Sunday, April 21, 2013

Daily Crime Reports As On 21/04/2013 At 17:00 hrsಹಲ್ಲೆ ಪ್ರಕರಣ

  • ಬೈಂದೂರು: ದಿನಾಂಕ 17-04-2013 ರಂದು ಫಿರ್ಯಾದಿ ನಾಗರಾಜ ಪೂಜಾರಿ (25) ತಂದೆ:ಕೋಟಿ ಪೂಜಾರಿ ವಾಸ: ಮೇಲಟ್ಟ ಮನೆ ಬಿಜೂರು ಗ್ರಾಮ ಇವರ ಮೊಬೈಲ್ ಸಂಖ್ಯೆ 7411773144 ನೇದಕ್ಕೆ ಆರೋಪಿ ಕೆ ಟಿ ಪ್ರವೀಣ್ ವಾಸ: ಬಿಜೂರು ಗ್ರಾಮ ಇವರು ತನ್ನ ಮೊಬೈಲ್ ಸಂಖ್ಯೆ 9743601719 ನೇದರಿಂದ ಕರೆ ಮಾಡಿ ಪಿರ್ಯಾದಿದಾರರಿಗೆ  ಚುನಾವಣೆಯ ವಿಷಯದಲ್ಲಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ಈ ಬಗ್ಗೆ ನಾಗರಾಜ ಪೂಜಾರಿಯವರು ಬೈಂದೂರು ಠಾಣೆಯಲ್ಲಿ ದೂರು ನೀಡಿದ್ದು ಠಾಣೆಯಲ್ಲಿ ಅಪರಾಧ ಸಂಖ್ಯೆ 132/13 ಕಲಂ:323,504,506 ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ:

  • ಮಲ್ಪೆ:ಪಿರ್ಯಾದಿ ಪ್ರಕಾಶ್ ಎಸ್. ಸುವರ್ಣ (51) ತಂದೆ: ದಿ.ಸೇಸು ಪೂಜಾರಿ ವಾಸ: ಶ್ರೀ ಬ್ರಾಮ್ಮರಿ ಗೋಪಾಲಪುರ, 3ನೇ ಮುಖ್ಯರಸ್ತೆ, ಸಂತೆಕಟ್ಟೆ ಕಲ್ಯಾಣಪುರ ಇವರ ಮಾವ ಸಂಜೀವ ಪೂಜಾರಿ (75) ಮತ್ತು ಅತ್ತೆ ಲೀಲಾವತಿ ಪೂಜಾರ್ತಿ (71) ರವರು ತಮ್ಮ ಮನೆಯಾದ ಪಡುತೋನ್ಸೆ ಗ್ರಾಮದ ಕೆಮ್ಮಣ್ಣು ನಲ್ಲಿ ವಾಸವಾಗಿದ್ದು ದಿನಾಂಕ 21/04/2013 ರಂದು ಬೆಳಿಗ್ಗೆ ಸುಮಾರು 08:30 ಗಂಟೆಯಿಂದ 09:00 ಗಂಟೆ ಮದ್ಯ ಅವಧಿಯಲ್ಲಿ ಇವರ  ಅತ್ತೆ ಲೀಲಾವತಿ ಪೂಜಾರ್ತಿ (71) ರವರು ಮನೆಯ ಒಳಗೆ ಡೈನಿಂಗ್ ಟೇಬಲ್ ಹತ್ತಿ ಫ್ಯಾನಿಗೆ ಸೀರೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಇವರು ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಗಿದೆ ಎನ್ನುವುದಾಗಿ ಪ್ರಕಾಶ್‌ ಸುವರ್ಣರವರು ಮಲ್ಪೆ ಠಾಣೆಯಲ್ಲಿ ದೂರು ನೀಡಿದ್ದು ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 25/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: