Saturday, April 20, 2013

Daily Crime Reports As on 20/04/2013 At 17:00 Hrs

ಇತರೇ ಪ್ರಕರಣ
  • ಅಜೆಕಾರು: ಆಪಾದಿತ 1)ಕೇಶವ ಆಚಾರ್ಯ 2)ಪ್ರತೀಶ್‌ ಆಚಾರ್ಯ 3)ಪ್ರಜೇಶ್‌ ಆಚಾರ್ಯ ಇವರುಗಳು ಮರ್ಣೆ ಗ್ರಾಮದ ಜ್ಯೋತಿ ಹೈಸ್ಕೂಲ್‌ ಬಳಿ, ಆಪಾದಿತರಾದ ಡೆನಿಸ್‌ ಡಿಸೋಜಾ ಮತ್ತು ಜೂಲಯಾನ ಡಿ ಸೋಜ ಇವರ ಕಟ್ಟಡದಲ್ಲಿ ಕಾಳಿಕಾಂಬಾ ಫರ್ನಿಚರ್ಸ್‌ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಯಂತ್ರಗಳ ಮೂಲಕ  ಪೀಟೋಪಕರಣಗಳನ್ನು ತಯಾರಿಸುತ್ತಿದ್ದು ಈ ವೇಳೆ   ಬಳಸುವ ಯಂತ್ರಗಳ ಮೂಲಕ  ಪರಿಸರದಲ್ಲಿ ಶಬ್ದ ಮಾಲಿನ್ಯದ ಜೊತೆಗೆ ವಾಯು ಮಾಲಿನ್ಯ ಉಂಟು ಮಾಡಿರುವುಲ್ಲದೆ ಸಾರ್ವಜನಿಕ ಕಿರುಕುಳ ಉಪದ್ರವ ಉಂಟು ಮಾಡಿರುತ್ತಾರೆ. ಈ ಬಗ್ಗೆ ಗ್ಯಾಬ್ರಿಯಲ್‌ ಡಿ ಸಿಲ್ವ  ಅಜೆಕಾರು ಇವರು ನೀಡಿದ ಖಾಸಗಿ ದೂರಿನಂತೆ ಅಜೆಕಾರು ಠಾಣಾ ಅಪರಾಧ ಕ್ರಮಾಂಕ 16/13 ಕಲಂ: 278, 290  ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಅಸ್ವಾಭಾವಿಕ ಮರಣ ಪ್ರಕರಣ 
  • ಹೆಬ್ರಿ: ಸತೀಶ್‌ ನಾಯಕ್‌ (45), ತಂದೆ: ಚಂದ್ರ ನಾಯಕ್‌, ವಾಸ: ನೀರ ಪಲ್ಕೆ, ಮುನಿಯಾಲು,  ವರಂಗ ಗ್ರಾಮ, ಕಾರ್ಕಳ ತಾಲೂಕು ಇವರ ತಮ್ಮ ಉಮೇಶ ನಾಯಕ್‌(35) ಎಂಬವರು ಕಾರ್ಕಳ ತಾಲೂಕು ವರಂಗ ಗ್ರಾಮದ ಮುನಿಯಾಲು ನೀರ ಪಲ್ಕೆ ಎಂಬಲ್ಲಿ ವಾಸವಾಗಿದ್ದು ಸದ್ರಿಯವರಿಗೆ ಸುಮಾರು 10 ವರ್ಷಗಳ ಹಿಂದೆ ಮದುವೆಯಾಗಿದ್ದು  5 ವರ್ಷಗಳ ಹಿಂದೆ ಸಂಸಾರದ ವಿಷಯದಲ್ಲಿ ಮನಸ್ತಾಪಗೊಂಡು ಅವರ ಹೆಂಡತಿ  ತನ್ನ ತಾಯಿಗೆ ಮನೆಗೆ ಹೋಗಿದ್ದು ಈ ವಿಷಯದಲ್ಲಿ ಮಾನಸಿಕವಾಗಿ ನೊಂದುಕೊಂಡು ವಿಪರೀತ ಮದ್ಯ ಸೇವನೆಯನ್ನು ಮಾಡುತ್ತಿದ್ದು, ದಿನಾಂಕ: 18/04/13 ರಂದು ರಾತ್ರಿ 8-00 ಗಂಟೆಗೆ ಮನೆಯಲ್ಲಿರುವಾಗ ಯಾವುದೋ ವಿಷ ಪದಾರ್ಥ ಸೇವಿಸಿ ನರಳುತ್ತಿದ್ದವರನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್‌ಲಾಕ್‌ ಆಸ್ಪತ್ರೆಗೆ ದಾಖಲಿಸಿದ್ದು ದಿನಾಂಕ: 20/04/13 ರಂದು ಮುಂಜಾನೆ 04-30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.ಈ ಬಗ್ಗೆ ಸತೀಶ್‌ ನಾಯಕ್‌ ಇವರು ನೀಡಿದ ದೂರಿನಂತೆ ಹೆಬ್ರಿ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 05/13 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: