Wednesday, April 10, 2013

Daily Crimes Reported as On 10/04/2013 at 07:00 Hrs

ಅಪಘಾತ ಪ್ರಕರಣ 
  • ಮಣಿಪಾಲ: ದಿನಾಂಕ: 08.04.2013 ರಂದು 17:15 ಗಂಟೆಗೆ ಬಿ ಶ್ರೀಕಾಂತ ನಾಯಕ್‌, ವಾಸ : ಸನ್ನಿಧಿ, 4ನೇ ಕ್ರಾಸ್‌‌‌, ಮಣಿಪಾಲ ಅಲೆವೂರು ರಸ್ತೆ, ಉಡುಪಿ ತಾಲೂಕು ಎಂಬವರ ಭಾವ ಪ್ರಕಾಶ್‌ ಪ್ರಭುರವರು ಮೋಟಾರ್‌ ಸೈಕಲ್‌ ನಂ. ಕೆಎ 20 ಎಲ್‌ 7447 ದಲ್ಲಿ ರಾಜೀವ್‌ ನಗರದ ಕಾರ್ಮಿಕ್‌ ಎದುರುಗಡೆಯಿಂದ ಮಣಿಪಾಲ ಕಡೆಗೆ ಚಲಾಯಿಸಿಕೊಂಡು ಬರುತ್ತಿರುವಾಗ ಹಿಂದಿನಿಂದ ಮೋಟಾರ್‌ ಸೈಕಲ್‌ ನಂ. ಕೆಎ 20 ಇಬಿ 2470 ನೇದನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ಬಂದು ಪ್ರಕಾಶ್‌ ಪ್ರಭುರವರ ಮೋಟಾರ್‌ ಸೈಕಲ್‌ ನಂ. ಕೆಎ 20 ಎಲ್‌ 7447 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪ್ರಕಾಶ್‌ ಪ್ರಭು ರಸ್ತೆಗೆ ಬಿದ್ದು ಅವರಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಅಲ್ಲದೆ ಡಿಕ್ಕಿ ಹೊಡೆದ ಮೋಟಾರ್‌ ಸೈಕಲ್‌ ನಂ. ಕೆಎ 20 ಇಬಿ 2470 ಸವಾರಿಬ್ಬರಿಗೂ ಗಾಯವಾಗಿದ್ದು, ಅದರ ಚಾಲಕನ ಹೆಸರು ಅಖಿಲ್‌ ಭಟ್‌ ಎಂಬುದಾಗಿದ್ದು ಈ ಬಗ್ಗೆ ಬಿ ಶ್ರೀಕಾಂತ ನಾಯಕ್‌ ರವರು ಅಪಘಾತದ ಬಗ್ಗೆ ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 69/13 ಕಲಂ 279 338 .ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ 
  • ಹೆಬ್ರಿ: ದಿನಾಂಕ: 09.04.13 ರಂದು ಮದ್ಯಾಹ್ನ 2-00 ಗಂಟೆ ಸಮಯಕ್ಕೆ ಕಾರ್ಕಳ ತಾಲೂಕು ಚಾರ ಗ್ರಾಮದ ಬೆಳ್ಳೋಡಿ ಎಂಬಲ್ಲಿನ ನಿವಾಸಿ ಶ್ರೀಮತಿ ಅಮ್ಮಣ್ಣಿ (60), ಗಂಡ: ಆನಂತ ಮಡಿವಾಳ, ವಾಸ: ಬೆಳ್ಳೋಡಿ ಮನೆ, ಚಾರ ಗ್ರಾಮ, ಕಾರ್ಕಳ ತಾಲೂಕು ರವರ ನೆರಮನೆಯ ಆರೋಪಿಗಳಾದ 1. ಮಹೇಶ,  ಚಾರ 2. ಬಾಬು, ಚಾರ 3. ರಾಜು, ಚಾರ 4. ಪ್ರೇಮ,  ಚಾರ 5. ಪೊಮ್ಮ, ಚಾರ6. ವಿನೋದ, ಚಾರರವರುಗಳು ಆಕ್ರಮಕೂಟ ಸೇರಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ಆರೋಪಿ ಮಹೇಶ ಎಂಬಾತನು ಮೈಗೆ ಕೈ ಹಾಕಿ ಕೆಳಗೆ ಬೀಳಿಸಿ ತಲೆಯ ಜುಟ್ಟನ್ನು ಎಳೆದು ತಲೆಯನ್ನು ನೆಲಕ್ಕೆ ಗುದ್ದಿದ್ದು, ಆರೋಪಿ ಬಾಬು ಒಂದು ದೊಣ್ಣೆಯಿಂದ ಬೆನ್ನಿಗೆ ಹಾಗೂ ಸೊಂಟಕ್ಕೆ ಹೊಡೆದು, ಕಾಲಿನಿಂದ ಹೊಟ್ಟೆಗೆ ತುಳಿದಿದ್ದು, ಇತರೆ ಆರೋಪಿಗಳು ಅವಳನ್ನು ಬಿಡಬೇಡಿ ಕೊಂದು ಹಾಕಿ ಎಂದು ಪ್ರಚೋದನೆ ನೀಡಿರುತ್ತಾರೆ. ಎಂಬುದಾಗಿ ಶ್ರೀಮತಿ ಅಮ್ಮಣ್ಣಿ ರವರು ಆರೋಪಿಗಳ ಬಗ್ಗೆ ನೀಡಿದ ದೂರಿನಂತೆ ಹೆಬ್ರಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 22/13, ಕಲಂ: 143, 147, 448, 504, 323, 324, 506, 114 ಜೊತೆಗೆ 149  ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: