Saturday, April 20, 2013

Daily Crimes Reported as On 20/04/2013 at 07:00 Hrs

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ
  • ಕುಂದಾಪುರ:ಶ್ರೀ ಸದಾನಂದ, ಮುಖ್ಯಸ್ಥರು, ಪ್ಲೈಯಿಂಗ್‌‌ ಸ್ಕ್ವಾಡ್‌‌, 119 ಕುಂದಾಪುರ ಹಾಗೂ ಮುಖ್ಯಾಧಿಕಾರಿ ಪುರಸಭೆ ಕುಂದಾಪುರವರು ಈ ದಿನ ದಿನಾಂಕ 19/04/2013 ರಂದು 18:10 ಗಂಟೆಗೆ ಟಪ್ಪಾಲು ಮುಖೇನ ಠಾಣೆಗೆ ಉಲ್ಲೇಖ ಸಂಖ್ಯೆ 2 ರಲ್ಲಿನ ಕು.ಪು.ಸ/ವಿಧಾನ ಸಭಾ ಚುನಾವಣೆ/2013-14 ದಿನಾಂಕ 19/04/2013 ರಂತೆ ನೀಡಿದ ದೂರು ಅರ್ಜಿ ಸಾರಾಂಶವೇನೆಂದರೆ, ವಾಹನ ಸಂಖ್ಯೆ ಕೆಎ 20 ಪಿ 8049 ವಾಹನವು ಬೈಂದೂರು ವಿಧಾನ ಸಭಾ ಚುನಾವಣೆಗೆ ಅನುಮತಿ ಪಡೆದುಕೊಂಡಿದ್ದು, ದಿನಾಂಕ 19/04/2013 ರಂದು ಪೂರ್ವಾಹ್ನ 11:00 ಗಂಟೆಯ ಸಮಯದಲ್ಲಿ ಕುಂದಾಪುರ ನಗರದಲ್ಲಿ ಪ್ರಚಾರಪಡಿಸುತ್ತಿರುವುದು ಕಂಡು ಬಂದಿರುವುದಾಗಿ ಅರ್ಜಿದಾರರಿಗೆ ಮಾನ್ಯ ಚುನಾವಣಾಧಿಕಾರಿಗಳು 119 ವಿಧಾನ ಸಭಾ ಕ್ಷೇತ್ರ ಮತ್ತು ಸಹಾಯಕ ಕಮೀಷನರ್‌, ಕುಂದಾಪುರಇವರ ಪತ್ರ ಸಂಖ್ಯೆ:ಇಎಲ್‌‌ಎನ್‌‌/ಸಿಆರ್‌‌/1/2013-14 ದಿನಾಂಕ 19/04/2013 ರಂತೆ ತಿಳಿಸಿ ವಿವರಣೆ ಕೋರಿರುತ್ತಾರೆ ಎಂದೂ ಹಾಗೂ ಶ್ರೀ ಗೋಪಾಲ ಶೆಟ್ಟಿ ಚುನಾವಣಾ ನೀತಿ ಸಂಹಿತೆ ತಂಡ ಮತ್ತು  ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕುಂದಾಪುರ ಇವರ ಪತ್ರ ಸಂಖ್ಯೆ ಅ.ಶಾ.ಇ.ಎಲ್‌‌.ಎನ್‌‌/2013-14 ದಿನಾಂಕ 19/04/2013 ಇವರು ಶ್ರೀ ರಮೇಶ ಗಾಣಿಗ, ಅಧ್ಯಕ್ಷರು,ಬೈಂದೂರು ಬ್ಲಾಕ್‌‌ ಕಾಂಗ್ರೆಸ್‌‌ ಸಮಿತಿ ಇವರಿಗೆ ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ ಬಗ್ಗೆ ಸೂಕ್ತ ವಿವರಣೆ ನೀಡುವಂತೆ ಸೂಚಿಸಿರುವುದರಿಂದ ಸದ್ರಿ ವಾಹನವನ್ನು ಸೆಕ್ಷನ್‌‌ 171(1ಹೆಚ್‌) ಐಪಿಸಿಯಂತೆ ವಾಹನವನ್ನು ಸ್ವಾಧೀನಕ್ಕೆ ಪಡೆದುಕೊಂಡು ವಿಚಾರಣೆ ನಡೆಸುವರೇ ವಿನಂತಿಸಿಕೊಂಡಂತೆ. ಠಾಣಾ ದೂರು ಅರ್ಜಿ ಎನ್.ಸಿ ನಂಬ್ರ 58/ಪಿಟಿಎನ್/ಕೆಎನ್‌‌ಡಿ/2013 ದಿನಾಂಕ 19/04/2013 ರಂತೆ ದಾಖಲಸಿಕೊಳ್ಳಲಾಗಿರುತ್ತದೆ.ಈ ದೂರು, ಅಸಂಜ್ಞೆಯ ಅಪರಾಧವಾಗಿರುವುದರಿಂದ ತನಿಖೆ ನಡೆಸಲು ಘನ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಸಿದ್ದಾಗಿದೆ. ಈ ಬಗ್ಗೆ ಸದಾನಂದ, ಮುಖ್ಯಸ್ಥರು, ಪ್ಲೈಯಿಂಗ್‌‌ ಸ್ಕ್ವಾಡ್‌ರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 165/2013 ಕಲಂ 171(1ಹೆಚ್‌) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇತರ ಪ್ರಕರಣ
  • ಕೋಟ:ದಿನಾಂಕ 19/04/2013 ರಂದು ರಾತ್ರಿ 8:00 ಗಂಟೆಗೆ ಪಿರ್ಯಾದಿದಾರರಾದ ಜಿ.ಭರತ್ ಕುಮಾರ್ ಶೆಟ್ಟಿ (53) ತಂದೆ:ಭಾಸ್ಕರ ಶೆಟ್ಟಿ ವಾಸ: ಸರಕಾರಿ ಪ್ರೌಡ ಶಾಲೆ ಬಳಿ, ಮೂಡು ಗಿಳಿಯಾರು, ಗಿಳಿಯಾರು ಗ್ರಾಮರವರು ತನ್ನ ಕೆ.ಎ.20 6368 ನೇ ಕಾರನ್ನು ಉಡುಪಿ ತಾಲೂಕು ಗಿಳಿಯಾರು  ಗ್ರಾಮದ ಕೋಟ ಬಸ್ಸು ನಿಲ್ದಾಣದ ಬಳಿ ನಿಲ್ಲಿಸಿ ತುರ್ತು ಕೆಲಸದ ನಿಮಿತ್ತ ಸ್ನೇಹಿತರ ಕಾರಿನಲ್ಲಿ ಬ್ರಹ್ಮಾವರಕ್ಕೆ ಹೋಗಿ ವಾಪಾಸ್ಸು ಕೋಟ ಬಸ್ಸು ನಿಲ್ದಾಣಕ್ಕೆ ಬಂದು ನೋಡುವಾಗ ಯಾರೋ ದುಷ್ಕರ್ಮಿಗಳು ರಾತ್ರಿ 8:00 ಗಂಟೆಯಿಂದ 10:45 ಗಂಟೆ ಮಧ್ಯಾವದಿಯಲ್ಲಿ ಜಿ.ಭರತ್ ಕುಮಾರ್ ಶೆಟ್ಟಿರವರ ಕಾರಿನ ಮುಂಭಾಗದ ಗ್ಲಾಸಿನ ಮೇಲೆ ಕೆಂಪು ಕಲ್ಲನ್ನು ಹಾಕಿ ಜಖಂಮಾಡಿರುವುದಾಗಿದೆ. ಈ ಬಗ್ಗೆ ಜಿ.ಭರತ್ ಕುಮಾರ್ ಶೆಟ್ಟಿರವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 120/13 ಕಲಂ 427 ಐ.ಪಿ.ಸಿ. & 2 (ಎ)(ಬಿ) ಕರ್ನಾಟಕ ಡಿಸ್ಟ್ರಕ್ಶಶನ್ ಆಫ್ ಪ್ರಿವೆನ್ಶನ್‌ ಆಫ್ ಲಾಸ್ ಆಫ್ ಪ್ರಾಪರ್ಟಿ ಆ್ಯಕ್ಟ್‌ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  
ಮನುಷ್ಯ ಕಾಣೆ ಪ್ರಕರಣ
  • ಶಂಕರನಾರಾಯಣ:ಪಿರ್ಯಾದಿದಾರರಾದ ಶ್ರೀ ನಾಗ ನಾಯ್ಕ ತಂದೆ:ಬಿಕ್ರ ನಾಯ್ಕ, ಹಿಲಿಯಾಣ ಗ್ರಾಮ, ಉಡುಪಿ ತಾಲೂಕುರವರ  ಮಗ ಸಂತೋಷ ನಾಯ್ಕ(26) ಎಂಬಾತನು ನನ್ನನ್ನು ಯಾರೂ ಹುಡುಕೋದು ಬೇಡ, ನಾನು ಎಲ್ಲರನ್ನು ಬಿಟ್ಟು ದೂರ ಹೋಗುತ್ತಿದ್ದೇನೆ, ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ, ಸತ್ತ ನನ್ನ ಬಗ್ಗೆ ಯಾರೂ ಯೋಚನೆ ಮಾಡಬೇಡಿ, ನನಗೆ ಈ ಮದುವೆ ಇಷ್ಟವಿಲ್ಲ, ಅದಕ್ಕೆ ನಾನು ಈ ನಿರ್ಧಾರ ಮಾಡಿದ್ದೇನೆಎಂದು ಪತ್ರವನ್ನು ಬರೆದಿಟ್ಟು ದಿನಾಂಕ 18/04/2013 ರಂದು ಸಂಜೆ 04:00 ಗಂಟೆಗೆ ನಾಗ ನಾಯ್ಕರವರ ಮನೆಯಾದ ಉಡುಪಿ ತಾಲೂಕು ಹಿಲಿಯಾಣ ಗ್ರಾಮದ ದಕ್ಕೇರುಬೆಟ್ಟು ಎಂಬಲ್ಲಿಂದ ಬೈಕಿನಲ್ಲಿ ಹೋದವರು ಈವರೆಗೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಈ ಬಗ್ಗೆ ನಾಗ ನಾಯ್ಕರವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣಾ ಅಪರಾಧ ಕ್ರಮಾಂಕ 54/13 ಕಲಂ  ಮನುಷ್ಯ ಕಾಣೆ ಎಂಬುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  

No comments: