Sunday, April 28, 2013

Daily Crime Reports As on 28/04/2013 At 17:00 Hrs


ನಿರ್ಲಕ್ಷ್ಯದ ಚಾಲನೆ  ಪ್ರಕರಣ
  • ಕೊಲ್ಲೂರು: ದಿನಾಂಕ 27.04.2013 ರಂದು ರಾತ್ರಿ 09:00 ಗಂಟೆಯ ಸಮಯ ದೇವೇಂದ್ರ  ಪೊಲೀಸ್ ಉಪ ನಿರೀಕ್ಷಕರು ಕೊಲ್ಲೂರು ಪೊಲೀಸ್ ಠಾಣೆ ಇವರು ತನ್ನ ಬಾಬ್ತು ಇಲಾಖಾ ವಾಹನದಲ್ಲಿ ಚಿತ್ತೂರು ಗ್ರಾಮದ ಪೂಜಾ ಬಾರ್ ಎದುರು ರಾಜ್ಯ ಹೆದ್ದಾರಿಯಲ್ಲಿ  ಬರುತ್ತಿರುವಾಗ  ರಿಕ್ಷಾ ನಂಬ್ರ ಕೆ.ಎ. 20 ಬಿ. 5195 ನೇದರ ಚಾಲಕ ಬಾಬು ಪೂಜಾರಿ  (42) ತಂದೆ:ವೆಂಕಟೇಶ ಪೂಜಾರಿ  ವಾಸ:ಬ್ರಹ್ಮಲಿಂಗೇಶ್ವರ ನಿಲಯ ಚಿತ್ತೂರು ಗ್ರಾಮ  ಕುಂದಾಪುರ ತಾಲೂಕು ಈತನು ತನ್ನ ಬಾಬ್ತು ರಿಕ್ಷಾವನ್ನು ಜೀಪಿನ ಹಿಂದಿನಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಓವರ್‌ ಟೇಕ್ ಮಾಡಿ ವಂಡ್ಸೆ ಕಡೆಗೆ ರಿಕ್ಷಾವನ್ನು ಚಲಾಯಿಸಿಕೊಂಡು ಹೋಗುತ್ತಿದ್ದುದನ್ನು  ಕಂಡು ಸದ್ರಿ ರಿಕ್ಷಾವನ್ನು ನಿಲ್ಲಿಸುವಂತೆ ಸೂಚನೆ ನೀಡಿ ಸದ್ರಿ ಚಾಲಕರಿಗೆ ಅವರ ತಪ್ಪಿತ್ವದ ಬಗ್ಗೆ ತಿಳಿಸಿ ಕೊಲ್ಲೂರು ಠಾಣಾ ಅಪರಾಧ ಕ್ರಮಾಂಕ 44/13 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಿಸಿರುವುದಾಗಿದೆ. 
ಕಳವಿಗೆ ಪ್ರಯತ್ನ  ಪ್ರಕರಣ 
  • ಮಲ್ಪೆ:  ಮಾರಿಯೆಟ್ ಶಲೋನ್ ಡಿಸೋಜಾ (26) ಗಂಡ: ಜೆರಾಲ್ಡ್ ಡಿಸೋಜಾ ವಾಸ: ಗಾಡಿಯನ್ ಆಗಲ್, ಅಶ್ವತಕಟ್ಟೆ, ನೇಜಾರು, ಮೂಡುತೋನ್ಸೆ ಗ್ರಾಮ ಇವರು  ಉಡುಪಿ ತಾಲೂಕು ಮೂಡುತೋನ್ಸೆ ಗ್ರಾಮದ ನೇಜಾರು ಅಶ್ವತ್ಥಕಟ್ಟೆಯಲ್ಲಿರುವ ತಮ್ಮ ಮನೆಗೆ ದಿನಾಂಕ:16/04/2013 ರಂದು ಬೀಗ ಹಾಕಿ ನೇಜಾರಿನ ಹೆಚ್.ಪಿ.ಗ್ಯಾಸ್ ಗೋಡೌನ್ ಬಳಿ ಇರುವ ತನ್ನ ತಂದೆ ಮನೆಯಲ್ಲೇ ಇದ್ದಿದ್ದು ನಂತರ ದಿನಾಂಕ:27/04/2013 ರಂದು ಬೆಳಿಗ್ಗೆ 11.00 ಗಂಟೆ ಸಮಯಕ್ಕೆ  ತನ್ನ ಮನೆಗೆ ಬಂದು  ನೋಡುವಾಗ ಯಾರೋ ಕಳ್ಳರು ಈ ನಡುವಿನ ಅವಧಿಯಲ್ಲಿ ಅವರ ಮನೆಯ ಹಿಂಬಾಗಿಲಿನ ಚಿಲಕವನ್ನು ಮೀಟಿ ತೆಗೆದು ಮನೆಯ ಒಳಗೆ ಹೊಕ್ಕು ಮನೆಯ ಡೈನಿಂಗ್ ಹಾಲ್‌ನಲ್ಲಿರುವ ಹಾಗೂ 3 ಬೆಡ್‌‌ ರೂಮಿನ ಎಲ್ಲಾ ಕಬೋರ್ಡ್‌ಗಳಲ್ಲಿರುವ  ಸಾಮಾನುಗಳು ಹಾಗೂ ಬಟ್ಟೆಬರೆಗಳನ್ನೆಲ್ಲಾ  ಚೆಲ್ಲಾಪಿಲ್ಲಿ ಮಾಡಿ ಕಳವಿಗೆ ಪ್ರಯತ್ನಿಸಿರುವುದಾಗಿದೆ . ಬಗ್ಗೆ ಮಾರಿಯೆಟ್ ಶಲೋನ್ ಡಿಸೋಜಾ ಇವರು ನೀಡಿದ ದೂರಿನಂತೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 72/2013 ಕಲಂ 454, 457, 380, 511 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಅಸ್ವಾಭಾವಿಕ ಮರಣ ಪ್ರಕರಣ 
  • ಮಲ್ಪೆ: ಕೆ. ಉಮಾನಾಥ ಕಿಣಿ (66) ತಂದೆ: ದಿ. ಪಿ ಸಂಜೀವ ಕಿಣಿ ವಾಸ: ಕಲ್ಮಾಡಿ ಕೊಡವೂರು ಗ್ರಾಮ ಇವರ  ಮಗ ಸಂಜಯ (26) ಸುಮಾರು 1 ವರ್ಷದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದವನು ಚಿಕಿತ್ಸೆ ಕೊಡಿಸಿದರೂ ಗುಣಮುಖನಾಗದೇ ಇದ್ದು ಅದೇ ಚಿಂತೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 26/04/2013 ರಂದು ರಾತ್ರಿ 8:10 ರ ಸುಮಾರಿಗೆ ಕೆ. ಉಮಾನಾಥ ಕಿಣಿ ಇವರ ಮನೆಯಾದ ಕೊಡವೂರು ಗ್ರಾಮದ ಕಲ್ಮಾಡಿಯಲ್ಲಿನ ಮನೆಯ ಬಾವಿಗೆ ಹಾರಿ ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕೆ. ಉಮಾನಾಥ ಕಿಣಿ ಇವರು ನೀಡಿದ ದೂರಿನಂತೆ ಮಲ್ಪೆ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 27/13 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಅಕ್ರಮ ಮದ್ಯ ಪ್ರಕರಣ 
  • ಬೈಂದೂರು: ಬೈಂದೂರು ಠಾಣಾ ಹೆಚ್.ಸಿ ಸುಬ್ಬಣ್ಣ ಶೆಟ್ಟಿ ಹಾಗೂ ಸಿಬ್ಬಂದಿಯವರು ದಿನಾಂಕ: 27/04/13 ರಂದು ಶಿರೂರು ಚೆಕ್ ಪೋಸ್ಟ್ ಕರ್ತವ್ಯದಲ್ಲಿರುವಾಗ್ಗೆ ಸಮಯ ಸುಮಾರು 11:55 ಗಂಟೆಗೆ ಭಟ್ಕಳ ಕಡೆಯಿಂದ ಬೈಂದೂರು ಕಡೆಗೆ ಬರುತ್ತಿದ್ದ ಕೆ ಎ 19 ಝಡ್ 3030 ನಂಬ್ರದ ಕ್ವಾಲೀಸ್ ಕಾರನ್ನು ಅಬಕಾರಿ ಉಪನಿರೀಕ್ಷಕ ವಿ ಮಂಜುನಾಥ್ ಹಾಗೂ ಫಾರೆಸ್ಟ್ ಗಾರ್ಡ್ ಕೃಷ್ಣಯ್ಯ ಬಿ ಶಿರೂರು ಗ್ರಾಮ ಪಂಚಾಯತ್ ಪಿ.ಡಿ.ಓ ರವರಾದ ಯಾದವ ಬಿ ನಾಯಕ್ ರವರ ಜೊತೆ ಸೇರಿ ನಿಲ್ಲಿಸುವಂತೆ ಸೂಚನೆ ನೀಡಿದ್ದು  ಸದ್ರಿ ಕಾರನ್ನು ಪರಿಶೀಲಿಸಲಾಗಿ ಅದರ ಹಿಂದಿನ ಡಿಕ್ಕಿಯಲ್ಲಿ Budweiser  KING OF BEER ಎಂದು ಬರೆದಿರುವ 650 ml ನ ಮದ್ಯ ತುಂಬಿದ 24 ಬಾಟ್ಲಿಗಳು ಹಾಗೂ BREEZER ಎಂದು ಬರೆದಿರುವ 275 ml ನ ಮದ್ಯ ತುಂಬಿದ 48 ಬಾಟ್ಲಿಗಳು, Carlsberg STRONG SUPER PREMIUM BEER ಎಂದು ಲೇಬಲ್‌ ಇರುವ 500 ml ನ ಮದ್ಯ ತುಂಬಿದ 9 ಟಿನ್‌ ಗಳಿದ್ದು ಈ  ಬಗ್ಗೆ ಮದ್ಯ ಸಾಗಾಟ ಮಾಡುವರೇ ಯಾವುದೇ ಪರವಾನಿಗೆ ಇದೆಯೇ ಎಂದು ಕಾರಿನ ಚಾಲಕ ಅನಿಲ್‌ ಡಿಸೋಜಾ ಪ್ರಾಯ: 49 ವರ್ಷ ತಂದೆ: ಚಾರ್ಲ್ಸ್‌ ಡಿಸೋಜಾ ವಾಸ: ಪ್ಲ್ಯಾಟ್‌ ನಂಬ್ರ 303 ವಿಲ್ಕೋನ್‌ ಅಪಾರ್ಟ್‌ಮೆಂಟ್‌ ಬೆಂದೂರ್‌ವೆಲ್‌ ಮಂಗಳೂರು ಇವರಲ್ಲಿ ಕೇಳಲಾಗಿ ಅವರು ಇಲ್ಲ ಎಂದು ಉತ್ತರಿಸಿದ್ದು, ಸದ್ರಿ ಕಾರಿನ ಚಾಲಕ ಹಾಗೂ ಸೊತ್ತನ್ನು ಮತ್ತು ಸಾಗಾಟ ಮಾಡಿದ ಕಾರನ್ನು ಸ್ವಾಧೀನಪಡಿಸಿಕೊಂಡು ಠಾಣೆಗೆ ತಂದು ಬೈಂದೂರು ಠಾಣಾ ಅಪರಾಧ ಕ್ರಮಾಂಕ 138/13 ಕಲಂ: 32, 34 ಕೆ .ಇ ಆಕ್ಟ್  ನಂತೆ ಪ್ರಕರಣ ದಾಖಲಿಸಿರುವುದಾಗಿದೆ.

No comments: