Monday, April 15, 2013

Daily Crimes Reported as On 15/04/2013 at 07:00 Hrs


ಹಲ್ಲೆ ಪ್ರಕರಣ
  • ಕೋಟ:ದಿನಾಂಕ 14/04/2013 ರಂದು ಪಿರ್ಯಾದಿದಾರರಾದ ಅಬ್ದುಲ್ ಸತ್ತಾರ್ (21) ತಂದೆ:ಅಬ್ಬಾಸ್ ವಾಸ:ಎಂ.ಜಿ.ಕಾಲೋನಿ ವಡ್ಡರ್ಸೆ ಗ್ರಾಮ ಉಡುಪಿ ತಾಲೂಕುರವರು ತನ್ನ ಕೆ.ಎ.20 ಇ.ಡಿ-2353 ನೇ ಮೋಟಾರು ಸೈಕಲಿನಲ್ಲಿ ತನ್ನ ಸ್ನೇಹಿತ ಸಾದಿಕ್ ಎಂಬವರನ್ನು ಕೂರಿಸಿಕೊಂಡು ಗರಕಿ ಮಠ ಕಡೆಯಿಂದ ಎಂ.ಜಿ.ಕಾಲೋನಿಯ ತನ್ನ ಮನೆಯ ಕಡೆಗೆ ಹೋಗುತ್ತಾ ಸಂಜೆ 4:45 ಗಂಟೆಗೆ ವಡ್ಡರ್ಸೆ ಗ್ರಾಮದ ಮಧುವನ ಶಾಲೆಗಿಂತ ಸ್ವಲ್ಪ ಮುಂದೆ ಹೋಗುವಾಗ ಆರೋಪಿಗಳಾದ 1)ಸುದರ್ಶನ 2)ಸಚಿನ್ 3)ಪ್ರಸಾದ್ 4)ನವೀನ 5)ಅಶ್ವತ್ 6)ಶರತ್ 7)ಸೂರ್ಯ 8)ರಾಜ ಇವರುಗಳು 3 ಮೋಟಾರು ಸೈಕಲಿನಲ್ಲಿ ಅಬ್ದುಲ್ ಸತ್ತಾರ್‌ರವರ ಹಿಂದಿನಿಂದ ಬಂದು ಅಬ್ದುಲ್ ಸತ್ತಾರ್‌ರವರ ಮೋಟಾರು ಸೈಕಲನ್ನು ಅಡ್ಡ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹಾಗೂ ಕಲ್ಲಿನಿಂದ ಹೊಡೆದು, ಈ ದಿನ ನೀನು ಬದುಕಿಕೊಂಡೆ, ಮುಂದೆ ಇದೇ ರೀತಿ ಮಾಡಿದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿದ್ದು, ಅಬ್ದುಲ್ ಸತ್ತಾರ್‌ರವರ ಮನೆಯ ಬಳಿ ರಸ್ತೆಯಲ್ಲಿ ಕಲ್ಲು ಬಿದ್ದ ವಿಷಯದಲ್ಲಿ ಆರೋಪಿಗಳು ಅವರ ಮನೆಯ ಬಳಿ ಬಂದಿದ್ದು, ಅಬ್ದುಲ್ ಸತ್ತಾರ್‌ರವರು ರಾತ್ರಿ ವೇಳೆ ನಿಮಗೇನು ಕೆಲಸ ಎಂದು ಪ್ರಶ್ನಿಸಿದ್ದು ಅದೇ ದ್ವೇಷದಿಂದ ಈ ಹಲ್ಲೆ ಮಾಡಿರುವುದಾಗಿದೆ ಎಂಬುದಾಗಿ ಅಬ್ದುಲ್ ಸತ್ತಾರ್‌ರವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 118/13 ಕಲಂ 143,147, 341,504,323,324,504 ಜೊತೆಗೆ 149 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಂಚನೆ ಪ್ರಕರಣ
  • ಬ್ರಹ್ಮಾವರ:ಮಾನ್ಯ ಉಡುಪಿ ಎಸಿಜೆ & ಜೆ.ಎಮ್ ಎಫ್ ಸಿ ನ್ಯಾಯಾಲಯದ ಖಾಸಗಿ ಪಿರ್ಯಾದಿ ನಂಬ್ರ 34/13 ರ ಸಾರಾಂಶವೇನೆಂದರೆ ಪಿರ್ಯಾದಿದಾರರಾದ ಆರ್ಥರ್ ಅಗಸ್ಟಿನ್ ಕ್ರಾಸ್ತ ಅಲಿಯಾಸ್‌ ಅನಿಲ್ ಆರ್ಥರ್ ಕ್ರಾಸ್ತ (51) ತಂದೆ:ದಿವಂಗತ ಜೋಸೆಫ್ ಎಂ. ಕ್ರಾಸ್ತ ವಾಸ: ಸ್ಪಂದನ, ಮನೆ ನಂಬ್ರ ಎ3 711 ಸಂತೆಕಟ್ಟೆ, ಕಲ್ಯಾಣಪುರ, ಉಡುಪಿ ತಾಲೂಕುರವರು ಮತ್ತು ಆರೋಪಿ ಸುಶೀತ್ (36) ತಂದೆ:ನಾರಾಯಣ ಡೈನಾಸ್ಟಿ ಎಪಾರ್ಟ ಮೆಂಟ್ ಮಂಗಳೂರು ಇವರುಗಳು ಜೊತೆಯಾಗಿ ಉದ್ಯೋಗ ಮಾಡುತ್ತಿದ್ದಾಗ ದಿನಾಂಕ:28/11/2010 ರಂದು ರೂಪಾಯಿ 1,70,000/- ಆರೋಪಿ ಸುಶೀತ್‌ರವರಿಂದ ಆರ್ಥರ್ ಅಗಸ್ಟಿನ್ ಕ್ರಾಸ್ತ ಅಲಿಯಾಸ್‌ ಅನಿಲ್ ಆರ್ಥರ್ ಕ್ರಾಸ್ತರವರು ಸಾಲವಾಗಿ ಪಡೆದಿದ್ದು ಆಗ ಆರೋಪಿ ಸುಶೀತ್‌ರವರು, ಆರ್ಥರ್ ಅಗಸ್ಟಿನ್ ಕ್ರಾಸ್ತ ಅಲಿಯಾಸ್‌ ಅನಿಲ್ ಆರ್ಥರ್ ಕ್ರಾಸ್ತರಿಂದ ಭದ್ರತೆಗಾಗಿ ಕೆಲವು ಖಾಲಿ ಹಾಳೆ ಮತ್ತು ಛಾಪಾ ಕಾಗದಗಳಿಗೆ ಸಹಿ ಪಡೆದುಕೊಂಡು ಆರ್ಥರ್ ಅಗಸ್ಟಿನ್ ಕ್ರಾಸ್ತ ಅಲಿಯಾಸ್‌ ಅನಿಲ್ ಆರ್ಥರ್ ಕ್ರಾಸ್ತ ಮತ್ತು ಆರ್ಥರ್ ಅಗಸ್ಟಿನ್ ಕ್ರಾಸ್ತ ಅಲಿಯಾಸ್‌ ಅನಿಲ್ ಆರ್ಥರ್ ಕ್ರಾಸ್ತರ ಪತ್ನಿಯ ಖಾಲಿ ಚೆಕ್ಕು ಪಡೆದಿರುತ್ತಾರೆ ಅಲ್ಲದೆ ನೀಲಾವರ ಗ್ರಾಮದ ಸರ್ವೆ ನಂಬ್ರ:150/5ಪಿ-7,150/26,150/27ಪಿ -3 ಜಮೀನಿನ ಮೂಲ ದಾಖಲಾತಿಯನ್ನು ಪಡೆದು ತನ್ನ ಸ್ವಂತ ಲಾಭಕ್ಕಾಗಿ ಜಮೀನನ್ನು ಆ ದಾಖಲೆಗಳ ಆಧಾರದಲ್ಲಿ ಆರೋಪಿ ಯು.ಕರುಣಾಕರ ರಾವ್(50) ತಂದೆ:ದಿವಂಗತ ಶ್ರೀನಿವಾಸ ರಾವ್ ವಾಸ: ಈಶ್ವರ ನಗರ ತೆಂಕನಿಡಿಯೂರು ಗರಡಿ ಮಜಲುರವರಿಗೆ ಮಾರಾಟ ಮಾಡಿ ಆರ್ಥರ್ ಅಗಸ್ಟಿನ್ ಕ್ರಾಸ್ತ ಅಲಿಯಾಸ್‌ ಅನಿಲ್ ಆರ್ಥರ್ ಕ್ರಾಸ್ತರವರಿಗೆ ನಂಬಿಕೆ ದ್ರೋಹ ಎಸಗಿದ್ದು ಉಡುಪಿ ಭೂ ನ್ಯಾಯ ಮಂಡಳಿ ಇವರಿಂದ ನಕಲು ಪ್ರಮಾಣ ಪತ್ರ ಸೃಷ್ಟಿಸಿ, ನೈಜ ಪ್ರಮಾಣ ಪತ್ರವೆಂದು ತಹಶೀಲ್ದಾರರ ಮುಂದೆ ಹಾಜರುಪಡಿಸಿದ್ದು, ಜಮೀನು ಕಬಳಿಸಲು ಆರೋಪಿಗಳಾದ ಯು. ಕರುಣಾಕರ ರಾವ್. (50) ತಂದೆ: ದಿ: ಶ್ರೀನಿವಾಸ ರಾವ್ ವಾಸ: ಈಶ್ವರ ನಗರ ತೆಂಕನಿಡಿಯೂರು ಗರಡಿ ಮಜಲು ಮತ್ತು ಮುಕ್ತಾರ್ ಆಲಿ ಗಾಂಧಿನಗರ ಹಾರಾಡಿ ಗ್ರಾಮ ಹಾಗೂ ಅಕ್ಬರ್ ತಂದೆ: ಪುತ್ತಬ್ಬ ವಾಸ: ಆತ್ರಾಡಿ ಉಡುಪಿ ತಾಲೂಕು ಇವರುಗಳು ಅಪರಾಧಿಕ ಸಂಚು ಮಾಡಿದ್ದಲ್ಲದೆ ಆರೋಪಿತರು ಆರ್ಥರ್ ಅಗಸ್ಟಿನ್ ಕ್ರಾಸ್ತ ಅಲಿಯಾಸ್‌ ಅನಿಲ್ ಆರ್ಥರ್ ಕ್ರಾಸ್ತರವರಿಗೆ ದೂರವಾಣಿ ಕರೆ ಮಾಡಿ 4,50,000/-ರೂಪಾಯಿ ಕೊಡದಿದ್ದಲ್ಲಿ ಜೀವ ಸಹಿತ ಬಿಡುವುದಿಲ್ಲವಾಗಿ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಆರ್ಥರ್ ಅಗಸ್ಟಿನ್ ಕ್ರಾಸ್ತ ಅಲಿಯಾಸ್‌ ಅನಿಲ್ ಆರ್ಥರ್ ಕ್ರಾಸ್ತರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 159/13 ಕಲಂ:406,420,423,464,471,384,506,120(ಬಿ) ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಬ್ರಹ್ಮಾವರ:ದಿನಾಂಕ 14/04/2013 ರಂದು 17:30 ಗಂಟೆಗೆ ಉಡುಪಿ ತಾಲೂಕು ಚೇರ್ಕಾಡಿ ಗ್ರಾಮದ ಇಂಬ್ರಗುಳಿ ಮಡಿಹೊಳೆಯಲ್ಲಿ ಮೃತ ಉಮೇಶ ನಾಯ್ಕ(25) ತಂದೆ:ರಾಮ ನಾಯ್ಕ ವಾಸ; ದುರ್ಗ ನಿಲಯ ಕರ್ಜೆ ಹೊಸುರು ಗ್ರಾಮರವರು ಸ್ನಾನಕ್ಕಾಗಿ ನದಿ ನೀರಿನ ಆಳ ಜಾಗಕ್ಕೆ ಹೋಗಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಗಿದೆ. ಈ ಬಗ್ಗೆ ಶೇಖರ ನಾಯ್ಕ (23) ತಂದೆ:ರಾಮ ನಾಯ್ಕ ವಾಸ; ದುರ್ಗ ನಿಲಯ ಕರ್ಜೆ ಹೊಸುರು ಗ್ರಾಮರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 23/2013 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: