Sunday, April 28, 2013

Daily Crime Reports As on 28/04/2013 At 19:30 Hrs

ಅಪಘಾತ ಪ್ರಕರಣ
  • ಕುಂದಾಪುರ: ಸುಧೀರ ತಂದೆ:ಸೀತಾರಾಮ ದೇವಾಡಿಗ ವಾಸ:ದೊಡ್ಡೋಣಿ ರಸ್ತೆ ಕೊಟೇಶ್ವರ ಕುಂದಾಪುರ ಇವರ ತಂದೆಯವರು ದಿನಾಂಕ 26/04/2013 ರಂದು 16.15 ಗಂಟೆಗೆ ಟಿ.ವಿ.ಎಸ್   ಕೆ ಎ 20 ವಿ 28 ರಲ್ಲಿ ಹುಣ್ಸೆಮಕ್ಕಿಯಿಂದ ಕೋಟೇಶ್ವರ ಕಡೆಗೆ ಬರುತ್ತಿರುವಾಗ ಸಳ್ವಾಡಿ ಬಸ್ ನಿಲ್ದಾಣದ ಬಳಿ ತಲುಪುವಾಗ ಎದುರಿನಿಂದ ಅಂದರೆ ಕೊಟೇಶ್ವರ ಕಡೆಯಿಂದ ಹಾಲಾಡಿ ಕಡೆಗೆ ಕೆ ಎ 20 ಆರ್ 8738 ನೇ ಮೋಟಾರ್ ಸೈಕಲ್ ಸವಾರ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ಟಿವಿಎಸ್ ಕೆ ಎ20 ವಿ 28 ಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅವರ ತಂದೆಯವರು ರಸ್ತೆಗೆ ಬಿದ್ದು ತಲೆಗೆ ಮುಖಕ್ಕೆ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಕೊಟೇಶ್ವರ ಆಸ್ಪತ್ರೆಗೆ ಕೊಂಡು ಹೋಗಿದ್ದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಂ ಸಿ ಆಸ್ಪತ್ರೆಗೆ ದಾಖಲಿಸಿದ್ದಾಗಿದೆ. ಬಗ್ಗೆ ಸುಧೀರ ಇವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 181/2013 ಕಲಂ 279, 337  ಐಪಿಸಿ ಮತ್ತು 134(ಎ) (ಬಿ) ಮೋ.ವಾ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಮಲ್ಪೆ: ದಿನಾಂಕ: 26.04.2013 ರಂದು 17:30 ಗಂಟೆಯ ಸಮಯಕ್ಕೆ ಅಲ್ಲಿ ಸಾಹೇಬ್ (65) ತಂದೆ: ದಿ. ಅಬ್ದುಲ್ ರೆಹಮಾನ್ ವಾಸ: ಅಮಿರಾ ಮಂಜಿಲ್, ಗುಜ್ಜರಬೆಟ್ಟು, ಪಡುತೋನ್ಸೆ ಗ್ರಾಮ ಇವರ ಮೊಮ್ಮಗಳಾದ ಮದಿಯಾ, 6 ವರ್ಷ ಇವರು ಬಡಾನಿಡಿಯೂರು ಗ್ರಾಮದ ಕದಿಕೆ ತನ್ನ ಮನೆಯ ಪಕ್ಕದ ರಸ್ತೆ ಬದಿ ಆಟವಾಡುತ್ತಿದ್ದಾಗ ಕೆ.ಎ. 20 ಎಕ್ಸ್ 5068 ಹೋಂಡಾ ಯುನಿಕಾರ್ನ ಮೋಟಾರು ಸೈಕಲ್ ನ್ನು  ಅದರ ಸವಾರ ರೋಹಿತ್  ಎಂಬವನು ಹೂಡೆ ಕಡೆಯಿಂದ ಮಲ್ಪೆ ಕಡೆಗೆ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಎಡಬದಿಗೆ ಬಂದು ಮದಿಯಳಿಗೆ ಡಿಕ್ಕಿ ಹೊಡೆದ ಪರಿಣಾಮ ಮದಿಯಳ ಎಡಕಣ್ಣಿನ ಮೇಲೆ ಗುದ್ದಿದ ನೋವು ಹಾಗೂ ಬಲಕಾಲಿನ ತೊಡೆಯ ಮೂಳೆ ಮುರಿತದ ಜಖಂ ಆಗಿರುತ್ತದೆ. ಈ ಬಗ್ಗೆ ಅಲ್ಲಿ ಸಾಹೇಬ್ ಇವರು ನೀಡಿದ ದೂರಿನಂತೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 74/2013 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಕಳವು ಪ್ರಕರಣ 
  • ಶಿರ್ವಾ: ದಿನಾಂಕ 26/04/2013 ರ ರಾತ್ರಿ 9:30 ಗಂಟೆಯಿಂದ 27/04/2013 ರ ಬೆಳಗ್ಗಿನ 09:00 ಗಂಟೆಯ  ನಡುವೆ ಯಾರೋ ಕಳ್ಳರು ಶಿರ್ವ ಬಸ್ ಸ್ಟಾಂಡ್  ಹಿಂಬದಿಯಲ್ಲಿರುವ ಅಶೋಕ ಶೆಟ್ಟಿ  ಪ್ರಾಯ 33 ವರ್ಷ ತಂದೆ ಶಂಕರ ಶೆಟ್ಟಿ, ವಾಸ: ಕನ್ಯಾನ ಮನೆ ಶಂಕರಪುರ ಅಂಚೆ ಮೂಡುಬೆಟ್ಟು ಗ್ರಾಮ ಉಡುಪಿ ಇವರ ಮೊಬೈಲ್ ಫೋನ್ ಅಂಗಡಿಯ ಮಾಡಿನ ಹಂಚು ತೆಗೆದು ಶೋಕೇಸಿನಲ್ಲಿದ್ದ [1] CELKON C 770STAR [2] Bhoom s 989, [3] China m-5  ಮತ್ತು  [4] Micromax  x 101 ಒಟ್ಟು 7499/ ಮೌಲ್ಯದ 4 ಮೊಬೈಲ್ ಫೋನ್ ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಬಗ್ಗೆ ಅಶೋಕ ಶೆಟ್ಟಿ  ಇವರು ನೀಡಿದ ದೂರಿನಂತೆ ಶಿರ್ವಾ ಠಾಣಾ ಅಪರಾಧ ಕ್ರಮಾಂಕ 46/2013 ಕಲಂ 454, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: