Sunday, April 14, 2013

Daily Crimes Reported as On 14/04/2013 at 17:00 Hrs


ಅನುಮಾನಾಸ್ಪದ ವ್ಯಕ್ತಿಯ ಬಂಧನ
  • ಮಣಿಪಾಲ:ದಿನಾಂಕ 14/04/2013 ರಂದು ಬೆಳಿಗ್ಗೆ 10.30 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಇಂದ್ರಾಳಿ ರೈಲ್ವೆ ನಿಲ್ದಾಣದ ಹತ್ತಿರ ಆಪಾದಿತ ರಾಜೇಶ ನಾಯ್ಕ (18) ತಂದೆ:ವಿಠ್ಠಲ ನಾಯ್ಕ, ವಾಸ:ದುರ್ಗಾ ನಗರ, ಇಂದ್ರಾಳಿ, ಮಂಚಿಕೋಡಿ, ಉಡುಪಿ ತಾಲೂಕು ಎಂಬವನು ರೈಲ್ವೆ ನಿಲ್ದಾಣದ ಜನ ನಿಬಿಡ ಪ್ರದೇಶದಲ್ಲಿ ಯಾವುದೋ ಬೇವಾರಂಟು ಕೃತ್ಯ ನಡೆಸುವ ಇರಾದೆಯಿಂದ ನಿಂತಿರಬಹುದೆಂದು ಸಂಶಯದಿಂದ ಆತನ ಇರುವಿಕೆಯ ಬಗ್ಗೆ ಪ್ರಶ್ನಿಸಿದಲ್ಲಿ ಸಮರ್ಪಕವಾದ ಉತ್ತರ ನೀಡದೆ ಇದ್ದುದರಿಂದ ಆತ ಯಾವುದೋ ಬೇವಾರಂಟು ತಕ್ಷೀರು ನಡೆಸುವ ಇರಾದೆಯಿಂದ ನಿಂತಿರುವುದು ಎಂದು ರವಿ ಕುಮಾರ್ ಎ,ಪೊಲೀಸ್ ಉಪನಿರೀಕ್ಷಕರು,ಮಣಿಪಾಲ ಪೊಲೀಸ್ ಠಾಣೆರವರು ದಸ್ತಗಿರಿ ಮಾಡಿ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 73/2013 ಕಲಂ 109 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿದ್ದಾರೆ.
ಅಸ್ವಾಭಾವಿಕ ಮರಣ ಪ್ರಕರಣ
  • ಮಣಿಪಾಲ:ದಿನಾಂಕ 13/04/2013 ರ ರಾತ್ರಿ 12:00 ಗಂಟೆಯಿಂದ 14/04/2013 ರ ಬೆಳಿಗ್ಗೆ 6:00 ಗಂಟೆಯ ನಡುವಿನ ಸಮಯದಲ್ಲಿ ಉಡುಪಿ ತಾಲೂಕು ಹಿರೇಬೆಟ್ಟು ಗ್ರಾಮದ ನೆಲ್ಲಿಕಟ್ಟೆ ಎಂಬಲ್ಲಿ ಪಿರ್ಯಾದಿದಾರರಾದ ಸಾವಿತ್ರಿ (30) ಗಂಡ:ಹುಸೇನ್ ಪೋಮರ್‌ ವಾಸ:ನೆಲ್ಲಿಕಟ್ಟೆ, ಹಿರೇಬೆಟ್ಟು ಗ್ರಾಮ, ಉಡುಪಿ ತಾಲೂಕುರವರ ಗಂಡ ಹುಸೇನ್ ಪೋಮರ್‌ (40) ಎಂಬವರು ವಿಪರೀತ ಮಧ್ಯ ಸೇವನೆ ಅಥವಾ ಬೇರಾವುದೆ ಕಾರಣಗಳಿಂದ ಮೃತಪಟ್ಟಿರಬಹುದು ಎಂಬುದಾಗಿ ಸಾವಿತ್ರಿರವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 15/2013 ಕಲಂ:174 ಸಿಆರ್‌‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಪಘಾತ ಪ್ರಕರಣ
  • ಶಿರ್ವಾ:ದಿನಾಂಕ 14/04/2013 ರಂದು ಪಿರ್ಯಾದಿದಾರರಾದ ಸಿದ್ದು ಉಂಬ್ಲು ಲಮಾಣಿ (35) ತಂದೆ ಉಂಬ್ಲು ಲಮಾಣಿ  ವಾಸ:6ನೇ ವಾರ್ಡು ನಡಗುಂದಿ .ಎಲ್.ಟಿ, ನಡಗುಂದಿ ತಾಲೂಕು, ಬಿಜಾಪುರ ಜಿಲ್ಲೆರವರು ಕೆಎ 20 ಬಿ 6900 ನೇ ಟಿಪ್ಪರನ್ನು ಕಟಪಾಡಿ ಕಡೆಯಿಂದ ಬೆಳ್ಮಣ್‌ ಕಡೆಗೆ ಹೋಗುವ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಬೆಳಿಗ್ಗೆ 11:20 ಗಂಟೆಗೆ ಶಂಕರಪುರಪೇಟೆ ಬಳಿ ಇರುವ ರಸ್ತೆ ಉಬ್ಬನ್ನು (ಹಂಪ್ಸ್‌) ದಾಟಲು ಟಿಪ್ಪರ್ ನಿಧಾನವಾಗಿ ಚಲಿಸುತ್ತಿದ್ದಾಗ, ಎಂಎಚ್.02.ಎಕ್ಯೂ.8078 ನಂಬ್ರದ ಸ್ವಿಪ್ಟ್ ಕಾರಿನ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ಟಿಪ್ಪರಿನ ಹಿಂಬದಿಗೆ ಡಿಕ್ಕಿ ಹೊಡೆದು ಕಾರು ಚಾಲಕ ಮತ್ತು ಕಾರಿನಲ್ಲಿದ್ದ ಇನ್ನೊಬ್ಬ ಹೆಂಗಸು ಗಾಯಗೊಂಡಿದ್ದಾಗಿದೆ.ಈ ಬಗ್ಗೆ ಸಿದ್ದು ಉಂಬ್ಲು ಲಮಾಣಿರವರು ನೀಡಿದ ದೂರಿನಂತೆ ಶಿರ್ವಾ ಠಾಣಾ ಅಪರಾಧ ಕ್ರಮಾಂಕ 44/2013 ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹಲ್ಲೆ ಪ್ರಕರಣ  
  • ಕಾಪು:ದಿನಾಂಕ 13/04/2013 ರಂದು  ರಾತ್ರಿ  8:15 ಗಂಟೆಗೆ ಉಡುಪಿ ತಾಲೂಕು  ಕೋಟೆ ಗ್ರಾಮದ ಮಹಿಳಾ ಮಂಡಲದ ಬಳಿ  ಪಿರ್ಯಾದಿದಾರರಾದ ಗೌರೀಶ್ (20) ತಂದೆ:ಗಿರಿಯಪ್ಪ ಪೂಜಾರಿ, ಕಲ್ಲಾಪು ಹೌಸ್ ಕಟಪಾಡಿ ಉಡುಪಿ ಜಿಲ್ಲೆರವರು ತನ್ನ ಸ್ನೇಹಿತ ಜಯರಾಜರವರ ಜೊತೆ ನಡೆದುಕೊಂಡು ಬರುತ್ತಿರುವಾಗ ಆರೋಪಿಗಳಾದ 1)ಕೀರ್ತಿ 2) ಯಾದವ 3)ಪಕೀರ ಇವರುಗಳು ಗೌರೀಶ್‌ರವರನ್ನು ತಡೆದು ನಿಲ್ಲಿಸಿ, ಹರೀಶ ದೇವಾಡಿಗನಿಗೆ ಹೊಡೆದು, ಬೆಲ್ ಮಾಡಿಕೊಂಡು ಬಂದು ಹಾರಾಡುವುದು ಬೇಡ, ನಿನ್ನನ್ನು 3 ದಿನಗಳ ಒಳಗೆ ತೆಗೆಯುತ್ತೇನೆಂದು ಹೇಳಿ, ಅವಾಚ್ಯ ಶಬ್ದಗಳಿಂದ ಬೈದು ಆರೋಪಿತರ ಪೈಕಿ ಕೀರ್ತಿ ತಲವಾರ್ ಮಾದರಿಯ ಚೂರಿಯಿಂದ  ತಿವಿಯಲು ಬಂದಾಗ ಗೌರೀಶ್‌ರವರು ತಡೆದ ಪರಿಣಾಮ, ಗೌರೀಶ್‌ರವರ ಕೋಲು ಕೈ, ಬಲ ತೋಳು, ಎದೆಗೆ  ತಾಗಿರುತ್ತದೆ, ತಡೆಯಲು ಬಂದ ಜಯರಾಜನಿಗೆ ಕೂಡ ಆರೋಪಿತರು ಕೈಯಿಂದ ಹೊಡೆದು ಕಾಲಿನಿಂದ ತುಳಿದಿರುತ್ತಾರೆ.  ಗೌರೀಶ್‌ರವರು ತೌಡಬೆಟ್ಟು ಹರೀಶ ದೇವಾಡಿಗ ಎಂಬವರಿಗೆ ಹಲ್ಲೆ ಮಾಡಿದ್ದು ಅದಕ್ಕೆ ಪ್ರತಿಯಾಗಿ ಈ ಕೃತ್ಯ ನಡೆದಿರುವುದಾಗಿರುತ್ತದೆ.ಈ ಬಗ್ಗೆ ಗೌರೀಶ್‌ರವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 118/2013 ಕಲಂ: 341,323,324,504,506, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: