Sunday, April 14, 2013

Daily Crimes Reported as On 14/04/2013 at 19:30 Hrs


ಅಪಘಾತ ಪ್ರಕರಣಗಳು
  • ಕಾರ್ಕಳ ನಗರ:ದಿನಾಂಕ 14/04/2013 ರಂದು ಮದ್ಯಾಹ್ನ 12:30 ಗಂಟೆಗೆ ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ಎಂಬಲ್ಲಿ ಮಾರುತಿ ಆಲ್ಟೋ ಕಾರು ನಂಬ್ರ ಕೆಎ 19 ಝಡ್‌ 7423 ನೇಯದನ್ನು ಚಾಲಕ ಕುಮಾರಸ್ವಾಮಿ ಎಂಬವರು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಅಜೆಕಾರು ಕಡೆಯಿಂದ ಕಾರ್ಕಳ ಕಡೆಗೆ ಚಲಾಯಿಸಿಕೊಂಡು ಬರುತ್ತಾ ನೆಲ್ಲಿಕಟ್ಟೆ ಬಳಿ ತಿರುವಿನಲ್ಲಿ ಕಾರು ಚಾಲಕನ ಹತೋಟಿ ತಪ್ಪಿ ರಸ್ತೆ ಬದಿ ಚರಂಡಿಗೆ ಬಿದ್ದುದರ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿದಾರರಾದ ಶ್ರೀ ವಿಜಯ ಶೆಟ್ಟಿ (54) ತಂದೆ:ದಿವಂಗತ ನಾರಾಯಣ ಶೆಟ್ಟಿ ವಾಸ:ಚೌಟರ್ ಹೌಸ್,ಬಿಕರ್ನಕಟ್ಟೆ ಕುಲಶೇಖರ ಅಂಚೆ, ಮಂಗಳೂರುರವರಿಗೆ ಸಾಮಾನ್ಯ ಸ್ವರೂಪದ ಗಾಯವಾಗಿದ್ದು ಚಾಲಕ ಕುಮಾರಸ್ವಾಮಿಯವರ ತಾಯಿ ಶ್ರೀಮತಿ ಲಲಿತಮ್ಮರವರ ಎಡಕಾಲಿನ ಮೂಳೆ ಮುರಿತದ ಗಾಯವಾಗಿದ್ದು ಹಾಗೂ ಚಾಲಕ ಕುಮಾರಸ್ವಾಮಿಯವರಿಗೆ ಗಾಯಗಳಾಗಿರುತ್ತದೆ.ಎಲ್ಲರನ್ನೂ ಚಿಕಿತ್ಸೆಯ ಬಗ್ಗೆ ಕಾರ್ಕಳ ಸ್ಪಂದನ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.ಈ ಬಗ್ಗೆ ಶ್ರೀ ವಿಜಯ ಶೆಟ್ಟಿರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 50/13 U/s 279,337,338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಶಂಕರನಾರಾಯಣ:ಆರೋಪಿ ಲಾರಿ ಚಾಲಕ ಅನಂತ ಕುಲಾಲ್‌ ತನ್ನ MEG-8337 ನೇ ನಂಬ್ರದ ಲಾರಿಯನ್ನು ಕುಂದಾಪುರ ಕಡೆಯಿಂದ ಅಂಪಾರು ಕಡೆಗೆ ದಿನಾಂಕ 13/04/2013 ರಂದು 18:30 ಗಂಟೆಗೆ ಕುಂದಾಪುರ ತಾಲೂಕು ವಂಡ್ಸೆ ಹೋಬಳಿಯ ಅಂಪಾರು ಗ್ರಾಮದ ಮಹಿಷಿಮರ್ದಿನಿ ದೇವಸ್ಥಾನಕ್ಕೆ ಹೋಗುವ ರಸ್ತೆ ಜಂಕ್ಷನ್ ಬಳಿ ಅತೀವೇಗ ಮತ್ತು ಅಜಾಗರರೂಕತೆಯಿಂದ ಚಲಾಯಿಸಿ ಅಂಪಾರು ಕಡೆಯಿಂದ ಕುಂದಾಪುರ ಕಡೆಗೆ ಪಿರ್ಯಾದಿದಾರರಾದ ಶ್ರೀ ನಾಗರಾಜ ದೇವಾಡಿಗ (26) ತಂದೆ:ಸುಬ್ಬ ದೇವಾಡಿಗ ವಾಸ:ಕರಣಿಕರಬೆಟ್ಟು, ನೆಲ್ಲಿಕಟ್ಟೆ, ಕಾವ್ರಾಡಿ ಗ್ರಾಮ, ಕುಂದಾಪುರ ತಾಲೂಕು,ಉಡುಪಿ ಜಿಲ್ಲೆರವರು ಶರತ್ ಎಂಬವರನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಹೋಗುತ್ತಿದ್ದ ಕೆಎ 20 ಇಸಿ 2607 ನೇ ನಂಬ್ರದ ಹೀರೋ ಹೊಂಡಾ ಸ್ಪ್ಲೆಂಡರ್ ಮೋಟಾರು ಸೈಕಲ್ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ಸವಾರ ಮತ್ತು ಸಹಸವಾರ ರಸ್ತೆಗೆ ಬಿದ್ದು ಸಹಸವಾರ ಶರತ್ಗೆ ಬಲಕಾಲಿನ ಕೋಲು ಕಾಲಿನ ಮೂಳೆ ಮುರಿತವಾಗಿದ್ದು, ನಾಗರಾಜ ದೇವಾಡಿಗರವರಿಗೆ ಬಲಕಾಲ ತೊಡೆಗೆ ಒಳ ಜಖಂ ಹಾಗೂ ಕೈಕಾಲಿಗೆ ತರಚಿದ ಗಾಯವಾಗಿದ್ದು, ಬೈಕ್ಜಖಂಗೊಂಡಿರುತ್ತದೆ. ಈ ಬಗ್ಗೆ ನಾಗರಾಜ ದೇವಾಡಿಗರವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣಾ ಅಪರಾಧ ಕ್ರಮಾಂಕ 52/13 ಕಲಂ 279,337,338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇತರ ಪ್ರಕರಣ
  • ಕುಂದಾಪುರ:ಹಂಗಳೂರು ಗ್ರಾಮ ಪಂಚಾಯಿತಿಗೆ ಸಂಬಂದಿಸಿದ ಪಿರ್ಯಾದಿದಾರರಾದ ಅರುಣ್ ಎ.ಎಸ್ (30) ತಂದೆ:ರಾಮಚಂದ್ರ ಶೇರುಗಾರ, ವಾಸ: ಗೋಪಾಲಾಡಿ ನೇರಂಬಳ್ಳಿ ಮಠದ ರಸ್ತೆ, ಹಂಗ್ಲೂರು ಗ್ರಾಮ, ಕುಂದಾಪುರ ತಾಲೂಕುರವರ ಮನೆಯವರು ಹಾಗೂ ನೆರೆಮನೆಯವರು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಳೆ ಬರುವವರೆಗೆ ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿದ್ದು, ಈ ಬಗ್ಗೆ ಪಂಚಾಯತಿನಲ್ಲಿ ವಿಚಾರಿಸಿದಲ್ಲಿ ಪಂಚಾಯತಿಯಲ್ಲಿ ಮಂಜೂರಾತಿ ಹಣ ಇರುವುದಿಲ್ಲ, ನೀವು ಸ್ವಂತ ಖರ್ಚಿನಿಂದ ನೀರಿನ ಪೈಪು ಹಾಕಿಸಿ.ಗ್ರಾಮ ಪಂಚಾಯತಿಯ ನೀರು ಸರಬರಾಜು ಟ್ಯಾಂಕಿನಿಂದ ಸಂಪರ್ಕ ಪಡೆದುಕೊಳ್ಳಿ ಎಂದು ತಿಳಿಸಿದಂತೆ ಈ ಬಗ್ಗೆ 500 ರೂಪಾಯಿ ತೆರಿಗೆಯನ್ನು ಪಾವತಿ ಮಾಡಿ ನೀರಿನ ಸಂಪರ್ಕಕ್ಕಾಗಿ ಸ್ವಂತ ಖರ್ಚಿನಿಂದ ಸುಮಾರು 47,000/-ರೂಪಾಯಿ ಖರ್ಚು ಮಾಡಿ 70 ಲೆಂತ್ ಪಿವಿಸಿ ಪೈಪನ್ನು ಗ್ರಾಮ ಪಂಚಾಯತ್ ರಸ್ತೆ ಬದಿ ಇರುವ ಚರಂಡಿಯಲ್ಲಿ ಜೆಸಿಬಿಯಿಂದ ಆಳ ಮಾಡಿ ಮಣ್ಣಿನ ಅಡಿ ಹಾಕಿ ನೀರು ಸಂಪರ್ಕ ಪಡೆದುಕೊಂಡಿದ್ದು, ನಿನ್ನೆ ದಿನ ರಾತ್ರಿ ಸುಮಾರು 12 ಗಂಟೆ ನಂತರ ಆರೋಪಿತರುಗಳಾದ 1)ಲಕ್ಷ್ಮಣ ಶೇರುಗಾರ 2)ಸುದೀಂದ್ರ ಶೇರುಗಾರ 3)ಶಂಕರ ಶೇರುಗಾರ 4)ಮಹೇಶ್ ಶೇರುಗಾರ ಇವರುಗಳು ಮಣ್ಣಿನ ಅಡಿಯಿಂದ ಅಗೆದು ಪೈಪನ್ನು ಹೊರ ತೆಗೆದು ತುಂಡು ತುಂಡು ಮಾಡಿ ರಸ್ತೆಯ ಬದಿ ಬಿಸಾಡಿ ನಷ್ಟ ಉಂಟು ಮಾಡಿರುವುದಾಗಿದೆ. ಈ ಬಗ್ಗೆ ಅರುಣ್ ಎ.ಎಸ್‌ರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 157/13 ಕಲಂ 427, 430 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: