುಜಾತರವರು ದಿನಾಂಕ 27.04.2013 ರಂದು 14:30 ಗಂಟೆಗೆ ಎಬ್ಬಿಸಲಾಗಿ ಅವರು ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದವರನ್ನು ಕೆ.ಎಂ.ಸಿ ಆಸ್ಪತ್ರೆಗೆ ಕರೆತಂದು ವೈದ್ಯರಲ್ಲಿ ಚಿಕಿತ್ಸೆಗೆ ತೋರಿಸಿದಲ್ಲಿ ಟಿ. ಸುಂದರ್‌ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಮೃತರ ಸಾವಿನಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ, ಎಂಬುದಾಗಿ ಪಿ.ಟಿ ಷಣ್ಮುಖ ರವರು ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 20/2013 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ
  • ಕೋಟಾ: ದಿನಾಂಕ 27/04/2013 ರಂದು ಪ್ರಶಾಂತ್ ಶೆಟ್ಟಿ ತಂದೆ:ಶಂಕರ ಶೆಟ್ಟಿ ವಾಸ: ತೆಂಕಮನೆ ತೆಕ್ಕಟ್ಟೆ ಗ್ರಾಮರವರು  ತನ್ನ ಮೋಟಾರು ಸೈಕಲಿನಲ್ಲಿ ಕುಂದಾಪುರಕ್ಕೆ ಹೋಗಿ ವಾಪಾಸ್ಸು ಮನೆ ಕಡೆಗೆ ರಾಷ್ಟೀಯ ಹೆದ್ದಾರಿ 66 ರಲ್ಲಿ ಬರುತ್ತಾ ಮಧ್ಯಾಹ್ನ 1:15 ಗಂಟೆಗೆ ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದ ಗಾಯತ್ರಿ ಸರ್ವಿಸ್ ಸ್ಟೇಷನ್ ಬಳಿ ತಲುಪುವಾಗ ಅವರ ಹಿಂದಿನಿಂದ ಅಂದರೆ ಕುಂದಾಪುರ ಕಡೆಯಿಂದ ಆರೋಪಿ MH-04 ES 9282 ನೇ ಟೊಯೋಟಾ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅವರ ಮೋಟಾರು ಸೈಕಲನ್ನು ಓವರ್ ಟೇಕ್ ಮಾಡಿ ಮುಂದೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ KA 02 E-2763 ನೇ ಕೈನೆಟಿಕ್ ಮೋಟಾರು ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ ಕೈನೆಟಿಕಿನಲ್ಲಿ ಸವಾರಿ ಮಾಡುತಿದ್ದ ರಾಜೇಶ್ ಆಚಾರಿ ಮತ್ತು ಶರಣ್ ಎಂಬುವವರು ರಸ್ತೆಗೆ ಎಸೆಯಲ್ಪಟ್ಟು ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿರುವುದಾಗಿದೆ ಎಂಬುದಾಗಿ ಪ್ರಶಾಂತ್ ಶೆಟ್ಟಿ ರವರು ನೀಡಿದ ದೂರಿನಂತೆ ಕೋಟಾ ಠಾಣೆಯಲ್ಲಿ ಅಪರಾಧ ಕ್ರಮಾಂಕ 121/2013 ಕಲಂ 279 337 304(ಎ) ಐಪಿಸಿರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ
  • ಉಡುಪಿ: ದಿನಾಂಕ 26/04/13ರಂದು ಪದ್ಮರಾಜ್‌ರಾವ್‌, ತಂದೆ ದಿವಂಗತ ರಾಘವೇಂಧ್ರ ರಾವ್‌‌, ವಾಸ:ಮಂದಾಕಿನಿ ನಿಲಯ, ಬನ್ನಂಜೆ, ಅಂಬಲ್ಪಾಡಿ ಅಂಚೆ, ಮೂಡನಿಡಂಬೂರು ಗ್ರಾಮ, ಉಡುಪಿರವರು ಕೆಲಸ ಮುಗಿಸಿ ತನ್ನ ಮನೆಯ ಕಡೆಗೆ ವಾದಿರಾಜ ರಸ್ತೆಯಿಂದಾಗಿ ನಡೆದುಕೊಂಡು ಬರುತ್ತಿರುವಾಗ ರಾತ್ರಿ 9:15ಗಂಟೆಗೆ 2 ಕಾರಿನಲ್ಲಿ ಸುಮಾರು 12 ಮಂದಿ ಬಂದು ಅವರ ಪರಿಚಯದ ಕೃಷ್ಣ ಮುರ್ತಿ ಹಾಗೂ ಇನ್ನೋರ್ವರು ಅವರನ್ನು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೃಷ್ಣಮುರ್ತಿರವರು ಅವರ ಬಲಬದಿಯ ಕೆನ್ನೆಗೆ ಹೊಡೆದು ಮತ್ತು ಮುಂದಕ್ಕೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ಪದ್ಮರಾಜ್‌ರಾವ್‌ರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 215/13 ಕಲಂ 143,147,341,323,504,506 ಜೊತೆಗೆ 149 ಐಪಿಸಿರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಕ್ರಮ ಮದ್ಯ ಸಾಗಾಟ ಓರ್ವನ ಬಂಧನ
  • ಬೈಂದೂರು: ದಿನಾಂಕ 27/04/13 ರಂದು ಶಿರೂರು ಚೆಕ್ ಪೋಸ್ಟ್ ಕರ್ತವ್ಯದಲ್ಲಿರುವಾಗ ಸಮಯ 11:55 ಗಂಟೆಗೆ ಭಟ್ಕಳ ಕಡೆಯಿಂದ ಬೈಂದೂರು ಕಡೆಗೆ ಬರುತ್ತಿದ್ದ ಕೆ ಎ 19 ಝಡ್ 3030 ನಂಬ್ರದ ಕ್ವಾಲೀಸ್ ಕಾರನ್ನು ಅಬಕಾರಿ ಉಪನಿರೀಕ್ಷಕ ವಿ ಮಂಜುನಾಥ್ ಹಾಗೂ ಫೋರೆಸ್ಟ್ ಗಾರ್ಡ್ ಕೃಷ್ಣಯ್ಯ ಬಿ ಶಿರೂರು ಗ್ರಾಮ ಪಂಚಾಯತ್ ಪಿ ಡಿ ಓ ರವರಾದ ಯಾದವ ಬಿ ನಾಯಕ್ ರವರ ಜೊತೆ ಸೇರಿ ನಿಲ್ಲಿಸುವಂತೆ ಸೂಚನೆ ನೀಡಿದ್ದು ಕಾರನ್ನು ಪರಿಶೀಲಿಸಲಾಗಿ ಅದರ ಹಿಂದಿನ ಡಿಕ್ಕಿಯಲ್ಲಿ Budweiser  KING OF BEER ಎಂದು ಬರೆದಿರುವ 650 ml ನ ಮದ್ಯ ತುಂಬಿದ 24 ಬಾಟ್ಲಿಗಳು ಹಾಗೂ BREEZER ಎಂದು ಬರೆದಿರುವ 275 ml ನ ಮದ್ಯ ತುಂಬಿದ 48 ಬಾಟ್ಲಿಗಳು, Carlsberg STRONG SUPER PREMIUM BEER ಎಂದು ಲೇಬಲ್‌ ಇರುವ 500 ml ನ ಮದ್ಯ ತುಂಬಿದ 9 ಟಿನ್‌ ಗಳಿದ್ದು ಈ  ಬಗ್ಗೆ ಮದ್ಯ ಸಾಗಾಟ ಮಾಡುವರೇ ಯಾವುದೇ ಪರವಾನಿಗೆ ಇಲ್ಲವಾದ್ದರಿಂದ ಕಾರಿನ ಚಾಲಕ ಅನಿಲ್ ಡಿಸೋಜಾ ಪ್ರಾಯ: 49 ವರ್ಷ ತಂದೆ: ಚಾರ್ಲ್ಸ್ ಡಿಸೋಜಾ ವಾಸ: ಪ್ಲ್ಯಾಟ್ ನಂಬ್ರ 303 ವಿಲ್ಕೋನ್ ಅಪಾರ್ಟ್ಮೆಂಟ್ ಬೆಂದೂರ್ವೆಲ್ ಮಂಗಳೂರುರವರನ್ನು ಮತ್ತು ಸಾಗಾಟ ಮಾಡಿದ ಕಾರನ್ನು ಸ್ವಾಧೀನಪಡಿಸಿಕೊಂಡು ಅದರಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 138/13 ಕಲಂ 32 34 ಕೆ ಇ ಆಕ್ಟ್ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಜೀವ ಬೆದರಿಕೆ ಹಾಕಿದ ಪ್ರಕರಣ
  • ಕುಂದಾಪುರ: ಆರೋಪಿ 1ನೇಯವರಾದ  ಅಲಿ ಸಾಹೇಬ್ ರವರು ಶ್ರೀಮತಿ ಸುಲೇಖ (43) ಗಂಡ ಅಲಿ ಅಬ್ಬಾಸ್, ವಾಸ: ಜನತಾ ಕಾಲೋನಿ, ಕಂಡ್ಲೂರು ಅಂಚೆ, ಕಾವ್ರಾಡಿ ಗ್ರಾಮ, ಕುಂದಾಪುರ ತಾಲೂಕುರವರ ಕಾನೂನುಬದ್ದ ಗಂಡನಾಗಿರುತ್ತಾರೆ. ಅಲಿ ಸಾಹೇಭ್ ರವರು ಶ್ರೀಮತಿ ಸುಲೇಖ ರವರನ್ನು 1987 ಮಾರ್ಚ್ 19ರಂದು ಮದುವೆಯಾಗಿರುತ್ತಾರೆ. 2ನೇ ಆರೋಪಿತೆ ಜುಬೈದಾರವರು  1ನೇ ಆರೋಪಿ ಅಲಿ ಸಾಹೇಬ್ ರವರ 2ನೇ ಹೆಂಡತಿಯಾಗಿರುತ್ತಾರೆ. ಅವರ ಗಂಡ ಹಲವಾರು ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿ ಇದ್ದು, ಶ್ರೀಮತಿ ಸುಲೇಖ ರವರನ್ನು ವೈವಾಹಿಕ ಜೀವನದಲ್ಲಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿ. ಶ್ರೀಮತಿ ಸುಲೇಖ 5 ಮಕ್ಕಳಾದ ನಂತರ 2ನೇ ಮದುವೆಯಾಗಿರುತ್ತಾರೆ ಆರೋಪಿ 1ನೇಯವರಾದ  ಅಲಿ ಸಾಹೇಬ್ ರವರು ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಜೀವಬೆದರಿಕೆ ಹಾಕಿ ಕಿರುಕುಳ ನೀಡಿರುವುದಾಗಿದೆ ಎಂಬುದಾಗಿ ಶ್ರೀಮತಿ ಸುಲೇಖರವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಅಪರಾಧ ಕ್ರಮಾಂಕ 178/13ಕಲಂ 498(ಎ) 504, 506 ಜೊತೆಗೆ 34 ಐಪಿಸಿರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: