Wednesday, April 10, 2013

Daily Crimes Reported as On 10/04/2013 at 17:00 Hrs


ವರದಕ್ಷಿಣೆ ಕಿರುಕುಳ ನೀಡಿದ ಪ್ರಕರಣ
  • ಕೊಲ್ಲೂರು: ಖಾಸಗಿ ದೂರಿನ ಸಾರಾಂಶನೇನೆಂದರೆ ಅಪಾದಿತ 1 ನೇಯವರಾದ ಚಂದ್ರ (34) ತಂದೆ: ಮಂಜ ಕೊರಗ ಕಾಲೊನಿ ಮುದುರು ಗ್ರಾಮರವರು ಗೋಪಾಲ ತಂದೆ ದಿವಂಗತ ರಾಮ ಕೊರಗ ವಾಸ;ಕೊರಗ ಕಾಲೋನಿ ಉದಯ ನಗರ ಮುದೂರು ಗ್ರಾಮ ಕುಂದಾಪುರರವರ ಸೊಸೆ ಮಲ್ಲಿಕ ರವರನ್ನು ದಿನಾಂಕ 17/02/2011 ರಂದು  ವಿವಾಹವಾಗಿದ್ದು, ವಿವಾಹದ ಸಮಯ 50000/-ರೂಪಾಯಿ ಹಾಗೂ 3 ಪವನ್ ಚಿನ್ನವನ್ನು ಗೋಪಾಲರವರ ಸಂಬಂಧಿಕರು ವರದಕ್ಷಿಣೆಯ ರೂಪದಲ್ಲಿ ನೀಡಿರುತ್ತಾರೆ. ವಿವಾಹವಾದ ನಂತರ ಎರಡು ತಿಂಗಳು ಒಳ್ಳೆಯ ರೀತಿಯಿಂದ ಇದ್ದು ನಂತರ ಅಪಾದಿತ 1ನೇಯವರಾದ ಚಂದ್ರ ರವರು ಮದ್ಯಪಾನ ಮಾಡಿಕೊಂಡು ಮಲ್ಲಿಕರವರಿಗೆ ಹೊಡೆಯುತ್ತಿದ್ದು, ಉಳಿದ ಅಪಾದಿತರುಗಳಾದ ಸಾಧು(56) ಗಂಡ :ಮಂಜ, ಕೊರಗ ಕಾಲೊನಿ ಮುದುರು ಗ್ರಾಮ ಹಾಗೂ ಸೀತಾ (23) ತಂದೆ: ಮಂಜ ಕೊರಗ ಕಾಲೊನಿ ಮುದುರು ಗ್ರಾಮರವರುಗಳು ಹೊಡೆಯಲು ಪ್ರಚೊದನೆ ಮಾಡುತ್ತಿದ್ದರು ಇನ್ನೂ ಹೆಚ್ಚಿಗೆ ವರದಕ್ಷಿಣೆ ಹಣವನ್ನು ತರುವಂತೆ ಮಲ್ಲಿಕರವರನ್ನು ಒತ್ತಾಯಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಅವಾಚ್ಯ ಶಬ್ದಗಳಿಂದ ಬೈದು ದಿನಾಂಕ 21/02/2012 ರಂದು ಗೋಪಾಲರವರ ಸೊಸೆಯನ್ನು ಮನೆಯಿಂದ ಹೊರಗೆ ಹಾಕಿರುತ್ತಾರೆ ಗೋಪಾಲರವರು ಸೊಸೆಯನ್ನು ಸಮಾಧಾನಪಡಿಸಿ ವಾಪಾಸು ಗಂಡನ ಕಳುಹಿಸಿರುತ್ತಾರೆ. ದಿನಾಂಕ 18/02/2012 ರಂದು ಬೆಳ್ಳಗಿನ ಜಾವ ಒಂದನೇ ಆರೋಪಿ ಚಂದ್ರರವರು ಗೋಪಾಲರವರ ಸೊಸೆಯನ್ನು ಕೊಲೆ ಮಾಡುವ ಉದ್ದೇಶದಿಂದ ಬೆಂಕಿಯನ್ನು ಹಾಕಿರುತ್ತಾರೆ. ನಂತರ ಕೆ.ಎಂ.ಸಿ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ.  ದಿನಾಂಕ 21/12/2012 ರಂದು ಚಿಕಿತ್ಸೆ ಪಲಕಾರಿಯಾಗದೇ ಮಲ್ಲಿಕರವರು ಮೃತ ಪಟ್ಟಿರುತ್ತಾರೆ ಎಂಬುದಾಗಿ ಗೋಪಾಲರವರು ನೀಡಿದ ದೂರಿನಂತೆ ಕೊಲ್ಲೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 42/2013 ಕಲಂ 498(ಎ) 304(ಬಿ) 323,504 506, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಬೈಂದೂರು: ಸುಂದರ ಭಂಡಾರಿ (42) ತಂದೆ:ಮಂಜು ಭಂಡಾರಿ ವಾಸ: ಕ್ಯಾಸಿತ್ಲುಮನೆ, ಬಡಾಕೆರೆ ಗ್ರಾಮರವರ ಅಣ್ಣನಾದ ನಾಗೇಶ ಭಂಡಾರಿರವರು (44) ಕೆಲಸಕ್ಕೆ ಹೋಗದೇ ಮನೆಯಲ್ಲಿದ್ದು ಮಾಸಿಕ ಖಿನ್ನತೆಯಿಂದ ಬಳಲುತ್ತಿದ್ದು ಅದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 09/04/2013 ರಂದು ಮಧ್ಯಾಹ್ನ 12.15 ಗಂಟೆಯಿಂದ 01.45 ಗಂಟೆಯ ಮಧ್ಯಾವಧಿಯಲ್ಲಿ ಬಡಾಕೆರೆ ಗ್ರಾಮದ ರಾಮಕ್ಕ ಶೆಡ್ತಿ ಎಂಬವರ ಹಾಡಿಯಲ್ಲಿ ಹೆರಿ ಬೋಗಿ ಮರಕ್ಕೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಸುಂದರ ಭಂಡಾರಿರವರು ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 11/2013 ಕಲಂ:174 ಸಿ ಆರ್ ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಇತರ ಪ್ರಕರಣ
  • ಹೆಬ್ರಿ: ಕಾರ್ಕಳ ಎಂಸಿಸಿ ಟೀಮ್‌‌ನ ಹೆಬ್ರಿ ಠಾಣಾ ವ್ಯಾಪ್ತಿಯ ಪ್ಲೈಯಿಂಗ್ ಸ್ಕ್ವಾಡ್‌ನ ಮುಖ್ಯಸ್ಥರಾದ ಶ್ರೀ ತಿಪ್ಪೇಶಪ್ಪ.ಎಂ ರವರಿಗೆ ದಿನಾಂಕ 09/04/2013 ರಂದು ರಾತ್ರಿ ಕಾರ್ಕಳ ತಾಲೂಕು ಕಛೇರಿಯಿಂದ  ಶಿವಪುರ ಗ್ರಾಮದ ಕುಬ್ರಿ ಎಂಬ ಸ್ಥಳಕ್ಕೆ ಬಾಡೂಟವನ್ನು ಸಾಗಿಸುತ್ತಿರುವುದಾಗಿ ಮಾಹಿತಿಯಂತೆ ರಾತ್ರಿ 09:10 ಗಂಟೆಗೆ ಕಾರ್ಕಳ ತಾಲೂಕು ಶಿವಪುರ ಗ್ರಾಮದ ಕುಬ್ರಿ ಎಂಬಲ್ಲಿಗೆ ಹೋಗಿ ಅಲ್ಲಿ ನಿಂತಿದ್ದ ಕೆಎ.20.ಸಿ.5897 ನೇ ಆಟೋರಿಕ್ಷಾವನ್ನು ಪರಿಶೀಲಿಸಿದಾಗ ಅದರಲ್ಲಿ ಆರೋಪಿ 1) ಪ್ರವೀಣ ಪೂಜಾರಿ (31ವರ್ಷ) ತಂದೆ: ಪೆಗ್ಗು ಪೂಜಾರಿ ವಾಸ: ಉಪ್ಪಳ ಮುದ್ರಾಡಿ ಗ್ರಾಮ  2) ಸುಧಾಕರ ನಾಯ್ಕ್ (45ವರ್ಷ) ತಂದೆ: ಕೃಷ್ಣ ನಾಯ್ಕ್ ವಾಸ; ಉಪ್ಪಳ ಮುದ್ರಾಡಿ ಗ್ರಾಮ 3) ಸುರೇಶ್ ನಾಯ್ಕ್ (39ವರ್ಷ) ತಂದೆ; ದಿವಂಗತ ರಾಮ ನಾಯ್ಕ್ ವಾಸ: ಉಪ್ಪಳ ಮುದ್ರಾಡಿ ಗ್ರಾಮರವರು ಇದ್ದುದಲ್ಲದೇ ಅದರಲ್ಲಿ ಈ ಕೆಳಕಂಡ ಸ್ವತ್ತುಗಳು ಕಂಡು ಬಂದಿದ್ದು 1) ಒಂದು ಅಲ್ಲೂಮಿನಿಯಂ ಕಟಾರ- ಇದರಲ್ಲಿ ಅನ್ನ ಇರುವುದು ಕಂಡು ಬರುತ್ತದೆ, 2)ಸಣ್ಣ ಸ್ಟೀಲ್ ಡ್ರಮ್ ನಲ್ಲಿ ಉಪ್ಪಿನ ಕಾಯಿ ಇರುವುದು ಕಂಡು ಬರುತ್ತದೆ. ಹಾಗೂ ಮಾಂಸದ ಸಾರು, ಆಹಾರ ಪದಾರ್ಥಗಳು, ಪ್ಲಾಸ್ಟಿಕ್ ಲೋಟಗಳು ಇರುವುದು ಕಂಡು ಬಂದಿದ್ದು ವಿಚಾರಿಸಿದಾಗ ಆರೋಪಿ 4 ನೇಯವರಾದ ಶಿವಪುರದ ಕಾರ್ಯಕರ್ತ ಸಂತೋಷ ಶೆಟ್ಟಿಯವರು ತಿಳಿಸಿದಂತೆ 100 ಜನ ಪಕ್ಷದ ಕಾರ್ಯಕರ್ತರಿಗೆ ಮಾಂಸಹಾರಿ ಊಟವನ್ನು ತಯಾರಿ ಮಾಡಿ ತಂದಿರುವುದಾಗಿ ತಿಳಿಸಿದ್ದು, ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಮಾಡಿದಂತೆ ಕಂಡುಬಂದಿರುವುದರಿಂದ ಶ್ರೀ ತಿಪ್ಪೇಶಪ್ಪ.ಎಂ ರವರು ಅವರುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನಂತೆ ಹೆಬ್ರಿ ಠಾಣಾ ಅಪರಾಧ ಕ್ರಮಾಂಕ 23/13, ಕಲಂ 171 (ಇ) ಐಪಿಸಿ & ಕಲಂ 133 ಆರ್.ಪಿ ಕಾಯಿದೆ 1951  ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: