Sunday, April 28, 2013

Daily Crime Reported on 28/04/2013 at 07:00 Hrs

ಅಕ್ರಮವಾಗಿ ಮದ್ಯ ಮಾರಾಟ – ಓರ್ವನ ಬಂಧನ
  • ಕುಂದಾಪುರ: ದಿನಾಂಕ 27/04/2013 ರಂದು 17:45 ಗಂಟೆಗೆ ಕುಂದಾಪುರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ಜಯರಾಮ ಡಿ ಗೌಡ ರವರು ಠಾಣಾ ಸಿಬ್ಬಂದಿಗಳೊಂದಿಗೆ ಕುಂದಾಪುರ ತಾಲೂಕು ಕೊರ್ಗಿ ಗ್ರಾಮದ ಬೀದಿ ಕಡು ಎಂಬಲ್ಲಿ ದಾಳಿ ನಡೆಸಿ ಸಾರ್ವಜನಿಕರಿಗೆ ಅಕ್ರಮವಾಗಿ ಮದ್ಯ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದ ಆಪಾದಿತ ಬಸವ ಪೂಜಾರಿ (68) ತಂದೆ ದಿ. ಪಂಜು ಪೂಜಾರಿ ವಾಸ ಹೊಸಮನೆ, ಬೀದಿ ಕಡು, ಕೊರ್ಗಿ ಗ್ರಾಮ ಮತ್ತು ಅಂಚೆ ಕುಂದಾಪುರ ತಾಲೂಕು ಎಂಬಾತನನ್ನು ದಸ್ತಗಿರಿ ಮಾಡಿ ಆತನ ವಶದಲ್ಲಿದ್ದ 180 ಎಮ್.ಎಲ್. 94 ಮೈಸೂರು ಲ್ಯಾನ್ಸರ್ ವಿಸ್ಕಿ ಬಾಟಲಿಗಳನ್ನು ಮತ್ತು ನಗದು ರೂಪಾಯಿ 600/- ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 179/2013 ಕಲಂ 32, 34  ಕರ್ನಾಟಕ ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ
  • ಬ್ರಹ್ಮಾವರ: ದಿನಾಂಕ 27/04/2013 ರಂದು 16:30 ಗಂಟೆಗೆ ಹಾವಂಜೆ ಗ್ರಾಮದ ಕೀಳಿಂಜೆ ಎಂಬಲ್ಲಿ ಪಿರ್ಯಾದಿದಾರರಾದ ಬ್ಯಾಪಿಸ್ಟ್ ಡಿ ಅಲ್ಮೇಡಾ (60) ತಂದೆ: ದಿ; ಅಲೆಕ್ಸ್ ಕೆ ಅಲ್ಮೇಡಾ, ವಾಸ ವೆರಿವೋನ್, ಕೀಳಂಜೆ ಹಾವಂಜೆ ಗ್ರಾಮ ಎಂಬವರು ಗದ್ದೆಯ ಬಾವಿಯ ಪಂಪ್ ಸೆಟ್ ಡಿಸ್ ಕನೆಕ್ಟ್ ಮಾಡಲು ಹೋಗುತ್ತಿದ್ದಾಗ ಆ ದಾರಿಯಲ್ಲಿ ಹೋಗಬಾರದೆಂದು ಆಪಾದಿತರಾದ ಪಿರ್ಯಾದಿದಾರರ ಸಂಬಂಧಿ ನ್ಯಾಸಿ (ಲೆನಿ) ಡಿ ಅಲ್ಮೇಡಾ, ವಿಲ್ಮಾ ಮತ್ತು ಜತ್ರಿನಾರವರುಗಳು ಕಲ್ಲಿನಿಂದ ಪಿರ್ಯಾದಿದಾರರಿಗೆ ಹಲ್ಲೆ ನಡೆಸಿದ ಪರಿಣಾಮ ಪಿರ್ಯಾದಿದಾರರ ಮುಖಕ್ಕೆ ಹಾಗೂ ಮೂಗಿಗೆ ಹಾಗೂ ದೇಹದ ಇತರ ಕಡೆಗೆ ಗಾಯವಾಗಿದ್ದು ಪಿರ್ಯಾದಿದಾರರು ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ಬ್ಯಾಪಿಸ್ಟ್ ಡಿ ಅಲ್ಮೇಡಾರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 169/2013 ಕಲಂ 324 ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣಗಳು  
  • ಕೋಟ: ದಿನಾಂಕ 27/04/2013 ರಂದು ಪಿರ್ಯಾದಿದಾರರಾದ ಬಸವನಗೌಡ ತಂದೆ ಲಿಂಗಪ್ಪ ವಾಸ ಮನ್ನಿಗಳ ಕೊಪ್ಪರಿಗೆ ಪೋಸ್ಟ್ ಯಾದಗಿರಿ ಎಂಬವರು ಹಾಗೂ ಅವರ ಹೆಂಡತಿ ಉಡುಪಿ ತಾಲೂಕು ನಂಚಾರು ಗ್ರಾಮದ ಸತೀಶ್ ಕಿಣಿ ಎಂಬವರ ಕಲ್ಲುಕೋರೆಯಲ್ಲಿ ಕೆಲಸಮಾಡಿಕೊಂಡಿದ್ದು ಸಂಜೆ 16:00 ಗಂಟೆಗೆ ಕಲ್ಲು ಕೋರೆಗೆ ಕೆಲಸಕ್ಕೆ ಬಂದಿದ್ದ ಆರೋಪಿಯು ಕೆ.ಎ.15 ಟಿ-2801 ನೇ ಟ್ರಾಕ್ಟರ್ ನ್ನು ಚಲಾಯಿಸಲು ಒಮ್ಮಲೇ ಹಿಂದಕ್ಕೆ ಚಲಾಯಿಸಿದ ಕಾರಣ ಹಿಂಬದಿಯಲ್ಲಿ ಆಟವಾಡುತ್ತಿದ್ದ ಪಿರ್ಯಾದಿದಾರರ ಮಗ 4 ವರ್ಷ ಪ್ರಾಯದ ನಿಂಗಪ್ಪ ಎಂಬವರ ಮೇಲೆ ಟ್ರಾಕ್ಟರ್ ಹರಿದು ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾದವರನ್ನು ಚಿಕಿತ್ಸೆಗೆ ಉಡುಪಿಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿರುವುದಾಗಿದೆ ಎಂಬುದಾಗಿ ಬಸವನಗೌಡರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 124/2013 ಕಲಂ 279, 304(ಎ) ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಪಡುಬಿದ್ರಿ: ದಿನಾಂಕ 27/04/2013 ರಂದು 19:30 ಗಂಟೆಗೆ ಉಡುಪಿ ತಾಲೂಕು ನಡ್ಸಾಲು ಗ್ರಾಮದ ಕನ್ನಂಗಾರ್ ಬೈಪಾಸ್, ರಾ.ಹೆ 66 ರಲ್ಲಿ ಕೆಎ-20-ಬಿ-7540 ನೇ ಟೆಂಪೋ ಚಾಲಕ ಮಂಜುನಾಥ ಎಂಬಾತನು ಟೆಂಪೋವನ್ನು ಮುಲ್ಕಿ ಕಡೆಯಿಂದ ಪಡುಬಿದ್ರಿ ಕಡೆಗೆ ಅತೀ ವೇಗವಾಗಿ ಬಂದು ಮುಲ್ಕಿ ಕಡೆಗೆ ಹೋಗುತ್ತಿರುವ ಮೋಟಾರು ಸೈಕಲ್ ಗೆ  ಡಿಕ್ಕಿ ಹೊಡೆದ ಪರಿಣಾಮ, ಮೋಟಾರು ಸೈಕಲ್ ಸವಾರರಾದ ಸಂದೇಶ. ವಿ.ಡಿ ಎಂಬವರಿಗೆ ತಲೆಯ ಹಿಂಬಾಗಕ್ಕೆ ತೀವ್ರ ಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾರೆ ಎಂಬುದಾಗಿ ಕರುಣಾಕರ ಪೂಜಾರಿ (36) ತಂದೆ ಮಹಾಬಲ ಪೂಜಾರಿ ವಾಸ ಸನ್ನಿದಿ ಮನೆ, ಮಲ್ಲಾರ್  ತೋಟ, ನಡ್ಸಾಲು ಗ್ರಾಮ, ಉಡುಪಿ ತಾಲೂಕು ಎಂಬವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 72/2013 ಕಲಂ 279, 304(ಎ) ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: